Popular Posts
-
ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೊಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ? ರಾಷ್ಟ್ರ ಕವಿ ಜಿ.ಎಸ್.ಶಿವರುದ್...
-
ಮಕ್ಕಳು ನೋಡಿ ಕಲಿಯಬೇಕು, ಹಾಡಿ ಕಲಿಯಬೇಕು, ಆಡಿ ಕಲಿಯಬೇಕು: ನಲಿನಲಿಯುತ್ತ ಓದಬೇಕು. "ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಸಹಜಪ್ರಾಸಾ " ಇಂತಹ ಪದ್ಯ ರಚನೆಗ...
-
" ಒಲವೇ ಪೂಜೆ , ಇದುವೆ ಅವರ ರಸಜೀವನದ ಓಜೆ" ಸೂಫೀ ಪ್ರೇಮ ಕಾವ್ಯ ಈ ಮೊದಲು ನಾನು ಡಿ.ವಿ.ಜಿ ಯವರ ಅನುವಾದಿಸಿರುವ ಉಮರನ ಒಸುಗೆಯಲ್ಲಿ ಉಮರ‍್ ಖಯ್...
-
ನಾನೇಕೆ ಬರೆಯುತ್ತೇನೆ? ಸುಮ್ಮನೆ ಯಾವುದೋ ಹಪಾಹಪಿಗೆ ಬಿದ್ದು ಇರುವುದನ್ನೆಲ್ಲ ಬಿಟ್ಟು ಇರದದರೆಡೆಗೆ ತುಡಿವುದೇ ಜೀವನ ಎಂದು ತಿಳಿದು ಈ ಬ್ಲಾಗನ್ನು ತೆರೆದಿದ್ದೇನೆ. ಈ ಬ್...
-
ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ ನಾನು ಇತ್ತೀಚಿಗೆ ಓದಿದ ನನ್ನ ಸ್ನೇಹಿತ ಹಾಲಿವುಡ್ ಚಲನಚಿತ್ರಗಳ ಬಗ್ಗೆ ಬರೆದ ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ ಈ ...
-
" ಆಧುನಿಕ ಕಾಲ" ಎಂದೆಂದಿಗೂ ಆಧುನಿಕ ಕಾಲವೇ........... ಈ ಲೇಖನ ನನ್ನ ಸ್ನೇಹಿತ ವಿನಯಕುಮಾರ ಎಂ.ಜಿ., ಪ್ರೀತಿಯಿಂದ ಜೋಳಿಗೆ ಬ್ಲಾಗ್ ಗೆ ಬರೆದು ಕೊಟ್ಟಿದ...
-
ಕಿಲಿಮಂಜಾರೋ,ತಾಜಾ ತಾನ್ಜಾನಿಯ ದೇಶದ ಪ್ರವಾಸ ಕಥನದ ಪುಸ್ತಕ ಪರಿಚಯ. ಈ ಜಗತ್ತಿಗೆ ಹಾಗೇ ಎಲ್ಲಿಂದಲೋ ಬರುತ್ತವೆ, ಮತ್ತೆಲ್ಲಿಗೋ ಹೋಗುತ್ತವೆ, ಈ ಬಂದು ಹೋಗುಗಳ ನಡುವೆ ...
-
ಬಾರಿಸು ಕನ್ನಡ ಡಿಂಡಿಮವ ಕರ್ನಾಟಕದ ರಾಜಧಾನಿಯಲ್ಲಿ ಶಿವ. ೪೦ ವರ್ಷಗಳ ನಂತರ ಕರ್ನಾಟಕದ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ೭೭ನೇ ಕನ್ನಡ ಸಾಹಿತ್ಯ ಸಮೇಳ್ಮನ ಪ್ರಸ್...
-
ಉಕ್ಕುವ ಕಡಲಿನ ಅಲೆಗಳಂತೆ ಮನಸ್ಸು (ಒರೆ ಕಡಲ್) ಚಿತ್ರ : ಒರೆ ಕಡಲ್ (೨೦೦೭) ಭಾಷೆ: ಮಲಯಾಳಂ. ಪಾತ್ರವರ್ಗ: ಮುಮ್ಮುಟಿ, ಮೀರಾ ಜಾಸ್ಮಿನ್, ರಮ್ಯ ಕೃಷ್ಣ, ಜಯಕುಮಾರ‍್ ನ...
-
ಈ ಬ್ಲಾಗ್ ಗೆ ಪ್ರೀತಿಯಿಂದ ಜಿ.ಬಿ.ಅರುಣಪ್ರಸಾದ್ ಬರೆದು ಕೊಟ್ಟ ಕಥೆ. ಕನಸಾ ಮಾರುವಾ ಚೆಲುವ..... .. ಮೂರು ತುಂಬುವ ಹೊತ್ತಿಗೆ ಮನೆಯವರಿಗೆ ಬೇಡವಾಗಿದ್ದ ನಾನು ...
Wednesday, December 14, 2011
Tuesday, December 13, 2011
ಉಕ್ಕುವ ಕಡಲಿನ ಅಲೆಗಳಂತೆ ಮನಸ್ಸು (ಒರೆ ಕಡಲ್)
ಉಕ್ಕುವ ಕಡಲಿನ ಅಲೆಗಳಂತೆ ಮನಸ್ಸು (ಒರೆ ಕಡಲ್)ಚಿತ್ರ : ಒರೆ ಕಡಲ್ (೨೦೦೭)
ಭಾಷೆ: ಮಲಯಾಳಂ.
ಪಾತ್ರವರ್ಗ: ಮುಮ್ಮುಟಿ, ಮೀರಾ ಜಾಸ್ಮಿನ್, ರಮ್ಯ ಕೃಷ್ಣ, ಜಯಕುಮಾರ‍್
ನಿರ್ದೇಶಕರು: ಶ್ಯಾಂಸುಂದರ‍್.
ಸಂಗೀತ ನಿರ್ದೇಶಕರು: ಓಸುಪೆಚ್ಚನ್.
ಛಾಯಾಗ್ರಹಣ: ಆಗಲಪ್ಪನ್
ಭಾಷೆ: ಮಲಯಾಳಂ.
ಪಾತ್ರವರ್ಗ: ಮುಮ್ಮುಟಿ, ಮೀರಾ ಜಾಸ್ಮಿನ್, ರಮ್ಯ ಕೃಷ್ಣ, ಜಯಕುಮಾರ‍್
ನಿರ್ದೇಶಕರು: ಶ್ಯಾಂಸುಂದರ‍್.
ಸಂಗೀತ ನಿರ್ದೇಶಕರು: ಓಸುಪೆಚ್ಚನ್.
ಛಾಯಾಗ್ರಹಣ: ಆಗಲಪ್ಪನ್
ಈ ಚಲನಚಿತ್ರವು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಬಹುಚರ್ಚಿತವಾಗುತ್ತಿರುವ ವಿವಾಹೇತರ ಸಂಬಂಧದಿಂದ ಆಗುವ ಮಾನಸಿಕ ತೊಳಲಾಟವನ್ನು ಈ ಚಿತ್ರ ನಿರ್ದೇಶಕರು ಸೂಕ್ಷ್ಮವಾಗಿ ಅನಾವರಣಗೊಳಿಸಿದ್ದಾರೆ.
ಈ ಚಲನಚಿತ್ರ ಬೆಂಗಾಳಿಯ ಸುನಿಲ್ ಗಂಗೋಪಾಧ್ಯಾಯರ ಕಾದಂಬರಿ ಹೀರಕ್ ದೀಪ್ತೀ ಕಾದಂಬರಿ ಆಧಾರಿತ ಚಿತ್ರವಾಗಿದ್ದು ಈ ಚಲನಚಿತ್ರದಲ್ಲಿ ಬರುವ ಪಾತ್ರಗಳಲ್ಲಿ ಮುಮ್ಮುಟಿ (ಪ್ರೊ.ನಾಥನ್) ಮತ್ತು ಮೀರಾಜಾಸ್ಮಿನ್ (ದೀಪ್ತಿ)ಯಾಗಿ ರಮ್ಯ ಕೃಷ್ಣ(ಬೇಲಾ) ನಟಿಸಿದ್ದಾರೆ.
