ಈ ಬ್ಲಾಗ್ ಗೆ ಪ್ರೀತಿಯಿಂದ ಜಿ.ಬಿ.ಅರುಣಪ್ರಸಾದ್ ಬರೆದು ಕೊಟ್ಟ ಕಥೆ.
ಕನಸಾ ಮಾರುವಾ ಚೆಲುವ.......
ಅಷ್ಟು ಹೊತ್ತಿಗಾಗಲೇ ಆಳುವುದನ್ನೂ ಮರೆತಿದ್ದ ನಾನು ತಾಯಿಯ ಜೊತೆ ಇರಲೇ ಬೇಕು ಎಂದು ಹಠಕ್ಕೆ ಬಿದ್ದೆ. ಸದ್ಯಕ್ಕೆ ಸಮ್ಮುನಿದ್ದು ಮುಂದೆ ಕಾರ್ಯ ಸಾಧಿಸಬೇಕು ಎಂದು ತೀರ್ಮಾನಿಸಿದೆ. ಎಲ್ಲ ಹೊರಟರು ತಾಯಿಯ ಕಾಯಿಲೆಯ ಚಿಕಿತ್ಸೆಗೆ ಎಂಬ ನೆಪ ಮಾತ್ರ. ಆದರೆ ಹೋಗುವ ಊರಿನಲ್ಲಿ ಖರೀದಿಸಬೇಕಾದ ವಸ್ತು , ಮೋಜು-ಮಜಾ ನೋಡಬೇಕಾದ ಸ್ಧಳಗಳ ಬಗ್ಗೆ ಒಳಗೊಳಗೆ ಚರ್ಚೆ ಬಹಳವಾಗಿ ಕೇಳಿ ಬರುತ್ತಿತ್ತು. ಹೊರಡುವಾಗ ತಾಯಿ ಕಡೆಯದಾಗಿ ಎಂಬಂತೆ ನನ್ನ ತಲೆಯನ್ನು ಕೊಡವಿ ತನ್ನ ಎದೆಗಾನಿಸಿಕೊಂಡಳು. ನನ್ನ ಮನಸ್ಸಿನಲ್ಲಿಯೂ ಇದೇ ಕಡೇ ಭಾರಿಯ ಪ್ರೀತಿಯ ಸ್ಪರ್ಶ ಎಂದು ಅನಿಸಿದ್ದು ಯಾಕೆ ತಿಳಿಯದು?
ಅಲ್ಲೇ ಜಗಲಿಯ ಮೇಲೆ ಕುಳಿತೆ ಮನೆಗೆ ಬೀಗ ಹಾಕಲಾಗಿತ್ತು. ಸಂಜೆ ಮನೆಯವರು ಬಂದು ಬೀಗ ತೆಗೆಯುವವರೆಗೆ ನಾನು ಅಲ್ಲೇ ನೀರು ಬೇಕೆಂದರೂ ಸಂಜೆಯವರೆಗೆ ಕಾಯಬೇಕು. ಅಕ್ಕಪಕ್ಕದ ಮನೆಯಲ್ಲಿ ಕೇಳಿ ನೀರು ಕುಡಿಯವಂತೆಯೂ ಇಲ್ಲ. ಹಾಗೆ ಕುಳಿತವನಿಗೆ ಜೊಂಪಿನಂತೆ ನಿದ್ರೆ ಬಂತು ಮಲಗಿದೆ. ಕಣ್ಣು ಬಿಡುವ ಹೊತ್ತಿಗೆ ಸಂಜೆಯಾಗುತ್ತಾ ಬಂದಿತ್ತು.
ಹವಾಲ್ದಾರ ಏ ಇಲ್ಲಿ ಹಾಗೆಲ್ಲ ಕೂಗಿಕೊಳ್ಳಬಾರದು ಈ ಠಾಣೆಯ ಮುಖ್ಯಸ್ಧರು ಅವರು ಇಲ್ಲಿ ಕೊಗಿಕೊಂಡವರ ಗಂಟಲು ಸೀಳಿ ಬಿಡುತ್ತಾರೆ. ಎಂದ ಆದರೆ ಆ ಅಧಿಕಾರಿ ಮಾತ್ರ ಭಾರಿ ವಿನಿಯದಿಂದ ನನ್ನ ಹತ್ತಿರ ಬಂದು ತಲೆ ಸವರಿ ನನಗೂ ತಾಯಿಯಿದ್ದಾಳೆ. ಬಿಡು ಮಗು ಎಂದು ಆ ವಿನಿಯದಿಂದ ನನಗೆ ಅವನು ನಮ್ಮವನಲ್ಲ ಎನಿಸಿತು.
ಜೋಪುಡಿ ಬಳಿ ಬಂದಾಗ ಸಂಜೆ ಎಂಬುದು ಸರಿದು ಪಶ್ಚಿಮ ದಿಕ್ಕಿನಲ್ಲಿ ಉಷೆಯು ತನ್ನ ನಿಷೆಯ ಲೋಕದಲ್ಲಿ ತೇಲುತ್ತಿತ್ತು. ನನಗಾಗಿ ಯಾರು ಅಲ್ಲಿ ಕಾಯುತ್ತಿರಲಿಲ್ಲ, ಒಳಗೆ ಕುಳಿತ ಫಕೀರ ಅಚ್ಚರಿಯಿಲ್ಲದ ಕಣ್ಣುಗಳಿಂದ ನನ್ನನ್ನು ಒಮ್ಮೆ ನೋಡಿ ತಟ್ಟನೆ ಎದ್ದು ಬಂದು ನನ್ನ ತಲೆಯ ಮೇಲಿನ ಬುಟ್ಟಿಯನ್ನು ಎತ್ತಿಕೊಂಡು ತನ್ನ ಎದೆಯ ಮಟ್ಟದಲ್ಲೇ ಇಟ್ಟುಕೊಂಡ ನನಗೆ ಕಾಣಿಸುತ್ತಿರಲಿಲ್ಲ " ಸರಿ ಮಾರಿದ್ದೀಯ" ಆದರೆ ಖುಣಭಾರ ಅಧಿಕವಾಯಿತಲ್ಲೊ ಬಾಯಿಬಿಟ್ಟು ಕೇಳಿ ಪಡೆದೆಯೋ ಏನು? ಎಂದ ಇಲ್ಲ ನಾನು ಅದರ ಬಗ್ಗೆ ಬಾಯಿಯೇ ತೆರದಿಲ್ಲ ಎಂದೆ.
ಅಂದು ರಾತ್ರಿ ಗಂಜಿ ಕುಡಿದು ಮಲಗಿದವನಿಗೆ ಚಳಿಯ ಅನುಭವ ಆದರೂ ಹಿಂದಿನ ದಿನ ಹೊದೆಯಲು ನೀಡಿದ್ದ ಕಂಬಳಿಯನ್ನು ಫಕೀರ ನೀಡಲಿಲ್ಲ, ಖುಣಭಾರ ಹೊತ್ತು ತಂದದಕ್ಕೆ ಶಿಕ್ಷೆ ಅನುಭವಿಸು ಎಂದು ಹೇಳಿ ತಾನು ಹೊದ್ದು ಮಲಗಿದ ನಾನು ಮುಂದುವರಿದು ಮಾತಾನಾಡಲೂ ಆಗದೇ ಚಳಿ ತಡೆಯಲು ಆಗದೆ ದೇಹ ಎಂಬುದೇ ಹೀಗೆ ಇಲ್ಲದಿದ್ದರೆ ಇದ್ದೇ ಬಿಡುತ್ತದೆ ಒಮ್ಮೆ ಏನಾದರೂ ನೀಡಿದರೆ ಮತ್ತೆ ಮತ್ತೆ ಬೇಕು ಬೇಕೆನ್ನುವ ಹಪಾಹಪಿಗೆ ಬೀಳುತ್ತದೆ. ಇಡೀ ದೇಹವನ್ನು ಮುದ್ದೆಯಂತೆ ಕೊಕ್ಕರಿಸಿಕೊಂಡು ಮಲಗಿದೆ.
ಬೆಳಕು ಹರಿಯಿತು ನಾನೇ ಎದ್ದು, ಅದೇ ಸ್ನಾನ ಮತ್ತೆ ಕಶಾಯವಸ್ತ್ರ ಅದೇ ತಂಗಳು ಗಂಜಿ ಕುಡಿದ ನಂತರ ಅದೇ ಬುಟ್ಟಿ ತಲೆಯ ಮೇಲೆ ನಿನ್ನೆಗಿಂತ ಅದು ಮತ್ತಷ್ಟು ಭಾರ, ಅದನ್ನು ಹೊತ್ತು ನಾಲ್ಕು ಹೆಜ್ಜೆ ಹಾಕಿದವನಿಗೆ ತಲೆ ಉರಿಯುತ್ತಿರುವಂತೆ ಭಾಸವಾಯಿತು. ಹಿಂತಿರುಗಿ ನೋಡಿದೆ ಅದನ್ನು ಗಮನಿಸಿದ ಫಕೀರ ಓಡಿ ಬಂದು ತನ್ನ ಹೆಗಲ ಮೇಲಿದ್ದ ವಸ್ತ್ರವನ್ನು ಸಿಂಬಿ ಮಾಡಿ ಬುಟ್ಟಿಗೂ ತಲೆಗೂ ಮಧ್ಯ ಇರಿಸಿ ಈಗ ಸರಿಯಾಯಿತೇ? ಎಂದ ಹೌದು ಎಂಬಂತೆ ತಲೆಯಾಡಿಸಿ ಹೊರಟೆ.
ಅದೇ ದೊಡ್ಡದೊಡ್ಡ ಕಟ್ಟಡಗಳು ಕಪ್ಪಿ ಹೆಬ್ಬಾವಿನಂತೆ ಮುಲಗಿದ ರಸ್ತೆ ಮೊಗ್ಗಲಲ್ಲಿ ಹುಣ್ಣಿಮೆ ಚಂದ್ರನ ಹಾಲಿನ ಬಣ್ಣ ಮೀರಿಸುವಂತಹ ಶ್ವೇತ ವರ್ಣದ ಅಶ್ವಗಳ ಸಾಲು, ಸಾಲಿಗೆ ಸರಿಸಾಟಿ ಎಂಬಂತೆ ನಿಂತ ಅದ್ದೂರಿಯಾದ ಸಾರೋಟು, ಅವುಗಳ ಮಧ್ಯೆ ರಾಜ ಮಹಾರಾಜರಂತೆ ಧಿರಿಸು ಧರಿಸಿನಿಂತ ಸಾರಥಿಗಳು ಅವನ್ನು ನೋಡುತ್ತಿದ್ದರೆ ಕಣ್ಣು ಬೇರಡೆಗೆ ತಿರುಗಲೇ ಇಲ್ಲ ಪ್ರಯತ್ನಿಸಿದೆ. ಅಷ್ಟರಲ್ಲಿ ಘಟಿಸಬಾರದಿದ್ದ ಘಟನೆ ಘಟಿಸಿಯೇ ಹೋಗಿತ್ತು. ಸಾರೋಟು ಕುದುರೆ ಅಂದ ನೋಡುತ್ತಾ ಹೋಗಿ ಮುಂದೆ ಬಂದವರಿಗ್ಯಾರಿಗೋ ತಾಕಿನಿಂತೆ ಯಾರೆಂದು ನೋಡುವಷ್ಟರಲ್ಲಿ ಅವರೊಬ್ಬ ಹೆಣ್ಣು ಎಂಬುದು ಅವರ ಸೀರೆಯಿಂದ ತಿಳಿಯತಾದರೂ ಮುಖ ಮಾತ್ರ ಕಾಣಲೇ ಇಲ್ಲ.
ಕಡಲೂರಿನ ಕನ್ಯೆ ಮುಖ ನೋಡಲು ಸ್ಪಲ್ಪ ಹಿಂದೆ ಹಿಂದೆ ಹೋದೆ ಅವರ ಮಂಡಿ ಎತ್ತರಕ್ಕಿದ್ದ ನಾನು ಅವರ ಮುಖ ನೋಡಲು ಸ್ಪಲ್ಪ ಶ್ರಮಪಡಬೇಕಾಯಿತು. ಭಯ ಮಾಡಿದ ತಪ್ಪಿನ ಅರಿವಾಗಿ ಆಗಲೇ ನನ್ನ ಕೈ ಕಾಲು ಕಂಪಿಸಲು ಪ್ರಾರಂಭಿಸಿದ್ದವು. ಅವರು ಮುಖ ನೋಡಿದರೆ ಹೂ ನಗೆ ಸೂಸುತ್ತಿತ್ತು ಆ ಅವರು ಯಾರು ನೀನು? ಏನು ಹೆಸರು? ಅದೇನು ತಲೆಯ ಮೇಲಿನ ಬುಟ್ಟಿಯಲ್ಲಿ ಎಂದು ನಯ ವಿನಯಭರಿತ ಪ್ರೀತಿಯಿಂದ ಕೇಳಿದರೂ ಅವರು ಬೇರೆಯವರು ಅನ್ನಿಸಲಿಲ್ಲ ನಮ್ಮವರೇ ಎನ್ನಿಸಿತು.
ಅವರ ಮುಖದಲ್ಲಿ ನನ್ನ ತಾಯಿಯ ನೆನಪಿಸುವ ನಗುವಿನಿಂದ ಹಾಗಾಯಿತೇನೋ ತಿಳಿಯದು, ನಾನು.... ನಾನು.... ಸೇವಕ ನನಗೂ ಹೆಸರಿದೆ.... ಅನಾಥನಲ್ಲ ತಾಯಿಯಿದ್ದಾಳೆ, ಕನಸುಗಳಿವೆ ಬುಟ್ಟಿಯಲ್ಲಿ ಎಂದೆ ಖುಷಿಯಿಂದ ಹಿಗ್ಗಿ ಹೋದರು ಅವರು " ಓ ನೀನೇ ಏನು ಆ ಕನಸು ಮಾರುವವನು " ನಾನು ಎಷ್ಟು ವರ್ಷಗಳಿಂದ ಕಾಯ್ದು ಹಂಬಲಿಸಿದ್ದೆನೋ ಮಾರಾಯ ನಿನ್ನಂತ ಒಬ್ಬ ಕನಸು ಮಾರುವ ಹುಡುಗನಿಗಾಗಿ ಎಂದವರೇ? ಬಾ ಇಲ್ಲಿ ಎಂದು ಹೇಳಿ ಮುಂದೆ ನಡೆದರು ನಾನು ಅವರನ್ನೇ ಅನುಸರಿಸಿದೆ.
ಅಲ್ಲೇ ನಿಂತಿದ್ದ ಸಾರೋಟುಗಳಲ್ಲಿ ಅತೀ ಸುಂದರ ದುಭಾರಿ ಎನಿಸುವಂತಹುವುದನ್ನು ಏರಿ ಕುಳಿತರು. ಸಾರಥಿ ಬಾಗಿಲು ಹಾಕಲು ಮುಂದಾದಾಗ ಅವನನ್ನು ಹತ್ತಿಸಿ ಕೊಳ್ಳಿ ಎಂದು ಆಜ್ಞಾಪಿಸಿದರು. ಸಾರಥಿ ಅವರ ಅಣತಿಗೆ ಮುಂದಾಗಿ ಬಾ ಹತ್ತು ಎಂದ ನಾನು ಅವರ ಮುಖನೋಡಿ ನಾನು ನಡೆದ ಸಾಗಬೇಕಿದೆ. ಕನಸ ಮಾರಲು ಬಂದವನು ಗಾಡಿ ಬಂಡಿ ಹತ್ತವಂತಿಲ್ಲ ಅದು ಗುರುವಿನಾಜ್ಞೆ ಎಂದೆ. ಅವರು ಮುಖ ಕಪ್ಪುಗಟ್ಟಿತು. ಸರಿ ನಿಧಾನವಾಗಿ ನಡೆ ಎಂದು ಸಾರಥಿಗೆ ಹೇಳಿದರು ಗಾಡಿಯ ಹಿಂದೆ ನಾನು ನಡೆಯಲಾರಂಭಿಸಿದೆ.
ಕೆಲವು ಮೈಲಿಗಳು ಸಾರೋಟು ಸಾಗುತ್ತಿದ್ದಾಗ ಹಿಂದಿನ ಕಿಟಕಿಯಿಂದ ಅವರು ನನ್ನ ನೋಡುತ್ತಿದ್ದರು, ಸಾರೋಟು ವೇಗ ಹೆಚ್ಚಾದರೆ ತಗ್ಗಿಸಲು ಸಾರಥಿಗೆ ಹೇಳುತ್ತಿದ್ದರು ಕಡೆಗೆ ಒಂದು ವಿಚಿತ್ರವಾದ ಬಂಗಲೆ ಬಾಗಿಲಿಗೆ ಬಂದು ನಿಂತಿತು ಸಾರೋಟು.ಆ ಬಂಗಲೆಯಲ್ಲಿ ಬಿಸಿಲು ಬೆಳದಿಂಗಳು , ಹಗಲು-ಇರುಳು, ಸುಂದರ ಹಕ್ಕಿ ರಣಹದ್ದು, ಒಂದೆಡೆ ಕಡಲು-ಕಾನನ ಎಲ್ಲಾ ಒಟ್ಟಿಗೆ ಮೇಳೈಸಿತ್ತು ನಿಂತ ಸಾರೋಟಿನ ಸಾರಥಿ ಅವರನ್ನು ಕೈಹಿಡಿದು ಕೆಳಗಿಸಿ ರಾಜ ಮರ್ಯಾದೆ ತೋರಿದ ಅವನು ಅವರ ಕೈಹಿಡಿದಾಗ ನನಗೆ ಕೊಂಚ ಬೇಸರವಾಯಿತು. ಅದನ್ನು ಕಣ್ಣಲ್ಲೇ ಗಮನಿಸಿ ಅಪರಾಧಿ ಮನೋಭಾವದಿಂದ ನೋಡಿ ಕ್ಷಮಿಸು ಎಂಬಂತೆ ಕಣ್ಣಲ್ಲೇ ಕೇಳಿದರು. ನಾನೇ ತಪ್ಪು ಮಾಡಿದೆ ಎಂಬಂತೆ ಭಾಸವಾಗಿ ನಾನು ಏನೂ ಮಾತನಾಡದೆ ಅವರನ್ನು ಹಿಂಬಾಲಿಸಿ ಹೋಗುವಾಗ ಕಾವಲುಗಾರ ಅವರಿಗೆ ಅತೀ ವಿನಿಯ ಮತ್ತು ಮರ್ಯಾದೆಯಿಂದ ಸಲಾಮು ಮಾಡಿದ ನನ್ನನ್ನು ಯಾರು ಎಂಬಂತೆ ನೋಡಿದಾಗ ಕಾವಲುಗಾರ ನನ್ನ ತಡೆಯಲಿಲ್ಲ ಆದರೆ ಬುಟ್ಟಿಯನ್ನೊಮ್ಮೆ ಪರಿಶೀಲಿಸುವಂತೆ ನೋಡಿದ. ಭಾರವೇ ಇಳಿಸಲೇ ಎಂದು ಮುಂದೆ ಬಂದವನಿಗೆ ಹೇಳಿದ ಕನಸು ಮಾರುವವರೆಗೆ ಬುಟ್ಟಿ ಇಳಿಸುವಂತಿಲ್ಲ ಎಂದಾಗ ಅವರು ಹಿಂತಿರುಗಿ ನೋಡಿ ಫಕ್ಕನೆ ನಕ್ಕರು ಅದು ನನ್ನ ತಾಯಿಯ ನಗುವಿನಂತೆ ಇತ್ತು ಬಿಡು ಅವನನ್ನು ಎಂದು ಕಾವಲುಗಾರನಿಗೆ ಹೇಳಿ ಒಳಗೆ ಹೋದರು ನಾನು ಅವರನ್ನು ಹಿಂಬಾಲಿಸಿದೆ.
ಸರಿ ಒಟ್ಟು ಏಳು ಕನಸುಗಳು ಬೇಕು, ನನಗೆ ಸರಿ ಒಂದು ಕನಸಿಗೆ ಎಷ್ಟು ಪ್ರತಿಫಲ ನೀಡಬೇಕು ಹೇಳು ನಿನಗೆ ಎಂದರು, ನಾನು ಉತ್ತರ ನೀಡುವ ವೇಳೆಗೆ ನನ್ನ ಬುಟ್ಟಿ ಪರಿಶೀಲಿಸಿ, ಇದೇನು ಬರೀ ಏಳು ಕನಸುಗಳಷ್ಟೇ ಇವೆ. ನನಗಾಗಿಯೇ ತಂದಿಯೇನು? ಎಂದು ಆನಂದ ಭರಿತ ಧ್ವನಿಯಿಂದ ಕೇಳಿದರು. ನಾನು ಹೇಳಿದೆ ನನಗೆ ಪ್ರತಿಫಲ ಬೇಕಿಲ್ಲ, ಕನಸುಗಳನ್ನು ಕೊಂಡು ತೃಪ್ತಿಯಿಂದ ನೀವು ಅಲ್ಪ ಕಾಣಿಕೆ ನೀಡಿದರೂ, ಅದು ಕನಸು ಮಾರಲು ಕಳಿಸಿದ ಫಕೀರನಿಗೆ ಅರ್ಪಿತ ಎಂದೆ. ಆಗ ತಿಳಿಯಿತು ಪ್ರತೀ ಮಾತು ಮಾತಿಗೂ ಆಕೆ ಸರಿ, ಸರಿ, ಎನ್ನುತ್ತಾರೆ ಎಂದು ತಿಳಿಯಿತು. ಸರಿ ಎಂದು ಹೇಳಿದಂತೆ ನಡೆಯುತ್ತಾರೆ. ತಪ್ಪು ಎನ್ನುವುದಿಲ್ಲ, ನಡೆಯುವುದಿಲ್ಲ ಎಂದು.
