Popular Posts

Wednesday, February 9, 2011

ಜಾಗತೀಕರಣದ ಜಗತ್ತಿನ ಒಳನೋಟಗಳನ್ನು ಬಿಚ್ಚಿಡುವ ಕಾದಂಬರಿ "ದ್ವೀಪವ ಬಯಸಿ"

ಜಾಗತೀಕರಣದ ಜಗತ್ತಿನ ಒಳನೋಟಗಳನ್ನು ಬಿಚ್ಚಿಡುವ ಕಾದಂಬರಿ "ದ್ವೀಪವ ಬಯಸಿ"
    ಎಂ.ಆರ‍್.ದತ್ತಾತ್ರಿಯವರ "ದ್ವೀಪವ ಬಯಸಿ" ಕಾದಂಬರಿ ಅವರ ಮೊದಲನೇ ಕಾದಂಬರಿ ಈ ಕಾದಂಬರಿಯಲ್ಲಿ ಲೇಖಕರು ಕಷ್ಟಕರವಾದ  ವಸ್ತು ವಿಷಯಗಳನ್ನು ಹೇಳ ಹೊರಟಿರುವುದು. ಜಾಗತೀಕರಣದ ಎಲ್ಲಾ ಬಗೆಯ  ತಲ್ಲಣಗಳನ್ನು ಹೇಳುವುದು ಅತ್ಯಂತ ಸವಾಲದ ಕೆಲಸ ಆದರೆ ಕನ್ನಡ ಕಾದಂಬರಿ ಲೋಕಕ್ಕೆ ಒಂದು ಹೊಸ ವಸ್ತು ವಿಷಯವನ್ನು ಕೊಟ್ಟಿರುವುದು ಈ ಕಾದಂಬರಿಯ ವಿಶೇಷ. ಈಗಾಗಲೇ ಜಾಗತೀಕರಣದಿಂದ ಅಧುನಿಕ ಸಮಾಜದಲ್ಲಿ ಆಗುವ ತಲ್ಲಣಗಳ ಬಗ್ಗೆ ಸಣ್ಣ ಕಥೆಗಳನ್ನು ವಿವೇಕ ಶಾನಭಾಗ ಮತ್ತು ವಸುಧೇಂದ್ರರವರ ಕತೆಗಳಲ್ಲಿ ನಾವು ಕಾಣಬಹುದಾಗಿದೆ. ಆದರೆ ಈ ಕಾದಂಬರಿಯಲ್ಲಿ ಬರುವ ವಸ್ತು ವಿಷಯ ಬಂಡವಾಳಶಾಯಿ ಜಗತ್ತಿನ ಇಂದಿನ ದಿನಗಳಲ್ಲಿ ಮನುಷ್ಯ ಮತ್ತು ಮನುಷ್ಯ ನಡುವಿನ ಸಂಬಂಧವನ್ನು ಸಹ ವ್ಯಾಪಾರದ ದೃಷ್ಟಿಯಿಂದ ನೋಡುತ್ತಿರುವುದು. ಈ ವ್ಯವಸ್ದೆಯ ವಿರುದ್ದ ಹೋರಾಟ ಮಾಡುವ ಮಾನವೀಯ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ತಾತ್ವಿಕವಾಗಿ ಯೋಚನೆ ಮಾಡಬೇಕಾದ ಸ್ಧಿತಿ. ಇವೆಲ್ಲದರಿಂದ ಹೊರಬಂದು ಬದುಕುವುದು ಅಸಾಧ್ಯವಾಗಿದೆ. ಜಾಗತೀಕರಣದ ಸಮಸ್ಯೆ ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಗ್ರಹಣ ಹಿಡಿದಿಲ್ಲ ಈ ಗ್ರಹಣ ಎಲ್ಲಾ ಕಡೆಯು ಗೋಚರಿಸಿ ಸರಿಪಡಿಸಲು ಸಾಧ್ಯವಿಲ್ಲದಂತಾಗಿದೆ.