ಬಡತನ ಮತ್ತು ಅಭಿವೃದ್ದಿಯ ಬಗ್ಗೆ ಪ್ರಬಂಧ ಹಾಗೂ ಲೇಖನಗಳನ್ನು ಬರೆದು ಅಂತರರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡಿರುವ ಅರ್ಥಶಾಸ್ತ್ರಜ್ಞ ಮತ್ತು ಅದೇ ಅಪಾರ್ಟಮೆಂಟ್ ನಲ್ಲಿ ವಾಸಮಾಡುತ್ತಿರುವ ಬಡಮಧ್ಯಮ ವರ್ಗದ ಮಹಿಳೆ ದೀಪ್ತಿಯ ನಡುವೆ ನಡಿಯುವ ಸಂಬಂಧಗಳ ಸೂಕ್ಷ್ಮತೆಯನ್ನು ತೆರೆದಿಡುತ್ತದೆ. ತನ್ನ ಪತಿಗೆ ಉದ್ಯೋಗವಿಲ್ಲದ ಕಾರಣ ಮನೆಯಲ್ಲಿ ಅರ್ಥಿಕ ಬಿಕ್ಕಟು ಉಂಟಾಗುವುದರಿಂದ ತನ್ನ ಗಂಡ ಕೆಲಸಕ್ಕಾಗಿ ಬೆಂಗಳೂರು ನಗರಕ್ಕೆ ಬಂದಿರುವ ಸಮಯದಲ್ಲಿ ತನ್ನ ಮಗನಿಗೆ ಜ್ಚರ ಬಂದು ಆ ಹುಡಗನಿಗೆ ಚಿಕಿತ್ಸೆ ಕೊಡಿಸಲು ಹೆಣಗಾಡುವ ದೀಪ್ತಿಯ ಕಷ್ಟವನ್ನು ನೋಡಿ ಮರುಗಿ ನೆರವಾಗುವ ಪ್ರೊ.ನಾಥನ್ ದೀಪ್ತಿಯ ಗಂಡನಿಗೆ ಕೆಲಸ ಕೊಡಿಸುವ ಭರವಸೆ ನೀಡುತ್ತಾನೆ. ಇದರೀಂದ ದೀಪ್ತಿಗೆ ಪ್ರೊ.ನಾಥನ್ ಎಂದರೆ ಪ್ರೀತಿ. ನಾಥನ್ ಗೆ ಹೆಂಗಸ ಸಂಗಡ (ಆತ್ಮೀಯತೆ) ವನ್ನು ಬಯಸುವ ನಾಥನ್ ದೀಪ್ತಿಯನ್ನು ಸಹ ಇಷ್ಟಪಡುತ್ತಾನೆ. ಅದರಂತೆ ದೀಪ್ತಿಯೊಂದಿಗೆ ದೈಹಿಕ ಸಂಪರ್ಕವು ಬೆಳೆಯುತ್ತದೆ.
ಪ್ರೊ.ನಾಥನ್ ದೈಹಿಕ ಸಂಪರ್ಕದಿಂದ ದೀಪ್ತಿಯಲ್ಲಿ ಅವನ ಕುಡಿ ಬೆಳಯಲಾರಂಭಿಸುತ್ತದೆ. ತನ್ನೊಳಗೆ ಬೆಳೆಯುವ ಅವನ ಕುಡಿಯೊಂದಿಗೆ ಪ್ರೊ.ನಾಥನ್ ಮೇಲೆ ಪ್ರೀತಿಯು ಹೆಚ್ಚಾಗುತ್ತ ಹೋಗುತ್ತದೆ. ಆದರೆ ಈ ವಿಷಯವನ್ನು ಪ್ರೊ.ನಾಥನ್ ಗೆ ತಾನು ಹೊತ್ತುಕೊಂಡಿರುವ ಮಗು ನಿನ್ನದು ಎಂದು ಹೇಳಲು ಹೋದರು ಅದು ಆಗುವುದಿಲ್ಲ. ಆದರೆ ನಾಥನ್ ಗೆ ತಾನು ಏನು ಅಲ್ಲವೆಂದು ತಿಳಿಸಿದಾಗ ಅವಳ ಮನಸ್ಸಿನ ನೋವು ಉಕ್ಕುವ ಕಡಲಿನ ಅಲೆಗಳಂತೆ ಮನಸ್ಸಿನ ಮೇಲೆ ಆಕ್ರಮಣ ಮಾಡುತ್ತದೆ. ಮಗುವಿನ ಜನನದ ಬಳಿ ಮಾನಸಿಕ ತೊಳಲಾಟದಿಂದ ದೀಪ್ತಿ ಹುಚ್ಚಿಯಾಗುತ್ತಾಳೆ. ಇದರ ಏನು ತಿಳಿಯದ ಪತಿ ದೀಪ್ತಿಗೆ ಚಿಕಿತ್ಸೆ ನೀಡಿ ದೀಪ್ತಿಯನ್ನು ಮತ್ತೆ ಸರಿಪಡಿಸುತ್ತಾನೆ.
ಈ ಚಿತ್ರ ಸಂಕೀರ್ಣತೆ ಪಡೆದು ಕೊಳ್ಳುತ್ತಾ ಇರುವ ಸಮಯದಲ್ಲಿ ಪ್ರೊ.ನಾಥನ್ ಗೆಳತಿ ಬೇಲಾ (ರಮ್ಯಕೃಷ್ಣ) ನಾಥನ್ ಮನಸ್ಸಿನೊಳಗಿರುವ ಅಂತರ್ಪಟವನ್ನು ಸರಿಸಿ ವಸ್ತುಸ್ಧಿತಿಯನ್ನು ಅರಿವುವನ್ನು ಮೂಡಿಸುತ್ತಾಳೆ. ಪ್ರೊ.ನಾಥನ್ ಗೆ ಬೇಲಾ ಮೇಲು ಪ್ರೀತಿ ಹುಟ್ಟತ್ತದೆ. ಪ್ರೊ.ನಾಥನ್ ಕೂಡ ಬೇಲಾ ಪ್ರೀತಿಯ ಹುಚ್ಚನಾಗಿ ಬಿಡುತ್ತಾನೆ.
ಈ ಚಿತ್ರದಲ್ಲಿ ಬರುವ ದೀಪ್ತಿಯ ಪಾತ್ರ ನಿತ್ಯ ಜೀವನದಲ್ಲಿ ಸಾಮಾಜದಲ್ಲಿ ಒತ್ತಡಗಳ ನಡುವೆ ಬದುಕುತ್ತಿರುವ ಹೆಂಗಸರ ಸಾಮಾನ್ಯ ಬದುಕನ್ನು ತೆರದಿಡುವ ಪಾತ್ರದಲ್ಲಿ ಮೀರಾಜಾಸ್ಮಿನ್ ಅತ್ಯಂತ ಸೂಕ್ಷ್ಮವಾಗಿ ಅಭಿನಯಿಸಿ ಮನಸ್ಸಿನೊಳಗೆ ಪಾತ್ರ ಪೂರ್ಣವಾಗಿ ಅವರಸಿಕೊಂಡು ಬಿಡುತ್ತದೆ. ಈ ಚಲನ ಚಿತ್ರ ವಿವಾಹೇತರ ಸಂಬಂಧದ ಬಗ್ಗೆ ಯಾವುದೇ ಸಂದೇಶ ನೀಡುವುದಿಲ್ಲವಾದರೂ ಮಸಸ್ಸಿನೊಳಗಿನ ಸೂಕ್ಷ್ಮತೆಯನ್ನು ನಿರ್ದೇಶಕರು ತೆರದಿಡುವಲ್ಲಿ ನಿರ್ದೇಶಕರಾದ ಶ್ಯಾಮಸುಂದರ‍್ ಯಶಸ್ವಿಯಾಗಿದ್ದಾರೆ.
ಈ ಚಲನಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ಮತ್ತು ವಿರ್ಮಶೆಗಳು ಬಂದಿದ್ದು ಈ ಚಲನಚಿತ್ರಕ್ಕೆ ರಾಷ್ಟ್ರ ಮಟ್ಟದ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ಹಾಗೂ ಉತ್ತಮ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ ಲಭಿಸಿದೆ. ಕೇರಳ ರಾಜ್ಯದ ಎರಡನೇ ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿಗಳಿಸಿದೆ.
Thursday, September 29, 2011
ಸ್ವಾರ್ಥ, ನಿಸ್ವಾರ್ಥ ಮನಸ್ಸುಗಳ ಅನಾವರಣ.
