ನವವಸಂತದ ಗಾಳಿಬೀಸಲು
ಬೇವು,ಬೆಲ್ಲ ತಿಂದು ಮನುಜನ ಜೀವನದಲ್ಲಿ ಕಷ್ಟ-ಸುಖಗಳು ಸಮನಾಗಿರಲಿ ಎಂದು ಹಾರೈಸುತ್ತಾ. ಈ ಯುಗಾದಿಯ ಕನ್ನಡನಾಡಿನ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುವ.
ಮೊನ್ನೆಯಷ್ಟೆ ಮಳೆ ಬಿದ್ದಿದೆ. ಈ ಮಳೆಗೆ ಬಾಯಾರಿ ಕಾದಿದ್ದ ಭೂಮಿ ತನ್ನೊಡಲಿಗಿನ ಧಗೆಯನ್ನು ಹೊರಹಾಕಿದೆ. ಆದರೆ ಈ ಯುಗಾದಿಯ ಮೊದಲ ಮಳೆಗೆ ಮಣ್ಣು ಪಸರಿಸುವ ಸುವಾಸನೆಗೆ ಪ್ರಕೃತಿಯ ಎಲ್ಲಾ ಜೀವಜಂತುಗಳಿಗೆ ನವಚೈತ್ಯನ ತುಂಬಿ ಬಂದಿದೆ. ಮತ್ತೊಮ್ಮೆ ಕಾಲಚಕ್ರ ಉರುಳಿ ಮತ್ತೊಂದು ಚೈತ್ರದ ಆಗಮನವಾಗಿದೆ. ಫಾಲ್ಗುಣದಲ್ಲಿ ಕುಳಿರಗಾಳಿಗೆ ಮರಗಳ ಎಲೆಗಳಲ್ಲೇ ಉದುರಿ ಮರಗಳಲ್ಲೇ ಚಿಗುರಿ ನವವಸಂತವನ್ನು ಆಹ್ವಾನಿಸಿವೆ. ಮರಗಳು ತಮ್ಮ ಚೆಲುವನ್ನು ಮೇಳೈಸಿಕೊಳ್ಳುತ್ತಿವೆ. ಹಸಿರು ಚಿಗುರೊಡೆದು ಮರದಲ್ಲಿರುವ ಹಕ್ಕಿಗೊಡುಗಳಲ್ಲಿ ತನ್ನ ಮರಿಗಳು ನವಚೇತನದಿಂದ ಹೊಸಕಂಪನ್ನು ಆಹ್ವಾದಿಸುತ್ತಾ ಹೊಸಚಿಗುರು ಚಿಗುರುವುದನ್ನು ಕಣ್ಣಲ್ಲಿ ತುಂಬಿ ಆನಂದಿಸುತ್ತಿವೆ.
ಯುಗಾದಿ ಎಂದರೆ ಪ್ರಕೃತಿಯ ಹೊಸತನ,ನವವಸಂತದ ಗಾಳಿಬೀಸಲು ಚಿಗುರು ಮಾವಿನ ಮತ್ತು ಹೊಂಗೆಯ ಘಮ್ಮನೆಯ ಸುವಾಸನೆ ತಂಗಾಳಿ ಎಂಥ ಗಿಡಮರವಾದರೂ ಸರಿ ಚೆಲುವಿನಿಂದ ಕಂಗೊಳಿಸುತ್ತ ನಿಲ್ಲುತ್ತದೆ. ಪ್ರಕೃತಿಯಲ್ಲಿ ಕೋಗಿಲೆಯ ವಸಂತಗಾನಕ್ಕೆ ಇಡೀ ಭೂರಮೆ ರಾಗದ ಭಾವೋತ್ಕರ್ಷವನ್ನು ಹರಡುತ್ತಾಳೆ ಈ ಪ್ರಕೃತಿಯ ರಾಗದ ಚಿಲುಮೆಗೆ ಎಲ್ಲರೂ ತಲೆಬಾಗಲೆ ಬೇಕು.ಯುಗಾದಿಯ ಮೊದಲ ಮಳೆಗೆ ಈ ಪ್ರಕೃತಿಯನ್ನೇ ಬದಲಾವಣೆ ಮಾಡುವ ಪ್ರಕ್ರಿಯೆ ಮಾತ್ರ ಈ ಭೂಮಿಗೆ ಉಂಟು ಆದರೆ ಮನುಷ್ಯ ಎಷ್ಟೇ ಪ್ರಯತ್ನಿಸಿದರೂ ಪ್ರಕೃತಿಯ ಮುಂದೆ ತಾನು ಕುಬ್ಜನಾಗುತ್ತಾನೆ. ಪ್ರಕೃತಿಯು ತನ್ನ ಪಾಲಿನ ಕೊಡುಗೆಯನ್ನು ತಾನು ನೀಡುತ್ತಲೆ ಬಂದಿದೆ. ಪ್ರಕೃತಿಯು ಪ್ರತಿಯೊಂದು ಹಂತದಲ್ಲಿ ಮನುಷ್ಯನ ಭಾವನೆಗಳಿಗೆ ರೋಮಾಂಚನವನ್ನು ನೀಡುತ್ತಾ ಬಂದಿದೆ. ಪ್ರಕೃತಿಯನ್ನು ಆರಾಧಿಸುವ ಕವಿಗಳಿಗೆ, ಬರಹಗಾರರಿಗೆ ಈ ಪ್ರಕೃತಿಯೇ ಸ್ಪೂರ್ತಿಯಾಗಿದೆ ನಿಂತಿದೆ. ಹಾಗೆಯೇ ವರ್ಷ,ವರ್ಷವೂ ಬಂದಂತೆ ಯುಗಾದಿ ಮತ್ತೊಮ್ಮೆ ಬಂದಿದೆ.