ಇದ್ದ ಏಳು ಕನಸುಗಳನ್ನು ಅವರ ಕೈ ಸೇರಿದವು, ಬುಟ್ಟಿ ಭಾರ ಪೂರ್ಣ ಕಡಿಮೆಯಾಗಿತ್ತು. ಸರಿ ಒಳಗೆ ಬಾ ಪ್ರತಿಫಲ ನೀಡುತ್ತೇನೆ ಎಂದರು ಯಾಉ ಮನೆಯೊಳಗೂ ಹೋಗಬಾರದು ಎಂದು ಗುರುವಿನ ಅಪ್ಪಣೆ ನೆನಪಾಗಿ ಹಿಂದುಮುಂದು ನೋಡುತ್ತಿದ್ದವನಿಗೆ, ಅವರೇ ಹೇಳಿದರು ನಿನಗೆ ನಾನು ನೀಡುತ್ತಿರುವ ಪ್ರತಿಫಲ ತೀರಾ ಕಡಿಮೆ ಅದಕ್ಕೆ ಒಳಗೆ ಬಾ ಎಂದೆ ಎಂದು ಖುಷಿಯಿಂದ ಅವರ ಹಿಂದೆ ಹೋದೆ ಬುಟ್ಟಿ ತಲೆಯ ಮೇಲಿತ್ತು ಅಲ್ಲೇ ಮಂಚದ ಮೇಲೆ ಕುಳಿತಿದ್ದ ಹೆಂಗಸೊಬ್ಬರು ನನ್ನತ್ತ ದೃಷ್ಟಿ ಇಟ್ಟು ನೋಡಿ ಕ್ಯಾಕರಿಸಿ ಥೂ ಎಂದು ಉಗಿದು ಮಾನ ಮರ್ಯಾದೆ ಇಲ್ಲದ ಮುಂಡೇ ಮಕ್ಕಳು ಕನಸು ಮಾರಿಕೊಂಡು ಬದುಕುತ್ತಾರೆ. ಎಂದು ಬೈಯ್ದಳು, ನಾನು ಕಕ್ಕಾಬಿಕ್ಕಿಯಾದೆ ಒಳಗಿನಿಂದ ನನ್ನತ್ತ ನೋಡಿದ ಇವರು ಆಕೆಗೆ ತಲೆಸರಿಯಿಲ್ಲ ಎಂದು ಸನ್ನೆ ಮಾಡಿದರು.
ಪ್ರತಿಫಲ ತಂದು ನನ್ನ ತಲೆಯ ಮೇಲಿನ ಬುಟ್ಟಿಗೆ ಹಾಕಿದ ಅವರನ್ನು ನಿಮ್ಮ ಹೆಸರೇನು? ಎಂದು ಕೇಳಿದೆ ಅವರು ಅಚ್ಚರಿ ಪಡೆದೇ ಏಕೆ? ಎಂದು ಪ್ರಶ್ನಿಸಿದರು. ನೀವು ನನ್ನ ತಾಯಿಯಂತೆ ಕಾಣುತ್ತೀರಿ ಅದಕ್ಕೆ ಎಂದೇ ಅವರು ಮಂಡಿಯೂರಿ ನನ್ನ ಮುಂದೆ ಕುಳಿತು, ನನ್ನ ಎತ್ತರದಷ್ಟಾದ ಅವರು ನನ್ನ ಎರಡು ಗಲ್ಲ ಮುದ್ದಿಸಿ ಮುತ್ತಿಟ್ಟುಕೊಂಡಾಗ ಸಾಗರದ ಒಡಲಿಲ್ಲ ಅಗ್ನಿ ಕೆನ್ನಾಲಿಗೆ ಚಾಚಿದ ಅನುಭವವಾಯಿತು. ಏಕೋ ಏನೋ ಆನಂದ ಭಾಷ್ಪ ಕಣ್ಣೀನಿಂದ ಸುರಿಯಲಾರಂಭಿಸಿದವು. ಬಿಕ್ಕಿ ಬಿಕ್ಕಿ ಆಳಬೇಕು ಎನ್ನಿಸಿತು. ಜೀವನದಲ್ಲಿ ಮೊದಲ ಬಾರಿಯಾದರೂ ಹೊಡಯದಿದ್ದರೂ ಆಳಬೇಕು ಅನ್ನಿಸಿತು ಅತ್ತು ಬಿಟ್ಟೆ. ನಾನು ಆಳುವಾಗ ತಡೆಯಲಿಲ್ಲ, ಸರಿ ನನಗೆ ನಾಳೆ ಬರುವಾಗ ಬೇರೆ ಬೇರೆ ಕನಸುಗಳನ್ನು ತೆಗೆದುಕೊಂಡು ಬಾ ಎಂದರು. ಮತ್ತೆ ಅವರೇ ನನಗೆ ಬೇಕಾದ ಕನಸುಗಳು ನಿನ್ನ ಬಳಿ ನಾಳೆ ಇರುತ್ತದೆಯೋ ಇಲ್ಲವೋ ನಿನಗೆ ತಿಳಿಯದು ಅಲ್ಲವೆ, ಆದರೂ ದಿನಕ್ಕೊಮ್ಮೆಯಾದರೂ ಇಲ್ಲಿ ಬಂದು ಹೋಗು ಎಂದರ, ಈಗಿದ್ದ ಕನಸುಗಳು ಈಗಿನವು ನಾಳೆ ಎನ್ನುವಾಗ ಅದು ಬೇರೆಯಾಗಿರುತ್ತದೆ. ಕನಸುಗಳು ಇದ್ದೆರೆ ಅವು ನನ್ನವು ನಿನಗೆ ಯಾವುದೇ ಪ್ರತಿಫಲವಿಲ್ಲ ಎಂದು ನಕ್ಕರು ಧನ್ಯನಾದೆ ಎಂದು ಹೇಳಿ ಹೊರಗೆ ನಡದೆ ಅವರೂ ಸಹ ನನ್ನನ್ನು ಹಿಂಬಾಲಿಸಿದರು, ಕನಸುಗಳು ಖಾಲಿ ಖಾಲಿಯಾದ ಬುಟ್ಟಿಯಲ್ಲಿ ಪ್ರತಿಫಲವೂ ಕಡಿಮೇ ಎಂಬುದರ ಬಗ್ಗೆ ಖುಷಿಯಿಂದ ಅವರ ಮನೆಯ ಮುಖ್ಯದ್ವಾರದಿಂದ ಹೊರಗೆ ಬಂದು ಕಾವಲುಗಾರನನ್ನು ದಾಟಿ ಹಿಂತಿರುಗಿ ನೋಡಿದೆ ಅವರು ಹಿಂದೆ ಬಂದು ನನ್ನ ಬೆನ್ನಿಗೆ ನಿಂತಿದ್ದರು.
ಹಿಂತಿರುಗಿ ನೋಡಿದವನಿಗೆ ನೀನು ನನ್ನ ಹೆಸರು ಕೇಳಿದೆಯಲ್ಲ "ಕಡಲೂರ ಕನ್ಯೆ" ನಾನು ನನ್ನ ಹೆಸರು ಕೇಳಿದರೆ ಜನ ಆದರಾಥಿತ್ಯ ತೋರುತ್ತಾರೆ ನಿನಗೂ ನನ್ನ ಹೆಸರು ಕೇಳುವ ಆಸೆಯಾಗಿದೆ ಹೇಳಿದ ಮೇಲೆ ವಿಷಾದಪಡಬೇಡ ನನ್ನ ಹೆಸರು "ಬೇಸರ" ಎಂದರು. ಬಹಳ ಹಿಂದೆ ಇವರ ಹೆಸರು ಚಿರಪರಿಚಿತ ಎನಿಸಿತು ನನಗೆ, ಕನಸು ಮಾರಲು ಪ್ರಾರಂಭಿಸಿದ ದಿನದಿಂದ ಕನಸುಕೊಳ್ಳಲು ಬಂದವರೆಲ್ಲಾ ಆ ಹೆಸರನ್ನು ಜೊತೆಯಲ್ಲಿ ತರುತ್ತಿದ್ದರು.
ಆದರೆ "ಬೇಸರ" ಎಂಬ ಅವರನ್ನು ನಾನು ಈ ರೀತಿ ಸ್ಪಂದಿಸುವೆ ಎಂದು ಕೊಂಡಿರಲಿಲ್ಲ ಬಹುದೊಡ್ಡ ಹೆಸರಿನ ಅವರಿಗೆ ನನ್ನಂತಹ ಜನ ಜೋಪುಡಿಯಿಂದ ತಂದ ಕನಸು ಬಲು ಪ್ರಿಯ ಎಂಬುದು ತಿಳಿದು ನಗು ಬಂತು, ಅಲ್ಲಿಂದ ಕಾಲುಕಿತ್ತೆ ಬಲು ಚೆನ್ನಾಗಿ ಕನಸು ಮಾರುವುದನ್ನು ಅಪ್ಪಣೆಯಂತೆ ಕಲಿತ ನನ್ನ ಫಕೀರ ಬಹುವಾಗಿ ಮೆಚ್ಚಿಕೊಂಡಿದ್ದನಾದರೂ ದ್ರೋಹ ಚಿಂತನೆ ಎಂಬುದು ವ್ಯಾಪಾರದಲ್ಲಿ, ಆದರೆ ಇದು ಜೀವನ ಧರ್ಮ ಚಿಂತನೆ ಇಲ್ಲಿ ಲಾಭವಾದಷ್ಟು ದು:ಖ, ಗೋಳು, ನಷ್ಟವಾದಷ್ಟು ಸಂತಸವೇ ತಿಳಿಯತೆ ಎಂದ. ಅಷ್ಟರಲ್ಲಿ ಜೋಪಡಿಯ ಬಾಗಿಲಿಗೆ ರಾಜನರ್ತಕಿ ಬಂದು ನಿಂತು ನಕ್ಕಳು ಹ್ಞಾಂ ಎಂದ ಫಕೀರ, ಜೋಪುಡಿಯ ಮೂಲೆಯಲ್ಲಿ ತೆರೆಯಮರೆ ಮಾಡಿದ್ದ ಕಡೆ ಆಕೆಯನ್ನು ಕರೆದುಕೊಂಡು ಹೋದ, ಆಕೆ ಹೋದ ಮೇಲೆ ತಿಳಿಯಿತು ಆಕೆ ರಾಜನಿಗೆ ಕನಸು ಕೊಂಡ್ಯೊಯಲು ಬಂದಿದ್ದಳು ಎಂದು ಅದಕ್ಕೆ ಬದಲಾಗಿ ಸುರೆಯ ಬುರುಡೆಯನ್ನು ನೀಡಿ ಹೋಗಿದ್ದಳು. ಫಕೀರನು ರಾಜಾಜ್ಞೆ ಬೇಡ ಎನ್ನುವಂತಿರಲಿಲ್ಲ ಬುರುಡೆ ಮುಂದಿಟ್ಟುಕೊಂಡು ನನ್ನತ್ತ ನೋಡಿದ.
ಎದ್ದು ಹೋದ ನಾನು ಮತ್ತೊಂದು ಸುರೆಯ ಖಾಲಿ ಬುರುಡೆಯನ್ನು ತಂದು ಅರ್ಧ ಸುರೆಯನ್ನು ಅದಕ್ಕೆ ಸುರಿದು ನನಗೆ ಕೊಟ್ಟು ರುಚಿ ನೋಡೆಂದ ಗುರುವಿನಾಜ್ಞೆಯಂತೆ ಸುರೆಯನ್ನು ಹೀರಿದೆ ಆ ಹುಣ್ಣಿಮೆಯ ದಿನ ಚಂದಿರನ ನೋಡಿದರೂ ಕಡಲೂರ ಕನ್ಯೆ ಮುಖ ಬಿಂಬಿತವಾಗುತ್ತಿತ್ತು. ಕನಸು ಮಾರುವ ಕಾರ್ಯದಲ್ಲಿ ತಾಯಿಯ ನೆನಪು ಮರೆತಂತೆ ಆಗಿತ್ತು. ಕಡಲೂರ ಕನ್ಯೆ ನೋಡಿದ ಮೇಲೆ ಮತ್ತೆ ಮತ್ತೆ ನೆನಪಾಗಿ ನೋಡಲೇ ಬೇಕು ಎನಿಸುತ್ತಿತ್ತು.
ಕಡಲೂರ ಕನ್ಯೆಯ ಮುಖ ನೆನಪದಾಗಲೆಲ್ಲಾ ಅವಳ ಚಿತ್ರಣ ಎದುರಿಗೆ ಬಂದಾಗಲೆಲ್ಲಾ ಅವಳಲ್ಲಿ ಏನೋ ಕೊರತೆ ಇದೆ ಎಂದು ನನಗೆ ಅನ್ನಿಸತೊಡಗಿತು. ಸುರೆಯ ಮತ್ತಿನಲ್ಲೂ ಯೋಚನೆಗೆ ಬಿದ್ದೆ ಬಿಳಿಯ ಸೀರೆ, ಕಡುಕಪ್ಪು ಕುಪ್ಪಸ, ನೀಳ ಕೊದಲಿನಲ್ಲಿ ಕೆಂಚು ಬಣ್ಣ ಸಿರಿತನವ ಸಾರುತ್ತಿತ್ತು. ಕೇಶವೆಂಬುದು ಯಾವುದೇ ಬಂಧನವಿಲ್ಲದೆ ಸ್ವಾತಂತ್ಯ್ರವಾಗಿ ತಲೆಯ ಮೇಲೆ ವಿಹರಿಸುತ್ತಿತ್ತು. ಮುಖದಲ್ಲಿ ಸಂತಸದ ಸ್ವಾತಂತ್ಯ್ರಕ್ಕಿಂತ ಹೆಚ್ಚು ಬಲವಂತವಾಗಿ ತಂದುಕೊಂಡ ಗಾಂಭೀರ್ಯ, ನೋವು ನುಂಗಿಕೊಂಡಿರುವ ಬೇಸರ ಎದ್ದು ಕಾಣುತ್ತಿತ್ತು. ಅಂದು ನನ್ನ ನೋಡಿದ್ದೆ ನಕ್ಕರಲ್ಲ ಅದೇ ಮೊದಲ ನಗೆಯಿರಬೇಕು ಅವರ ಜೀವನದಲ್ಲಿ ನಕ್ಕಿದ್ದು ಎಂದು ಹಾಗೇ ನಿದ್ದೆಗೆ ಜಾರಿದೆ.
ಬೆಳಿಗ್ಗೆ ಫಕೀರನಿಗೂ ಮುಂಚಿತವಾಗಿ ನಾನೇ ಎದ್ದು, ತಯಾರಿ ಮುಗಿಸಿ ಕುಳಿತೆ ಎದ್ದು ಅಚ್ಚರಿಯಿಂದ ನನ್ನತ್ತ ಒಮ್ಮೆ ನೋಡಿದ ಫಕೀರ ಶುಚಿಯಾಗಿ ಬಂದು ಕುಡಿಯಲು ಕೊಂಚವೇ ಕೊಂಚ ಎನ್ನುವಷ್ಟು ಗಂಜಿ ನೀಡಿದ ಅದೂ ನನಗೆ ಬೇಡವಾಗಿತ್ತು ರಾತ್ರಿ ಹೀರಿದ ಸುರೆ ಕರುಳನ್ನು ಸುಡದಿರಲು ಹೊಟ್ಟೆಗೆ ಒಂದಿಷ್ಟು ಹಾಕಿಕೊಂಡು, ಕಡಲೂರ ಕನ್ಯೆಯ ಕಾಣುವ ತವಕದಲ್ಲಿ ಹೊರಟೆ, ಜೋಪುಡಿಯಿಂದ ಹೊರಬಂದ ನನ್ನ ತಲೆಯ ಮೇಲೆ ಅದೇ ಬುಟ್ಟಿ ಇಟ್ಟ ಫಕೀರ ನುಡಿದ ಮಾತು ಬಲು ಹರಿತವಾಗಿತ್ತು " ಕನಸು ಮಾರುವ ನೀನು ಕನಸುಕೊಳ್ಳುವ ಧೈರ್ಯ ಮಾಡದಿರು" ಎಂದ ತಟ್ಟನೆ ನಿಂತು ಅವನ ಮುಖ ನೋಡುತ್ತಾ ಹೆಜ್ಜೆ ಮುಂದೆ ಹಾಕಿದೆ ಮನಸ್ಸು ಬಲು ಭಾರವಾಗಿತ್ತು.
ಅದೇ ಹೆಜ್ಜೆಗಳು ಮುಂದುವರಿದು ಸಾರೋಟು ಅಶ್ವ ಸಾಲುನಿಂತ ಬೀದಿಯಲ್ಲಿ ಮುಂದೆ ಸಾಗಿತು. ಬೇರೆಯಾರಿಗಾದರೂ ತಾಕಿ ಮತ್ತೆ ಪಂಚಾಯಿತಿಯಾದಿತು ಎಂದು ಎಚ್ಚರಿಕೆಯಿಂದ ನಡೆಯುತ್ತಾ ಸಾಗಿದೆ. ಆದರೆ ಕಣ್ಣುಗಳು ಮಾತ್ರ ಕಡಲೂರ ಕನ್ಯೆಯ ಹುಡುಕುತ್ತಾ ಹೋದವು ಕಡೆಗೆ ಬಿಸಿಲು ಬೆಳದಿಂಗಳು ಬಂಗಲೆಯ ಮುಂದೆ ಬಂದು ನಿಂತೆ ಅದೇ ದ್ವಾರಪಾಲಕ ಏ ಯಾರು ನೀನು? ಎಂದ ನಾನು ತಡವರಿಸುತ್ತಾ ನಾನು ಕ....ಕ...ಕನಸು ಮಾರುವ ಸೇವಕ ಎಂದೆ ಓಹೋ ನಿನ್ನೆ ಕನ್ಯೆಗೆ ಕನಸು ನೀಡಿದವನು ನೀನೆಯೋ ಎಂದ? ಅಹುದು ಎಂಬಂತೆ ತಲೆಯಾಡಿಸಿದೆ. ಅವನ ಮಾತಿನಲ್ಲಿ ಕುಹಕವಿರುವುದು ನನಗೆ ತಿಳಿಯಿತು. ಅವನು ಇಂದೇನು ಕನಸು ತಂದಿರುವೆ ಅವಳಿಗೆ, ನಿತ್ಯ ನೂತನ, ಚಿರಯೌವ್ವನ,ಆತ್ಮ ಬಂಧನ, ಪ್ರೇಮ ಚುಂಬನ ಎಂದು ಗೇಲಿ ಮಾಡಿದ. ಅವು ಕನಸುಗಳಲ್ಲ ಅತಿ ಆಸೆಗಳು ಅಷ್ಟೇ ಎಂದೆ. ಅಷ್ಟರಲ್ಲಿ ಮನೆಯ ಮಾಳಿಗೆಯ ಉಪ್ಪರಿಕೆಯಿಂದ ಬೇಸರ ಹೊರಡಿಸಿದ ಫಾರ್ಮಾನು ಬಂತು ಏಯ್ ಅವನನ್ನು ಒಳಗೆ ಬಿಡು ಭೀತಿಗೊಂಡ ಪಾಲಕ ನನ್ನ ಒಳಗೆ ಬಿಟ್ಟುಕೊಟ್ಟು ಅವನ ಮುಖ ನೋಡಿದ ನಾನು ನಗಲಿಲ್ಲ. ಒಳಹೊಕ್ಕೆ ಉಪ್ಪರಿಕೆಯಿಂದ ಇಳಿದು ಬಂದ ಕನ್ಯೆ ಒಳಗೆ ಹೋದಾಗ ಕಡುಕಪ್ಪಾದರೂ ಸುಂದರವಾದ ನೋಡಿದರೆ ಸಾಕು ಮುದ್ದಾಡಬೇಕು ಎನಿಸುವಷ್ಟು ಆಸೆ ಹುಟ್ಟಿಸುವ ಕೂಸೊಂದು ತನ್ನ ತುಂಬ ದೇಹವ ಕುಣಿಸುತ್ತಾ ಕುಣಿತಕ್ಕಿಂತ ಜೋರಾಗಿ "ಗಿಲ್ಲನೆ" ನಗುತ್ತಾ ಮನೆಯ ತುಂಬಾ ಒಡಾಡುತ್ತಾ ಸ್ವಾತಂತ್ಯ್ರ ಸಿಕ್ಕ ಜಿಂಕೆಮರಿಯಂತೆ ಮುಕ್ತವಾಗಿ ಓಡಿ, ಓಡಿ ಮನೆಯ ತುಂಬೆಲ್ಲಾ ಕುಪ್ಪಳಿಸಿ ಗಿಲ್ಲನೆ ನಕ್ಕು ಚೀರಿ ಕೇಕೇ ಹಾಕುತ್ತಿತ್ತು ಅದು ಹಾಗೆ ತಪ್ಪು ಹೆಜ್ಜೆ ಹಾಕಿಕೊಂಡು ಕುಣಿಯುತ್ತಿದ್ದರೆ. ಅದರ ಕಾಲಿನ ಗೊಲಸು ಅದರ ನಗು ಕೇಕೇಯೊಂದಿಗೆ ಸ್ಪರ್ಧೆಗಿಳಿದಂತೆ ಸದ್ದು ಮಾಡುತ್ತಿತ್ತು ಅದನ್ನೆ ನೋಡಿ ಮೈಮರೆತು ನಿಂತೆ ನಾನು, ಆಕ್ಷಣ ತಲೆಯ ಮೇಲಿನ ಬುಟ್ಟಿಯ ಭಾರವೂ ಮರೆತುಹೋಯಿತು. ಅಷ್ಟರಲ್ಲಿ "ಬೇಸರ" ಉಪ್ಪರಿಕೆಯಿಂದ ಇಳಿದು ಬಂದು ಕನಸು ಮಾರುವ ನೀನು ಕೆಲವರಿಗೆ ನೀಡುವ ಕನಸಗಳೇ ಜೀವ ನೀಡಿದಂತೆ ಅಂತಹುದರಲ್ಲಿ ಬರುವುದೇ ತಡಮಾಡಿದರೆ ಎಂತೋ ಮಾರಾಯ ಎನ್ನುತ್ತಾ ತಲೆಮೇಲಿನ ಬುಟ್ಟಿಗೆ ಕೈ ಹಾಕಿದರು. ನಾನು ಮಗುವನ್ನು ನೋಡುತ್ತಿದ್ದೆ ಅದರಲ್ಲಿ ನೆಟ್ಟ ಕಣ್ಣು ತೆಗೆಯದೇ ನೋಡುತ್ತಿದ್ದೆ.
ಬುಟ್ಟಿಗೆ ಕೈ ಹಾಕಿದ ಕಡಲೂರ ಕನ್ಯೆ ಛೇ! ಎಂತಹುದು ಮಾರಾಯ ಇದು? ಇಂದು ಬರೀ ಕೆಟ್ಟ ಕನಸುಗಳೇ ತಂದಿದ್ದೀಯಾ, ಇವನ್ನೇ ಬೇಕು ಎಂದು ಆರಿಸಿ ತಂದಿಯೇನು ಎಂದರು? ನಾನು ಮೌನವಾಗಿದ್ದು ಮೆಲ್ಲನೆ ನುಡಿದೆ ಕನಸುಗಳನೆಂದೂ ನೋಡಿದವನಲ್ಲ ನಾನು, ಅವರು ನೀಡಿದ್ದು ಹೊತ್ತು ತಂದಿದ್ದೇನೆ. ನಿಮಗವು ಒಪ್ಪಿಗೆಯಾಗದಿದ್ದರೆ ಬಿಡಿ ನಾಳೆ ನಿಮ್ಮ ಕನಸುಗಳು ಸಿಗಬಹುದು ಹೊಸ ಸುಂದರ ಕನಸುಗಳ ನಿರೀಕ್ಷೆಯಲ್ಲಿರಿ ಭರವಸೆಗಳಿರಲಿ ಎಂದೆ ಮತ್ತೆ ಕಣ್ಣು ಮಗುವಿನತ್ತು ಹರಿಯಿತು.
