ಶಾಶ್ವತವಲ್ಲ
ನಾನು ನೀನು ಒಂದೊಂದೇ ಹೆಜ್ಜೆ
ಇಡುತ್ತ ನಡೆದವು ಆ ಸಮುದ್ರ ದಂಡೆಯಲ್ಲಿ?
ಪಶ್ಚಿಮದಲ್ಲಿ ಸೂರ್ಯ ವಿರಮಿಸುತ್ತಾ ಇದ್ದಾನೆ
ತನ್ನ ಪಾಡಿಗೆ ತಾನು.
ನೀನು ಅಂದು ಹೇಳಿದ ಮಾತು
ಅದೋ ಅಲ್ಲಿ ನೋಡು ಕಾಣುತ್ತಿವೆ
ನಮ್ಮಿಬ್ಬರ ಜೋಡಿ ಹೆಜ್ಜೆಗಳು
ಉಸುಕಿನಲ್ಲಿ ಎದ್ದು ಕಾಣುತ್ತವೆ ಎಂದು
ಅವನೆಂದ ಅವು ಶಾಶ್ವತವಲ್ಲ
ಇನ್ನೊಂದು ಕ್ಷಣದಲ್ಲಿ ಆ ಹೆಜ್ಜೆಗಳು ಅಲ್ಲಿರುವುದಿಲ್ಲ
ದೊಡ್ಡ ಅಲೆ ಬಂದು ಅವುಗಳನ್ನು ಅಳಿಸಿ ಹಾಕುತ್ತವಲ್ಲ
ಇಲ್ಲಿ ಯಾವುದು ಶಾಶ್ವತವಲ್ಲ?
ಇಡುತ್ತ ನಡೆದವು ಆ ಸಮುದ್ರ ದಂಡೆಯಲ್ಲಿ?
ಪಶ್ಚಿಮದಲ್ಲಿ ಸೂರ್ಯ ವಿರಮಿಸುತ್ತಾ ಇದ್ದಾನೆ
ತನ್ನ ಪಾಡಿಗೆ ತಾನು.
ನೀನು ಅಂದು ಹೇಳಿದ ಮಾತು
ಅದೋ ಅಲ್ಲಿ ನೋಡು ಕಾಣುತ್ತಿವೆ
ನಮ್ಮಿಬ್ಬರ ಜೋಡಿ ಹೆಜ್ಜೆಗಳು
ಉಸುಕಿನಲ್ಲಿ ಎದ್ದು ಕಾಣುತ್ತವೆ ಎಂದು
ಅವನೆಂದ ಅವು ಶಾಶ್ವತವಲ್ಲ
ಇನ್ನೊಂದು ಕ್ಷಣದಲ್ಲಿ ಆ ಹೆಜ್ಜೆಗಳು ಅಲ್ಲಿರುವುದಿಲ್ಲ
ದೊಡ್ಡ ಅಲೆ ಬಂದು ಅವುಗಳನ್ನು ಅಳಿಸಿ ಹಾಕುತ್ತವಲ್ಲ
ಇಲ್ಲಿ ಯಾವುದು ಶಾಶ್ವತವಲ್ಲ?
ಚಂದ ಕವಿತೆ.......ಹೆಜ್ಜೆಗುರುತು ಅಳಿಸಿಹೋದರೇನು......ಹೆಜ್ಜೆಗಳು ಮುಂದೆ ಸಾಗಿ ಒಂದಾಗಲಿ....ಜೀವ ಶಾಶ್ವತವಲ್ಲ....ಪ್ರೀತಿ ಶಾಶ್ವತ
ReplyDelete