ಇತ್ತೀಚಿಗೆ ದೈನಂದಿನ ಧಾರವಾಹಿಗಳಲ್ಲಿ ಈ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿರುವ ಅನಾವರಣ ಧಾರವಾಹಿಯನ್ನು ಕಳೆದು ಹದಿನೈದು ವಾರಗಳಿಂದ ಪ್ರಸಾರವಾಗುತ್ತಿದ್ದು ಈ ಧಾರವಾಹಿಗಿಂತ ಹಿಂದೆ ಸೇತುರಾಮ್ ನಿರ್ದೇಶನದ ಮಂಥನ ಧಾರವಾಹಿಯು ಸಹ ಒಂದು ಸಾಮಾಜಿಕ ಕಳಕಳಿಯಳ್ಳು ಹಾಗೂ ಮಧ್ಯಮವರ್ಗದ ಕುಟುಂಬದ ತಳುಮಳಗಳನ್ನು ಕಟ್ಟಿಕೊಟ್ಟಿದ ಸೇತುರಾಮ್ ಧಾರವಾಹಿ ಇದ್ದಕ್ಕಿದ್ದಂತೆ ಈಟಿವಿಯಿಂದ ಕಾಣೆಯಾಗಿತ್ತು.ಯಾಕೋ ಗೊತ್ತಿಲ್ಲ. ಆದರೆ ಇತ್ತೀಚಿಗೆ ಪ್ರಸಾರವಾಗುತ್ತಿರುವ ಅನಾವರಣ ಧಾರವಾಹಿ ಮಧ್ಯಮವರ್ಗದಲ್ಲಿ ಬದುಕಿದ ಒಂದು ಸಂಸಾರದಲ್ಲಿ ನಡೆಯುವ ಭಾವನೆಗಳ ಘರ್ಷಣೆ, ಸ್ವಾರ್ಥ, ನಿಸ್ವಾರ್ಥ ಮನಸ್ಸುಗಳ ದ್ವಂದ್ವವನ್ನು ಹೊರಹಾಕುತ್ತ ಇರುವುದರಿಂದ ಈ ಧಾರವಾಹಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಈ ಧಾರವಾಹಿಯಲ್ಲಿ ಬರುವ ಪಾತ್ರಗಳ ಅಂತರ್ಯಕ್ಕೆ ಇಳಿದು ನಟನೆ ಮಾಡುತ್ತಿರುವುದರಿಂದ ಈ ಧಾರವಾಹಿಯಲ್ಲಿ ನಟಿಸಿರುವ ಎಲ್ಲಾ ಪಾತ್ರಧಾರಿಗಳು ಪ್ರೇಕ್ಷಕರನ್ನು ಹಿಡಿಟ್ಟಿರುವುದರಲ್ಲಿ ಸಂಶಯವೇ ಇಲ್ಲ.
ಈ ಧಾರವಾಹಿಯ ನಿರ್ದೇಶಕರು ಇತ್ತೀಚಿನ ದಿನಗಳಲ್ಲಿ ಇಂತಹ ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡಾಗ ಎಂತಹ ಪ್ರೇಕ್ಷಕರಿಗೆ ಇಂತಹ ಧಾರವಾಹಿಗಳು ತಲುಪತ್ತವೇ ಎಂಬ ಸಂಶಯವು ಸಹ ಮೂಡುತ್ತದೆ. ಆದರೆ ಇಂತಹ ಪ್ರಯತ್ನವನ್ನು ನಿರ್ದೇಶಕರು ಮಾಡಿರುವುದು ಒಂದು ಒಳ್ಳೆಯ ಪ್ರಯತ್ನ ಇಂದಿನ ದಿನಗಳ ಪರಿಸ್ಧಿತಿಗೆ ಅವಶ್ಯಕವೆನ್ನಿಸುವ ಹಾಗೆ ಈ ಧಾರವಾಹಿಯಲ್ಲಿ ಬರುವ ಪಾತ್ರಗಳು ನಮ್ಮ ಸುತ್ತಮುತ್ತ ಇರುವ ಸಮಾಜದಲ್ಲಿ ನಡೆಯುತ್ತಿರುವ ದೈನಂದಿಕ ಬದುಕಿನ ವಾಸ್ತವ ಸತ್ಯವನ್ನು ತೆರೆದಿಡುತ್ತಿದೆ. ಈ ಧಾರವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ತಮ್ಮದೇ ಅದಂತಹ ನಿರ್ದಿಷ್ಟವಾದ ಚೌಕಟ್ಟುನ್ನು ನಿರ್ಮಿಸಿ ಪಾತ್ರಗಳನ್ನು ಪೋಷಿಸಿರುವುದು ಈ ಧಾರವಾಹಿ ಮತ್ತೊಂದು ಗಮನ ಸೆಳೆಯುವ ಅಂಶ ಹಾಗೂ ಈ ಧಾರವಾಹಿಯ ಸಂಭಾಷಣೆಯು ಇವತ್ತಿನ ಪ್ರಸ್ತುತತೆಗೆ ವಾಸ್ತವತೆಗೆ ಹತ್ತಿರವಾಗಿರುವುದರಿಂದ ಒಂದು ವರ್ಗದ ಪ್ರೇಕ್ಷಕರನ್ನು ಸೆಳೆದಿಡುವಲ್ಲಿ ಈ ಧಾರವಾಹಿ ಯಶಸ್ವಿಯಾಗಿ ಹಾಗೂ ನಿರ್ದೇಶನದಲ್ಲಿ ಧಾರವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ತಮ್ಮದೇ ಆದ ಛಾಪನ್ನು ಒತ್ತಿಸಿ ಧಾರವಾಹಿಯ ಯಶಸ್ವಿಗೊಳಿಸಿದ್ದಾರೆ ನಿರ್ದೇಶಕರು. ಈ ಧಾರವಾಹಿಯಲ್ಲಿ ಅಪ್ಪ, ಮಗನ ಸಂಬಂಧ, ತಾಯಿ ಅಥವಾ ಮಗಳ ಸಂಬಂಧಗಳ ನಡುವೆ ಆಗುವ ತಲ್ಲಣಗಳನ್ನು ನೈಜತೆಯಿಂದ ಹೇಳುವುದಕ್ಕೆ ಹೊರಟಿರುವುದು ಈ ಧಾರವಾಹಿಯ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ತಾಯಿ ಮತ್ತು ತಂದೆ ತನ್ನ ಮಕ್ಕಳನ್ನು ಅರ್ಥ ಮಾಡಿಕೊಂಡಿರುವ ರೀತಿ ಇವತ್ತಿನ ರಾಜಕೀಯ ವ್ಯವಸ್ಧೆಯಲ್ಲಿ ಉನ್ನತ ಹುದ್ದೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಒಳ ಆಳವನ್ನು ಹಾಗೂ ನೈತಿಕತೆ ಹಾಗೂ ಕ್ರೌರ್ಯದ ನಡುವೆ ನಡೆಯುವ ಹೋರಾಟ ಇವತ್ತಿನ ಜಾಗತೀಕರಣದಿಂದ ಬದುಕ ಮತ್ತು ಬಾಂಧವ್ಯಗಳು ಹೇಗೆ ದುಸ್ತರವಾಗುತ್ತಿದೆ ಎಂಬ ಅಂಶವನ್ನು ಈ ಧಾರವಾಹಿಯಲ್ಲಿ ಕಾಣಬಹುದು. ಈ ಧಾರವಾಹಿಯನ್ನು ವೀಕ್ಷಣೆ ಮಾಡುತ್ತಿದ್ದಾಗ ಖಲೀಲ್ ಗಿಬ್ರಾನ್ ಮಕ್ಕಳ ಬಗ್ಗೆ ಬರೆದಿರುವ ಮಾತುಗಳು ನನೆಪಾಗುವುದು ಖಂಡಿತ.
ನಿಮ್ಮ ಮಕ್ಕಳನ್ನು ನಿಮ್ಮ ಮಕ್ಕಳೆಂದು ತಿಳಿಯಬೇಡಿ.ಅವು, ಬದುಕು ತನ್ನ ಇರುವಿಕೆಯನ್ನು ಬಯಸಿ
ಅರಳಿಸಿಕೊಂಡ ಮಕ್ಕಳು ಅಷ್ಟೆ!
ಮಕ್ಕಳು ನಿಮ್ಮ ಮೂಲಕ ಬರುತ್ತಾರೆ ಅಷ್ಟೆ.
ನಿಮ್ಮಿಂದ ಅಲ್ಲ.
ಅವರು ನಿಮ್ಮ ಜೊತೆಯಲ್ಲಿರುತ್ತಾರೆ . ಆದರೆ ಅವರು
ನಿಮಗೆ ಸೇರಿದವರಲ್ಲ.
ಅವರಿಗೆ ನೀವು ನಿಮ್ಮ ವಿಶ್ವಾಸವನ್ನು ಧಾರೆಯೆರೆದು ಬಲ್ಲಿರಿ:
ಆದರೆ ನಿಮ್ಮ ಚಿಂತನೆಯನ್ನು ಧಾರೆಯೆಲಾರರಿ.
ಮಕ್ಕಳ ದೇಹಕ್ಕೆ ವಾಸವನ್ನು ಒದಗಿಸಬಲ್ಲಿರಿ, ಅವರ
ಆತ್ಮಕ್ಕಲ್ಲ. ಏಕೆಂದರೆ ಆ ಮಕ್ಕಳ ಆತ್ಮಕ್ಕೆ ನಾಳೆಯ
ಒಡಲಿನಲ್ಲಿ ವಾಸ. ಅದನ್ನು ನೀವು ಮತ್ತೆ ದರ್ಶಿಸಲಾರಿರಿ.