    ಈ ಕಾದಂಬರಿಯಲ್ಲಿ ಜಾಗತೀಕರಣ, ಅಧುನೀಕರಣ ಮತ್ತು ಹೊಸ ಶಿಕ್ಷಣ ನೀತಿಯಿಂದ ಉದ್ಯೋಗವಕಾಶಗಳನ್ನು ಹುಡುಕಿಕೊಂಡು ಅಥವಾ ಬಂದಂತಹ ಅವಕಾಶಗಳನ್ನು ಉಪಯೋಗಿಸಿ ವಿದೇಶಕ್ಕೆ ಕೆಲಸಕ್ಕೆ ಹೋಗುವ ಆಕರ್ಷಿಕ ಯುವ ಜನಾಂಗದ ಶ್ರೀಕಾಂತ್ ಮತ್ತು ವಾಣಿಯವರ ಜೀವನದಲ್ಲಿ ನಡೆಯುವ ಅಧುನಿಕ ಸಮಾಜದ ಪಲ್ಲಟಗಳು, ಜಾಗತೀಕರಣ ಅರ್ಥವ್ಯವಸ್ಧೆ ಮತ್ತು ಸಮಕಾಲೀನ ಸಮಸ್ಯೆಗಳನ್ನು ಶ್ರೀಕಾಂತನ ಪಾತ್ರದಲ್ಲಿ ಲೇಖಕರು ಹೊರಚೆಲ್ಲಿದ್ದಾರೆ.

    ಈ ಕಾದಂಬರಿಯಲ್ಲಿ  ಶ್ರೀಕಾಂತ್ ಸಾಮಾನ್ಯ ಹಳ್ಳಿಯಿಂದ ಬಂದಂತಹ ಯುವಕ ತನ್ನ ಮನೆ ಯಗಚಿ ನದಿಗೆ ಅಣೆಕಟ್ಟು ಕಟ್ಟಲು ತನ್ನ ಊರು ಮುಳುಗಿ ಹೋಗುವ ಸಂದರ್ಭದಲ್ಲಿ  ಇಡೀ ಊರಿಗೆ ಊರೇ ಪರಿಹಾರದ ಹಣವನ್ನು ಪಡೆದು ಊರನ್ನು ಖಾಲಿ ಮಾಡಿರುತ್ತಾರೆ. ಆದರೆ ತನ್ನ ತಂದೆ ಅದೇ ಊರಿನಲ್ಲಿ ವೀರಭದ್ರ ಸ್ವಾಮಿ ದೇವಸ್ಧಾನದ ಪೂಜೆ ಮಾಡಿಕೊಂಡು ಅಲ್ಲೆ ಇರುತ್ತಾರೆ. ಶ್ರೀಕಾಂತನು ಬೆಂಗಳೂರಿನಿಂದ ಊರಿಗೆ ಬಂದಾಗ ತಮ್ಮ ಕೃಷ್ಣನು ಶ್ರೀಕಾಂತನಿಗೆ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗು  ಓದಿನಲ್ಲಿ ಸ್ಪಲ್ಪ ಹಿಂದುಳಿದ್ದೇನೆ ಈ ಊರಿನಲ್ಲಿ ನನ್ನ ಸ್ನೇಹಿತರು ಯಾರು ಇಲ್ಲ ನನಗೆ ತುಂಬಾ ಬೇಜಾರಾಗುತ್ತದೆ ಎಂದು ನಿರ್ಭಾವುಕತೆಯಿಂದ ನರಳುವ ತಮ್ಮ ಇದ್ದಕ್ಕಿದ್ದಂತೆ ಯಾರಿಗೂ ಹೇಳದೆ ಮನೆ ಬಿಟ್ಟು ಹೋದಾಗ ಶ್ರೀಕಾಂತನಿಗೆ ಕಾಡುವ ವಿಹಲ್ವತೆ . ನಿರಂತರವಾಗಿ ತಮ್ಮನನ್ನು ಹುಡುಕುತ್ತಿದ್ದ ಶ್ರೀಕಾಂತ ತನ್ನ ಲಾಸ್ ಏಂಜಲೀಸ್ ಕಂಪನಿಯ ತನ್ನ ಮುಖ್ಯಸ್ಧ ಫ್ರಾಂಕೋನ ಕಣ್ಣಲ್ಲಿ ತನ್ನ ತಮ್ಮ ಕೃಷ್ಣನನ್ನು ಕಂಡಾಗ ಉಂಟಾಗುವ ಭಾವೋತ್ಕರ್ಷ ಎಲ್ಲಾ ಸಮಸ್ಯೆಗಳಿಗಿಂತಳು ಪರಸ್ವರ ಸಂಬಂಧಗಳ ಸೂಕ್ಷತೆಗಳನ್ನು ಲೇಖಕರು ತಿಳಿಸಿರುತ್ತಾರೆ.