ಆ ಮಗು ತನ್ನ ಕೈಯಲ್ಲಿದ್ದ ತಗಡಿನ ತುತ್ತೂರಿಯನ್ನು ನನ್ನತ್ತ ಎಸದೇ ಬಿಟ್ಟಿತು. ಆ ಕಡುಗಪ್ಪು ಕಂದ ಎಸೆದ ತುತ್ತೂರಿ ನೇರ ಬಂದು ನನ್ನ ಹಣೆಗೆ ತಾಗಿ ನೆತ್ತರು ಮುಖವನ್ನೆಲ್ಲಾ ವ್ಯಾಪಿಸಿತು, ತಕ್ಷಣ ಬಂದು ಕಡಲೂರ ಕನ್ಯೆ, ಸರಿ ಇದೊಂದು ಯಾವಾಗಲೂ ಹೀಗೆ ಅತಿ ಸಂತೋಷವಾದರೂ, ಅತಿದು:ಖವಾದರು ಹೀಗೆ ವ್ಯಕ್ತಪಡಿಸುತ್ತದೆ. ನೀನು ಏನು ಅನ್ಯತಹ: ಭಾವಿಸಬೇಡ ಎಂದವರು ಒಳಗೆ ಹೋಗಿ ಅರಿಶಿನ ತಂದು ಬಿಳಿಯ ಬಟ್ಟೆಯಲ್ಲಿ ಗಾಯಕ್ಕೆ ಕಟ್ಟಿದರು.
ಆ ನೋವಿನಲ್ಲೂ " ಈ ಮಗು ಯಾರದು? ಎಂದೆ ಹೋಲಿಕೆ ಅವರಂತೆ ಇರಲಿಲ್ಲವಾದ್ದರಿಂದ ಹಾಗೇ ಕೇಳಿದೆ, ಅದಕ್ಕೆ ಅವರು ಹೌದು ನನ್ನದಲ್ಲದಿದ್ದರೂ ನನ್ನದೆ ಈ ಊರಿಗೆ ಬಂದು ಮದುವೆ ಇಲ್ಲದೆ ಮಗುವಿನ ತಾಯಿಯಾದೆ, ಒದದಿದ್ದರೂ ವೈದ್ಯೆಯಾದೆ, ದಾರಿತಪ್ಪಿದವರಿಗೆ ಅಶ್ರಯವಾಗಿ ನಾನೇ ದಾರಿ ತಪ್ಪಿದ್ದೇನೆ. ಮನೆಯ ಮೂಲೆಯಲ್ಲಿ ಕುಳಿತಿದ್ದ ಆ ಹೆಂಗಸನ್ನೂ ನೋಡಿ ಅವರ‍್ಯಾರು ಅವರ ಹೆಸರೇನು ಎಂದೆ? ಅವರನ್ನೇ ಕೇಳು ಎಂದಾಗ ತಲೆಯ ಮೇಲಿನ ಬುಟ್ಟಿ ಸಮೇತ ಅವರ ಮುಂದೆ ನಿಂತು ನಿಮ್ಮ ಹೆಸರು ಎಂದೆ ನನ್ನ ಷರತ್ತುಗಳಿಗೆ ಒಪ್ಪಿದರೆ ಮಾತ್ರ ಹೆಸರು ಹೇಳುವೆ ಎಂದರು, ಅವರು ಷರತ್ತುಗಳನ್ನು ಹೇಳುತ್ತಾ ಹೋದರು ನಾನು ಅದಕ್ಕೆ ಒಪ್ಪಿಕೊಂಡು ಸರಿ, ಸರಿ ಎಂದೆ, ಏಕೆಂದರೆ ನನಗೆ ಅವುಗಳು ಷರತ್ತು ಅನ್ನಿಸಲೇ ಇಲ್ಲ ಬೆಳ್ಳಿ ತಟ್ಟೆಯಲ್ಲಿ ಉಣ್ಣ ಬೇಡ, ರಾಜನರ್ತಕಿ ಕರೆದರೂ ಅವಳ ಕೂಡಬೇಡ ನನ್ನಂತಹ ಸೇವಕನಿಗೆ ಅವ್ಯಾವೋ ಷರತ್ತಲ್ಲ ಎನಿಸಿ ಆಯಿತು ಎಂದೆ ಆಗ ಹೆಸರು ಹೇಳಿದರು ನಾನು"ಸುಂದರೀ ಚಿಕ್ಕಮ್ಮ" ಮಗು ಕೇಕೆ ಹಾಕಿ ನಕ್ಕಿತು ಕಡಲೂರ ಕನ್ಯೆ ಗದರಿದರು "ಏ ಗೆಜ್ಜೆ" ಒಳಗೆ ಬಾ ಎಂದು.
ಸರಿ ಆ ಮಗುವಿನ ಹೆಸರು ಗೆಜ್ಜೆ ಎಂಬುದು ತಿಳಿಯಿತು. ಅಲ್ಲಿಂದ ಹೊರಡಲು ಮುಂದಾಗಿ ಹೆಜ್ಜೆಯನ್ನು ದ್ವಾರದ ಕಡೆಗೆ ಹಾಕುತ್ತಿದ್ದರೂ ಸಹ, ಆ ಮಗುವಿನ ಹೆಸರು ಗೆಜ್ಜೆ ಎಂದೇ ಏಕೆ ಇಡಬೇಕು? ಗಂಟೆ ಎಂದಿಟ್ಟದ್ದರೆ ಚೆನ್ನಾಗಿರುತ್ತಿತ್ತು. ಎಂದು ಮನದಲ್ಲೇ ಯೋಚಿಸಿಕೊಂಡು ಜೋಪುಡಿಯ ದಾರಿ ಹಿಡಿದೆ. ಅನತಿ ದೂರದಲ್ಲಿ ಎದುರಾದ ತಲೆಗೆ ರುಮಾಲು ಸುತ್ತಿದ್ದ ಮೀಸೆ ಇಲ್ಲದ ಎತ್ತರದ ಫಕೀರನೊಬ್ಬ ಸುರೆ ಕುಡಿದ ಬುರುಡೆಯೊಂದಿಗೆ, ಎದುರಿಗೆ ಬಂದು,ಏ ನನಗೂ ಕನಸುಬೇಕು ಕೊಡುತ್ತಿಯ ಎಂದ ಬುಟ್ಟಿಯೊಳಗೆ ಕೈ ಹಾಕಿದ ಅದ್ಬುತ ಎಲ್ಲವು ಕೆಟ್ಟ ಕನಸುಗಳೇ ಇಷ್ಟು ನನಗೆ ಬೇಕು ಕ್ಷಮಿಸು ನನ್ನಲ್ಲಿ ಪ್ರತಿಫಲ ನೀಡಲು ಏನೂ ಇಲ್ಲ ಇರುವುದು ಸುರೆ ಬೇಕೆಂದರೆ ತಗೋ ಎಂದ ಬೇಡ ಎಂದು ಮುಂದೆ ನಡೆದೆ.
ಖಾಲಿ ಬುಟ್ಟಿಯೊಂದಿಗೆ ಹೋಗುವಾಗ ಪ್ರತಿಫಲ ದೊರೆಯದೆ ಹೋದದ್ದಕ್ಕೆ ಬೇಸರವಾಯಿತಾದರೂ ಮತ್ತೆ ಸಂತೋಷ ಕೆಟ್ಟ ಕನಸಿಗೆ ಯಾವ ಬೆಲೆ ಇದೆ ದು:ಖ ಒಂದೇ ಅದಕ್ಕೆ ಪ್ರತಿಫಲ ಎಂದು ನಿರ್ಧರಿಸಿ ಮುಂದೆ ಹೆಜ್ಜೆ ಹಾಕಿದೆ. ಮತ್ತೆ ಮಾರನೆಯ ದಿನ ಅದೇ ಬಂಗಲೆ, ಅದೇ ಬೇಸರದ ಹೆಸರಿನ ಕಡಲೂರಿನ ಕನ್ಯೆ, ಅದೇ ಗೆಜ್ಜೆ ಎಂಬ ಕಡುಗಪ್ಪು ಕೂಸು, ಅದೇ ರೋಗಿ, ಅದೇ ಸುಂದರೀ ಚಿಕ್ಕಮ್ಮ, ಕಡಲೂರ ಕನ್ಯೆ ಏನೋ ದುಗುಡದಿಂದ ಬಂದು ಬುಟ್ಟಿ ನೋಡಿದ ಕೂಡಲೇ ಇದ್ದ ಅಷ್ಟು ಕನಸುಗಳನ್ನು ಎತ್ತುಕೊಂಡರೇನೋ ಎಂಬಂತೆ ಭಾಸವಾಯಿತು. ಬುಟ್ಟಿ ಭಾರವೇ ಇಲ್ಲ ಸರಿ ನೀನು ಹೊರಡು ಎಂದರು.
ನಾನು ಹೊರಡಲು ಹೆಜ್ಜೆ ಎತ್ತಿಟ್ಟು ಹಾಗೆ ಅದೇ ರೋಗಿ ಬೈಯ್ದರು ಮುಂಡೇ ಮಗ ಕನಸು ಮಾರಿ ಸಿರಿವಂತನಾಗುವ ಆಸೆ ಇರಬೇಕು ಏನೂ ಪ್ರತಿಫಲ ನೀಡಬೇಡ ಅವನಿಗೆ ಎಂದರು.
ಆದರೆ ಬಾಗಿಲವರೆವಿಗೂ ಬಂದ ಕಡಲೂರ ಕನ್ಯೆ ಬೇಸರ, ನಮ್ಮ ಕಡಲೂರಿನಲ್ಲಿ ಹೀಗಿಲಲ್ ಮಾರಾಯ ಅಲ್ಲಿ ಕನ್ಯೆಯರ ಕನಸು ಯಾರು ಕದಿಯವುದಿಲ್ಲ ಅಲ್ಲಿ ಕನಸು ಮಾರುವವರೂ ಇಲ್ಲ, ಕೊಳ್ಳುವವರೂ ಇಲ್ಲ, ಇಲ್ಲಿ ಹೊರಗೆ ಹೋದರೆ ಕೊಲ್ಲುತ್ತಾರೆ ಎಂಬ ಭಯ, ಒಳಗಿದ್ದರೆ ಕನಸುಗಳಿಲ್ಲದೆ ಸಾಯುತ್ತೇವೆನೋ ಎಂಬ ಭೀತಿ, ಅದರೆ ನಿನ್ನಂತಹ ಮಾಂತ್ರಿಕ ಚಲುವ ತರುವ ಕನಸುಗಳೇ ಅದ್ಭುತ ನಾನು ನಿನಗೆ ಮಾರು ಹೋದೆ ಎಂದಾಗ ಎದೆ ನಡುಗಿತು. ಮೊನ್ನೆ ಜೋಪುಡಿಯಲ್ಲಿ ಫಕೀರ ನೀಡಿದ ಸುರೆ ಕುಡಿದು ಇವರ ಬಗ್ಗೆ ಚಿಂತಿಸಿದ್ದೆ ತಪ್ಪಾಯಿತೆ? ಎಂದು ಮನದಲ್ಲೇ ಪ್ರಶ್ನೆ ಹಾಕಿಕೊಂಡೆ ಅದು ಅವರಿಗೆ ಕೇಳಿಸಿತೆನೋ ಎಂಬಂತೆ ಸುರೆ ಕುಡಿದು ನನ್ನ ಬಗ್ಗೆ ಚಿಂತಿಸಿದ್ದು ತಪ್ಪಿಲ್ಲ ಬಿಡು ಎಂದರು ಗರಬಡಿದಂತೆ ನಿಂತುಬಿಟ್ಟೆ, ಅವರೇ ಮುಂದೆ ಬಂದು ನುಡಿದರು ನೀನು ಇನ್ನೂ ಕೂಸು ನಿನ್ನ ಚಿಕ್ಕ ಚಿಕ್ಕ ಆಸೆಗಳು ತಪ್ಪಲ್ಲ ಬಿಡು ಎಲ್ಲ ಆಗು-ಹೋಗುಗಳು ಅವರ ಮನೋಧರ್ಮ, ಚಿಂತನೆಯನ್ನು ಎತ್ತಿ ತೋರುತ್ತದೆ. ನೀನು ನನ್ನಲ್ಲಿ ನಿನ್ನ ತಾಯಿಯನ್ನು ಕಂಡಿದ್ದೀಯಾ, ಅದರಲ್ಲಿ ಅಪರಾಧವಿಲ್ಲ ನಾನು ನಿನಗಿಂತ ದೊಡ್ಡವಳು ನಿನ್ನ ಆಸೆಗಳನ್ನು ಅರಿಯಬಲ್ಲೆ ಎಲ್ಲಾ ವಿದ್ಯಾಮಾನಗಳನ್ನು ತಿಳಿಯಬಲ್ಲೆ ಆದರೆ ಕನಸುಗಳಿಲ್ಲದೆ ಬದುಕಲಾರೆ ಎಂದಾಗ ಅವರ ಕಾಲಿಗೆರಗಿದೆ ಕೆಲಹೊತ್ತು ಮೌನ ಅವರಿಸಿತು.
ಸರಿ ಬುಟ್ಟಿಯ ಕನಸುಗಳೆಲ್ಲಾ ನಾನೇ ಕೊಂಡಿರುವೆ ಅದು ಖಾಲಿ ಖಾಲಿ ಅದನ್ನು ಈಗ ಕೆಳಗಿಳಿಸು, ನಾನು ನಿನ್ನ ಮನಸ್ಸಿನ ಭಾಷೆಯನ್ನು ಅರಿತಿರುವೆ ನಿನ್ನ ಭಾವನೆಗೆ ತಕ್ಕಂತೆ ನೀನೇ ಕನಸುಗಳ ಹೊಸೆದು ಮಾರಬಾರದೇಕೆ? ಅದು ನಿನಗೆ ಬೇಕಾದ ಬೆಲೆಗೆ ಕೊಳ್ಳಲು ನಾನು ಸಿದ್ದ ಎಷ್ಟು ದಿನ ಈ ಫಕೀರನ ಜೋಪುಡಿಯಲ್ಲಿ ಪ್ರತಿಫಲ ದೊರೆಯದ ಕನಸುಗಳ ಮಾರುವೆ ಎಂದರು.
ನಾನು ತಕ್ಷಣ ಹಿಂತಿರುಗಿ ನುಡಿದೆ ನನಗೆ ಬೇಕಿರುವುದು ನನ್ನ ತಾಯಿಯನ್ನು ನೋಡಲು ಅವಕಾಶ ಅವರನ್ನು ಹುಡುಕುವುದೇ ನನ್ನ ಕಾಯಕ ಅಲ್ಲಿಯವರೆವಿಗೆ ಏನಾದರೂ ಸರಿ ಮಾಡುವೆ ಆದರೆ ಅದಕ್ಕೆ ಸೇತುವೆಯಂತಿರುವ ಫಕೀರ ತೋರಿದ ದಾರಿ ಬಿಟ್ಟು ಬೇರೆಡೆಗೆ ನಡೆದು ನಶ್ವರ ಜಗತ್ತಿಗೆ ಮಾರುಹೋಗುವ ಅದರಿಂದ ನೋವು ನೋಡುವ ಕಾಯಕ ನನಗೆ ಬೇಡವೇ ಬೇಡ ಅಂದೆ ಒಹೋ ಮಾತೆಗೆ ನಿನೇನಾಗಬೇಕು? ಎಂದರು ನಾನು ಆಕೆಯ ಮಗ ಎಂದೆ. ಕೂಡಲೇ ನನ್ನ ಅಪ್ಪಿ ಮುದ್ದಾಡಿದರು ನನ್ನ ಅಯ್ಯೋ ನಾನು ಮಾತೆಯ ಮಗನೇ ಇಷ್ಟು ದಿನ ನನಗೆ ಎಂಥೆಂಥ ಕನಸು ನೀಡಿದವನು. ನಾನು ಮಾತೆಯನ್ನು ಬಲು ಬಲ್ಲೆ ಆಕೆಯೂ ಕಡಲೂರಿನ ಪುತ್ರಿ ಈ ಊರಿನ ಸೊಸೆ, ಕಡಲೂರಿನಲ್ಲೂ ಆಕೆಗೆ ಬಲುಗೌರವ ಅದಕ್ಕಿಂತ ಹೆಚ್ಚು ಇಲ್ಲಿ ಇಲ್ಲ ಎಂದು ಬೇಸರದಿ ನುಡಿದರು.
ನಾನು ಅವರಿಗೆ ತೀರ ಹತ್ತಿರದವನಾದೆ, ಆದರೆ ನನ್ನಲ್ಲಿ ಅದು ಕೊಂಚ ಇರಿಸು ಮುರಿಸಿಗೆ ಕಾರಣವಾಯಿತು. ಅವರು ನನ್ನನ್ನು ಸೇವಕನಂತೆಯೇ ಕಂಡಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂಬ ಆಲೋಚನೆ, ಅವರಿಗಾಗಿ ಕನಸ ಹೊತ್ತು ಹೋಗುವುದು ಪ್ರತಿನಿತ್ಯ ಮುಂದುವರಿಯಿತಾದರೂ ನಾನು ಕನಸನ್ನು ಕಣ್ಣಿನಿಂದ ಕೂಡ ನೋಡಲೇ ಇಲ್ಲ , ಸುಂದರೀ ಚಿಕ್ಕಮ್ಮ, ಗೆಜ್ಜೆ, ರೋಗಿ ಇವರು ಯಾರು ಕನಸುಗಳ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ, ಅದೇ ರೋಗಿಯ ಬೈಗುಳ, ಚಿಕ್ಕಮ್ಮನ ನಗೆ, ಗೆಜ್ಜೆಯ ಗಿಲ್ಲನೆ ನಗು ಕೈಯಲ್ಲಿರುವ ತುತ್ತೂರಿ ಎಸೆಯವುದು ಕಂಡು ಅಲ್ಲಿಮದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದೆ.
ಕಾಲ ಕಳೆದಂತೆ ಕನಸು ಮಾರುವ ಕಾಯುಕ ಬೇಸರವಾಯಿತು. ಬೇರೆ ವೃತ್ತಿ ಅರಿಯದ ನಾನು ಸುಮ್ಮನೆ ಅದನ್ನೇ ಮಾಡುತ್ತಿದ್ದೆ. ನಾನು ಪ್ರೌಢಾವಸ್ಧೆಗೆ ಬರುತ್ತಿದ್ದ ಕಾರಣ ಚಿಗುರು ಮೀಸೆ ಮೂಡತೊಡಗಿದವು ಅಪರೂಪಕ್ಕೆ ಸಮಯ ಮಾಡಿಕೊಂಡು ಕಡಲೂರ ಕನ್ಯೆ ಭೇಟಿಯಾಗ ತೊಡಗಿದೆ. ಅವರ ಮುಖದಲ್ಲೀಗ ಗಾಂಭೀರ್ಯ ಮಾಯವಾಗಿ ಸಲೀಸಾಗಿ ನಕ್ಕು ಮನಬಿಚ್ಚಿ ಮಾತನಾಡಲು ಪ್ರಾರಂಭಿಸಿದರು. ನನ್ನ ಕನಸಿನ ಪ್ರಭಾವ ಅದು ಎಂದು ಆಗಾಗ ಹೇಳುತ್ತಿದ್ದರು.
ಆದೇಕೆ ಮಾತೆಯ ನೆನಪು ಅತಿಯಾಗಿ ಕಾಡಲಾರಂಭಿಸಿತು. ಒಂದು ದಿನ ಸಂಜೆ ಜೋಪಡಿಗೆ ಹಿಂತಿರುಗಿದವನು ರಾತ್ರಿ ಜೋಪುಡಿಯಲ್ಲಿದ್ದ ದೀಪದಲ್ಲಿ ಕಣ್ಣನ್ನೀರಿಸಿ ನೋಡುತ್ತಾ ಕುಳಿತೆ ಮಾತೆ ದೀಪದಿಂದ ಇಳಿದು ಬಂದಂತೆ ಭಾಸವಾಯಿತು. ಸಲ್ಪ ಹೊತ್ತು ನಿಂತ ಆಕೆಯನ್ನು ಕಂಡು ಹರ್ಷದಿಂದ ಆನಂದ ಭಾಷ್ಪ ಸುರಿಸಲಾರಂಭಿಸಿದೆ. ನನ್ನ ಮರೆತು ಹೋಗಿದ್ದೀಯಾ ನೀನು ಎಂಬಂತೆ ನನ್ನಡೆಗೆ ನೋಡಿದಳು ಮಾತೆ ಇಲ್ಲ ನಿನ್ನ ಬಂದು ಸೇರುವ ಗುರಿಯ ಹೊತ್ತ ನಾನು ಅಲ್ಲಿಯವರೆವಿಗೂ ಕಾಲ್ಪನಿಕ ಕಾಯಕದಲ್ಲಿ ತೊಡಗಿದ್ದೆ ಜೋಪುಡಿ ಸೇರಿ ನಿನ್ನಡೆ ನಡೆಯುವ ತ್ರಾಣ ಪಡೆದು ಬಂದೆ.
ಸರಿ ಇನ್ನಾದರೂ ನನ್ನೊಂದಿಗೆ ಬರಲು ಸಿದ್ದವಿದ್ದೀಯಾ ನೀನು ಎಂದು ಕೇಳಿದಳು ಮಾತೆ, ಇಲ್ಲ ಎನ್ನುವ ಮಾತೆ ಇಲ್ಲ ಸಿದ್ದ ನಡಿಯೆಂದೆ . ಅವಳು ಹೊರಟಳು ನಾನು ಅವಳನ್ನೇ ಹಿಂಬಾಲಿಸಿದೆ. ಅದೊಂದು ಬಂಗಲೆ ಸೇರಿದೆವು, ಆದರೆ ಬೆಳಿಗ್ಗೆ ಎದ್ದು ನೋಡಿದರೆ ಬಿಸಿಲು ಬೆಳದಿಂಗಳ ಮುಂದಿನ ಬಂಗಲೆಯಲ್ಲಿ ನಾನಿದ್ದೆ ಮಾತೆಯನ್ನು ಕೇಳಿದೆ ಆ ಮನೆಗೆ ಬಂದು ಹೋಗುತ್ತಿದ್ದ ನನ್ನ ಗುರುತಿಸಲಿಲ್ಲವೇ ನೀನು ಎಂದಾಗ, ಈ ಮನೆಗೆ ಬರುವವರು ದುಷ್ಟ ಜನವಾದ್ದರಿಂದ ನೀನು ತರುವ ಕನಸುಗಳ ಕೊಂದು ಸಂತಸಿಸುವವರೆಂದೂ ತಿಳಿದು ನಾನು ನಿನ್ನ ಕರೆಯಲಿಲ್ಲ ಹಿಂಬಾಲಿಸಿ ಬಂದು ಜೋಪುಡಿಯಿಂದಿ ಬರಿಗೈಲಿ ಕರೆತಂದೆ ನೋಡು ಎಂದಳು.