ಕನಸಿನಲ್ಲಿ ಕೂಡ ಕಾಣಲಾರಿರಿ.
ನೀವು ಬೇಕಾದರೆ ಅವರಂತಾಗಲು ಪ್ರಯತ್ನಿಸಿ, ಆದರೆ
ಅವರು ನಿಮ್ಮಂತೆ ಆಗುವಂತೆ ಮಾಡಬೇಡಿ.
ಏಕೆಂದರೆ ಬದುಕು ಹಿಂದಕ್ಕೆ ಚಲಿಸಲಾರದು. ಅಥವಾ
ನಿನ್ನೆಯೊಂದಿಗೆ ಉಳಿಯಲಾರದು.
ನೀವು ಬಿಲ್ಲುಗಳು. ನಿಮ್ಮ ಮಕ್ಕಳು ಆ ಬಿಲ್ಲಿನಿಂದ
ಬಿಟ್ಟ ಜೀವಂತ ಬಾಣಗಳು.
ಬಿಲ್ಲುಗಾರನು ಅತೀತದ ಕಡೆಗೆ ಗುರಿಯಿಟ್ಟು ತನ್ನ
ಕೈಲಾದ ಮಟ್ಟಿಗೆ ಧನಸ್ಸುನ್ನು ಬಾಗಿಸುತ್ತಾನೆ.
ಆಕರ್ಣಾಂತವಾಗಿ ಸೆಳೆದುಬಿಟ್ಟ ಆ ಬಾಣಗಳು
ಅದಷ್ಟು ಬೇಗ ಗುರಿತಲುಪಲೆಂದು ಹಾಗೆ ಮಾಡುತ್ತಾನೆ.
ಬಿಲ್ಲುಗಾರ ಕೈಯ ಧನುಸ್ಸಿನಂತೆ ನೀವು ಬಾಗುವುದಾದರೆ
ಸಂತೋಷವಾಗಿ ಬಾಗಿರಿ. ಏಕೆಂದರೆ ತೊಟ್ಟ
ಬಾಣದ ಮೇಲೆ ಅವನಿಗೆ ಎಷ್ಟು ಪ್ರೀತಿ ಇದೆಯೋ
ದೃಢವಾಗಿ ನಿಲ್ಲುವ ಬಿಲ್ಲಿನ ಮೇಲೂ ಅವನಿಗೆ
ಅಷ್ಟೇ ಪ್ರೀತಿಯಿದೆ.
ಈ ಪದ್ಯದ ಪ್ರತಿಯೊಂದು ಸಾಲು ಸಹ ಈ ದಾರವಾಹಿ ಪಾತ್ರಗಳಿಗೆ ಅನ್ವಯವಾಗುತ್ತದೆ. ಹಾಗೆಯೇ ನಿಸಾರ ಅಹಮದ್ ರವರ ಮನಸು ಗಾಂಧಿ ಬಜಾರು ಕವನ ಸಂಕಲನ ಸಿಡಿದ ಸದ್ದು ಕವನದಲ್ಲಿ ಬರುವ ಈ ಸಾಲು ಸಹ ತುಂಬ ಅನ್ವಯವಾಗುತ್ತದೆ.
ಒಂದೆ ತಾಯಿಯ ತೊಡೆಯ ಮೇಲಾಡಿ
ಬೆಳೆದವರು ನಾನು ನೀನೂ ಮತ್ತೆ ಅವನು ಕೂಡ
ಅದರವನಾದರ್ಶ ಆಕ್ಷಾಂಕ್ಷೆಗಳೆ ಬೇರೆ:
ನಾವು ಇಲ್ಲಿಯೆ ಕೊಳೆತರವನೋ ಏರಿದ ಮೋಡ
ಗಾಳಿಯೊಂದೇ, ನೀರು ಬೆಳಕು ಒಂದೇ,
ಕೊನೆಗೆ ಇಲ್ಲೆಲ್ಲರಿಗೂ ಒಂದೆ ಒಂದಾವರಣ
ಎಂಥ ಅಚ್ಚರಿಯಣ್ಣ.
Tuesday, June 28, 2011
ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ
ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ
ನಾನು ಇತ್ತೀಚಿಗೆ ಓದಿದ ನನ್ನ ಸ್ನೇಹಿತ ಹಾಲಿವುಡ್ ಚಲನಚಿತ್ರಗಳ ಬಗ್ಗೆ ಬರೆದ ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ ಈ ಪುಸ್ತಕದ ಬಗ್ಗೆ ಏನು ಬರೆಯಬೇಕು ಅಂತ ಯೋಚಿಸುತ್ತಿರುವಾಗ ನನ್ನ ಮತ್ತು ವಿನಯ್ ನಡುವೆ ಕಳೆದ ಐದು ವರ್ಷಗಳ ನನ್ನ ಅವನ ಗೆಳತನ ಈ ಹಂತದವರೆಗೆ ನಮ್ಮನ್ನು ತಂದು ನಿಲ್ಲಿಸಿದೆ. ವಿನಯ್ ಬಗ್ಗೆ ಹೇಳಬೇಕೆಂದರೆ ನನಗೆ ಇವನ ಪರಿಚಯವಿರಲಿಲ್ಲ ನನ್ನ ಸ್ನೇಹಿತ ಅರುಣ್ ಪ್ರಸಾದ್ ನನಗೆ ಇವನ ಪರಿಚಯ ಮಾಡಿಸಿದ. ಆದರೆ ಮನುಷ್ಯನ ಬಾಂಧವ್ಯಗಳು ಸುಖಾಸುಮ್ಮನೆ ಏರ್ಪಾಡುವುದಿಲ್ಲ ಎಲ್ಲೋ ಇದ್ದ ನಾವು ಇಂದು ಸ್ನೇಹತರಾಗಿ ಸೇರಿದ್ದೇವೆ. ಅಲ್ಲಿಂದ ಇಲ್ಲಿನವರೆವಿಗೂ ನನ್ನ ಮತ್ತು ಅವನ ಸ್ನೇಹದ ರಥದಲ್ಲಿ ಇಬ್ಬರು ಪ್ರಯಾಣ ಮಾಡುತ್ತ ಇದ್ದೇವೆ. ನನ್ನ ವೈರುಧ್ಯಗಳು, ಚಿಂತನೆಗಳ ಬೇರೆಯಾಗಿದ್ದು ನನ್ನ ನ್ಯೂನತೆಗಳು ಬಗ್ಗೆ ಅವನು ಟೀಕೆ ಮಾಡಿದ್ದು ಇದೆ. ನಾನು ಅವನ ಬಗ್ಗೆ ಟೀಕೆ ಮಾಡಿದ್ದು ಇದೆ. ಯಾವ ಮನುಷ್ಯಗಳಿಗೆ ಸಮಸ್ಯೆಗಳ ಬರುವುದಿಲ್ಲವೋ ಅವುಗಳನ್ನು ಬಿಡಿಸುವ ಬಗ್ಗೆ ಯಾರಲ್ಲಾದರೂ ಉತ್ತರವನ್ನು ಹುಡುಕುತ್ತಾರೆ. ಆದರೆ ಯಾವ ವ್ಯಕ್ತಿ ಸಮಸ್ಯೆಗಳ ನಡುವೆಯೇ ಬದುಕುತ್ತಿರುತ್ತಾನೋ ಅವನಿಗೆ ಜೀವನವೇ ದಿನವೂ ಒಂದು ಪಾಠ ಕಲಿಸುತ್ತಿರುತ್ತದೆ. ಇಂತಹ ಸಮಸ್ಯೆಗಳು ಇದ್ದು ಸಹ ಇವೆಲ್ಲವನ್ನು ಮೀರಿ ಬೆಳಯುವುದು ಒಬ್ಬ ಸಕ್ರಿಯ ಮತ್ತು ಕ್ರಿಯಾಶೀಲ ವ್ಯಕ್ತಿಗೆ ಮಾತ್ರ ಸಾಧ್ಯ ಎಂತಹ ಆಸಾಧ್ಯಗಳನ್ನು ಸಾಧ್ಯ ಮಾಡುವ ನಿಟ್ಟಿನಲ್ಲಿ ಪ್ರಯೋಗಶೀಲರಾಗುತ್ತಾರೆ.ಇಂತಹ ವ್ಯಕ್ತಿತ್ವ ಹೊಂದಿರುವ ವಿನಯ್ ದು.