    ಈ ಕಾದಂಬರಿಯಲ್ಲಿ ಲೇಖಕರು ಬೇರೆ ದೇಶದಿಂದ ಕೆಲಸಕ್ಕೆ ಬಂದಂತಹ ಜನರನ್ನು ಆ ದೇಶದ ಜನ ಹೇಗೆ ನೋಡುತ್ತಾರೆ ಎಂಬುದಕ್ಕೆ " ಸ್ವಂತ ಸುಖಕ್ಕಾಗಿ ತನ್ನೂರಿನಿಂದ ಓಡಿ ಬಂದು ಜೀತದ ಕೆಲಸ ಮಾಡುವ ಒಬ್ಬ ಇಮಿಗ್ರೇಷನ್ ಲಾಯರ‍್ ನಿಂದ ನಾನು ಲೈಫ್ ನ ಇಂಟಿಗ್ರಿಟಿಯ ಬಗ್ಗೆ ಪಾಠವನ್ನು ಕೇಳಬೇಕಾಗಿಲ್ಲ"ಎಂದು ಹೇಳುವ ವಾಸ್ತವಿಕ ದರ್ಶನವನ್ನು ಲೇಖಕರು ಮಾಡಿಸುತ್ತಾರೆ.
    ಎಷ್ಟೋ ವರ್ಷಗಳ ಹಿಂದೆ ಊರು ಬಿಟ್ಟು ಹೋದ ತಾನೇ ನೋಡಿರದ ಚಿಕ್ಕಪ್ಪನನ್ನು ಭೂಷಣ್ ರಾವ್ ನಲ್ಲಿ ಕಾಣುವುದು ಈ ಭೂಷಣ್ ರಾವ್ ನನ್ನ ನಾಗಣ್ಣ  ಚಿಕ್ಕಪ್ಪನೆಂದು ಸಂಬಂಧಗಳನ್ನು ಕಲ್ಪಿಸಿಕೊಂಡಾಗ ಮನಸ್ಸಿಗೆ ಆಗುವ ದುಗಡಗಳು. ಮಹಿಂದಾ ಮತ್ತು ಶ್ರೀಕಾಂತ ನಡುವೆ ನಡೆಯುವ ಮಾತುಕತೆಯಲ್ಲಿ ಲೇಖಕರು ಸಂವೇದನಶೀಲರಾಗಿ ಭಾವನೆಗಳನ್ನು ಸೂಕ್ಷ್ಮವಾಗಿ ತೆರೆದಿಡುತ್ತಾರೆ.

