Popular Posts

Thursday, September 29, 2011

ಸ್ವಾರ್ಥ, ನಿಸ್ವಾರ್ಥ ಮನಸ್ಸುಗಳ ಅನಾವರಣ.

ಸ್ವಾರ್ಥ, ನಿಸ್ವಾರ್ಥ ಮನಸ್ಸುಗಳ ಅನಾವರಣ.
    ಇತ್ತೀಚಿಗೆ ದೈನಂದಿನ ಧಾರವಾಹಿಗಳಲ್ಲಿ ಈ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿರುವ ಅನಾವರಣ ಧಾರವಾಹಿಯನ್ನು ಕಳೆದು ಹದಿನೈದು ವಾರಗಳಿಂದ ಪ್ರಸಾರವಾಗುತ್ತಿದ್ದು  ಈ ಧಾರವಾಹಿಗಿಂತ ಹಿಂದೆ ಸೇತುರಾಮ್ ನಿರ್ದೇಶನದ ಮಂಥನ ಧಾರವಾಹಿಯು ಸಹ ಒಂದು ಸಾಮಾಜಿಕ ಕಳಕಳಿಯಳ್ಳು ಹಾಗೂ ಮಧ್ಯಮವರ್ಗದ ಕುಟುಂಬದ ತಳುಮಳಗಳನ್ನು ಕಟ್ಟಿಕೊಟ್ಟಿದ ಸೇತುರಾಮ್ ಧಾರವಾಹಿ ಇದ್ದಕ್ಕಿದ್ದಂತೆ ಈಟಿವಿಯಿಂದ ಕಾಣೆಯಾಗಿತ್ತು.ಯಾಕೋ ಗೊತ್ತಿಲ್ಲ. ಆದರೆ ಇತ್ತೀಚಿಗೆ ಪ್ರಸಾರವಾಗುತ್ತಿರುವ ಅನಾವರಣ ಧಾರವಾಹಿ ಮಧ್ಯಮವರ್ಗದಲ್ಲಿ ಬದುಕಿದ ಒಂದು ಸಂಸಾರದಲ್ಲಿ ನಡೆಯುವ ಭಾವನೆಗಳ ಘರ್ಷಣೆ, ಸ್ವಾರ್ಥ, ನಿಸ್ವಾರ್ಥ ಮನಸ್ಸುಗಳ ದ್ವಂದ್ವವನ್ನು ಹೊರಹಾಕುತ್ತ ಇರುವುದರಿಂದ ಈ ಧಾರವಾಹಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಈ ಧಾರವಾಹಿಯಲ್ಲಿ ಬರುವ ಪಾತ್ರಗಳ  ಅಂತರ್ಯಕ್ಕೆ ಇಳಿದು ನಟನೆ ಮಾಡುತ್ತಿರುವುದರಿಂದ  ಈ ಧಾರವಾಹಿಯಲ್ಲಿ ನಟಿಸಿರುವ ಎಲ್ಲಾ ಪಾತ್ರಧಾರಿಗಳು  ಪ್ರೇಕ್ಷಕರನ್ನು ಹಿಡಿಟ್ಟಿರುವುದರಲ್ಲಿ ಸಂಶಯವೇ ಇಲ್ಲ.
    ಈ ಧಾರವಾಹಿಯ ನಿರ್ದೇಶಕರು ಇತ್ತೀಚಿನ ದಿನಗಳಲ್ಲಿ ಇಂತಹ ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡಾಗ ಎಂತಹ ಪ್ರೇಕ್ಷಕರಿಗೆ ಇಂತಹ ಧಾರವಾಹಿಗಳು ತಲುಪತ್ತವೇ ಎಂಬ ಸಂಶಯವು ಸಹ ಮೂಡುತ್ತದೆ. ಆದರೆ ಇಂತಹ ಪ್ರಯತ್ನವನ್ನು ನಿರ್ದೇಶಕರು ಮಾಡಿರುವುದು ಒಂದು ಒಳ್ಳೆಯ ಪ್ರಯತ್ನ ಇಂದಿನ ದಿನಗಳ ಪರಿಸ್ಧಿತಿಗೆ ಅವಶ್ಯಕವೆನ್ನಿಸುವ ಹಾಗೆ ಈ ಧಾರವಾಹಿಯಲ್ಲಿ ಬರುವ ಪಾತ್ರಗಳು ನಮ್ಮ ಸುತ್ತಮುತ್ತ ಇರುವ ಸಮಾಜದಲ್ಲಿ ನಡೆಯುತ್ತಿರುವ ದೈನಂದಿಕ ಬದುಕಿನ ವಾಸ್ತವ ಸತ್ಯವನ್ನು ತೆರೆದಿಡುತ್ತಿದೆ. ಈ ಧಾರವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ತಮ್ಮದೇ ಅದಂತಹ ನಿರ್ದಿಷ್ಟವಾದ ಚೌಕಟ್ಟುನ್ನು ನಿರ್ಮಿಸಿ ಪಾತ್ರಗಳನ್ನು ಪೋಷಿಸಿರುವುದು ಈ ಧಾರವಾಹಿ ಮತ್ತೊಂದು ಗಮನ ಸೆಳೆಯುವ ಅಂಶ ಹಾಗೂ ಈ ಧಾರವಾಹಿಯ ಸಂಭಾಷಣೆಯು ಇವತ್ತಿನ ಪ್ರಸ್ತುತತೆಗೆ ವಾಸ್ತವತೆಗೆ ಹತ್ತಿರವಾಗಿರುವುದರಿಂದ ಒಂದು ವರ್ಗದ ಪ್ರೇಕ್ಷಕರನ್ನು ಸೆಳೆದಿಡುವಲ್ಲಿ ಈ ಧಾರವಾಹಿ ಯಶಸ್ವಿಯಾಗಿ ಹಾಗೂ ನಿರ್ದೇಶನದಲ್ಲಿ ಧಾರವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ತಮ್ಮದೇ ಆದ ಛಾಪನ್ನು ಒತ್ತಿಸಿ ಧಾರವಾಹಿಯ ಯಶಸ್ವಿಗೊಳಿಸಿದ್ದಾರೆ ನಿರ್ದೇಶಕರು. ಈ ಧಾರವಾಹಿಯಲ್ಲಿ ಅಪ್ಪ, ಮಗನ ಸಂಬಂಧ, ತಾಯಿ ಅಥವಾ ಮಗಳ ಸಂಬಂಧಗಳ ನಡುವೆ ಆಗುವ ತಲ್ಲಣಗಳನ್ನು ನೈಜತೆಯಿಂದ ಹೇಳುವುದಕ್ಕೆ ಹೊರಟಿರುವುದು ಈ ಧಾರವಾಹಿಯ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ತಾಯಿ ಮತ್ತು ತಂದೆ ತನ್ನ ಮಕ್ಕಳನ್ನು ಅರ್ಥ ಮಾಡಿಕೊಂಡಿರುವ ರೀತಿ ಇವತ್ತಿನ ರಾಜಕೀಯ ವ್ಯವಸ್ಧೆಯಲ್ಲಿ ಉನ್ನತ ಹುದ್ದೆಯಲ್ಲಿ ನಡೆಯುತ್ತಿರುವ  ಭ್ರಷ್ಟಚಾರದ ಒಳ ಆಳವನ್ನು ಹಾಗೂ ನೈತಿಕತೆ ಹಾಗೂ  ಕ್ರೌರ್ಯದ ನಡುವೆ ನಡೆಯುವ ಹೋರಾಟ ಇವತ್ತಿನ ಜಾಗತೀಕರಣದಿಂದ ಬದುಕ ಮತ್ತು ಬಾಂಧವ್ಯಗಳು ಹೇಗೆ ದುಸ್ತರವಾಗುತ್ತಿದೆ ಎಂಬ ಅಂಶವನ್ನು ಈ ಧಾರವಾಹಿಯಲ್ಲಿ ಕಾಣಬಹುದು. ಈ ಧಾರವಾಹಿಯನ್ನು ವೀಕ್ಷಣೆ ಮಾಡುತ್ತಿದ್ದಾಗ ಖಲೀಲ್ ಗಿಬ್ರಾನ್ ಮಕ್ಕಳ ಬಗ್ಗೆ ಬರೆದಿರುವ ಮಾತುಗಳು ನನೆಪಾಗುವುದು ಖಂಡಿತ.
ನಿಮ್ಮ ಮಕ್ಕಳನ್ನು ನಿಮ್ಮ ಮಕ್ಕಳೆಂದು ತಿಳಿಯಬೇಡಿ.
ಅವು, ಬದುಕು ತನ್ನ ಇರುವಿಕೆಯನ್ನು ಬಯಸಿ
ಅರಳಿಸಿಕೊಂಡ ಮಕ್ಕಳು ಅಷ್ಟೆ!
ಮಕ್ಕಳು ನಿಮ್ಮ ಮೂಲಕ ಬರುತ್ತಾರೆ ಅಷ್ಟೆ.
ನಿಮ್ಮಿಂದ ಅಲ್ಲ.