ಆಕೆ ನಕ್ಕರು ನನಗೆ ನಗು ಬರಲಿಲ್ಲ, ಅಷ್ಟು ಆಡಂಬರದಿಂದ ಆಕೆ ನಕ್ಕಳು ಯಾವುದೋ ನೋವು ನುಂಗಿದಂತೆ ಯಾವುದೋ ಪ್ರಳಯವನ್ನು ಎದುರು ನೋಡುತ್ತಿರುವಂತೆ ಭೀತಿ ಕಣ್ಣಿನಲ್ಲಿತ್ತು ಅಷ್ಟರಲ್ಲಿ ಅದ್ಯರೋ ಮನೆಯೊಳಗೆ ಬಂದಂತಾಯಿತು. ನನ್ನ ಬಾಗಿಲ ಹಿಂದೆ ಬಚ್ಚಿಟ್ಟು ಕೊಳ್ಳುವಂತೆ ಹೇಳಿ ಆಕೆ ಹೊರ ಹೋದಳು ಬಾಗಿಲು ಸಂದಿನಿಂದ ಇಣುಕಿ ನೋಡಿದೆ ನಾನು ಅವನೇ ಕೆಟ್ಟ ಕನಸುಗಳನ್ನು ಕೊಂಡ ಫಕೀರ ಬಂದು ಗೋಡೆಯೊರಗಿ ಕುಳಿತು ಧೂಮಲೀಲೆಯಲ್ಲಿ ತೊಡಗಿದ್ದ ಎದುರಿಗೆ ನಿಂತ ಮಾತೆಯನ್ನು ಬಾಯಿಗೆ ಬಂದಂತೆ ನಿಂದಿಸಿ ತೊಡಗಿದ ನಾನು ಅವನ ಅವಾಚ್ಯ ಶಬ್ದಗಳ ಸಹಿಸಲಾಗೆ ನುಗ್ಗಿ ಕೊಲ್ಲುವ ಆಕ್ರೋಶ ತಡೆದು ತಾಯಿಯ ಅಣತಿ ಪಾಲಿಸುತ್ತಿದ್ದೆ. ಅವನೇ ಎದ್ದು ಬಂದು ಬಾಗಿಲು ಹಿಂದೆ ಬಗ್ಗಿ ನೀಡಿ ಯಾರದು ಎಂದವನೇ ನನ್ನ ಮುಖದ ಮೇಲೆ ಅವನ ಹೊಗೆ ಬತ್ತಿ ಚಿಲುಮೆ ಎಸೆದ ತಕ್ಷಣವೇ ಎಚ್ಚರವಾಯಿತು ಫಕೀರಪ್ಪ ಗಂಜಿ ಕುಡಿಯಲು ಏಳಿಸಿದ. ಇದೇನು ಮುಸ್ಸಂಜೆಗೆ ಮಲಗಿ ಆಗಲೇ ಸ್ಪಪ್ನವೇ ಬೆಚ್ಚುತ್ತಿದ್ದೀಯ ಏನು ಪ್ರೇಮ ಸ್ಪಪ್ನವೋ ಎಷ್ಟು ಬಾರಿ ನಾನು ಹೇಳಿಲ್ಲ ನಿನಗೆ, ಕನಸು ಮಾರುವವರು ಕನಸು ಕಾಣಬಾರದು ಎಂದು ಗದರಿದ ಧ್ವನಿಯಲ್ಲಿ ಹೇಳಿದ. ನಾನು ಸತ್ಯದ ಮರೆಮಾಚುವ ರೀತಿಯಲ್ಲಿ ಇಲ್ಲ ಇಲ್ಲ ಎಂದು ಎದ್ದು ಕುಳಿತೆ ನೀಡಿದ ಗಂಜಿ ಹೀರಿದ ಮೇಲೆ ಸ್ಪಲ್ಪ ಹೊತ್ತು ಜೋಪುಡಿ ಮುಂದೆ ಸುತ್ತಾಡಿ ಬಂದರೂ ಹಗಲುಗಸಿನಲ್ಲಿ ಬಂದ ಮಾತೆಯ ನೆನೆದು ಅತ್ತೆ ಅವಳೇನೋ ತೊಂದರೆಯಲ್ಲಿದ್ದಾಳೆ ಎಂದು ತಿಳಿದು ಮನಸ್ಸಿನಲ್ಲೆ ನೊಂದೆ ಫಕೀರ ಕೂಡ ಇದನ್ನು ಅರಿತಂತೆ ಮೌನವಾಗಿ ಏನೋ ಆಲೋಚಿಸುತ್ತಿದ್ದ.
ಮುಗಿಯಿತು.
ಕನಸಾ ಮಾರುವಾ ಚೆಲುವ.......
ಮೂರು ತುಂಬುವ ಹೊತ್ತಿಗೆ ಮನೆಯವರಿಗೆ ಬೇಡವಾಗಿದ್ದ ನಾನು ತಾಯಿಗೆ ಮಾತ್ರ ಜೀವವಾಗಿದ್ದೆ, ಅವಳು ದೃಢಕಾಯದವಳೇ ಅದರೂ ಮಾಟ ಮಂತ್ರ ಕುರಿತ ಮೂಢನಂಬಿಕೆ ಬಗ್ಗೆ ತಲೆಕೆಡಿಸಿ ಕೊಂಡು ಆಗಾಗ ಅನಾರೋಗ್ಯದಿಂದ ಹಾಸಿಗೆ ಹಿಡಿದರೆ ವಾರ ತಿಂಗಳುಗಟ್ಟಲೆ ಮೇಲೆ ಏಳುತ್ತಿರಲಿಲ್ಲ. ಮನೆಯವರಿಗೂ ಆಕೆಯ ಬಗ್ಗೆ ಕಾಳಜಿ ಇರಲಿಲ್ಲ ಅವಳೇ ಚೇತರಿಸಿಕೊಂಡು ಮೇಲೆ ಏಳುವವರೆವಿಗೂ ಅವಳ ಪಕ್ಕದಲ್ಲಿದ್ದು ನಾನೇ ಆರೈಕೆ ಮಾಡುತ್ತಿದ್ದೆ.
ಹೀಗಿದ್ದಾಗ ಒಂದು ದಿನ ತಾಯಿ ಮತ್ತೆ ತೊಂದರೆಗೆ ಬಿದ್ದಳು ನನ್ನ ಕುಟುಂಬದವರು ಕೊಂಚ ಕದಲಿದರು. ನನ್ನ ತಾಯಿಯನ್ನು ಯಾವುದೋ ಚಿಕಿತ್ಸೆಗೆ ದೂರದ ಊರಿಗೆ ಕರೆದುಕೊಂಡ್ಯುಯ್ದಾಗ ನಾನೂ ಹೊರಟೆ ಹರಕು ಬಟ್ಟೆಯ ಕೊಳಕು ಮುಖದ ನಾನು ನನ್ನ ಮನೆಗೆ ಕಳಂಕ, ಅಲ್ಲಿ ಯಾರಾದರೂ ನನ್ನ ಈ ಮನೆಯ ಮಗ ಎಂದು ಗುರುತಿಸಿದರೆ, ಅವಮಾನ ಎಂಬಂತೆ ಎಲ್ಲಾ ಸೇರಿ ನನ್ನನ್ನು ಬರೆದಂತೆ ಹೇಳಿ ಮನೆಯಲ್ಲಿ ಉಳಿಯುವಂತೆ ಹೇಳಿದರು.
ಅಷ್ಟು ಹೊತ್ತಿಗಾಗಲೇ ಆಳುವುದನ್ನೂ ಮರೆತಿದ್ದ ನಾನು ತಾಯಿಯ ಜೊತೆ ಇರಲೇ ಬೇಕು ಎಂದು ಹಠಕ್ಕೆ ಬಿದ್ದೆ. ಸದ್ಯಕ್ಕೆ ಸಮ್ಮುನಿದ್ದು ಮುಂದೆ ಕಾರ್ಯ ಸಾಧಿಸಬೇಕು ಎಂದು ತೀರ್ಮಾನಿಸಿದೆ. ಎಲ್ಲ ಹೊರಟರು ತಾಯಿಯ ಕಾಯಿಲೆಯ ಚಿಕಿತ್ಸೆಗೆ ಎಂಬ ನೆಪ ಮಾತ್ರ. ಆದರೆ ಹೋಗುವ ಊರಿನಲ್ಲಿ ಖರೀದಿಸಬೇಕಾದ ವಸ್ತು , ಮೋಜು-ಮಜಾ ನೋಡಬೇಕಾದ ಸ್ಧಳಗಳ ಬಗ್ಗೆ ಒಳಗೊಳಗೆ ಚರ್ಚೆ ಬಹಳವಾಗಿ ಕೇಳಿ ಬರುತ್ತಿತ್ತು. ಹೊರಡುವಾಗ ತಾಯಿ ಕಡೆಯದಾಗಿ ಎಂಬಂತೆ ನನ್ನ ತಲೆಯನ್ನು ಕೊಡವಿ ತನ್ನ ಎದೆಗಾನಿಸಿಕೊಂಡಳು. ನನ್ನ ಮನಸ್ಸಿನಲ್ಲಿಯೂ ಇದೇ ಕಡೇ ಭಾರಿಯ ಪ್ರೀತಿಯ ಸ್ಪರ್ಶ ಎಂದು ಅನಿಸಿದ್ದು ಯಾಕೆ ತಿಳಿಯದು?
ತಾಯಿ ಮುಂದೆ ಸಾಗಿದಾಗ ಬಂದವನ್ಯಾರೋ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ಪರೀಕ್ಷಿಸಿದ " ಅನಿಷ್ಟ ಮುಂಡೇದೆ ಆಳ್ತಾ ನಿಂತಿದ್ದೀಯಾ" ಎಂದು ಕೇಳಿದ ಇಲ್ಲ ಎಂಬಂತೆ ತಲೆಯಾಡಿಸಿ ಮುಗಿಸುವಷ್ಟರಲ್ಲಿ ನನ್ನ ಕನ್ನೆಗೆ ಅದುರಿ ಹೋಗುವಂಥೆ ಭಾರಿಸಿದ " ಬಾಯಿಬಿಟ್ಟು ಬೊಗಳು" ಎಂದು ಅಬ್ಬರಿಸಿದ ಇಷ್ಟೆಲ್ಲಾ ಗದ್ದಲಗಳ ನಡುವೆ ನನ್ನ ತಾಯಿ ಹೋದ ದಿಕ್ಕಿನ ಸುಳಿವು ತಿಳಿಯದಂತೆ ಮಾಯವಾಗಿಬಿಟ್ಟಿದ್ದಳು. ಹದ್ದು ಕಾಗೆಯಂತಹ ನನ್ನ ಕುಟುಂಬದವರೊಂದಿಗೆ.
ಅಲ್ಲೇ ಜಗಲಿಯ ಮೇಲೆ ಕುಳಿತೆ ಮನೆಗೆ ಬೀಗ ಹಾಕಲಾಗಿತ್ತು. ಸಂಜೆ ಮನೆಯವರು ಬಂದು ಬೀಗ ತೆಗೆಯುವವರೆಗೆ ನಾನು ಅಲ್ಲೇ ನೀರು ಬೇಕೆಂದರೂ ಸಂಜೆಯವರೆಗೆ ಕಾಯಬೇಕು. ಅಕ್ಕಪಕ್ಕದ ಮನೆಯಲ್ಲಿ ಕೇಳಿ ನೀರು ಕುಡಿಯವಂತೆಯೂ ಇಲ್ಲ. ಹಾಗೆ ಕುಳಿತವನಿಗೆ ಜೊಂಪಿನಂತೆ ನಿದ್ರೆ ಬಂತು ಮಲಗಿದೆ. ಕಣ್ಣು ಬಿಡುವ ಹೊತ್ತಿಗೆ ಸಂಜೆಯಾಗುತ್ತಾ ಬಂದಿತ್ತು.
ಸಂಜೆಯಾಗುತ್ತಿರುವುದಕ್ಕೆ ಸೂಚನೆ ಎಂಬಂತೆ ಎಲ್ಲಾ ಮನೆಗಳಲ್ಲಿ ದೀಪ ಹೊತ್ತಿಕೊಳ್ಳುತ್ತಿದ್ದವು.,ಒಬ್ಬನೇ ಕುಳಿತು ಮನೆಯ ಪಡಸಾಲೆಯಿಂದ ನೋಡುತ್ತಿದ್ದರೆ ಪ್ರತಿ ದೀಪದಲ್ಲೂ ನನ್ನ ತಾಯಿಯೇ ಗೋಚರಿಸುತ್ತಿದ್ದಳು. ಆಕೆ ನನ್ನ ಕೈಬೀಸಿ ಕರೆಯುತ್ತಿರುವಂತೆ ಭಾಸವಾಗುತ್ತಿತ್ತು. ಉಸಿರು ಕಟ್ಟುವಂತಹ ವಾತಾವರಣ, ಒಂದು ನಿಮಿಷ ಅಲ್ಲೇ ಇದ್ದರೂ ಸಾಯುವೆ ಎನ್ನಿಸಿತು ನನಗೆ ಸರಿ ಸಿದ್ದನಾದೆ ಹೊರಡಲು, ಎಲ್ಲಿಗೆ ಎಂದು ತಿಳಿಯದು? ನನ್ನ ತಾಯಿಯನ್ನು ಕರೆದುಕೊಂಡು ಹೋದ ದಿಕ್ಕನ್ನು ಯಾರೋ ತೋರಿದರು ಅದೇ ದಿಕ್ಕಿಗೆ ನಾನು ನಡೆದು ಹೊರಟೆ.
ಮುಂದಾಲೋಚನೆಯಿಲ್ಲದೆ ಪಯಣ ಮನೆಯಿಂದ ಹೊರಟ ನಾನು ಕಡೆಯವರೆವಿಗೂ ಅದೇ ಹುರುಪಿನಿಂದ ಸುಮಾರು ನಾಲ್ಕು ರಿಂದ ಐದು ಗಂಟೆಯ ನಡಿಗೆ ನಡೆದೆ ಆಗ ಸಿಕ್ಕಿದ್ದು ಒಂದು ದೊಡ್ಡ ಊರು ನಮ್ಮೂರಿಗಿಂತ ಬಹು ದೊಡ್ಡ ಊರು ಅದರ ಹೆಸರು ನನಗೆ ತಿಳಿಯಲಿಲ್ಲ. ನಾನೂ ಸಹ ಯಾರನ್ನು ಕೇಳಲಿಲ್ಲ ಯಾರನ್ನೇ ಮಾತನಾಡಿಸಿದರು ಅರ್ಥವಾಗದ ಭಾಷೆಯಲ್ಲಿ ಉತ್ತರಿಸುತ್ತಿದ್ದರು. ದಾಡಿ ಬಿಟ್ಟವರು, ಮೀಸೆ ಇಲ್ಲದ ಉರಿ ಮುಖದ ಜನ ಕುಂಕುಮವಿಕ್ಕಿದ ನನ್ನ ಮುಖವ ದಿಟ್ಟಿಸಿ ನೋಡಿ ಮನಸ್ಸಿನಲ್ಲಿ ಹಲ್ಲು ಮಸೆಯುತ್ತಿದ್ದರು. ಉರಿಯುವ ಅವರ ಕಣ್ಣುಗಳಿಂದ ಏರಿ ಬರುತ್ತಿದ್ದ ಆಕ್ರೋಶ, ನನ್ನಲ್ಲಿ ಭಯವನ್ನುಂಟು ಮಾಡಿತ್ತು. ನನ್ನ ತಾಯಿಗೆ ಇವರು ಏನು ಮಾಡಿಯಾರೋ ಎಂಬ ಭೀತಿ ಒಳಗೊಳಗೆ, ನನ್ನ ಜೀವ, ನನ್ನ ಮನಸ್ಸಿನ ಬಗ್ಗೆ ನನಗೇನು ಆತಂಕವಿಲ್ಲ. ಅದು ಇಹಪರದಲ್ಲಿ ಈ ತನಕ ಬೆಲೆ ಇರದ ವಸ್ತು ಆದರೆ ಈ ಕಿಡಿಕೇಡಿಗಳ ನಡುವೆ ಇರುವ ತಾಯಿಸ್ಧಿತಿ.
ಅವಳನ್ನು ಹುಡುಕುತ್ತಾ ಹೊರಟವನಿಗೆ ಸಿಕ್ಕಿದ್ದು ದೊಡ್ಡ ದೊಡ್ಡ ಕಟ್ಟಡಗಳೇ, ಅರ್ಥವಾಗದ ಭಾಷೆಯ ಫಲಕಗಳು ಆಳತ್ತೆರದ ಕಾಪೌಂಡ್ ನೊಳಗೆ ನಾಯಿಗಳಿಗೆ ಕಟ್ಟಿದ ಸಣ್ಣ ಮನೆಯ ಅವುಗಳನ್ನು ನೋಡಿಕೊಳ್ಳಲು ಒಬ್ಬ ಕೆಲಸಗಾರ ಅದಕ್ಕೆ ಸಮಯಕ್ಕೆ ಸರಿಯಾಗಿ ಹಾಲು, ಮಾಂಸದ ಊಟೋಪಚಾರ ಕಣ್ಣಿಗೆ ಬಿದ್ದಾಗ ಅದಕ್ಕಿಂತ ಕಡೆಯಾಯಿತೆ? ನನ್ನ ಬುದುಕು ಎಂದೆನಿಸಿದ ಬೆನ್ನಲ್ಲೇ ಮನಸ್ಸು ಇಲ್ಲ ಇಲ್ಲ ಇಂದಲ್ಲ ನಾಳೆ ಮಹತ್ತರವಾದದ್ದುನನ್ನು ಸಾಧಿಸುತ್ತೇನೆ? ಎಂದುಕೊಂಡು ಮುಂದೆ ನಡೆಯುತ್ತಿದೆ.
ಆಗ ಎದುರಾದವನೇ ಆ ಊರಿನ ಹವಾಲ್ದರ ನನ್ನತ್ತ ಲಾಠಿ ಬೀಸುತ್ತ ನಡೆದು ಬಂದ ಅವನನ್ನು ನೋಡುತ್ತಿದ್ದಂತೆಯೇ ನಾನು ನಿಂತೆ ನನ್ನನ್ನು ನೋಡಿದ ಹವಾಲ್ದರ ಗದರಿದ ಧನಿಯಲ್ಲಿ ಕೇಳಿದ ಏಯ್ ನೀನ್ಯಾರು? ನನ್ನ ಮನೆಯಲ್ಲೂ ಇದೇ ಗದರಿದ ಧ್ವನಿಯಲ್ಲಿ ಮಾತನಾಡುವವರು ಇದ್ದುದ್ದರಿಂದ ನನಗೆ ಹೆದರಿಕೆಯಾಗಲಿಲ್ಲ ಇವನು ನಮ್ಮವನೇ ಎಂದೆನಿಸಿ ಮನಸ್ಸಿನಲ್ಲಿ ಸಂತೋಷಪಟ್ಟೆ ಅನಂತರ ಆ ಊರಿನಲ್ಲಿ ಜನ ಸ್ವಾತ್ರಂತ್ಯ್ರವಾಗಿ ರಸ್ತೆಯಲ್ಲಿ ಓಡಾಡುವುದು ನಿಷಿದ್ಧ. ಕೆಲವರಿಗೆ ಆ ಸ್ವಾಯತ್ತತೆ ಇದೆ ಎಂಬುದು ನನ್ನ ಅರಿವಿಗೆ ಸ್ಪಲ್ಪ ಸಮಯದಲ್ಲೇ ಬಂತು.
ಎಚ್ಚರಿಸುವಂತೆ ಮತ್ತೆ ಕೇಳಿದ ಆ ಹವಾಲ್ದಾರ ಏನು ಹೆಸರು ನಿಂದು ಯಾವ ಊರು, ಆವರೆಗೂ ನನಗೆ ತಿಳಿಯದ ನನ್ನ ಹೆಸರನ್ನು ಅವನಿಗೆ ಏನೆಂದು ಹೇಳಲಿ ಗೊ.....ಗೊತ್ತಿಲ್ಲ ಎಂದೆ ಅಷ್ಟರಲ್ಲಿ ಮೊನ್ನೆ ಮನೆಯಿಂದ ಹೊರಟಾಗ ಆಳುತ್ತಿದ್ದೀಯಾ ಎಂದು ಸುಳ್ಳೇ ಅಪಾದನೆ ಮಾಡಿ ಭಾರಿಸಿದಂತಹ ಹೊಡೆತ ಒಂದು ನನ್ನ ಕಪಾಳಕ್ಕ ಬಿತ್ತು ಅದೇ ರೀತಿ ಕಪಾಳ ಅದುರಿ ಹೋಗುವಂತೆ ಹೊಡೆಯುವುದು ನನಗೆ ಖಚಿತವೆನಿಸಿತು. ಇವನೂ ನಮ್ಮವನೆ ಖಂಡಿತಾ ನಮ್ಮೂರಿನವನೇ ಎನಿಸಿತು. ಕಡೆಗೂ ಕೆಟ್ಟವರೋ, ಒಳ್ಳೆಯವರೋ ನಮ್ಮವರೇ ಸಿಕ್ಕಿದರೂ ಎಂದು ಮನಸ್ಸಿನಲ್ಲಿ ಸಂತೋಷ ಕಪಾಳಕ್ಕೆ ಬಿದ್ದ ಹೊಡತದಿಂದ ಕಣ್ಣೀಂಚಿನಲ್ಲಿ ನೀರು. ಸರಿ ಬಾ ಎಂದು ನನ್ನ ರಟ್ಟೆ ಹಿಡಿದು ಎಳೆದುಕೊಂಡು ಹೋಗುತ್ತಿದ್ದರೆ ನಾನು ನನ್ನ ಉದುರಿ ಹೋಗುತ್ತಿದ್ದ ಚಡ್ಡಿಯನ್ನು ಎಡಗೈಯಿಂದ ಮೇಲೆತ್ತಿಕೊಳ್ಳುತ್ತಾ ಅದನ್ನು ಉಡಿದಾರಕ್ಕೆ ಸಿಕ್ಕಿಸಿಕೊಳ್ಳುವ ಪ್ರಯತ್ನ ಮಾಡುತ್ತ ಒಡುವ ರೀತಿ ನಡಿಗೆಯಲ್ಲಿ ಅವನೊಟ್ಟಿಗೆ ಸಾಗುತ್ತಿದ್ದೆ ಅದ್ಯಾವುದೋ ದೊಡ್ಡದೊಂದು ಕಟ್ಟಡಕ್ಕೆ ಕರೆದ್ಯೊಯ್ದು ಅದ್ಯಾರೋ ಕುಳಿತಿದ್ದವರ ಮುಂದೆ ನನ್ನನ್ನು ನಿಲ್ಲಿಸಿ ಅದೇ ಫರಂಗಿ ಧಿರಿಸಿನವನಿಗೆ ಕೈಕಾಲು ಬಡಿದು ವಂದಿಸಿದ ಹವಾಲ್ದಾರ ನನ್ನನ್ನು ಅನಾಥನೆಂದು ಪರಿಚಯಿಸಿದಾಗ ಕೋಪ ದು:ಖ ಒಮ್ಮೇಲೇ ಉಮ್ಮುಳಿಸಿ ಬಂತು ನಾನು ಕೂಗಿ ಹೇಳಿದೆ ನಾನು ಅನಾಥನಲ್ಲ ತಾಯಿ ಇದ್ದಾಳೆ ನನಗೆ ಎಂದು.