ಒಂದು ಸಮಸ್ಯೆಗಳನ್ನು ಚರ್ಚೆಗೆತ್ತಿಕೊಂಡು ಬೇಕಾದಷ್ಟು ಬಾರಿ ನನಗೂ ಅವನಿಗೆ ಜಗಳವಾಗಿದ್ದು ಇದೆ. ಆದರೆ ಅವನಲ್ಲಿರುವ ಒಂದು ಪ್ರಯೋಗಾತ್ಮಕ ವ್ಯಕ್ತಿತ್ವ ಹೊಸತನ್ನು ಕಲಿಯಲು ಎಡೆಮಾಡಿಕೊಟ್ಟಿದೆ. ನಾನು ಜಾಗತಿಕ ಮಟ್ಟದ ಚಲನಚಿತ್ರಗಳನ್ನು ನೋಡಿರಲಿಲ್ಲ ನಾನು ಕನ್ನಡ, ತಮಿಳು, ಹಿಂದಿ, ತೆಲುಗು ಹಾಗೂ ದೂರದರ್ಶನದಲ್ಲಿ ಆ ದಿನಗಳಲ್ಲಿ ಬರುತ್ತಿದ್ದ ರಾಷ್ಟ್ರೀಯ ಪುರಸ್ಕಾರ ವಿಜೇತ ಚಲನಚಿತ್ರಗಳನ್ನು ಭಾನುವಾರ ಮಧ್ಯಾಹ್ನ ಪ್ರಸಾರ ಮಾಡುತ್ತಿದ್ದ ಅವಧಿಯಲ್ಲಿಷ್ಟೆ ನೋಡುತ್ತಿದ್ದ ನೆನಪು. ಹಾಲಿವುಡ್ ಸಿನಮಾಗಳಾದ ಕಿಂಗ್ ಕಾಂಗ್, ಜುರಾಸಿಪಾರ್ಕ್, ಬಾಂಡ್ ಚಲನಚಿತ್ರಗಳನ್ನು ನೋಡಿದ್ದು ಬಿಟ್ಟರೆ ಬೇರೆ ದೇಶದ ಯಾವುದೇ ಚಲನಚಿತ್ರಗಳನ್ನು ನೋಡಿದ ನೆನಪುಗಳು ಇಲ್ಲ. ಆದರೆ ನಾನು ಮಾಜಿದ್ ಮಜ್ಜಿದಿಯ "ಫಾದರ್" ಚಲನಚಿತ್ರವನ್ನು ಮೊದಲಬಾರಿಗೆ ನೋಡಿದಾಗ ಇಂತಹ ಜಾಗತಿಕ ಮಟ್ಟದ ಬೇರೆ ಬೇರೆ ದೇಶದ ಚಲನಚಿತ್ರಗಳನ್ನು ನೋಡದೆ ಇನ್ನು ಮೂರ್ಖರಾಗಿ ಕಾಲಕಳೆಯುತ್ತಿದ್ದವಲ್ಲ ಎಂಬ ಮನೋಭಾವ ಕಾಡಲು ಶುರುಮಾಡಿತ್ತು. ಚಲನಚಿತ್ರಗಳು ಹಾಗೂ ದೃಶ್ಯ ಮಾಧ್ಯಮ ಬೇರೆ ಬೇರೆ ದೇಶದ ಸಂಸ್ಕೃತಿಯನ್ನು, ಪ್ರಕೃತಿ, ಜನರ ಜೀವನ ಅಭ್ಯಸಿಸುವುದರ ಜೊತೆಗೆ ವಿವಿಧ ದೇಶದ ಭಾಷೆಯನ್ನು ಅರ್ಥಿಕ ಸ್ಧಿತಿ-ಗತಿಗಳನ್ನು ಗ್ರಹಿಸುವುದರಿಂದ ನಮ್ಮ ಯೋಚನಾಶಕ್ತಿಯು ಸಹ ವಿಸ್ತೃತಗೊಳ್ಳವುದು. ಅಂದಿನಿಂದ ಇದುವರೆವಿಗೂ ಸುಮಾರು ದೇಶಗಳ ಚಲನಚಿತ್ರಗಳನ್ನು ನೋಡಿ ಅವುಗಳ ಬಗ್ಗೆ ಚರ್ಚೆ ಮಾಡುತ್ತಿದ್ದುದ್ದು ಉಂಟು. ಹೀಗೆ ಅವನು ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಂಡು ಯಾವುದರ ಕಡೆಗೂ ಗಮನ ಕೊಡದೆ ಯಾವುದೇ ಒಂದು ಕೆಲಸ ಕೈಗೆತ್ತಿಕೊಂಡರೆ ಬೇಗ ಮುಗಿಸುವುದಿಲ್ಲವೆಂದು ನಾನು ಹಲವಾರು ಬಾರಿ ಅವನ ಜೊತೆ ಪ್ರೀತಿಯಿಂದ ಜಗಳವಾಡಿದ್ದು ಇದೆ. ಅವನ ಇರ್ಷೆಗಳನ್ನು ಒಂದು ಹಿಡಿತಕ್ಕೆ ತಂದು ಒಂದು ಕೆಲಸ ಮುಗಿದ ಮೇಲೆ ಇನ್ನೊಂದು ಕೆಲಸಕ್ಕೆ ಕೈಹಾಕು ಎಂದು ಹೇಳಿ ಸಾಕಾಗಿತ್ತು ಆದರೆ ಅವನ ಸಿನಿಮಾ ತುಡಿತ, ಸಿನಿಮಾದ ಬಗ್ಗೆ ಇರುವ ಗ್ರಹಣ ಶಕ್ತಿ ಅವನಲ್ಲಿ ಒಂದು ಹೊಸ ಆಯಾಮಕ್ಕೆ ಅವನನ್ನು ತಂದು ನಿಲ್ಲಿಸಿದೆ. ಅವನ ಸ್ನೇಹಿತರ ಪ್ರಪಂಚ ಕೂಡ ಅಷ್ಟೇ ದೊಡ್ಡದಾಗಿದ್ದು ಇವನ ಪ್ರಯೋಗಾತ್ಮಕತೆಗೆ ಮಂಡ್ಯದ ಸ್ನೇಹಿತರೂ ಕೂಡ ಸ್ಪಂದಿಸಿದ್ದಾರೆ. ಇವನ ಹಪಾಹಪಿ ಹೇಗೆ ಎಂದರೆ ಎಲ್ಲವನ್ನು ಒಂದೇ ಬಾರಿಗೆ ಮಾಡುವ ತವಕ ಅದರಲ್ಲಿ ಸೋಲುತ್ತೇನೋ, ಗೆಲ್ಲುತ್ತೇನೋ ಅದು ಮುಖ್ಯವಲ್ಲ ಏನಾದರೂ ಪ್ರಯೋಗ ಮಾಡುತ್ತಲೆ ಇರುವುದು ಇವನ ಜಾಯಮಾನ ಅದೆಲ್ಲದರ ಫಲವೇ ಇಂದು ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿಯವರೆಗೆ ಪುಸ್ತಕವಾಗಿ ಹೊರಬಂದಿದೆ.
ಈ ಪುಸ್ತಕಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಯುವ ಬರಹಗಾರರ ಚೊಚ್ಚಲ ಕೃತಿಗೆ ಧನ ಸಹಾಯ ಪಡೆದ ಕೃತಿಯಾಗಿದೆ. ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿಯವರೆಗೆ ಈ ಪುಸ್ತಕದಲ್ಲಿ ಹಾಲಿವುಡ್ ನಲ್ಲಿ ಅತ್ಯಂತ ಜನಪ್ರಿಯ ಚಲನಚಿತ್ರಗಳನ್ನು ಆರಿಸಿಕೊಂಡಿದ್ದು ಈ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಇಂಟರ್ ನೆಟ್ ಹಲವಾರು ವಿಮರ್ಶಕರು ಪುಟಗಟ್ಟಲೇ ಈ ಚಲನಚಿತ್ರಗಳ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಆದರೆ ಜಾಗತಿಕ ಮಟ್ಟದ ಸಿನಿಮಾಗಳ ಬಗ್ಗೆ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಪುಸ್ತಕಗಳು ಲಭ್ಯವಿಲ್ಲದಿರುವುದು. ಇದಕ್ಕೆ ಕಾರಣವಿರಬಹುದು. ಆದರೆ ಇಂತಹ ಪ್ರಯೋಗಕ್ಕೆ ತಾನು ಒಳಪಡಿಸಿಕೊಂಡಾಗ ಆಯ್ದಕೊಂಡಿರುವ ಚಲನಚಿತ್ರಗಳು ಬಂದು ಹಲವಾರು ವರ್ಷಗಳೇ ಕಳೆದಿವೆ. ಈ ಚಲನಚಿತ್ರಗಳನ್ನು ಸ್ಟಾರ್ ಮೂವೀಸ್ ಇನ್ನಿತರ ಚಾನೆಲ್ ಗಳಲ್ಲಿ ಆಗ್ಗಾಗ ಮರುಪ್ರಸಾರಗೊಂಡಿದ್ದು ಇಂತಹ ಚಲನಚಿತ್ರಗಳ ಬಗ್ಗೆ ಬರೆದರೆ ಅಂತಹ ಪುಸ್ತಕಗಳನ್ನು ಕೊಂಡು ಓದುವ ಓದುಗರು ಇದ್ದಾರೋ ಇಲ್ಲವೋ ಎಂಬ ಅನುಮಾನ ಎಂತಹವರನ್ನೂ ಸಹ ಕಾಡುತ್ತದೆ. ಆದರೂ ಸಹ ಇಂತಹ ಸಾಧ್ಯತೆಗಳಿಗೆ ಕೈ ಹಾಕಬೇಕಾದರೆ ಅವನಲ್ಲಿರುವ ವಿಶ್ವಾಸ ಮುಖ್ಯವಾಗುತ್ತೆ. ಅದಕ್ಕೆ ತನ್ನ ಬರವಣಿಗೆಯ ಶಕ್ತಿಯ ಪೂರಕವಾಗಿರಬೇಕಾಗುತ್ತದೆ.