ಅವರು ನಿಮ್ಮ ಜೊತೆಯಲ್ಲಿರುತ್ತಾರೆ . ಆದರೆ ಅವರು
ನಿಮಗೆ ಸೇರಿದವರಲ್ಲ.
ಅವರಿಗೆ ನೀವು ನಿಮ್ಮ ವಿಶ್ವಾಸವನ್ನು ಧಾರೆಯೆರೆದು ಬಲ್ಲಿರಿ:
ಆದರೆ ನಿಮ್ಮ ಚಿಂತನೆಯನ್ನು ಧಾರೆಯೆಲಾರರಿ.
ಮಕ್ಕಳ ದೇಹಕ್ಕೆ ವಾಸವನ್ನು ಒದಗಿಸಬಲ್ಲಿರಿ, ಅವರ
ಆತ್ಮಕ್ಕಲ್ಲ. ಏಕೆಂದರೆ ಆ ಮಕ್ಕಳ ಆತ್ಮಕ್ಕೆ ನಾಳೆಯ
ಒಡಲಿನಲ್ಲಿ ವಾಸ. ಅದನ್ನು ನೀವು ಮತ್ತೆ ದರ್ಶಿಸಲಾರಿರಿ.
ಕನಸಿನಲ್ಲಿ ಕೂಡ ಕಾಣಲಾರಿರಿ.
ನೀವು ಬೇಕಾದರೆ ಅವರಂತಾಗಲು ಪ್ರಯತ್ನಿಸಿ, ಆದರೆ
ಅವರು ನಿಮ್ಮಂತೆ ಆಗುವಂತೆ ಮಾಡಬೇಡಿ.
ಏಕೆಂದರೆ ಬದುಕು ಹಿಂದಕ್ಕೆ ಚಲಿಸಲಾರದು. ಅಥವಾ
ನಿನ್ನೆಯೊಂದಿಗೆ ಉಳಿಯಲಾರದು.
ನೀವು ಬಿಲ್ಲುಗಳು. ನಿಮ್ಮ ಮಕ್ಕಳು ಆ ಬಿಲ್ಲಿನಿಂದ
ಬಿಟ್ಟ ಜೀವಂತ ಬಾಣಗಳು.
ಬಿಲ್ಲುಗಾರನು ಅತೀತದ ಕಡೆಗೆ ಗುರಿಯಿಟ್ಟು ತನ್ನ
ಕೈಲಾದ ಮಟ್ಟಿಗೆ ಧನಸ್ಸುನ್ನು ಬಾಗಿಸುತ್ತಾನೆ.
ಆಕರ್ಣಾಂತವಾಗಿ ಸೆಳೆದುಬಿಟ್ಟ ಆ ಬಾಣಗಳು
ಅದಷ್ಟು ಬೇಗ ಗುರಿತಲುಪಲೆಂದು ಹಾಗೆ ಮಾಡುತ್ತಾನೆ.
ಬಿಲ್ಲುಗಾರ ಕೈಯ ಧನುಸ್ಸಿನಂತೆ ನೀವು ಬಾಗುವುದಾದರೆ
ಸಂತೋಷವಾಗಿ ಬಾಗಿರಿ. ಏಕೆಂದರೆ ತೊಟ್ಟ
ಬಾಣದ ಮೇಲೆ ಅವನಿಗೆ ಎಷ್ಟು ಪ್ರೀತಿ ಇದೆಯೋ
ದೃಢವಾಗಿ ನಿಲ್ಲುವ ಬಿಲ್ಲಿನ ಮೇಲೂ ಅವನಿಗೆ
ಅಷ್ಟೇ ಪ್ರೀತಿಯಿದೆ.
ಈ ಪದ್ಯದ ಪ್ರತಿಯೊಂದು ಸಾಲು ಸಹ ಈ ದಾರವಾಹಿ ಪಾತ್ರಗಳಿಗೆ ಅನ್ವಯವಾಗುತ್ತದೆ. ಹಾಗೆಯೇ ನಿಸಾರ ಅಹಮದ್ ರವರ ಮನಸು ಗಾಂಧಿ ಬಜಾರು ಕವನ ಸಂಕಲನ ಸಿಡಿದ ಸದ್ದು ಕವನದಲ್ಲಿ ಬರುವ ಈ ಸಾಲು ಸಹ ತುಂಬ ಅನ್ವಯವಾಗುತ್ತದೆ.
ಒಂದೆ ತಾಯಿಯ ತೊಡೆಯ ಮೇಲಾಡಿ
ಬೆಳೆದವರು ನಾನು ನೀನೂ ಮತ್ತೆ ಅವನು ಕೂಡ
ಅದರವನಾದರ್ಶ ಆಕ್ಷಾಂಕ್ಷೆಗಳೆ ಬೇರೆ:
ನಾವು ಇಲ್ಲಿಯೆ ಕೊಳೆತರವನೋ ಏರಿದ ಮೋಡ
ಗಾಳಿಯೊಂದೇ, ನೀರು ಬೆಳಕು ಒಂದೇ,
ಕೊನೆಗೆ ಇಲ್ಲೆಲ್ಲರಿಗೂ ಒಂದೆ ಒಂದಾವರಣ
ಎಂಥ ಅಚ್ಚರಿಯಣ್ಣ.

No comments:

Post a Comment