ಹವಾಲ್ದಾರ ಏ ಇಲ್ಲಿ ಹಾಗೆಲ್ಲ ಕೂಗಿಕೊಳ್ಳಬಾರದು ಈ ಠಾಣೆಯ ಮುಖ್ಯಸ್ಧರು ಅವರು ಇಲ್ಲಿ ಕೊಗಿಕೊಂಡವರ ಗಂಟಲು ಸೀಳಿ ಬಿಡುತ್ತಾರೆ. ಎಂದ ಆದರೆ ಆ ಅಧಿಕಾರಿ ಮಾತ್ರ ಭಾರಿ ವಿನಿಯದಿಂದ ನನ್ನ ಹತ್ತಿರ ಬಂದು ತಲೆ ಸವರಿ ನನಗೂ ತಾಯಿಯಿದ್ದಾಳೆ. ಬಿಡು ಮಗು ಎಂದು ಆ ವಿನಿಯದಿಂದ ನನಗೆ ಅವನು ನಮ್ಮವನಲ್ಲ ಎನಿಸಿತು.
ಠಾಣೆಯ ಕಸ ಗುಡಿಸುವಂತೆ ಹೇಳಿ ಕೈಗೊಂದು ಕಸ ಪೊರಕೆ ನೀಡಿದರು, ಇಡೀ ಠಾಣೆ ಕಸಗುಡಿಸುವಾಗ ಅಲ್ಲಿದ್ದ ಇನ್ನೂ ಹಲವಾರು ಮಂದಿ ನನ್ನವಂತರು ಕಂಡರು. ಆದರೆ ಅವರು ಹೇಳಿದ ಕೆಲಸ ಮಾಡಿ ಅವರಿಂದ ನಾನು ಸೈ ಎನಿಸಿಕೊಂಡೆ ಅಲ್ಲೇ ನಿದ್ರೆ, ಊಟ, ತಿಂಡಿಗೆ ತೊಂದರೆ ಇಲ್ಲ ಎಂಬುದು ತಿಳಿದರು ತಾಯಿಯ ನನೆಪಾಗಿ ದು:ಖ ಬರುತ್ತಿತ್ತು. ಒಂದು ದಿನ ಕಿರಿಯ ಹವಾಲ್ದಾರ ಬಂದು ನಿನ್ನ ತಾಯಿ ಎಲ್ಲಿದ್ಧಾಳೆ? ಏನು ಹೆಸರು? ಹೇಳು ನಾನು ಹುಡುಕಿ ಕೊಡುವೆ ಎಂದು.
ಜೀವನದಲ್ಲಿ ನಾ ಬಯಸಿದ್ದು ನೀಡುವ ಎಂದ ದೈವಸಂಭೂತ ಮುಖ ನೋಡಿ ಬಿಕ್ಕಿ ಬಿಕ್ಕಿ ಅತ್ತೆ ನನ್ನ ತಾಯಿಯ ಹೆಸರು "ಜಗದೇಕ ಮಾತ" ಎಂದೆ ಅಷ್ಟರಲ್ಲಿ ನನ್ನ ಬಾಯಿ ಮುಚ್ಚಿ ಮೆಲ್ಲಗೆ ಹೊರಕೆರದು ಕೊಂಡು ಹೋದ ಆತ ಆ ಅಧಿಕಾರಿಗಳ ಮುಂದೆ ಮಾತೆಯ ಮಗನೆಂದು ಹೇಳಬೇಡ ಅವನಿಗೆ ಆಕೆಯನ್ನು ಕಂಡರಾಗದು ಅವನ ಮಾತು ಮೃದು ಮನಸ್ಸು ಕಠಿಣ ಕೊರಳು ಕೊಯ್ಯುವುದು ಅವನ ಕಾಯಕ. ಯಾರ ಬಳಿಯು ಈ ವಿಷಯ ಹೇಳಬೇಡ ಎಂದು ತಿಳಿಸಿದ. ಆ ಹವಾಲ್ದಾರ ತನ್ನ ರಾತ್ರಿ ಪಾಳಿಯನ್ನು ಮುಗಿಸಿ ಮನೆಗೆ ಹೋಗುವಾಗ ನನ್ನನ್ನು ಜೊತೆಯಲ್ಲಿ ಕರೆದ್ಯೊಯ್ದ ಅವನ ಹೆಜ್ಜೆಯನ್ನು ಅನುಸರಿಸಿ ಅವನನ್ನು ಹಿಂಬಾಲಿಸಿದೆ.
ಅವನ ಹಿಂದೆ ನಡೆಯುತ್ತಾ ಹೋದಂತೆ ಹೆಜ್ಜೆ ಭಾರವಾದಂತೆ ಭಾಸವಾಗುತ್ತಿತ್ತು. ಅದನ್ನು ನಾನು ಅರಿಯುತ್ತಾ ಹೋಗುತ್ತಿದ್ದಂತೆಯೇ ಒಂದೆಡೆ ಭಯ, ಇನ್ನೊಂದಡೆಯಲ್ಲಿ ನನ್ನ ಮನಸ್ಸಿನ ಸ್ಧಿತಿ ಸರಿಯಿಲ್ಲದಿದ್ದರು ಸಹ ಅವನ ಜೊತೆ ಹೋಗಬೇಕಾದ ಪರಿಸ್ಧಿತಿ. ಆದರೆ ನನ್ನ ನಡಿಗೆ ಇದ್ದಕ್ಕಿದ್ದಂತೆ ನಿಂತಿತು ಯಾವುದೋ ಲೋಕದಲ್ಲಿದ್ದ ನಾನು ಎಚ್ಚೆತ್ತವನಂತೆ ನೋಡಿದೆ ಅದೊಂದು ದೊಡ್ಡ ಕಟ್ಟಡ, ಬಂಗಲೆಯಲ್ಲದ ಜೋಪುಡಿಯಂತಹ ಗುಡಿಸಲ ಮುಂದೆ ನಾನು ಹವಾಲ್ದಾರ ನಿಂತಿದ್ದೆವು ನನ್ನನ್ನು ಇಲ್ಲೇ ನಿಂತಿರಲು ಹೇಳಿ ಆತ ಒಳಗೆ ಹೋದವನು ಗೋಡೆಗೆ ಬಡಿದ ಚಂಡಿನಂತೆ ಹಿಂತಿರುಗಿ ಬಂದ ಅವನೊಂದಿಗೆ ಉದ್ದನೆಯ ದಾಡಿ ಬಿಟ್ಟು ತುಂಡು ಪಂಚೆಯುಟ್ಟು ಮೇಲೊಂದು ನಿಲುವಂಗಿ ಹಾಕಿಕೊಂಡು ಮತ್ತೊಬ್ಬ ವಯಸ್ಸಾದ ವ್ಯಕ್ತಿಯನ್ನು ಕರೆದು ತಂದಿದ್ದ.
ಆತನನ್ನು ನೋಡಿ ನನ್ನಡೆಗೆ ನೋಡಿದ ಹವಾಲ್ದಾರ "ಇವನೇ ಜಗದೇಕ ಮಾತೆಯ ಪುತ್ರ" ಎಂದ ಅಷ್ಟೇ ಜೀವನದಲ್ಲಿ ಪ್ರಥಮಬಾರಿಗೆ ನನಗೆ ಮನ್ನಣೆ ದೊರೆಯಿತು. ಆ ಜಂಗಮ ನನ್ನ ತಲೆಯ ಮೇಲೆ ತನ್ನ ಕೈಯಾಡಿಸುತ್ತಾ ಸುಡಿದ ನನು ಫಕೀರ " ತಾಯಿ" ಯ ಪುತ್ರ ಅವಳ ಆಜ್ಞೆಯಂತೆ ಕಾಯಕ ಮಾಡುತ್ತಿರುವೆ ನೀನು ಆಕೆಯ ಪುತ್ರನೆಂಬುದು ತಿಳಿದು ನನಗೂ ಭಾರಿ ಸಂತಸವಾಯಿತು ಎಂದ.
ಸರಿ ಫಕೀರನ ಆಸರೆಯಲ್ಲಿ ನೀನು ಇನ್ನು ಮುಂದೆ ಆತಂಕವಿಲ್ಲದೆಯೇ ಇರಬಹುದು, ಎಂದಷ್ಟೇ ಹೇಳಿದ ಹವಾಲ್ದಾರ ಮತ್ತುಷ್ಟು ಭಾರವಾದ ಹೆಜ್ಜೆ ಹಾಕುತ್ತಾ ತುಸುಬೇಸರದಿಂದಲೇ ಹೊರಟು ಹೋದ ಅವನು ಕತ್ತಲಲ್ಲಿ ಮರೆಯಾಗುವವರೆಗೂ ನೋಡುತ್ತಾ ನಿಂತೆ ಸರಿ ಎಂಬಂತೆ ನನ್ನಡೆಗೆ ನೋಡಿದ ಫಕೀರ ನನ್ನ ಒಳಗೆ ಕರೆದುಕೊಂಡು ಹೋದ. ತನ್ನ ಬಳಿ ಇದ್ದ ಸ್ವಲ್ಪ ಗಂಜಿಯನ್ನೇ ನನಗೂ ನೀಡಿದ ಕುಡಿದು ಮಲಗಿದೆ. ಅದೇನೊ ತೃಪ್ತ ಭಾವನೆ ತಾಯಿಯ ಬಗ್ಗೆ ಆಡಿದ ಮಾತಿಗೋ ಏನೋ ತಿಳಿಯದು.
ಬೆಳಿಗ್ಗೆ ಅದ್ಯಾವ ಹೊತ್ತಿಗೆ ಎದಿದ್ದನೋ ಆ ಫಕೀರ ನಾನು ಕಣ್ಣು ಬಿಡುವ ಮುಂಚೆಯೇ ಎದ್ದು ತನ್ನ ಎಲ್ಲಾ ಕಾರ್ಯಗಳನ್ನು ಮಗಿಸಿ, ಆಗ ತಾನೇ ಪೂಜೈಗೈಯ್ದು ಗುಡಿ ಶಿಲೆಯಂತೆ ಕುಳಿತುಬಿಟ್ಟಿದ. ನಾನು ಹೊರಳಿ ಅವನತ್ತ ನೋಡಿದಾಗ ಹೂಂ ಏಳು ಎಂದ.
ಎದ್ದು ಕುಳಿತ ನನ್ನ ನಿನ್ನ ಹೆಸರೇನೊ ನಾನು ಕೇಳುವುದೇ ಮರೆತೆ ಎಂದ ನನ್ನ ಬಾಯಿಗೆ ಬಂದದ್ದು ಅದೇ ಮಾತು " ಮಾತೆಯ ಮಗ" ನಾನು ತಿಳಿದದ್ದು ಅಷ್ಟೇ, ನನ್ನ ಹೆಸರು ಈವರೆಗೆ ಯಾರು ಕರೆದಿಲ್ಲ ಎಂದೆ. ಸರಿ ಸೂರ್ಯೋದಯದ ಈ ಸಮಯದಲ್ಲಿ ನಿನಗೊಂದು ಹೆಸರು ನಾನು ಇಡುತ್ತಿದ್ದೇನೆ. ಇನ್ನು ಮುಂದೆ ನಿನ್ನ ಹೆಸರು "ಸೇವಕ" ಎಂದು ತಿಳಿಯತೆ ಎಂದ ಮಾತಿನಲ್ಲಿ ಅಜ್ಞೆಯಿತ್ತ ಬೇರೆ ಮಾತಿಲ್ಲ ಅಪರೂಪಕ್ಕೊಂದು ಹೆಸರು ಸಿಕ್ಕಿದ್ದಕ್ಕೆ ಹಿಗ್ಗಿ ಹೋಗಿ ಫಕೀರನ ಆಜ್ಞೆಗೆ ತಲೆಯಾಡಿಸಿದೆ. ಅಲ್ಲೇ ಜೋಪುಡಿ ಮೂಲೆಯಲ್ಲಿದ ಹಂಡೆಗೆ ಉರಿಹಾಕಿದ್ದ ಪಕ್ಕದಲ್ಲಿದ್ದ ಕಲ್ಲು ಬಚ್ಚಲಿನಲ್ಲಿ ನನ್ನ ಸಂಪೂರ್ಣ ನಗ್ನಗೊಳಿಸಿ ನಿಲ್ಲಿಸಿದ ಫಕೀರ, ತಾನೇ ಸುಡುಸುಡು ನೀರೆರೆದು ಕನ್ನಡಿ ಮುಂದೆ ನಿಲ್ಲಿಸಿ, ಕಾಶಾಯ ವಸ್ತ್ರ ಉಡಿಸಿ ನೋಡಿಕೋ ಎಂದಾಗ ಮೊದಲ ಭಾರಿಗೆ ಕನ್ನಡಿಯಲ್ಲಿ ನಾನು ನನ್ನನ್ನು ನೋಡಿಕೊಂಡೆ ನನಗೂ ಆಕಾರವಿದೆ ಮತ್ತು ಸೌಂದರ್ಯವಿದೆ ಎಂದು ತಿಳಿಯಿತು.
ತಿರುಗಿ ಹಿಂತಿರುಗಿ ನೋಡುವ ಹೊತ್ತಿಗೆ ಫಕೀರ ಅಲ್ಲಿರಲಿಲ್ಲ, ಮತ್ತೆ ಹಿಂತಿರುಗಿ ಬಂದು ಒಂದಿಷ್ಟು ಕುಡಿಯಲು ಗಂಜಿ ನೀಡಿದ, ಕುಡಿಯಲು ಬಟ್ಟಲು ಎತ್ತಿದವನಿಗೆ, ಗದರು ಧ್ವನಿಯಲ್ಲಿ ನುಡಿದ ಇದೇ ಕೊನೆ ಇನ್ನು ಮುಂದೆ ಯಾರಿಂದಲೂ ಬೇಡಿ ತಿನ್ನುವುದನ್ನು, ದುಡಿಯದೇ ಪಡೆದು ತಿನ್ನುವುದನ್ನು ಬಿಟ್ಟು ಬಿಡು ಎಂದ ಅಪ್ಪಣೆ ಎಂದೆ. ಮುಂದುವರಿದು ದುಡಿಯುತ್ತಾ ಬದುಕುವುದನ್ನು ಕಲಿ, ದುಡಿಮೇಯೊಂದೇ ನಿನ್ನ ಧೇಯ್ಯ ಪ್ರತಿಫಲ ದೊರೆಯಲಿ ಬಿಡಲಿ ಎನ್ನುತ್ತಾ ಹೊರಗೆ ಹೊರಟವವನ್ನು ನಾನು ಹಿಂಬಾಲಿಸಿದೆ.
ಒಂದು ಬಾಗಿಲಲ್ಲಿ ನಿಂತ ನನ್ನ ತಲೆಯ ಮೇಲೆ, ನಾನು ಗಂಜಿ ಕುಡಿಯುತ್ತಿದ್ದಾಗ ಅಣಿಗೊಳಿಸುತ್ತಿದ್ದ ಬುಟ್ಟಿಯೊಂದನ್ನು ಹೊರಿಸಿದ, ಜೋಪುಡಿಯ ಮುಂದೆ ಬುಟ್ಟಿ ಹೊತ್ತು ನಿಂತವನಿಗೆ ಮತ್ತೆ ಅಪ್ಪಣೆ ಎಂಬಂತೆ ನುಡಿದ ಫಕೀರ " ನೋಡು ಈ ಬುಟ್ಟಿಯಲ್ಲಿ ಕನಸುಗಳಿವೆ ಸಂಜೆ ಹೊತ್ತಿಗೆ ಮಾರಾಟ ಮಾಡಿಕೊಂಡು ಬಾ" ಊರಿನ ಎಲ್ಲಾ ಕೇರಿ, ಬೀದಿಗಳಲ್ಲಿ ಆ ಜನ, ಈ ಜನ ಎಂಬ ಭೇಧ ಭಾವವಿಲ್ಲದೆ ಕೇಳಿದವರಿಗೆಲ್ಲಾ ನೀಡಿಕೊಂಡು ಬಾ ಆದರೆ?! ಎಂದಾಗ ಅಚ್ಚರಿಯಿಂದ ಅವನ ಮುಖ ನೋಡಿದೆ.
ನಕ್ಕು! ನುಡಿದ ಫಕೀರ " ಕನಸು ಬೇಕೆಂದು ನಿನ್ನ ಕೂಗಿದವರ ಮುಂದೆ ಹೋಗಿ ನಿಲ್ಲುವುದು ನಿನ್ನ ಕರ್ಮವಷ್ಟೇ ಅವರು ತಮಗೆ ಬೇಕಾದ ಕನಸುಗಳನ್ನು ಎತ್ತಿಕೊಂಡು ಅವರಿಗಿಷ್ಟ ಬಂದಷ್ಟು ಪ್ರತಿಫಲ ನೀಡುತ್ತಾರೆ. ಯಾವ ಕನಸಿಗೆ ಎಷ್ಟು ಎಂಬುದನ್ನು ಅವರು ನಿನ್ನ ಕೇಳುವಂತಿಲ್ಲ ಕೇಳಿದರೂ ನೀನು ಹೇಳುವಂತಿಲ್ಲ? ಎಂದು ಆಜ್ಞೆಯನ್ನು ಹೊರಡಿಸಿದ ಅಪ್ಪಣೆಯನ್ನು ತಲೆಬಾಗಿ ಒಪ್ಪಿದೆ.
ಚುಮು ಚುಮು ಮುಂಜಾನೆಯ ಚಳಿಯಲ್ಲಿ ಆಗಾ ತಾನೇ ಸೂರ್ಯ ಪೂರ್ವ ದಿಕ್ಕಿನಲ್ಲಿ ಕೆಂಪೇರುತ್ತಾ ಇಡೀ ಜಗತ್ತು ಬೆಳಕಿನಲ್ಲಿ ತೋಯಿಸುತ್ತಿದ್ದ. ಆ ಗುರುತಿಲ್ಲದ ಊರಿನಲ್ಲಿ ರಸ್ತೆಯಲ್ಲಿ ಮತ್ತೆ ಹಿಂತಿರುಗಿ ಬರಲು ದಾರಿ ಗುರುತು ಹಿಡಿದುಕೊಂಡು ಹೆಣಭಾರದ ಬುಟ್ಟಿಯನ್ನು ಹೊರಲಾಗದೆ ಹೊತ್ತುಕೊಂಡು ನಡೆಯುತ್ತಾ ಹೋದಷ್ಟು ಕನಸಿನ ಬುಟ್ಟಿಯು ಭಾರವಾಗುತ್ತಾ ಹೋದವು. ಅಪರೂಪಕ್ಕೆ ಒಬ್ಬ ನನ್ನ ಬುಟ್ಟಿಯನ್ನು ದೃಷ್ಟಿಸಿ ನೋಡಿ " ಏ ಏನದು" ಎಂದ ನಾನು ತಕ್ಷಣ ಅವನ ಮುಂದೆ ನಿಂತು ಕನಸುಗಳ ಭಾರವಾಗಿದೆ ಎಂದೆ.
ತಕ್ಷಣ ಎದ್ದು ನಿಂತ ಆತ ಓ ಕನಸು ಮಾರುವವನೇ ನೀನು? ಕೊಗಲು ಸಂಕೋಚವೇ ಎಂದ. ಮಾರಿಕೊಂಡು ಬಾ ಎಂದಷ್ಟೇ ಧಣಿಯ ಅಪ್ಪಣೆಯಾಗಿದೆ, ಸಾರುವುದು, ಕೂಗುವುದು ಬೇಡ ಎಂದಿದ್ದಾರೆ ಎಂದೆ. ಸ್ವಾಮಿ ನಿಷ್ಟೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬುಟ್ಟಿಯಿಂದ ಕನಸಗಳನ್ನು ತೆಗೆದುಕೊಂಡು ಏನೋ ಹಾಕಿ ಹೂಂ ಹೊರಡು ಎಂದ ಆದರೆ ಬುಟ್ಟಿ ಮಾತ್ರ ಮೊದಲಿಗಿಂತ ಮತ್ತಷ್ಟ ಭಾರವಾಯಿತು.
ಮುಂದೆ ಸಾಗಿ ಹೋದೆ ಕೂಗಿ ಕರೆದರು ಕೆಲವರು ಮತ್ತೆ ಕೆಲವರು ತಾವೇ ಮುಂದೆ ಬಂದರೂ ನಾನು ಅವರ ಮುಂದೆ ನಿಂತೆ ಅಷ್ಟೇ, ಅವರೇ ಅಳೆದು ಸುರಿದು ಅವರಿಗೆ ಬೇಕಾದ ಇಷ್ಟವಾದ ಹಿಡಿಸುವ ಕನಸುಗಳನ್ನು ಎತ್ತಿಕೊಂಡು ಒಂದಿಷ್ಟು ಪ್ರತಿಫಲ ಹಾಕಿದರು. ನನಗೆ ಯಾವುದೂ ಕಾಣಿಸಲ್ಲಿಲ್ಲ ಆ ಕನಸುಗಳು ಹೇಗಿವೆ ಎಂದೂ ನಾನು ನೋಡಲೇ ಇಲ್ಲ, ಆ ಪ್ರಯತ್ನ ಸಹ ನಾನು ಮಾಡಲಿಲ್ಲ ಆ ಅಧಿಕಾರ ನನಗೆ ನೀಡಿರಲಿಲ್ಲ ಸರಿ ಸಂಜೆ ಹೊತ್ತಿಗೆ ಸರಕು ಮುಗಿದಂತಾಯಿತು ಇಳಿ ಸಂಜೆ ಹೊತ್ತಿಗೆ ಕನಸು ಪ್ರತಿಫಲ ತುಂಬಿಕೊಂಡೆ ಬುಟ್ಟಿ ಮತ್ತಷ್ಟು ಭಾರವಾಯಿತು.ಜೋಪುಡಿ ಬಳಿ ಬಂದಾಗ ಸಂಜೆ ಎಂಬುದು ಸರಿದು ಪಶ್ಚಿಮ ದಿಕ್ಕಿನಲ್ಲಿ ಉಷೆಯು ತನ್ನ ನಿಷೆಯ ಲೋಕದಲ್ಲಿ ತೇಲುತ್ತಿತ್ತು. ನನಗಾಗಿ ಯಾರು ಅಲ್ಲಿ ಕಾಯುತ್ತಿರಲಿಲ್ಲ, ಒಳಗೆ ಕುಳಿತ ಫಕೀರ ಅಚ್ಚರಿಯಿಲ್ಲದ ಕಣ್ಣುಗಳಿಂದ ನನ್ನನ್ನು ಒಮ್ಮೆ ನೋಡಿ ತಟ್ಟನೆ ಎದ್ದು ಬಂದು ನನ್ನ ತಲೆಯ ಮೇಲಿನ ಬುಟ್ಟಿಯನ್ನು ಎತ್ತಿಕೊಂಡು ತನ್ನ ಎದೆಯ ಮಟ್ಟದಲ್ಲೇ ಇಟ್ಟುಕೊಂಡ ನನಗೆ ಕಾಣಿಸುತ್ತಿರಲಿಲ್ಲ " ಸರಿ ಮಾರಿದ್ದೀಯ" ಆದರೆ ಖುಣಭಾರ ಅಧಿಕವಾಯಿತಲ್ಲೊ ಬಾಯಿಬಿಟ್ಟು ಕೇಳಿ ಪಡೆದೆಯೋ ಏನು? ಎಂದ ಇಲ್ಲ ನಾನು ಅದರ ಬಗ್ಗೆ ಬಾಯಿಯೇ ತೆರದಿಲ್ಲ ಎಂದೆ.