ಈ ಪುಸ್ತಕದಲ್ಲಿ ಬರುವ ಆರು ಚಲನಚಿತ್ರಗಳು ಜಾಗತಿಕ ಸಿನಿಮಾರಂಗದಲ್ಲಿ ಒಳ್ಳೆಯ ಹೆಸರನ್ನು ಮಾಡಿರುವಂತಹ ಚಲನಚಿತ್ರಗಳನ್ನು ಈ ಪುಸ್ತಕದ ಲೇಖಕರು ಆಯ್ಕೆ ಮಾಡಿಕೊಂಡಿದ್ದು ಈ ಆಯ್ಕೆಗಳು ಸಹ ಭಿನ್ನತೆಯಿಂದ ಕೊಡಿದೆ ಈ ಚಲನಚಿತ್ರಗಳ ಕನ್ನಡ ಸಾಹಿತ್ಯದಲ್ಲಿ ಮೊದಲ ಪ್ರಯತ್ನವಾಗಿದ್ದು ಈ ಮೊದಲು ಕೆ.ವಿ.ಸುಬ್ಬಣ್ಣನವರ ಬೈಸಿಕಲ್ ಥೀವ್ಸ್ ಪುಸ್ತಕ ಕನ್ನಡ ಸಾಹಿತ್ಯಕ್ಕೆ ಒಂದು ಕೊಡುಗೆಯಾಗಿತ್ತು. ನಂತರ ಎ.ಎನ್.ಪ್ರಸನ್ನ ರವರ ಚಿತ್ರಕಥೆ ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಬರೆದ ಸಿನಿಮಾಯಾನ ಎಂಬ ಕೆಲವೇ ಬೆರಳಣಿಕೆಯಷ್ಟು ಪುಸ್ತಕಗಳು ಬಂದಿರುವುದು ಆದರೆ ಜಾಗತಿಕ ಸಿನಿಮಾದ ಬಗ್ಗೆ ಕನ್ನಡದಲ್ಲಿ ಬಂದಿರುವುದು ಕಡಿಮೆ. ಆದರೆ ಈ ಲೇಖಕರು ಈ ಪುಸ್ತಕದಲ್ಲಿ ಹಾಲಿವುಡ್ ಸಿದ್ದ ಸೂತ್ರಬದ್ದವಾದ ಚಲನಚಿತ್ರಗಳನ್ನು ಇಂತಹ ಪ್ರಯತ್ನವನ್ನು ಈ ಚಿಕ್ಕವಯಸ್ಸಿನಲ್ಲಿ ಇವರು ಆಯ್ಕೆ ಮಾಡಿಕೊಂಡಿರುವುದು ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ಆಶಾಭಾವದೊಂದಿಗೆ ಲಭ್ಯವಾಗಿದೆ. ಆದರೆ ಈ ಪುಸ್ತಕವೇ ಮೊದಲು ಅಥವಾ ಕೊನೆಯಾಗಬಾರದು ಮುಂದಿನ ದಿನಗಳಲ್ಲಿ ಈ ಲೇಖಕರಿಂದ ಸಿನಿಮಾ ಜಗತ್ತಿನ ಅತ್ಯಂತ ಶ್ರೇಷ್ಟ ಚಲನಚಿತ್ರಗಳು ಮತ್ತು ನಿರ್ದೇಶಕರೆಂದು ಪರಿಗಣಿತರಾಗಿರುವ ಚಲನಚಿತ್ರ ಮತ್ತು ನಿರ್ದೇಶಕರ ಬಗ್ಗೆ ಮತ್ತೊಂದು ಪುಸ್ತಕ ಹೊರಬರುವ ಬಗ್ಗೆ ಆಶಯವನ್ನು ಸಹ ಇಟ್ಟುಕೊಂಡಿರುತ್ತೇವೆ. ಈ ಪುಸ್ತಕದ ಮುನ್ನಡಿಯನ್ನು ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ಬರೆದಿದ್ದು ಮತ್ತು ಬೆನ್ನುಡಿಯನ್ನು ಲೇಖಕರಾದ ಜಿ.ಎನ್.ಮೋಹನ್ ಬರೆದಿದ್ದು ಈ ಪುಸ್ತಕದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿರುತ್ತಾರೆ. ಈ ಪುಸ್ತಕದಲ್ಲಿ ಬರುವ ಚಲನಚಿತ್ರಗಳಾದ ಜೋಸೆಫ್ ಕಾನ್ರಾಡ್ ನ "ಹಾರ್ಟ್ ಆಫ್ ಡಾರ್ಕನೆಸ್" ಕೃತಿ ಆಧಾರಿತ ಫ್ರಾನ್ಸಿಸ್ ಫೋರ್ಡ್ ಕಪ್ಪೋಲ ನಿರ್ದೇಶನದ "ಅಪೋಕ್ಯಾಲಿಪ್ಸ್ ನವ್" ಚಿತ್ರ, ಚಾರ್ಲಿಚಾಪ್ಲಿನ್ ನಿರ್ದೇಶನದ "ಮಾರ್ಡ್ನ್ ಟೈಮ್ಸ್" ಜೇಮ್ಸ್ ಬಾಂಡ್ "ಟುಮಾರೋ ನೆವರ್ ಡೈಸ್" ಹಾಗೂ ಆಲೈಸ್ ವಾಕರ್ಳ "ದಿ ಕಲರ್ ಪರ್ಪಲ್" ಕೃತಿ ಆಧಾರಿತ ಸ್ಟೀವನ್ ಸ್ಪೀಲ್ ಬರ್ಗ ನಿರ್ದೇಶನದ "ದಿ ಕಲರ್ ಪರ್ಪಲ್", ಮೆಲ್ ಗಿಬ್ಬನ್ಸ್ "ಅಪೋಕ್ಯಾಲಿಪ್ಟೋ" ರೋಮನ್ ಪೊಲಾನಸ್ಕಿಯ "ದಿ ಪಿಯಾನಿಸ್ಟ್" ಚಿತ್ರಗಳ ಬಗ್ಗೆ ಅಪರೂಪದ ಪ್ರಯತ್ನವನ್ನು ಈ ಲೇಖಕರು ಮಾಡಿದ್ದಾರೆ. ಈ ಲೇಖಕರ ವಿಭಿನ್ನವಾದ ಗ್ರಹಿಕೆ ಮತ್ತು ಸಿನಿಮಾದಲ್ಲಿರುವ ಆಳವಾದ ಆಸಕ್ತಿ ಇವುಗಳಿಂದ. ಇಂದಿನ ಪೀಳಿಗೆಗೆ ಜಾಗತಿಕ ಮಟ್ಟದ ಸಿನಿಮಾಗಳನ್ನು ನೋಡುವ ಹವ್ಯಾಸವುಳ್ಳವರಿಗೆ ಈ ಪುಸ್ತಕವೊಂದು ಹೊಸ ಅಭಿರುಚಿಯನ್ನು ಹುಟ್ಟಿಸುವುದರಲ್ಲಿ ಸಂಶಯವೇ ಇಲ್ಲ. ಈ ಆರು ಚಲನಚಿತ್ರಗಳಲ್ಲಿ ಬಳಸಿರುವ ವಸ್ತು ವಿಶೇಷತೆ ಚಲನಚಿತ್ರಗಳ ವಿಶ್ಲೇಷಣೆಗಳು ಒಂದು ಹೊಸ ವಿಭಿನ್ನ ದೃಷ್ಟಿಕೋನವನ್ನು ಸೃಷ್ಟಿಮಾಡುವುದರಲ್ಲಿ ಈ ಲೇಖನಗಳು ಗಮನ ಸೆಳಯುತ್ತವೆ. ಈ ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ವಿಶೇಷತೆಯನ್ನು ತಂದು ಕೊಟ್ಟಿದೆ. ಇಂತಹ ಪ್ರಯೋಗಶೀಲ ಹೊಸ ಬರಹಗಾರರು ಕನ್ನಡ ಸಾಹಿತ್ಯಕ್ಕೆ ಅವಶ್ಯಕತೆ ಇರುವುದರಿಂದ ಇಂತಹ ಪುಸ್ತಕಗಳನ್ನು ಕನ್ನಡದ ಓದುಗರ ಪ್ರೋತ್ಸಾಹಿಸಿದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಪುಸ್ತಕಗಳು ಕನ್ನಡ ಸಾಹಿತ್ಯಕ್ಕೆ ಬರುವುದರಲ್ಲಿ ಸಂಶಯೇ ಇಲ್ಲ. ಈ ಪುಸ್ತಕದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಇ-ಮೇಲ್ ಗೆ ಕಳುಹಿಸಿ vinaysamvedhane@gmail.com or mandyafilmsociety@gmail.com
ಪುಸ್ತಕ ದೊರೆಯುವ ಸ್ಧಳ : ಮಂಡ್ಯ ಫಿಲಂ ಸೊಸೈಟಿ,
"ಹೆಣ್ಣು", ೪ನೇ ಅಡ್ಡರಸ್ತೆ (ಕಬ್ಬಾಳಮ್ಮ ದೇವಸ್ಧಾನದ ಹತ್ತಿರ)
ಹೊಸಹಳ್ಳಿ, ಮಂಡ್ಯ.