    ಜೆನ್ ಸನ್ ಎನರ್ಜಿ ಲೇ ಆಫ್ (ಮುಚ್ಚುವ) ಸಂದರ್ಭದಲ್ಲಿ ಆ ಕಂಪನಿಯ ಕೆಲಸಗಾರರ ಮನಸ್ಸಿನ ಸ್ಥಿತ್ಯಂತರವನ್ನು ಎಳೆ ಎಳೆಯಾಗಿ ಬಿಚ್ಚಿಡುವ ಸುಖವನ್ನಷ್ಟೇ ಅನುಭವಿಸಿ ಅಭ್ಯಾಸವಿರುವ ಅಮೇರಿಕಾದವರು ದು:ಖಗಳನ್ನು ಎದುರಿಸುವಾಗಲಿನ ಮನಸ್ಧಿತಿ ಅವರಗಿಲ್ಲದಿರುವ ಬಗ್ಗೆ . ಈ ಸನ್ನಿವೇಶಗಳಿಂದ ಶ್ರೀಕಾಂತ್ ಮತ್ತು ಮಿಲಿಂದ ಹೊರಬರುವ ಪ್ರಯತ್ನದಲ್ಲಿ ತೋರುವ ಆತ್ಮಸ್ಧೈರ್ಯ, ಜೀವನಾಸಕ್ತಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವ ಮಾರ್ಗ. ಫ್ರಾಂಕೋನನ್ನು ಕೆಲಸದಿಂದ ತೆಗೆದುಹಾಕಿದಾಗ ತನ್ನ ತಮ್ಮ ಕೃಷ್ಣನನ್ನು ಕಳೆದುಕೊಂಡ ಅಸಹಾಯಕತೆ. ಯೊಸೆಮಿಟಿಯಲ್ಲಿ  ಕಾಲ ಕಳೆಯುವಾಗ ವಾಣಿ ಹೇಳುವ "ಲೈಫ್ ಆಫ್ ಪೈ" ಕಥೆ ಕಥೆಯಾಗದೆ ಮನಸ್ಸಿನಲ್ಲಿ  ಉಳಿಯುತ್ತದೆ.