ಅಂದು ರಾತ್ರಿ ಗಂಜಿ ಕುಡಿದು ಮಲಗಿದವನಿಗೆ ಚಳಿಯ ಅನುಭವ ಆದರೂ ಹಿಂದಿನ ದಿನ ಹೊದೆಯಲು ನೀಡಿದ್ದ ಕಂಬಳಿಯನ್ನು ಫಕೀರ ನೀಡಲಿಲ್ಲ, ಖುಣಭಾರ ಹೊತ್ತು ತಂದದಕ್ಕೆ ಶಿಕ್ಷೆ ಅನುಭವಿಸು ಎಂದು ಹೇಳಿ ತಾನು ಹೊದ್ದು ಮಲಗಿದ ನಾನು ಮುಂದುವರಿದು ಮಾತಾನಾಡಲೂ ಆಗದೇ ಚಳಿ ತಡೆಯಲು ಆಗದೆ ದೇಹ ಎಂಬುದೇ ಹೀಗೆ ಇಲ್ಲದಿದ್ದರೆ ಇದ್ದೇ ಬಿಡುತ್ತದೆ ಒಮ್ಮೆ ಏನಾದರೂ ನೀಡಿದರೆ ಮತ್ತೆ ಮತ್ತೆ ಬೇಕು ಬೇಕೆನ್ನುವ ಹಪಾಹಪಿಗೆ ಬೀಳುತ್ತದೆ. ಇಡೀ ದೇಹವನ್ನು ಮುದ್ದೆಯಂತೆ ಕೊಕ್ಕರಿಸಿಕೊಂಡು ಮಲಗಿದೆ.
ಬೆಳಕು ಹರಿಯಿತು ನಾನೇ ಎದ್ದು, ಅದೇ ಸ್ನಾನ ಮತ್ತೆ ಕಶಾಯವಸ್ತ್ರ ಅದೇ ತಂಗಳು ಗಂಜಿ ಕುಡಿದ ನಂತರ ಅದೇ ಬುಟ್ಟಿ ತಲೆಯ ಮೇಲೆ ನಿನ್ನೆಗಿಂತ ಅದು ಮತ್ತಷ್ಟು ಭಾರ, ಅದನ್ನು ಹೊತ್ತು ನಾಲ್ಕು ಹೆಜ್ಜೆ ಹಾಕಿದವನಿಗೆ ತಲೆ ಉರಿಯುತ್ತಿರುವಂತೆ ಭಾಸವಾಯಿತು. ಹಿಂತಿರುಗಿ ನೋಡಿದೆ ಅದನ್ನು ಗಮನಿಸಿದ ಫಕೀರ ಓಡಿ ಬಂದು ತನ್ನ ಹೆಗಲ ಮೇಲಿದ್ದ ವಸ್ತ್ರವನ್ನು ಸಿಂಬಿ ಮಾಡಿ ಬುಟ್ಟಿಗೂ ತಲೆಗೂ ಮಧ್ಯ ಇರಿಸಿ ಈಗ ಸರಿಯಾಯಿತೇ? ಎಂದ ಹೌದು ಎಂಬಂತೆ ತಲೆಯಾಡಿಸಿ ಹೊರಟೆ.
ಅದೇ ದೊಡ್ಡದೊಡ್ಡ ಕಟ್ಟಡಗಳು ಕಪ್ಪಿ ಹೆಬ್ಬಾವಿನಂತೆ ಮುಲಗಿದ ರಸ್ತೆ ಮೊಗ್ಗಲಲ್ಲಿ ಹುಣ್ಣಿಮೆ ಚಂದ್ರನ ಹಾಲಿನ ಬಣ್ಣ ಮೀರಿಸುವಂತಹ ಶ್ವೇತ ವರ್ಣದ ಅಶ್ವಗಳ ಸಾಲು, ಸಾಲಿಗೆ ಸರಿಸಾಟಿ ಎಂಬಂತೆ ನಿಂತ ಅದ್ದೂರಿಯಾದ ಸಾರೋಟು, ಅವುಗಳ ಮಧ್ಯೆ ರಾಜ ಮಹಾರಾಜರಂತೆ ಧಿರಿಸು ಧರಿಸಿನಿಂತ ಸಾರಥಿಗಳು ಅವನ್ನು ನೋಡುತ್ತಿದ್ದರೆ ಕಣ್ಣು ಬೇರಡೆಗೆ ತಿರುಗಲೇ ಇಲ್ಲ ಪ್ರಯತ್ನಿಸಿದೆ. ಅಷ್ಟರಲ್ಲಿ ಘಟಿಸಬಾರದಿದ್ದ ಘಟನೆ ಘಟಿಸಿಯೇ ಹೋಗಿತ್ತು. ಸಾರೋಟು ಕುದುರೆ ಅಂದ ನೋಡುತ್ತಾ ಹೋಗಿ ಮುಂದೆ ಬಂದವರಿಗ್ಯಾರಿಗೋ ತಾಕಿನಿಂತೆ ಯಾರೆಂದು ನೋಡುವಷ್ಟರಲ್ಲಿ ಅವರೊಬ್ಬ ಹೆಣ್ಣು ಎಂಬುದು ಅವರ ಸೀರೆಯಿಂದ ತಿಳಿಯತಾದರೂ ಮುಖ ಮಾತ್ರ ಕಾಣಲೇ ಇಲ್ಲ.
ಕಡಲೂರಿನ ಕನ್ಯೆ ಮುಖ ನೋಡಲು ಸ್ಪಲ್ಪ ಹಿಂದೆ ಹಿಂದೆ ಹೋದೆ ಅವರ ಮಂಡಿ ಎತ್ತರಕ್ಕಿದ್ದ ನಾನು ಅವರ ಮುಖ ನೋಡಲು ಸ್ಪಲ್ಪ ಶ್ರಮಪಡಬೇಕಾಯಿತು. ಭಯ ಮಾಡಿದ ತಪ್ಪಿನ ಅರಿವಾಗಿ ಆಗಲೇ ನನ್ನ ಕೈ ಕಾಲು ಕಂಪಿಸಲು ಪ್ರಾರಂಭಿಸಿದ್ದವು. ಅವರು ಮುಖ ನೋಡಿದರೆ ಹೂ ನಗೆ ಸೂಸುತ್ತಿತ್ತು ಆ ಅವರು ಯಾರು ನೀನು? ಏನು ಹೆಸರು? ಅದೇನು ತಲೆಯ ಮೇಲಿನ ಬುಟ್ಟಿಯಲ್ಲಿ ಎಂದು ನಯ ವಿನಯಭರಿತ ಪ್ರೀತಿಯಿಂದ ಕೇಳಿದರೂ ಅವರು ಬೇರೆಯವರು ಅನ್ನಿಸಲಿಲ್ಲ ನಮ್ಮವರೇ ಎನ್ನಿಸಿತು.
ಅವರ ಮುಖದಲ್ಲಿ ನನ್ನ ತಾಯಿಯ ನೆನಪಿಸುವ ನಗುವಿನಿಂದ ಹಾಗಾಯಿತೇನೋ ತಿಳಿಯದು, ನಾನು.... ನಾನು.... ಸೇವಕ ನನಗೂ ಹೆಸರಿದೆ.... ಅನಾಥನಲ್ಲ ತಾಯಿಯಿದ್ದಾಳೆ, ಕನಸುಗಳಿವೆ ಬುಟ್ಟಿಯಲ್ಲಿ ಎಂದೆ ಖುಷಿಯಿಂದ ಹಿಗ್ಗಿ ಹೋದರು ಅವರು " ಓ ನೀನೇ ಏನು ಆ ಕನಸು ಮಾರುವವನು " ನಾನು ಎಷ್ಟು ವರ್ಷಗಳಿಂದ ಕಾಯ್ದು ಹಂಬಲಿಸಿದ್ದೆನೋ ಮಾರಾಯ ನಿನ್ನಂತ ಒಬ್ಬ ಕನಸು ಮಾರುವ ಹುಡುಗನಿಗಾಗಿ ಎಂದವರೇ? ಬಾ ಇಲ್ಲಿ ಎಂದು ಹೇಳಿ ಮುಂದೆ ನಡೆದರು ನಾನು ಅವರನ್ನೇ ಅನುಸರಿಸಿದೆ.
ಅಲ್ಲೇ ನಿಂತಿದ್ದ ಸಾರೋಟುಗಳಲ್ಲಿ ಅತೀ ಸುಂದರ ದುಭಾರಿ ಎನಿಸುವಂತಹುವುದನ್ನು ಏರಿ ಕುಳಿತರು. ಸಾರಥಿ ಬಾಗಿಲು ಹಾಕಲು ಮುಂದಾದಾಗ ಅವನನ್ನು ಹತ್ತಿಸಿ ಕೊಳ್ಳಿ ಎಂದು ಆಜ್ಞಾಪಿಸಿದರು. ಸಾರಥಿ ಅವರ ಅಣತಿಗೆ ಮುಂದಾಗಿ ಬಾ ಹತ್ತು ಎಂದ ನಾನು ಅವರ ಮುಖನೋಡಿ ನಾನು ನಡೆದ ಸಾಗಬೇಕಿದೆ. ಕನಸ ಮಾರಲು ಬಂದವನು ಗಾಡಿ ಬಂಡಿ ಹತ್ತವಂತಿಲ್ಲ ಅದು ಗುರುವಿನಾಜ್ಞೆ ಎಂದೆ. ಅವರು ಮುಖ ಕಪ್ಪುಗಟ್ಟಿತು. ಸರಿ ನಿಧಾನವಾಗಿ ನಡೆ ಎಂದು ಸಾರಥಿಗೆ ಹೇಳಿದರು ಗಾಡಿಯ ಹಿಂದೆ ನಾನು ನಡೆಯಲಾರಂಭಿಸಿದೆ.
ಕೆಲವು ಮೈಲಿಗಳು ಸಾರೋಟು ಸಾಗುತ್ತಿದ್ದಾಗ ಹಿಂದಿನ ಕಿಟಕಿಯಿಂದ ಅವರು ನನ್ನ ನೋಡುತ್ತಿದ್ದರು, ಸಾರೋಟು ವೇಗ ಹೆಚ್ಚಾದರೆ ತಗ್ಗಿಸಲು ಸಾರಥಿಗೆ ಹೇಳುತ್ತಿದ್ದರು ಕಡೆಗೆ ಒಂದು ವಿಚಿತ್ರವಾದ ಬಂಗಲೆ ಬಾಗಿಲಿಗೆ ಬಂದು ನಿಂತಿತು ಸಾರೋಟು.ಆ ಬಂಗಲೆಯಲ್ಲಿ ಬಿಸಿಲು ಬೆಳದಿಂಗಳು , ಹಗಲು-ಇರುಳು, ಸುಂದರ ಹಕ್ಕಿ ರಣಹದ್ದು, ಒಂದೆಡೆ ಕಡಲು-ಕಾನನ ಎಲ್ಲಾ ಒಟ್ಟಿಗೆ ಮೇಳೈಸಿತ್ತು ನಿಂತ ಸಾರೋಟಿನ ಸಾರಥಿ ಅವರನ್ನು ಕೈಹಿಡಿದು ಕೆಳಗಿಸಿ ರಾಜ ಮರ್ಯಾದೆ ತೋರಿದ ಅವನು ಅವರ ಕೈಹಿಡಿದಾಗ ನನಗೆ ಕೊಂಚ ಬೇಸರವಾಯಿತು. ಅದನ್ನು ಕಣ್ಣಲ್ಲೇ ಗಮನಿಸಿ ಅಪರಾಧಿ ಮನೋಭಾವದಿಂದ ನೋಡಿ ಕ್ಷಮಿಸು ಎಂಬಂತೆ ಕಣ್ಣಲ್ಲೇ ಕೇಳಿದರು. ನಾನೇ ತಪ್ಪು ಮಾಡಿದೆ ಎಂಬಂತೆ ಭಾಸವಾಗಿ ನಾನು ಏನೂ ಮಾತನಾಡದೆ ಅವರನ್ನು ಹಿಂಬಾಲಿಸಿ ಹೋಗುವಾಗ ಕಾವಲುಗಾರ ಅವರಿಗೆ ಅತೀ ವಿನಿಯ ಮತ್ತು ಮರ್ಯಾದೆಯಿಂದ ಸಲಾಮು ಮಾಡಿದ ನನ್ನನ್ನು ಯಾರು ಎಂಬಂತೆ ನೋಡಿದಾಗ ಕಾವಲುಗಾರ ನನ್ನ ತಡೆಯಲಿಲ್ಲ ಆದರೆ ಬುಟ್ಟಿಯನ್ನೊಮ್ಮೆ ಪರಿಶೀಲಿಸುವಂತೆ ನೋಡಿದ. ಭಾರವೇ ಇಳಿಸಲೇ ಎಂದು ಮುಂದೆ ಬಂದವನಿಗೆ ಹೇಳಿದ ಕನಸು ಮಾರುವವರೆಗೆ ಬುಟ್ಟಿ ಇಳಿಸುವಂತಿಲ್ಲ ಎಂದಾಗ ಅವರು ಹಿಂತಿರುಗಿ ನೋಡಿ ಫಕ್ಕನೆ ನಕ್ಕರು ಅದು ನನ್ನ ತಾಯಿಯ ನಗುವಿನಂತೆ ಇತ್ತು ಬಿಡು ಅವನನ್ನು ಎಂದು ಕಾವಲುಗಾರನಿಗೆ ಹೇಳಿ ಒಳಗೆ ಹೋದರು ನಾನು ಅವರನ್ನು ಹಿಂಬಾಲಿಸಿದೆ.
ಸರಿ ಒಟ್ಟು ಏಳು ಕನಸುಗಳು ಬೇಕು, ನನಗೆ ಸರಿ ಒಂದು ಕನಸಿಗೆ ಎಷ್ಟು ಪ್ರತಿಫಲ ನೀಡಬೇಕು ಹೇಳು ನಿನಗೆ ಎಂದರು, ನಾನು ಉತ್ತರ ನೀಡುವ ವೇಳೆಗೆ ನನ್ನ ಬುಟ್ಟಿ ಪರಿಶೀಲಿಸಿ, ಇದೇನು ಬರೀ ಏಳು ಕನಸುಗಳಷ್ಟೇ ಇವೆ. ನನಗಾಗಿಯೇ ತಂದಿಯೇನು? ಎಂದು ಆನಂದ ಭರಿತ ಧ್ವನಿಯಿಂದ ಕೇಳಿದರು. ನಾನು ಹೇಳಿದೆ ನನಗೆ ಪ್ರತಿಫಲ ಬೇಕಿಲ್ಲ, ಕನಸುಗಳನ್ನು ಕೊಂಡು ತೃಪ್ತಿಯಿಂದ ನೀವು ಅಲ್ಪ ಕಾಣಿಕೆ ನೀಡಿದರೂ, ಅದು ಕನಸು ಮಾರಲು ಕಳಿಸಿದ ಫಕೀರನಿಗೆ ಅರ್ಪಿತ ಎಂದೆ. ಆಗ ತಿಳಿಯಿತು ಪ್ರತೀ ಮಾತು ಮಾತಿಗೂ ಆಕೆ ಸರಿ, ಸರಿ, ಎನ್ನುತ್ತಾರೆ ಎಂದು ತಿಳಿಯಿತು. ಸರಿ ಎಂದು ಹೇಳಿದಂತೆ ನಡೆಯುತ್ತಾರೆ. ತಪ್ಪು ಎನ್ನುವುದಿಲ್ಲ, ನಡೆಯುವುದಿಲ್ಲ ಎಂದು.
ಇದ್ದ ಏಳು ಕನಸುಗಳನ್ನು ಅವರ ಕೈ ಸೇರಿದವು, ಬುಟ್ಟಿ ಭಾರ ಪೂರ್ಣ ಕಡಿಮೆಯಾಗಿತ್ತು. ಸರಿ ಒಳಗೆ ಬಾ ಪ್ರತಿಫಲ ನೀಡುತ್ತೇನೆ ಎಂದರು ಯಾಉ ಮನೆಯೊಳಗೂ ಹೋಗಬಾರದು ಎಂದು ಗುರುವಿನ ಅಪ್ಪಣೆ ನೆನಪಾಗಿ ಹಿಂದುಮುಂದು ನೋಡುತ್ತಿದ್ದವನಿಗೆ, ಅವರೇ ಹೇಳಿದರು ನಿನಗೆ ನಾನು ನೀಡುತ್ತಿರುವ ಪ್ರತಿಫಲ ತೀರಾ ಕಡಿಮೆ ಅದಕ್ಕೆ ಒಳಗೆ ಬಾ ಎಂದೆ ಎಂದು ಖುಷಿಯಿಂದ ಅವರ ಹಿಂದೆ ಹೋದೆ ಬುಟ್ಟಿ ತಲೆಯ ಮೇಲಿತ್ತು ಅಲ್ಲೇ ಮಂಚದ ಮೇಲೆ ಕುಳಿತಿದ್ದ ಹೆಂಗಸೊಬ್ಬರು ನನ್ನತ್ತ ದೃಷ್ಟಿ ಇಟ್ಟು ನೋಡಿ ಕ್ಯಾಕರಿಸಿ ಥೂ ಎಂದು ಉಗಿದು ಮಾನ ಮರ್ಯಾದೆ ಇಲ್ಲದ ಮುಂಡೇ ಮಕ್ಕಳು ಕನಸು ಮಾರಿಕೊಂಡು ಬದುಕುತ್ತಾರೆ. ಎಂದು ಬೈಯ್ದಳು, ನಾನು ಕಕ್ಕಾಬಿಕ್ಕಿಯಾದೆ ಒಳಗಿನಿಂದ ನನ್ನತ್ತ ನೋಡಿದ ಇವರು ಆಕೆಗೆ ತಲೆಸರಿಯಿಲ್ಲ ಎಂದು ಸನ್ನೆ ಮಾಡಿದರು.
ಪ್ರತಿಫಲ ತಂದು ನನ್ನ ತಲೆಯ ಮೇಲಿನ ಬುಟ್ಟಿಗೆ ಹಾಕಿದ ಅವರನ್ನು ನಿಮ್ಮ ಹೆಸರೇನು? ಎಂದು ಕೇಳಿದೆ ಅವರು ಅಚ್ಚರಿ ಪಡೆದೇ ಏಕೆ? ಎಂದು ಪ್ರಶ್ನಿಸಿದರು. ನೀವು ನನ್ನ ತಾಯಿಯಂತೆ ಕಾಣುತ್ತೀರಿ ಅದಕ್ಕೆ ಎಂದೇ ಅವರು ಮಂಡಿಯೂರಿ ನನ್ನ ಮುಂದೆ ಕುಳಿತು, ನನ್ನ ಎತ್ತರದಷ್ಟಾದ ಅವರು ನನ್ನ ಎರಡು ಗಲ್ಲ ಮುದ್ದಿಸಿ ಮುತ್ತಿಟ್ಟುಕೊಂಡಾಗ ಸಾಗರದ ಒಡಲಿಲ್ಲ ಅಗ್ನಿ ಕೆನ್ನಾಲಿಗೆ ಚಾಚಿದ ಅನುಭವವಾಯಿತು. ಏಕೋ ಏನೋ ಆನಂದ ಭಾಷ್ಪ ಕಣ್ಣೀನಿಂದ ಸುರಿಯಲಾರಂಭಿಸಿದವು. ಬಿಕ್ಕಿ ಬಿಕ್ಕಿ ಆಳಬೇಕು ಎನ್ನಿಸಿತು. ಜೀವನದಲ್ಲಿ ಮೊದಲ ಬಾರಿಯಾದರೂ ಹೊಡಯದಿದ್ದರೂ ಆಳಬೇಕು ಅನ್ನಿಸಿತು ಅತ್ತು ಬಿಟ್ಟೆ. ನಾನು ಆಳುವಾಗ ತಡೆಯಲಿಲ್ಲ, ಸರಿ ನನಗೆ ನಾಳೆ ಬರುವಾಗ ಬೇರೆ ಬೇರೆ ಕನಸುಗಳನ್ನು ತೆಗೆದುಕೊಂಡು ಬಾ ಎಂದರು. ಮತ್ತೆ ಅವರೇ ನನಗೆ ಬೇಕಾದ ಕನಸುಗಳು ನಿನ್ನ ಬಳಿ ನಾಳೆ ಇರುತ್ತದೆಯೋ ಇಲ್ಲವೋ ನಿನಗೆ ತಿಳಿಯದು ಅಲ್ಲವೆ, ಆದರೂ ದಿನಕ್ಕೊಮ್ಮೆಯಾದರೂ ಇಲ್ಲಿ ಬಂದು ಹೋಗು ಎಂದರ, ಈಗಿದ್ದ ಕನಸುಗಳು ಈಗಿನವು ನಾಳೆ ಎನ್ನುವಾಗ ಅದು ಬೇರೆಯಾಗಿರುತ್ತದೆ. ಕನಸುಗಳು ಇದ್ದೆರೆ ಅವು ನನ್ನವು ನಿನಗೆ ಯಾವುದೇ ಪ್ರತಿಫಲವಿಲ್ಲ ಎಂದು ನಕ್ಕರು ಧನ್ಯನಾದೆ ಎಂದು ಹೇಳಿ ಹೊರಗೆ ನಡದೆ ಅವರೂ ಸಹ ನನ್ನನ್ನು ಹಿಂಬಾಲಿಸಿದರು, ಕನಸುಗಳು ಖಾಲಿ ಖಾಲಿಯಾದ ಬುಟ್ಟಿಯಲ್ಲಿ ಪ್ರತಿಫಲವೂ ಕಡಿಮೇ ಎಂಬುದರ ಬಗ್ಗೆ ಖುಷಿಯಿಂದ ಅವರ ಮನೆಯ ಮುಖ್ಯದ್ವಾರದಿಂದ ಹೊರಗೆ ಬಂದು ಕಾವಲುಗಾರನನ್ನು ದಾಟಿ ಹಿಂತಿರುಗಿ ನೋಡಿದೆ ಅವರು ಹಿಂದೆ ಬಂದು ನನ್ನ ಬೆನ್ನಿಗೆ ನಿಂತಿದ್ದರು.