ಲೇಖಕರ ದೂರವಾಣಿ ಸಂಖ್ಯೆ: 9972391577
Saturday, May 21, 2011
"ಒಲವೇ ಪೂಜೆ, ಇದುವೆ ಅವರ ರಸಜೀವನದ ಓಜೆ"
"ಒಲವೇ ಪೂಜೆ, ಇದುವೆ ಅವರ ರಸಜೀವನದ ಓಜೆ"
ಸೂಫೀ ಪ್ರೇಮ ಕಾವ್ಯ
ಈ ಮೊದಲು ನಾನು ಡಿ.ವಿ.ಜಿ ಯವರ ಅನುವಾದಿಸಿರುವ ಉಮರನ ಒಸುಗೆಯಲ್ಲಿ ಉಮರ‍್ ಖಯ್ಯಾಂ ಕೆಲವೊಂದು ರುಬಾಯಿಗಳನ್ನು ಡಿ.ವಿ.ಜಿಯವರ ಕೃತಿ ಶ್ರೇಣಿಯಲ್ಲಿ ಓದಿದ್ದ ನೆನಪನ್ನು ಬಿಟ್ಟರೆ ನನ್ನ ಪೀಳಿಗೆಯವರಿಗೆ ಇದನ್ನೆಲ್ಲ ಓದಿ ಅರಗಿಸಿಕೊಳ್ಳುವುದು ದೊಡ್ಡ ಮಾತು ಎಂದು ಅಲ್ಲಿಗೆ ಕೈಬಿಟ್ಟಿದೆ. ಆದರೆ ಇತ್ತೀಚಿಗೆ ಜೋಗಿಯವರ ಸೂಫಿ ಕಥೆಗಳನ್ನು ಓದಲು ಪ್ರಾರಂಭಿಸುತ್ತಿದ್ದಂತೆ ಸೂಫಿ ಕಥೆಗಳಲ್ಲಿನ ಅಂತ:ಶಕ್ತಿ ಹೊಸ ಅನುಭವವನ್ನು ನೀಡಿತು. ಆದ್ದರಿಂದ ಸೂಫಿ ಕಥೆಗಳ ಪುಸ್ತಕವನ್ನು ಓದಿದ ಮೇಲೆ ಮೊದಲು ಸೂಫೀ ಸಾಹಿತ್ಯದ ಬಗ್ಗೆ ತಿಳಿದು ಕೊಳ್ಳಬೇಕೆಂಬ ಆಸೆ ಶುರುವಾಯಿತು. ಆಗ ನಾನು ನನ್ನ ದೊಡ್ಡಪ್ಪನ ಹತ್ತಿರ ಈ ಬಗ್ಗೆ ಕೇಳಿದಾಗ ಮ.ಸು.ಕೃಷ್ಣಮೂರ್ತಿಯವರ ಸೂಫೀ ಪ್ರೇಮ ಕಾವ್ಯ ಪುಸ್ತಕ ಮನೆಯಲ್ಲಿ ಇದೆ ಅದನ್ನು ಒಮ್ಮೆ ಓದು ನಿನಗೆ ಸೂಫೀ ಸಾಹಿತ್ಯ ಎಲ್ಲಿ ಹುಟ್ಟಿತು ಎಂಬ ಬಗ್ಗೆ ನಿನಗೆ ಮಾಹಿತಿ ಸಿಗುತ್ತದೆ ಎಂದು ಹೇಳಿದರು. ನಾನು ಓದಲು ಶುರವಾದಂತೆ ನನಗೆ ಮನಸ್ಸಿಗೆ ತುಂಬಾ ಹತ್ತಿರವಾಗುವಂತಹ ವಿಚಾರದೊಂದಿಗೆ ಪುಸ್ತಕ ಇಷ್ಟವಾಗುತ್ತ ಹೋಯಿತು. ಆದ್ದರಿಂದ ಈ ಸೂಫೀ ಪ್ರೇಮ ಕಾವ್ಯದ ಪುಸ್ತಕದಲ್ಲಿ ಬರುವ ಕೆಲವೊಂದು ವಿಷಯಗಳನ್ನು ತಿಳಿಸುವ ಪ್ರಯತ್ನ ಇಲ್ಲಿದೆ.
ಸೂಫೀ ಸಂತರ ಬಗ್ಗೆ ಓದಲು ಶುರುಮಾಡಿದಾಗ ಒಂದೊಂದು ವಿಶೇಷ ಅರ್ಥದಲ್ಲಿ ಒಲವೇ ಪೂಜೆ, ಇದುವೆ ಅವರ ರಸಜೀವನದ ಓಜೆ. ಒಲವೇ ತಮ್ಮ ಬದುಕಾಗಿ ಉಳ್ಳ ಈ ಸೂಫೀ ಸಂತರು ಅರೇಬಿಯಾದ ಮರುಭೂಮಿಯಲ್ಲಿ ಪ್ರೇಮದ ಹುಚ್ಚು ಹೊಳೆಯನ್ನು ಹರಿಸಿದವರು. ಒಮ್ಮೆ ಸೂಫೀ ಸಂತ ರಮಣಿ ರಬಿಯಾಳನ್ನು ಯಾರೋ ಕೇಳಿದರಂತೆ " ನೀನು ದೇವರನ್ನು ಪ್ರೀತಿಸುವೆಯಾ?" ಎಂದು ಹೌದು , ಪ್ರೀತಿಸುತ್ತೇನೆ ಎಂದು ಅವಳು ಹೇಳಿದಳಂತೆ " ಹಾಗಾದರೆ ಸೈತಾನನ್ನು ದ್ವೇಷಿಸುವೆಯಾ? ಅದಕ್ಕೆ ಅವಳು ಹೇಳಿದಳಂತೆ " ನನ್ನ ಹೃದಯದಲ್ಲಿ ಪ್ರೇಮ ಎಷ್ಟೊಂದು ತುಂಬಿ ತುಳುಕಾಡುತ್ತಿದೆಯೆಂದರೆ ಅದರಲ್ಲಿ ಇತರರನ್ನು ದ್ವೇಷಿಸಲು ಜಾಗವೇ ಇಲ್ಲ ಎಂದು.