    ಪೆಟ್ರೋಲ್ ದರ ಜಾಗತಿಕ ಮಟ್ಟದಲ್ಲಿ ಏರಿಕೆ ಇಳಿಕೆ ಹಿಂದೆ ಇರುವ ಮುಂದುವರೆದ ರಾಷ್ಟ್ರಗಳ ಹಿಡಿತದ ಅಲ್ಲಿನ ರಾಜಕೀಯ ಒಳನೋಟಗಳು ಬಗ್ಗೆ ಸವಿರವಾಗಿ ವಿವರಿಸಿರುವುದು.ಮಹಿಂದಾ ಅಪಘಾನಿಸ್ತಾನಕ್ಕೆ ಹೋಗುವುದನ್ನು ತಡೆಯಲು ಶ್ರೀಕಾಂತ್ ಅಸಹಾಯಕನಾಗುವುದು. ಮಹಿಂದಾ ಅಪಘಾನಿಸ್ತಾನದಲ್ಲಿ ಮರಣಹೊಂದಿದಾಗ ಕಾಡುವ ತಪ್ಪಿಸ್ಧ ಭಾವನೆ. ಸಮಿಂದ ಮಧುರ ಸಿಂಘೆಯವರು ಮಹಿಂದಾ ದಿನಚರಿಯನ್ನು ಕೊಟ್ಟು ಓದಲು ಹೇಳಿದಾಗ ಯುದ್ಧ ಸೃಷ್ಟಿಸಿರುವ ಪರಿಸ್ಧಿತಿ ಕ್ರೌರ್ಯ ಇವುಗಳನ್ನು ಅಲ್ಲಲ್ಲಿ ಲೇಖಕರು ವಿವರಿಸಿರುವ ರೀತಿ, ಪುಲಿಟ್ಜರ‍್ ಪ್ರಶಸ್ತಿ ಪಡೆದ ಪೌಲ್ ವ್ಯಾಟನ್ಸ್ ಬಗ್ಗೆ ಸೂಕ್ಷ್ಮ ವಿವರಣೆ. ( ನ್ಯೂಸ್  ಚಾನೆಲಗಳು ಸುದ್ದಿಗಾಗಿ ಕಚ್ಚಾಡುವ ರೀತಿ) ಅಮೇರಿಕಾ ಯೂನಿಯನ್ ಟ್ರೇಡ್ ಗಳ  ಮಾಲೀಕರ ಮತ್ತು ಕಾರ್ಮಿಕರ ನಡುವಿನ ಸಂಘರ್ಷ. ಕೊನೆಯ ಬಾರಿ ಫ್ರಾಂಕೋ ಭೇಟಿ ಮಾಡಲು ಹೋದಾಗ ಲೇಖಕರು ಅಲ್ಲಿನ ಪ್ರಕೃತಿಯನ್ನು ಮರ್ಲಿನ್ ಮನ್ರೋ ಜೊತೆ ಹೋಲಿಸಿ ನೋಡುವ ಅದ್ಭುತ ವರ್ಣನೆ. ಫ್ರಾಂಕೋ ಮತ್ತು ಲೀಸಾ ಸಂಬಂಧದಲ್ಲಿ  ಲೀಸಾಗೆ ಕೊಂಡುಕೊಳ್ಳುವ ಪ್ರವೃತ್ತಿಗೆ ಒಳಗಾಗಿ ಫ್ರಾಂಕೋ ಹೇಳುವ ಮಾತು "ಬರಬರುತ್ತ ನಾನು ಮನೆಯ ಹತ್ತು ಸಾವಿರ ವಸ್ತುಗಳ ನಡುವೆ ಅನಾಥನಾಗಿ ಬಿಟ್ಟೆ" ಎಂದು ಲೇಖಕರು ವಿದೇಶಿಯರ ಮನೋಧರ್ಮವನ್ನು ವಿವರಿಸುತ್ತಾರೆ. " ಸಾಂಟಾ ಅನಾ ಬಿರುಗಾಳಿ" ಯ ಬಗ್ಗೆ  ಕೃಷ್ಣ ಮತ್ತು ತನ್ನ ಚಿಕ್ಕಪ್ಪನನ್ನು ಬೇರೆಯವ ಕಣ್ಣಲ್ಲಿ ಹುಡುಕಲು ಹೋದ ಲೇಖಕರು ಹೀಗೆ ಹೇಳುತ್ತಾರೆ. " ಯಾರನ್ನಾದರೂ ಹುಡಕಲು ಹೊರಟರೆ ನಮಗೆ ನಾವೇ ವೃತ್ತದ ಕೇಂದ್ರವನ್ನೆಉವ ಭ್ರಮೆಯಲ್ಲಿ ಬೀಳುತ್ತವೆ.

    ಒಟ್ಟಾರೆ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಪಾತ್ರವು ವಿಭಿನ್ನತೆ ಹೊಂದಿದ್ದು ಜಾಗತೀಕರಣದ ನಡುವೆ ಮನುಷ್ಯ ಮತ್ತು ಮನುಷ್ಯನ ನಡುವೆ ಪ್ರೀತಿ, ವಿಶ್ವಾಸ, ಸಂಬಂಧಗಳ ಸಂಕೀರ್ಣತೆಯನ್ನು, ಸೂಕ್ಷ್ಮ ಸಂವೇದನೆಗಳನ್ನು ಆಪ್ತವಾಗುವಂತೆ ಅರ್ಥವತ್ತಾಗಿ ಹೇಳಿಕೊಂಡು ಹೋಗಿರುವುದು ಲೇಖಕರ ಬರವಣಿಗೆಯ ಮೇಲಿರುವ ಹಿಡಿತವನ್ನು ತೋರಿಸುತ್ತದೆ. ಅಲ್ಲಲ್ಲಿ ಲೇಖಕರು ಕಾದಂಬರಿ ಕನ್ನಡ ಸಾಹಿತ್ಯಲೋಕದಲ್ಲಿ ಹೊಸತನವನ್ನು ತುಂಬಿದ್ದು ಈ ಕಾದಂಬರಿ ವಸ್ತುವಿನ ವಿಶೇಷತೆಯಾಗಿರುತ್ತದೆ.


   

No comments:

Post a Comment