ಹಿಂತಿರುಗಿ ನೋಡಿದವನಿಗೆ ನೀನು ನನ್ನ ಹೆಸರು ಕೇಳಿದೆಯಲ್ಲ "ಕಡಲೂರ ಕನ್ಯೆ" ನಾನು ನನ್ನ ಹೆಸರು ಕೇಳಿದರೆ ಜನ ಆದರಾಥಿತ್ಯ ತೋರುತ್ತಾರೆ ನಿನಗೂ ನನ್ನ ಹೆಸರು ಕೇಳುವ ಆಸೆಯಾಗಿದೆ ಹೇಳಿದ ಮೇಲೆ ವಿಷಾದಪಡಬೇಡ ನನ್ನ ಹೆಸರು "ಬೇಸರ" ಎಂದರು. ಬಹಳ ಹಿಂದೆ ಇವರ ಹೆಸರು ಚಿರಪರಿಚಿತ ಎನಿಸಿತು ನನಗೆ, ಕನಸು ಮಾರಲು ಪ್ರಾರಂಭಿಸಿದ ದಿನದಿಂದ ಕನಸುಕೊಳ್ಳಲು ಬಂದವರೆಲ್ಲಾ ಆ ಹೆಸರನ್ನು ಜೊತೆಯಲ್ಲಿ ತರುತ್ತಿದ್ದರು.
ಆದರೆ "ಬೇಸರ" ಎಂಬ ಅವರನ್ನು ನಾನು ಈ ರೀತಿ ಸ್ಪಂದಿಸುವೆ ಎಂದು ಕೊಂಡಿರಲಿಲ್ಲ ಬಹುದೊಡ್ಡ ಹೆಸರಿನ ಅವರಿಗೆ ನನ್ನಂತಹ ಜನ ಜೋಪುಡಿಯಿಂದ ತಂದ ಕನಸು ಬಲು ಪ್ರಿಯ ಎಂಬುದು ತಿಳಿದು ನಗು ಬಂತು, ಅಲ್ಲಿಂದ ಕಾಲುಕಿತ್ತೆ ಬಲು ಚೆನ್ನಾಗಿ ಕನಸು ಮಾರುವುದನ್ನು ಅಪ್ಪಣೆಯಂತೆ ಕಲಿತ ನನ್ನ ಫಕೀರ ಬಹುವಾಗಿ ಮೆಚ್ಚಿಕೊಂಡಿದ್ದನಾದರೂ ದ್ರೋಹ ಚಿಂತನೆ ಎಂಬುದು ವ್ಯಾಪಾರದಲ್ಲಿ, ಆದರೆ ಇದು ಜೀವನ ಧರ್ಮ ಚಿಂತನೆ ಇಲ್ಲಿ ಲಾಭವಾದಷ್ಟು ದು:ಖ, ಗೋಳು, ನಷ್ಟವಾದಷ್ಟು ಸಂತಸವೇ ತಿಳಿಯತೆ ಎಂದ. ಅಷ್ಟರಲ್ಲಿ ಜೋಪಡಿಯ ಬಾಗಿಲಿಗೆ ರಾಜನರ್ತಕಿ ಬಂದು ನಿಂತು ನಕ್ಕಳು ಹ್ಞಾಂ ಎಂದ ಫಕೀರ, ಜೋಪುಡಿಯ ಮೂಲೆಯಲ್ಲಿ ತೆರೆಯಮರೆ ಮಾಡಿದ್ದ ಕಡೆ ಆಕೆಯನ್ನು ಕರೆದುಕೊಂಡು ಹೋದ, ಆಕೆ ಹೋದ ಮೇಲೆ ತಿಳಿಯಿತು ಆಕೆ ರಾಜನಿಗೆ ಕನಸು ಕೊಂಡ್ಯೊಯಲು ಬಂದಿದ್ದಳು ಎಂದು ಅದಕ್ಕೆ ಬದಲಾಗಿ ಸುರೆಯ ಬುರುಡೆಯನ್ನು ನೀಡಿ ಹೋಗಿದ್ದಳು. ಫಕೀರನು ರಾಜಾಜ್ಞೆ ಬೇಡ ಎನ್ನುವಂತಿರಲಿಲ್ಲ ಬುರುಡೆ ಮುಂದಿಟ್ಟುಕೊಂಡು ನನ್ನತ್ತ ನೋಡಿದ.
ಎದ್ದು ಹೋದ ನಾನು ಮತ್ತೊಂದು ಸುರೆಯ ಖಾಲಿ ಬುರುಡೆಯನ್ನು ತಂದು ಅರ್ಧ ಸುರೆಯನ್ನು ಅದಕ್ಕೆ ಸುರಿದು ನನಗೆ ಕೊಟ್ಟು ರುಚಿ ನೋಡೆಂದ ಗುರುವಿನಾಜ್ಞೆಯಂತೆ ಸುರೆಯನ್ನು ಹೀರಿದೆ ಆ ಹುಣ್ಣಿಮೆಯ ದಿನ ಚಂದಿರನ ನೋಡಿದರೂ ಕಡಲೂರ ಕನ್ಯೆ ಮುಖ ಬಿಂಬಿತವಾಗುತ್ತಿತ್ತು. ಕನಸು ಮಾರುವ ಕಾರ್ಯದಲ್ಲಿ ತಾಯಿಯ ನೆನಪು ಮರೆತಂತೆ ಆಗಿತ್ತು. ಕಡಲೂರ ಕನ್ಯೆ ನೋಡಿದ ಮೇಲೆ ಮತ್ತೆ ಮತ್ತೆ ನೆನಪಾಗಿ ನೋಡಲೇ ಬೇಕು ಎನಿಸುತ್ತಿತ್ತು.
ಕಡಲೂರ ಕನ್ಯೆಯ ಮುಖ ನೆನಪದಾಗಲೆಲ್ಲಾ ಅವಳ ಚಿತ್ರಣ ಎದುರಿಗೆ ಬಂದಾಗಲೆಲ್ಲಾ ಅವಳಲ್ಲಿ ಏನೋ ಕೊರತೆ ಇದೆ ಎಂದು ನನಗೆ ಅನ್ನಿಸತೊಡಗಿತು. ಸುರೆಯ ಮತ್ತಿನಲ್ಲೂ ಯೋಚನೆಗೆ ಬಿದ್ದೆ ಬಿಳಿಯ ಸೀರೆ, ಕಡುಕಪ್ಪು ಕುಪ್ಪಸ, ನೀಳ ಕೊದಲಿನಲ್ಲಿ ಕೆಂಚು ಬಣ್ಣ ಸಿರಿತನವ ಸಾರುತ್ತಿತ್ತು. ಕೇಶವೆಂಬುದು ಯಾವುದೇ ಬಂಧನವಿಲ್ಲದೆ ಸ್ವಾತಂತ್ಯ್ರವಾಗಿ ತಲೆಯ ಮೇಲೆ ವಿಹರಿಸುತ್ತಿತ್ತು. ಮುಖದಲ್ಲಿ ಸಂತಸದ ಸ್ವಾತಂತ್ಯ್ರಕ್ಕಿಂತ ಹೆಚ್ಚು ಬಲವಂತವಾಗಿ ತಂದುಕೊಂಡ ಗಾಂಭೀರ್ಯ, ನೋವು ನುಂಗಿಕೊಂಡಿರುವ ಬೇಸರ ಎದ್ದು ಕಾಣುತ್ತಿತ್ತು. ಅಂದು ನನ್ನ ನೋಡಿದ್ದೆ ನಕ್ಕರಲ್ಲ ಅದೇ ಮೊದಲ ನಗೆಯಿರಬೇಕು ಅವರ ಜೀವನದಲ್ಲಿ ನಕ್ಕಿದ್ದು ಎಂದು ಹಾಗೇ ನಿದ್ದೆಗೆ ಜಾರಿದೆ.
ಬೆಳಿಗ್ಗೆ ಫಕೀರನಿಗೂ ಮುಂಚಿತವಾಗಿ ನಾನೇ ಎದ್ದು, ತಯಾರಿ ಮುಗಿಸಿ ಕುಳಿತೆ ಎದ್ದು ಅಚ್ಚರಿಯಿಂದ ನನ್ನತ್ತ ಒಮ್ಮೆ ನೋಡಿದ ಫಕೀರ ಶುಚಿಯಾಗಿ ಬಂದು ಕುಡಿಯಲು ಕೊಂಚವೇ ಕೊಂಚ ಎನ್ನುವಷ್ಟು ಗಂಜಿ ನೀಡಿದ ಅದೂ ನನಗೆ ಬೇಡವಾಗಿತ್ತು ರಾತ್ರಿ ಹೀರಿದ ಸುರೆ ಕರುಳನ್ನು ಸುಡದಿರಲು ಹೊಟ್ಟೆಗೆ ಒಂದಿಷ್ಟು ಹಾಕಿಕೊಂಡು, ಕಡಲೂರ ಕನ್ಯೆಯ ಕಾಣುವ ತವಕದಲ್ಲಿ ಹೊರಟೆ, ಜೋಪುಡಿಯಿಂದ ಹೊರಬಂದ ನನ್ನ ತಲೆಯ ಮೇಲೆ ಅದೇ ಬುಟ್ಟಿ ಇಟ್ಟ ಫಕೀರ ನುಡಿದ ಮಾತು ಬಲು ಹರಿತವಾಗಿತ್ತು " ಕನಸು ಮಾರುವ ನೀನು ಕನಸುಕೊಳ್ಳುವ ಧೈರ್ಯ ಮಾಡದಿರು" ಎಂದ ತಟ್ಟನೆ ನಿಂತು ಅವನ ಮುಖ ನೋಡುತ್ತಾ ಹೆಜ್ಜೆ ಮುಂದೆ ಹಾಕಿದೆ ಮನಸ್ಸು ಬಲು ಭಾರವಾಗಿತ್ತು.
ಅದೇ ಹೆಜ್ಜೆಗಳು ಮುಂದುವರಿದು ಸಾರೋಟು ಅಶ್ವ ಸಾಲುನಿಂತ ಬೀದಿಯಲ್ಲಿ ಮುಂದೆ ಸಾಗಿತು. ಬೇರೆಯಾರಿಗಾದರೂ ತಾಕಿ ಮತ್ತೆ ಪಂಚಾಯಿತಿಯಾದಿತು ಎಂದು ಎಚ್ಚರಿಕೆಯಿಂದ ನಡೆಯುತ್ತಾ ಸಾಗಿದೆ. ಆದರೆ ಕಣ್ಣುಗಳು ಮಾತ್ರ ಕಡಲೂರ ಕನ್ಯೆಯ ಹುಡುಕುತ್ತಾ ಹೋದವು ಕಡೆಗೆ ಬಿಸಿಲು ಬೆಳದಿಂಗಳು ಬಂಗಲೆಯ ಮುಂದೆ ಬಂದು ನಿಂತೆ ಅದೇ ದ್ವಾರಪಾಲಕ ಏ ಯಾರು ನೀನು? ಎಂದ ನಾನು ತಡವರಿಸುತ್ತಾ ನಾನು ಕ....ಕ...ಕನಸು ಮಾರುವ ಸೇವಕ ಎಂದೆ ಓಹೋ ನಿನ್ನೆ ಕನ್ಯೆಗೆ ಕನಸು ನೀಡಿದವನು ನೀನೆಯೋ ಎಂದ? ಅಹುದು ಎಂಬಂತೆ ತಲೆಯಾಡಿಸಿದೆ. ಅವನ ಮಾತಿನಲ್ಲಿ ಕುಹಕವಿರುವುದು ನನಗೆ ತಿಳಿಯಿತು. ಅವನು ಇಂದೇನು ಕನಸು ತಂದಿರುವೆ ಅವಳಿಗೆ, ನಿತ್ಯ ನೂತನ, ಚಿರಯೌವ್ವನ,ಆತ್ಮ ಬಂಧನ, ಪ್ರೇಮ ಚುಂಬನ ಎಂದು ಗೇಲಿ ಮಾಡಿದ. ಅವು ಕನಸುಗಳಲ್ಲ ಅತಿ ಆಸೆಗಳು ಅಷ್ಟೇ ಎಂದೆ. ಅಷ್ಟರಲ್ಲಿ ಮನೆಯ ಮಾಳಿಗೆಯ ಉಪ್ಪರಿಕೆಯಿಂದ ಬೇಸರ ಹೊರಡಿಸಿದ ಫಾರ್ಮಾನು ಬಂತು ಏಯ್ ಅವನನ್ನು ಒಳಗೆ ಬಿಡು ಭೀತಿಗೊಂಡ ಪಾಲಕ ನನ್ನ ಒಳಗೆ ಬಿಟ್ಟುಕೊಟ್ಟು ಅವನ ಮುಖ ನೋಡಿದ ನಾನು ನಗಲಿಲ್ಲ. ಒಳಹೊಕ್ಕೆ ಉಪ್ಪರಿಕೆಯಿಂದ ಇಳಿದು ಬಂದ ಕನ್ಯೆ ಒಳಗೆ ಹೋದಾಗ ಕಡುಕಪ್ಪಾದರೂ ಸುಂದರವಾದ ನೋಡಿದರೆ ಸಾಕು ಮುದ್ದಾಡಬೇಕು ಎನಿಸುವಷ್ಟು ಆಸೆ ಹುಟ್ಟಿಸುವ ಕೂಸೊಂದು ತನ್ನ ತುಂಬ ದೇಹವ ಕುಣಿಸುತ್ತಾ ಕುಣಿತಕ್ಕಿಂತ ಜೋರಾಗಿ "ಗಿಲ್ಲನೆ" ನಗುತ್ತಾ ಮನೆಯ ತುಂಬಾ ಒಡಾಡುತ್ತಾ ಸ್ವಾತಂತ್ಯ್ರ ಸಿಕ್ಕ ಜಿಂಕೆಮರಿಯಂತೆ ಮುಕ್ತವಾಗಿ ಓಡಿ, ಓಡಿ ಮನೆಯ ತುಂಬೆಲ್ಲಾ ಕುಪ್ಪಳಿಸಿ ಗಿಲ್ಲನೆ ನಕ್ಕು ಚೀರಿ ಕೇಕೇ ಹಾಕುತ್ತಿತ್ತು ಅದು ಹಾಗೆ ತಪ್ಪು ಹೆಜ್ಜೆ ಹಾಕಿಕೊಂಡು ಕುಣಿಯುತ್ತಿದ್ದರೆ. ಅದರ ಕಾಲಿನ ಗೊಲಸು ಅದರ ನಗು ಕೇಕೇಯೊಂದಿಗೆ ಸ್ಪರ್ಧೆಗಿಳಿದಂತೆ ಸದ್ದು ಮಾಡುತ್ತಿತ್ತು ಅದನ್ನೆ ನೋಡಿ ಮೈಮರೆತು ನಿಂತೆ ನಾನು, ಆಕ್ಷಣ ತಲೆಯ ಮೇಲಿನ ಬುಟ್ಟಿಯ ಭಾರವೂ ಮರೆತುಹೋಯಿತು. ಅಷ್ಟರಲ್ಲಿ "ಬೇಸರ" ಉಪ್ಪರಿಕೆಯಿಂದ ಇಳಿದು ಬಂದು ಕನಸು ಮಾರುವ ನೀನು ಕೆಲವರಿಗೆ ನೀಡುವ ಕನಸಗಳೇ ಜೀವ ನೀಡಿದಂತೆ ಅಂತಹುದರಲ್ಲಿ ಬರುವುದೇ ತಡಮಾಡಿದರೆ ಎಂತೋ ಮಾರಾಯ ಎನ್ನುತ್ತಾ ತಲೆಮೇಲಿನ ಬುಟ್ಟಿಗೆ ಕೈ ಹಾಕಿದರು. ನಾನು ಮಗುವನ್ನು ನೋಡುತ್ತಿದ್ದೆ ಅದರಲ್ಲಿ ನೆಟ್ಟ ಕಣ್ಣು ತೆಗೆಯದೇ ನೋಡುತ್ತಿದ್ದೆ.
ಬುಟ್ಟಿಗೆ ಕೈ ಹಾಕಿದ ಕಡಲೂರ ಕನ್ಯೆ ಛೇ! ಎಂತಹುದು ಮಾರಾಯ ಇದು? ಇಂದು ಬರೀ ಕೆಟ್ಟ ಕನಸುಗಳೇ ತಂದಿದ್ದೀಯಾ, ಇವನ್ನೇ ಬೇಕು ಎಂದು ಆರಿಸಿ ತಂದಿಯೇನು ಎಂದರು? ನಾನು ಮೌನವಾಗಿದ್ದು ಮೆಲ್ಲನೆ ನುಡಿದೆ ಕನಸುಗಳನೆಂದೂ ನೋಡಿದವನಲ್ಲ ನಾನು, ಅವರು ನೀಡಿದ್ದು ಹೊತ್ತು ತಂದಿದ್ದೇನೆ. ನಿಮಗವು ಒಪ್ಪಿಗೆಯಾಗದಿದ್ದರೆ ಬಿಡಿ ನಾಳೆ ನಿಮ್ಮ ಕನಸುಗಳು ಸಿಗಬಹುದು ಹೊಸ ಸುಂದರ ಕನಸುಗಳ ನಿರೀಕ್ಷೆಯಲ್ಲಿರಿ ಭರವಸೆಗಳಿರಲಿ ಎಂದೆ ಮತ್ತೆ ಕಣ್ಣು ಮಗುವಿನತ್ತು ಹರಿಯಿತು.
ಆ ಮಗು ತನ್ನ ಕೈಯಲ್ಲಿದ್ದ ತಗಡಿನ ತುತ್ತೂರಿಯನ್ನು ನನ್ನತ್ತ ಎಸದೇ ಬಿಟ್ಟಿತು. ಆ ಕಡುಗಪ್ಪು ಕಂದ ಎಸೆದ ತುತ್ತೂರಿ ನೇರ ಬಂದು ನನ್ನ ಹಣೆಗೆ ತಾಗಿ ನೆತ್ತರು ಮುಖವನ್ನೆಲ್ಲಾ ವ್ಯಾಪಿಸಿತು, ತಕ್ಷಣ ಬಂದು ಕಡಲೂರ ಕನ್ಯೆ, ಸರಿ ಇದೊಂದು ಯಾವಾಗಲೂ ಹೀಗೆ ಅತಿ ಸಂತೋಷವಾದರೂ, ಅತಿದು:ಖವಾದರು ಹೀಗೆ ವ್ಯಕ್ತಪಡಿಸುತ್ತದೆ. ನೀನು ಏನು ಅನ್ಯತಹ: ಭಾವಿಸಬೇಡ ಎಂದವರು ಒಳಗೆ ಹೋಗಿ ಅರಿಶಿನ ತಂದು ಬಿಳಿಯ ಬಟ್ಟೆಯಲ್ಲಿ ಗಾಯಕ್ಕೆ ಕಟ್ಟಿದರು.
ಆ ನೋವಿನಲ್ಲೂ " ಈ ಮಗು ಯಾರದು? ಎಂದೆ ಹೋಲಿಕೆ ಅವರಂತೆ ಇರಲಿಲ್ಲವಾದ್ದರಿಂದ ಹಾಗೇ ಕೇಳಿದೆ, ಅದಕ್ಕೆ ಅವರು ಹೌದು ನನ್ನದಲ್ಲದಿದ್ದರೂ ನನ್ನದೆ ಈ ಊರಿಗೆ ಬಂದು ಮದುವೆ ಇಲ್ಲದೆ ಮಗುವಿನ ತಾಯಿಯಾದೆ, ಒದದಿದ್ದರೂ ವೈದ್ಯೆಯಾದೆ, ದಾರಿತಪ್ಪಿದವರಿಗೆ ಅಶ್ರಯವಾಗಿ ನಾನೇ ದಾರಿ ತಪ್ಪಿದ್ದೇನೆ. ಮನೆಯ ಮೂಲೆಯಲ್ಲಿ ಕುಳಿತಿದ್ದ ಆ ಹೆಂಗಸನ್ನೂ ನೋಡಿ ಅವರ‍್ಯಾರು ಅವರ ಹೆಸರೇನು ಎಂದೆ? ಅವರನ್ನೇ ಕೇಳು ಎಂದಾಗ ತಲೆಯ ಮೇಲಿನ ಬುಟ್ಟಿ ಸಮೇತ ಅವರ ಮುಂದೆ ನಿಂತು ನಿಮ್ಮ ಹೆಸರು ಎಂದೆ ನನ್ನ ಷರತ್ತುಗಳಿಗೆ ಒಪ್ಪಿದರೆ ಮಾತ್ರ ಹೆಸರು ಹೇಳುವೆ ಎಂದರು, ಅವರು ಷರತ್ತುಗಳನ್ನು ಹೇಳುತ್ತಾ ಹೋದರು ನಾನು ಅದಕ್ಕೆ ಒಪ್ಪಿಕೊಂಡು ಸರಿ, ಸರಿ ಎಂದೆ, ಏಕೆಂದರೆ ನನಗೆ ಅವುಗಳು ಷರತ್ತು ಅನ್ನಿಸಲೇ ಇಲ್ಲ ಬೆಳ್ಳಿ ತಟ್ಟೆಯಲ್ಲಿ ಉಣ್ಣ ಬೇಡ, ರಾಜನರ್ತಕಿ ಕರೆದರೂ ಅವಳ ಕೂಡಬೇಡ ನನ್ನಂತಹ ಸೇವಕನಿಗೆ ಅವ್ಯಾವೋ ಷರತ್ತಲ್ಲ ಎನಿಸಿ ಆಯಿತು ಎಂದೆ ಆಗ ಹೆಸರು ಹೇಳಿದರು ನಾನು"ಸುಂದರೀ ಚಿಕ್ಕಮ್ಮ" ಮಗು ಕೇಕೆ ಹಾಕಿ ನಕ್ಕಿತು ಕಡಲೂರ ಕನ್ಯೆ ಗದರಿದರು "ಏ ಗೆಜ್ಜೆ" ಒಳಗೆ ಬಾ ಎಂದು.