ವರ್ಷ,ವರ್ಷವೂ ಪ್ರಕೃತಿಯ ಹೊಸತಾಗುವ ಗುಣವನ್ನು ಹೊಂದಿದೆ. ಈ ನಿಸರ್ಗದ ಮುಂದೆ ಮನುಷ್ಯನ ತನ್ನ ಆಯಸ್ಸು ದಿನದಿಂದ ದಿನಕ್ಕೆ ಸವೆದು ಹೋಗುತ್ತಿದೆ. ಬಾಲ್ಯದಿಂದ, ಯೌವ್ವನ, ಯೌವ್ವನದಿಂದ, ಮಧ್ಯವಯಸ್ಸು ಅಲ್ಲಿಂದ ವೃದ್ದಾಪ್ಯಕ್ಕೆ ಪ್ರಯಾಣ ಮಾಡುತ್ತಿದ್ದೇವೆ. ಆದರೆ ಪ್ರಕೃತಿ ಪ್ರತಿ ವರ್ಷ ತನ್ನ ಹಳೆಯದನ್ನು ಕಳಚಿಕೊಂಡು ಹೊಸತನವನ್ನು ತೊಟ್ಟಕೊಂಡು ನವನವೀನವಾಗಿ ಇಡೀ ಭೂಮಿಯನ್ನು ಸಿಂಗರಿಸುತ್ತದೆ. ಇದೇ ಮನುಷ್ಯನ ಕೊರಗನ್ನು ಬೇಂದ್ರೆಯವರ ಯುಗಾದಿ ಕವನ ಭಿನ್ನವಾದ ನಿಲುವುಗಳನ್ನು ಹೇಳುತ್ತಾ ಮನುಷ್ಯನ ದು:ಖವನ್ನು ಪ್ರಕಟಿಸುತ್ತದೆ.
ಯುಗ ಯುಗಾದಿ ಕಳೆದರರೂ
ಯುಗಾದಿ ಮರಳಿ ಬರುತಿದೆ
ಹೊಸವರುಷಕೆ ಹೊಸ ಹರುಷವ
ಹೊಸತು,ಹೊಸತು ತರುತಿದೆ
ಹೊಂಗೆ ಹೊವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.
ಮತ್ತೊಂದು ಜಿ.ಎಸ್.ಶಿವರುದ್ರಪ್ಪನವರ ಯುಗಾದಿ ಪ್ರಶ್ನೆಗಳು ಕವಿತೆ ಇಲ್ಲಿ ಪ್ರಸ್ತುತವೆನಿಸುತ್ತದೆ.ಯುಗಾದಿ ಮರಳಿ ಬರುತಿದೆ
ಹೊಸವರುಷಕೆ ಹೊಸ ಹರುಷವ
ಹೊಸತು,ಹೊಸತು ತರುತಿದೆ
ಹೊಂಗೆ ಹೊವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.
ಆರವತ್ತು ಸಂವತ್ಸರದ ಈ ಚಕ್ರ
ತಿರುಗುತ್ತಲೇ ಇರುವಾಗ
ಇದರಲ್ಲಿ ಯಾವುದು ಮೊದಲು
ಯಾವುದು ತುದಿ? ಹೆಸರಿಗೆ ಮಾತ್ರ
ಯುಗಾದಿ ಯುಗಾದಿ ಅನ್ನುತ್ತೀವೆಲ್ಲ
ಇವತ್ತು ಯಾವ ಯುಗದ ಆದಿ
ಅಥವಾ ಯಾವ ಯುಗದ ಅಂತ್ಯ?
ತಿರುಗುತ್ತಲೇ ಇರುವಾಗ
ಇದರಲ್ಲಿ ಯಾವುದು ಮೊದಲು
ಯಾವುದು ತುದಿ? ಹೆಸರಿಗೆ ಮಾತ್ರ
ಯುಗಾದಿ ಯುಗಾದಿ ಅನ್ನುತ್ತೀವೆಲ್ಲ
ಇವತ್ತು ಯಾವ ಯುಗದ ಆದಿ
ಅಥವಾ ಯಾವ ಯುಗದ ಅಂತ್ಯ?
ಬೇವು,ಬೆಲ್ಲ ತಿಂದು ಮನುಜನ ಜೀವನದಲ್ಲಿ ಕಷ್ಟ-ಸುಖಗಳು ಸಮನಾಗಿರಲಿ ಎಂದು ಹಾರೈಸುತ್ತಾ. ಈ ಯುಗಾದಿಯ ಕನ್ನಡನಾಡಿನ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುವ.
No comments:
Post a Comment