ಸರಿ ಆ ಮಗುವಿನ ಹೆಸರು ಗೆಜ್ಜೆ ಎಂಬುದು ತಿಳಿಯಿತು. ಅಲ್ಲಿಂದ ಹೊರಡಲು ಮುಂದಾಗಿ ಹೆಜ್ಜೆಯನ್ನು ದ್ವಾರದ ಕಡೆಗೆ ಹಾಕುತ್ತಿದ್ದರೂ ಸಹ, ಆ ಮಗುವಿನ ಹೆಸರು ಗೆಜ್ಜೆ ಎಂದೇ ಏಕೆ ಇಡಬೇಕು? ಗಂಟೆ ಎಂದಿಟ್ಟದ್ದರೆ ಚೆನ್ನಾಗಿರುತ್ತಿತ್ತು. ಎಂದು ಮನದಲ್ಲೇ ಯೋಚಿಸಿಕೊಂಡು ಜೋಪುಡಿಯ ದಾರಿ ಹಿಡಿದೆ. ಅನತಿ ದೂರದಲ್ಲಿ ಎದುರಾದ ತಲೆಗೆ ರುಮಾಲು ಸುತ್ತಿದ್ದ ಮೀಸೆ ಇಲ್ಲದ ಎತ್ತರದ ಫಕೀರನೊಬ್ಬ ಸುರೆ ಕುಡಿದ ಬುರುಡೆಯೊಂದಿಗೆ, ಎದುರಿಗೆ ಬಂದು,ಏ ನನಗೂ ಕನಸುಬೇಕು ಕೊಡುತ್ತಿಯ ಎಂದ ಬುಟ್ಟಿಯೊಳಗೆ ಕೈ ಹಾಕಿದ ಅದ್ಬುತ ಎಲ್ಲವು ಕೆಟ್ಟ ಕನಸುಗಳೇ ಇಷ್ಟು ನನಗೆ ಬೇಕು ಕ್ಷಮಿಸು ನನ್ನಲ್ಲಿ ಪ್ರತಿಫಲ ನೀಡಲು ಏನೂ ಇಲ್ಲ ಇರುವುದು ಸುರೆ ಬೇಕೆಂದರೆ ತಗೋ ಎಂದ ಬೇಡ ಎಂದು ಮುಂದೆ ನಡೆದೆ.
ಖಾಲಿ ಬುಟ್ಟಿಯೊಂದಿಗೆ ಹೋಗುವಾಗ ಪ್ರತಿಫಲ ದೊರೆಯದೆ ಹೋದದ್ದಕ್ಕೆ ಬೇಸರವಾಯಿತಾದರೂ ಮತ್ತೆ ಸಂತೋಷ ಕೆಟ್ಟ ಕನಸಿಗೆ ಯಾವ ಬೆಲೆ ಇದೆ ದು:ಖ ಒಂದೇ ಅದಕ್ಕೆ ಪ್ರತಿಫಲ ಎಂದು ನಿರ್ಧರಿಸಿ ಮುಂದೆ ಹೆಜ್ಜೆ ಹಾಕಿದೆ. ಮತ್ತೆ ಮಾರನೆಯ ದಿನ ಅದೇ ಬಂಗಲೆ, ಅದೇ ಬೇಸರದ ಹೆಸರಿನ ಕಡಲೂರಿನ ಕನ್ಯೆ, ಅದೇ ಗೆಜ್ಜೆ ಎಂಬ ಕಡುಗಪ್ಪು ಕೂಸು, ಅದೇ ರೋಗಿ, ಅದೇ ಸುಂದರೀ ಚಿಕ್ಕಮ್ಮ, ಕಡಲೂರ ಕನ್ಯೆ ಏನೋ ದುಗುಡದಿಂದ ಬಂದು ಬುಟ್ಟಿ ನೋಡಿದ ಕೂಡಲೇ ಇದ್ದ ಅಷ್ಟು ಕನಸುಗಳನ್ನು ಎತ್ತುಕೊಂಡರೇನೋ ಎಂಬಂತೆ ಭಾಸವಾಯಿತು. ಬುಟ್ಟಿ ಭಾರವೇ ಇಲ್ಲ ಸರಿ ನೀನು ಹೊರಡು ಎಂದರು.
ನಾನು ಹೊರಡಲು ಹೆಜ್ಜೆ ಎತ್ತಿಟ್ಟು ಹಾಗೆ ಅದೇ ರೋಗಿ ಬೈಯ್ದರು ಮುಂಡೇ ಮಗ ಕನಸು ಮಾರಿ ಸಿರಿವಂತನಾಗುವ ಆಸೆ ಇರಬೇಕು ಏನೂ ಪ್ರತಿಫಲ ನೀಡಬೇಡ ಅವನಿಗೆ ಎಂದರು.
ಆದರೆ ಬಾಗಿಲವರೆವಿಗೂ ಬಂದ ಕಡಲೂರ ಕನ್ಯೆ ಬೇಸರ, ನಮ್ಮ ಕಡಲೂರಿನಲ್ಲಿ ಹೀಗಿಲಲ್ ಮಾರಾಯ ಅಲ್ಲಿ ಕನ್ಯೆಯರ ಕನಸು ಯಾರು ಕದಿಯವುದಿಲ್ಲ ಅಲ್ಲಿ ಕನಸು ಮಾರುವವರೂ ಇಲ್ಲ, ಕೊಳ್ಳುವವರೂ ಇಲ್ಲ, ಇಲ್ಲಿ ಹೊರಗೆ ಹೋದರೆ ಕೊಲ್ಲುತ್ತಾರೆ ಎಂಬ ಭಯ, ಒಳಗಿದ್ದರೆ ಕನಸುಗಳಿಲ್ಲದೆ ಸಾಯುತ್ತೇವೆನೋ ಎಂಬ ಭೀತಿ, ಅದರೆ ನಿನ್ನಂತಹ ಮಾಂತ್ರಿಕ ಚಲುವ ತರುವ ಕನಸುಗಳೇ ಅದ್ಭುತ ನಾನು ನಿನಗೆ ಮಾರು ಹೋದೆ ಎಂದಾಗ ಎದೆ ನಡುಗಿತು. ಮೊನ್ನೆ ಜೋಪುಡಿಯಲ್ಲಿ ಫಕೀರ ನೀಡಿದ ಸುರೆ ಕುಡಿದು ಇವರ ಬಗ್ಗೆ ಚಿಂತಿಸಿದ್ದೆ ತಪ್ಪಾಯಿತೆ? ಎಂದು ಮನದಲ್ಲೇ ಪ್ರಶ್ನೆ ಹಾಕಿಕೊಂಡೆ ಅದು ಅವರಿಗೆ ಕೇಳಿಸಿತೆನೋ ಎಂಬಂತೆ ಸುರೆ ಕುಡಿದು ನನ್ನ ಬಗ್ಗೆ ಚಿಂತಿಸಿದ್ದು ತಪ್ಪಿಲ್ಲ ಬಿಡು ಎಂದರು ಗರಬಡಿದಂತೆ ನಿಂತುಬಿಟ್ಟೆ, ಅವರೇ ಮುಂದೆ ಬಂದು ನುಡಿದರು ನೀನು ಇನ್ನೂ ಕೂಸು ನಿನ್ನ ಚಿಕ್ಕ ಚಿಕ್ಕ ಆಸೆಗಳು ತಪ್ಪಲ್ಲ ಬಿಡು ಎಲ್ಲ ಆಗು-ಹೋಗುಗಳು ಅವರ ಮನೋಧರ್ಮ, ಚಿಂತನೆಯನ್ನು ಎತ್ತಿ ತೋರುತ್ತದೆ. ನೀನು ನನ್ನಲ್ಲಿ ನಿನ್ನ ತಾಯಿಯನ್ನು ಕಂಡಿದ್ದೀಯಾ, ಅದರಲ್ಲಿ ಅಪರಾಧವಿಲ್ಲ ನಾನು ನಿನಗಿಂತ ದೊಡ್ಡವಳು ನಿನ್ನ ಆಸೆಗಳನ್ನು ಅರಿಯಬಲ್ಲೆ ಎಲ್ಲಾ ವಿದ್ಯಾಮಾನಗಳನ್ನು ತಿಳಿಯಬಲ್ಲೆ ಆದರೆ ಕನಸುಗಳಿಲ್ಲದೆ ಬದುಕಲಾರೆ ಎಂದಾಗ ಅವರ ಕಾಲಿಗೆರಗಿದೆ ಕೆಲಹೊತ್ತು ಮೌನ ಅವರಿಸಿತು.
ಸರಿ ಬುಟ್ಟಿಯ ಕನಸುಗಳೆಲ್ಲಾ ನಾನೇ ಕೊಂಡಿರುವೆ ಅದು ಖಾಲಿ ಖಾಲಿ ಅದನ್ನು ಈಗ ಕೆಳಗಿಳಿಸು, ನಾನು ನಿನ್ನ ಮನಸ್ಸಿನ ಭಾಷೆಯನ್ನು ಅರಿತಿರುವೆ ನಿನ್ನ ಭಾವನೆಗೆ ತಕ್ಕಂತೆ ನೀನೇ ಕನಸುಗಳ ಹೊಸೆದು ಮಾರಬಾರದೇಕೆ? ಅದು ನಿನಗೆ ಬೇಕಾದ ಬೆಲೆಗೆ ಕೊಳ್ಳಲು ನಾನು ಸಿದ್ದ ಎಷ್ಟು ದಿನ ಈ ಫಕೀರನ ಜೋಪುಡಿಯಲ್ಲಿ ಪ್ರತಿಫಲ ದೊರೆಯದ ಕನಸುಗಳ ಮಾರುವೆ ಎಂದರು.
ನಾನು ತಕ್ಷಣ ಹಿಂತಿರುಗಿ ನುಡಿದೆ ನನಗೆ ಬೇಕಿರುವುದು ನನ್ನ ತಾಯಿಯನ್ನು ನೋಡಲು ಅವಕಾಶ ಅವರನ್ನು ಹುಡುಕುವುದೇ ನನ್ನ ಕಾಯಕ ಅಲ್ಲಿಯವರೆವಿಗೆ ಏನಾದರೂ ಸರಿ ಮಾಡುವೆ ಆದರೆ ಅದಕ್ಕೆ ಸೇತುವೆಯಂತಿರುವ ಫಕೀರ ತೋರಿದ ದಾರಿ ಬಿಟ್ಟು ಬೇರೆಡೆಗೆ ನಡೆದು ನಶ್ವರ ಜಗತ್ತಿಗೆ ಮಾರುಹೋಗುವ ಅದರಿಂದ ನೋವು ನೋಡುವ ಕಾಯಕ ನನಗೆ ಬೇಡವೇ ಬೇಡ ಅಂದೆ ಒಹೋ ಮಾತೆಗೆ ನಿನೇನಾಗಬೇಕು? ಎಂದರು ನಾನು ಆಕೆಯ ಮಗ ಎಂದೆ. ಕೂಡಲೇ ನನ್ನ ಅಪ್ಪಿ ಮುದ್ದಾಡಿದರು ನನ್ನ ಅಯ್ಯೋ ನಾನು ಮಾತೆಯ ಮಗನೇ ಇಷ್ಟು ದಿನ ನನಗೆ ಎಂಥೆಂಥ ಕನಸು ನೀಡಿದವನು. ನಾನು ಮಾತೆಯನ್ನು ಬಲು ಬಲ್ಲೆ ಆಕೆಯೂ ಕಡಲೂರಿನ ಪುತ್ರಿ ಈ ಊರಿನ ಸೊಸೆ, ಕಡಲೂರಿನಲ್ಲೂ ಆಕೆಗೆ ಬಲುಗೌರವ ಅದಕ್ಕಿಂತ ಹೆಚ್ಚು ಇಲ್ಲಿ ಇಲ್ಲ ಎಂದು ಬೇಸರದಿ ನುಡಿದರು.
ನಾನು ಅವರಿಗೆ ತೀರ ಹತ್ತಿರದವನಾದೆ, ಆದರೆ ನನ್ನಲ್ಲಿ ಅದು ಕೊಂಚ ಇರಿಸು ಮುರಿಸಿಗೆ ಕಾರಣವಾಯಿತು. ಅವರು ನನ್ನನ್ನು ಸೇವಕನಂತೆಯೇ ಕಂಡಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂಬ ಆಲೋಚನೆ, ಅವರಿಗಾಗಿ ಕನಸ ಹೊತ್ತು ಹೋಗುವುದು ಪ್ರತಿನಿತ್ಯ ಮುಂದುವರಿಯಿತಾದರೂ ನಾನು ಕನಸನ್ನು ಕಣ್ಣಿನಿಂದ ಕೂಡ ನೋಡಲೇ ಇಲ್ಲ , ಸುಂದರೀ ಚಿಕ್ಕಮ್ಮ, ಗೆಜ್ಜೆ, ರೋಗಿ ಇವರು ಯಾರು ಕನಸುಗಳ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ, ಅದೇ ರೋಗಿಯ ಬೈಗುಳ, ಚಿಕ್ಕಮ್ಮನ ನಗೆ, ಗೆಜ್ಜೆಯ ಗಿಲ್ಲನೆ ನಗು ಕೈಯಲ್ಲಿರುವ ತುತ್ತೂರಿ ಎಸೆಯವುದು ಕಂಡು ಅಲ್ಲಿಮದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದೆ.
ಕಾಲ ಕಳೆದಂತೆ ಕನಸು ಮಾರುವ ಕಾಯುಕ ಬೇಸರವಾಯಿತು. ಬೇರೆ ವೃತ್ತಿ ಅರಿಯದ ನಾನು ಸುಮ್ಮನೆ ಅದನ್ನೇ ಮಾಡುತ್ತಿದ್ದೆ. ನಾನು ಪ್ರೌಢಾವಸ್ಧೆಗೆ ಬರುತ್ತಿದ್ದ ಕಾರಣ ಚಿಗುರು ಮೀಸೆ ಮೂಡತೊಡಗಿದವು ಅಪರೂಪಕ್ಕೆ ಸಮಯ ಮಾಡಿಕೊಂಡು ಕಡಲೂರ ಕನ್ಯೆ ಭೇಟಿಯಾಗ ತೊಡಗಿದೆ. ಅವರ ಮುಖದಲ್ಲೀಗ ಗಾಂಭೀರ್ಯ ಮಾಯವಾಗಿ ಸಲೀಸಾಗಿ ನಕ್ಕು ಮನಬಿಚ್ಚಿ ಮಾತನಾಡಲು ಪ್ರಾರಂಭಿಸಿದರು. ನನ್ನ ಕನಸಿನ ಪ್ರಭಾವ ಅದು ಎಂದು ಆಗಾಗ ಹೇಳುತ್ತಿದ್ದರು.
ಆದೇಕೆ ಮಾತೆಯ ನೆನಪು ಅತಿಯಾಗಿ ಕಾಡಲಾರಂಭಿಸಿತು. ಒಂದು ದಿನ ಸಂಜೆ ಜೋಪಡಿಗೆ ಹಿಂತಿರುಗಿದವನು ರಾತ್ರಿ ಜೋಪುಡಿಯಲ್ಲಿದ್ದ ದೀಪದಲ್ಲಿ ಕಣ್ಣನ್ನೀರಿಸಿ ನೋಡುತ್ತಾ ಕುಳಿತೆ ಮಾತೆ ದೀಪದಿಂದ ಇಳಿದು ಬಂದಂತೆ ಭಾಸವಾಯಿತು. ಸಲ್ಪ ಹೊತ್ತು ನಿಂತ ಆಕೆಯನ್ನು ಕಂಡು ಹರ್ಷದಿಂದ ಆನಂದ ಭಾಷ್ಪ ಸುರಿಸಲಾರಂಭಿಸಿದೆ. ನನ್ನ ಮರೆತು ಹೋಗಿದ್ದೀಯಾ ನೀನು ಎಂಬಂತೆ ನನ್ನಡೆಗೆ ನೋಡಿದಳು ಮಾತೆ ಇಲ್ಲ ನಿನ್ನ ಬಂದು ಸೇರುವ ಗುರಿಯ ಹೊತ್ತ ನಾನು ಅಲ್ಲಿಯವರೆವಿಗೂ ಕಾಲ್ಪನಿಕ ಕಾಯಕದಲ್ಲಿ ತೊಡಗಿದ್ದೆ ಜೋಪುಡಿ ಸೇರಿ ನಿನ್ನಡೆ ನಡೆಯುವ ತ್ರಾಣ ಪಡೆದು ಬಂದೆ.
ಸರಿ ಇನ್ನಾದರೂ ನನ್ನೊಂದಿಗೆ ಬರಲು ಸಿದ್ದವಿದ್ದೀಯಾ ನೀನು ಎಂದು ಕೇಳಿದಳು ಮಾತೆ, ಇಲ್ಲ ಎನ್ನುವ ಮಾತೆ ಇಲ್ಲ ಸಿದ್ದ ನಡಿಯೆಂದೆ . ಅವಳು ಹೊರಟಳು ನಾನು ಅವಳನ್ನೇ ಹಿಂಬಾಲಿಸಿದೆ. ಅದೊಂದು ಬಂಗಲೆ ಸೇರಿದೆವು, ಆದರೆ ಬೆಳಿಗ್ಗೆ ಎದ್ದು ನೋಡಿದರೆ ಬಿಸಿಲು ಬೆಳದಿಂಗಳ ಮುಂದಿನ ಬಂಗಲೆಯಲ್ಲಿ ನಾನಿದ್ದೆ ಮಾತೆಯನ್ನು ಕೇಳಿದೆ ಆ ಮನೆಗೆ ಬಂದು ಹೋಗುತ್ತಿದ್ದ ನನ್ನ ಗುರುತಿಸಲಿಲ್ಲವೇ ನೀನು ಎಂದಾಗ, ಈ ಮನೆಗೆ ಬರುವವರು ದುಷ್ಟ ಜನವಾದ್ದರಿಂದ ನೀನು ತರುವ ಕನಸುಗಳ ಕೊಂದು ಸಂತಸಿಸುವವರೆಂದೂ ತಿಳಿದು ನಾನು ನಿನ್ನ ಕರೆಯಲಿಲ್ಲ ಹಿಂಬಾಲಿಸಿ ಬಂದು ಜೋಪುಡಿಯಿಂದಿ ಬರಿಗೈಲಿ ಕರೆತಂದೆ ನೋಡು ಎಂದಳು.
ಆಕೆ ನಕ್ಕರು ನನಗೆ ನಗು ಬರಲಿಲ್ಲ, ಅಷ್ಟು ಆಡಂಬರದಿಂದ ಆಕೆ ನಕ್ಕಳು ಯಾವುದೋ ನೋವು ನುಂಗಿದಂತೆ ಯಾವುದೋ ಪ್ರಳಯವನ್ನು ಎದುರು ನೋಡುತ್ತಿರುವಂತೆ ಭೀತಿ ಕಣ್ಣಿನಲ್ಲಿತ್ತು ಅಷ್ಟರಲ್ಲಿ ಅದ್ಯರೋ ಮನೆಯೊಳಗೆ ಬಂದಂತಾಯಿತು. ನನ್ನ ಬಾಗಿಲ ಹಿಂದೆ ಬಚ್ಚಿಟ್ಟು ಕೊಳ್ಳುವಂತೆ ಹೇಳಿ ಆಕೆ ಹೊರ ಹೋದಳು ಬಾಗಿಲು ಸಂದಿನಿಂದ ಇಣುಕಿ ನೋಡಿದೆ ನಾನು ಅವನೇ ಕೆಟ್ಟ ಕನಸುಗಳನ್ನು ಕೊಂಡ ಫಕೀರ ಬಂದು ಗೋಡೆಯೊರಗಿ ಕುಳಿತು ಧೂಮಲೀಲೆಯಲ್ಲಿ ತೊಡಗಿದ್ದ ಎದುರಿಗೆ ನಿಂತ ಮಾತೆಯನ್ನು ಬಾಯಿಗೆ ಬಂದಂತೆ ನಿಂದಿಸಿ ತೊಡಗಿದ ನಾನು ಅವನ ಅವಾಚ್ಯ ಶಬ್ದಗಳ ಸಹಿಸಲಾಗೆ ನುಗ್ಗಿ ಕೊಲ್ಲುವ ಆಕ್ರೋಶ ತಡೆದು ತಾಯಿಯ ಅಣತಿ ಪಾಲಿಸುತ್ತಿದ್ದೆ. ಅವನೇ ಎದ್ದು ಬಂದು ಬಾಗಿಲು ಹಿಂದೆ ಬಗ್ಗಿ ನೀಡಿ ಯಾರದು ಎಂದವನೇ ನನ್ನ ಮುಖದ ಮೇಲೆ ಅವನ ಹೊಗೆ ಬತ್ತಿ ಚಿಲುಮೆ ಎಸೆದ ತಕ್ಷಣವೇ ಎಚ್ಚರವಾಯಿತು ಫಕೀರಪ್ಪ ಗಂಜಿ ಕುಡಿಯಲು ಏಳಿಸಿದ. ಇದೇನು ಮುಸ್ಸಂಜೆಗೆ ಮಲಗಿ ಆಗಲೇ ಸ್ಪಪ್ನವೇ ಬೆಚ್ಚುತ್ತಿದ್ದೀಯ ಏನು ಪ್ರೇಮ ಸ್ಪಪ್ನವೋ ಎಷ್ಟು ಬಾರಿ ನಾನು ಹೇಳಿಲ್ಲ ನಿನಗೆ, ಕನಸು ಮಾರುವವರು ಕನಸು ಕಾಣಬಾರದು ಎಂದು ಗದರಿದ ಧ್ವನಿಯಲ್ಲಿ ಹೇಳಿದ. ನಾನು ಸತ್ಯದ ಮರೆಮಾಚುವ ರೀತಿಯಲ್ಲಿ ಇಲ್ಲ ಇಲ್ಲ ಎಂದು ಎದ್ದು ಕುಳಿತೆ ನೀಡಿದ ಗಂಜಿ ಹೀರಿದ ಮೇಲೆ ಸ್ಪಲ್ಪ ಹೊತ್ತು ಜೋಪುಡಿ ಮುಂದೆ ಸುತ್ತಾಡಿ ಬಂದರೂ ಹಗಲುಗಸಿನಲ್ಲಿ ಬಂದ ಮಾತೆಯ ನೆನೆದು ಅತ್ತೆ ಅವಳೇನೋ ತೊಂದರೆಯಲ್ಲಿದ್ದಾಳೆ ಎಂದು ತಿಳಿದು ಮನಸ್ಸಿನಲ್ಲೆ ನೊಂದೆ ಫಕೀರ ಕೂಡ ಇದನ್ನು ಅರಿತಂತೆ ಮೌನವಾಗಿ ಏನೋ ಆಲೋಚಿಸುತ್ತಿದ್ದ.
ಮುಗಿಯಿತು.
No comments:
Post a Comment