ಇಸ್ಲಾಮಿನ ಒಡಲಿನಿಂದ ಮೂಡಿದ ಈ ಧರ್ಮ ಧರ್ಮಾಂಧರ ದುರಾಗ್ರಹಕ್ಕೆ ಸಿಲುಕಿ ನಲುಗಿತು. ಇದರಿಂದ ಹಲವಾರು ಸೂಫಿ ಕವಿಗಳು ತಲೆದಂಡ ತೆತ್ತರು. ನೋವೇ ಅವರ ಹೃದಯದ ಹಾಡಾಗಿ, ಹೂವಾಗಿ ಅರಳಿ ಇಡೀ ಇರಾನಿ ಸಾಹಿತ್ಯದಲ್ಲಿ ಅದು ಘಮಘಮಸಿತು. ಸೂಫೀ ಸಂತರ ವೇದನೆ ನಿವೇದನೆಗಳಿಂದ ಇಡೀ ಫಾರಸೀ ಸಾಹಿತ್ಯ ಪ್ರಖ್ಯಾತವಾಗಿದೆ. ಇಸ್ಲಾಮಿನೊಂದಿಗೆ ಸೂಫೀ ಸಾಹಿತ್ಯ ಭಾರತಕ್ಕೆ ಬಂದು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ಅರಬ್, ಇರಾನ್ ಮತ್ತು ಭಾರತ ಸೂಫೀ ಸಾಹಿತ್ಯದ ಪ್ರಮುಖಸ್ಧಾನಗಳೆಂದು ಕರೆಯಲಾಯಿತು. ಸೂಫೀ ಸಾಹಿತ್ಯ ಹಿಂದಿ, ಬೆಂಗಾಳಿ, ಉರ್ದುವಿನಲ್ಲಿ ಹೊಸತೊಂದು ಆಯಾಮವನ್ನು ಸೃಷ್ಟಿಮಾಡಿತು. ಈ ಸೂಫೀ ಪ್ರೇಮದ ಮಹಾಪೂರವನ್ನು ಇಮ್ಮಡಿಗೊಳಿಸಿತು. ಈ ಸೂಫೀ ಪ್ರೇಮ ಕಾವ್ಯದ ಬಗ್ಗೆ ಓದಬೇಕಾದರೆ ಮೊದಲನೆಯದು ಸೂಫೀ ಧರ್ಮ, ದರ್ಶನ ಮತ್ತು ಅದರ ಹುಟ್ಟು ಬೆಳವಣಿಗೆಯ ಇತಿಹಾಸವನ್ನು ತಿಳಿದುಕೊಳ್ಳಬೇಕು. ಇರಾನಿನ ಖ್ಯಾತ ಸೂಫೀ ಸಂತರಾದ ಸನಾಯ, ಅತ್ತಾರ‍್, ಶಬ್‌ಸತರಿ, ಉಮರ‍್ ಖಯ್ಯಾಂ,ಶೇಕ್ ಸಾದಿ ರೂಮಿಜಾಮಿ ಮತ್ತು ಹಾಫಿಜ್ ಹಾಗೂ ಭಾರತೀಯ ಸೂಫೀ ಸಾಹಿತ್ಯದಲ್ಲಿ ಹಿಂದಿಯ ಸೂಫೀ ಕವಿ ಮಲಿಕ್ ಮಹಮದ್ ಜಾಯಸಿಯ, ಅಮೀರ‍್ ಖಸ್ರೋ ಹೀಗೆ ಹಲವಾರು ಸೂಫೀ ಸಂತರ ವಿಶ್ವದಲ್ಲಿ ಸೂಫೀ ಸಾಹಿತ್ಯವನ್ನು ಪ್ರವರ್ಧಮಾನಕ್ಕೆ ತಂದಂತಹ ಮಹಾಪುರುಷರು.
ಸೂಫೀ ಶಬ್ದದ ಉತ್ಪತ್ತಿ ಹಜರತ್ ಮಹಮದರು ತೀರಿಕೊಂಡ ಇನ್ನೂರು ವರ್ಷದ ನಂತರ ಆಸ್ತಿತ್ವಕ್ಕೆ ಬಂದಂತೆ ಕಾಣುತ್ತದೆ. ಸೂಫೀ ಎಂದರೆ ಕೆಲವರ ಪ್ರಕಾರ ಮದೀನಾದಲ್ಲಿ ಮಸೀದಿಯೆದುರಿಗೆ ಒಂದು ಜಗುಲಿ "ಸುಫ್ವಾ" ಇತ್ತು ಅದರ ಮೇಲೆ ಕುಳಿತುಕೊಳ್ಳುತ್ತಿದ್ದ ಫಕೀರರೇ ಸೂಫೀಗಳು ಎಂದು ಇನ್ನೊಂದು ಮತದ ಪ್ರಕಾರ ಸೂಫಾ ಎಂದರೆ " ಪಂಕ್ತಿ" "ಸಾಲು" ಎಂದರ್ಥ "ಸಾಫ್" ಎಂದರೆ ಚೊಕ್ಕಟ ಅಥವ ಶುದ್ದ ಎಂಬ ಶಬ್ದದಿಂದ ಬಂದಿದೆ. ಹಾಗೂ ಸೂಫೀ ಸಂತರು ಶುಭ್ರ ಜೀವನ ನಡೆಸುತ್ತಿದ್ದರಿಂದ ಅವರು ಸೂಫೀ ಎನಿಸಿಕೊಂಡರು. ಆದರೆ ಮತ್ತೊಂದು ಮತದ ಪ್ರಕಾರ ಸೂಫೀ ಶಬ್ದ "ಸೋಫಿಯಾ" "ಸೋಫೋ ಎಂದರೆ ಜ್ಞಾನ ಎಂದು ಇವರ ಜ್ಞಾನದಿಂದಾಗಿಯೇ ಇವರನ್ನು ಸೂಫೀ ಎಂದು ಕರೆಯುತ್ತಿದ್ದರು. ಆದರೆ ಜನಾಭಿಪ್ರಾಯದ ಪ್ರಕಾರ ಸೂಫೀ ಶಬ್ದ "ಸೂಫ್" ಎಂದರೆ ಉಣ್ಣೆ ಎಂಬ ಶಬ್ದದಿಂದ ಬಂದಿದೆ. ಸೂಫೀ ಸಂತರು ಉಣ್ಣೆಯ ಟೋಪಿಯನ್ನು, ಕಂಬಳಿಯನ್ನು ಹೆಚ್ಚಾಗಿ ತೊಡುತ್ತಿದ್ದರಿಂದ "ಸೂಫೀ ಎಂದು ಹೆಸರು ಬಂದಿತೆಂದು ಪ್ರತಿತೀ ಇದೆ.
ಸೂಫೀ ಮತದ ಬಗ್ಗೆ ಹಲವಾರು ವಾಖ್ಯಾನಗಳು ಇವೆ. "ಕೇವಲು ಪರಮಾತ್ಮನಿಗೆ ತಿಳಿಯಬಲ್ಲ ಕಾರ್ಯಗಳನ್ನು ಪ್ರತಿಪಾದಿಸುವ, ಮತ್ತು ಯಾವಾಗಲೂ ಪರಮಾತ್ಮನ ಜೊತೆಯಲ್ಲಿ ಪರಮಾತ್ಮನಿಗೆ ಮಾತ್ರ ಬಲ್ಲ ರೀತಿಯಲ್ಲಿ ಜೀವಿಸುವವನೇ ಸೂಫೀ.
ಸೂಫೀ ಮತ ಪೂರ್ಣವಾಗಿ ಆತ್ಮಾನುಶಾಸನ. ಯಾವುದೇ ವಸ್ತುವಿನ ಮೇಲೆ ಅಧಿಕಾರವನ್ನು ಹೊಂದದಿರುವುದು ಮತ್ತು ಯಾವುದೇ ವಸ್ತುವಿನ ಅಧಿಕಾರಕ್ಕೆ ಒಳಪಡಿದಿರುವುದೇ ಸೂಫೀ ಮತ.
" ನಿನ್ನ ತಲೆಯಲ್ಲಿರುವುದನ್ನೂ ತೆಗೆದು ಹೊರಗೆ ಹಾಕುವುದು, ನಿನ್ನ ಕೈಯಲ್ಲಿರುವುದನ್ನೂ ತೆಗೆದು ಇತರರಿಗೆ ಕೊಟ್ಟು ಬಿಡುವುದು,ಮತ್ತು ನಿನ್ನ ಮೇಲೆ ಘಟಿಸುವ ಎಲ್ಲ ಘಟನೆಗಳಿಂದಲೂ ದೂರ ಸರಿಯುವುದೇ ಸೂಫೀ ಮತ.
ಹೀಗೆ ಹಲವಾರು ವಿಚಿನ್ನ ಅರ್ಥಗಳನ್ನು ನೀಡುವ ಒಂದು ಶಬ್ದ ಸೂಫೀ ಮತ. ಈ ಸೂಫೀಗಳಲ್ಲಿ ಯಾವುದೇ ವಿಶೇಷ ವರ್ಗಗಳಿಲ್ಲ, ಯಾವುದೇ ನಿಯಮ ಬದ್ದ, ಕಟ್ಟಪಾಡುಗಳಿಲ್ಲ ಇವರ ಮಾರ್ಗಗಳು ಅನಂತ. ಒಂದೇ ಮಾತಿನಲ್ಲಿ ಹೇಳುವುದಾದರೆ "ಚೆಲುವೆ ದೇವರು ಒಲವೇ ಪೂಜೆ" ಇದೇ ತಮ್ಮ ಬದುಕಾಗಿರುವ ಜನ ಸೂಫೀಗಳು.
ಈ ರೀತಿ ಸೂಫೀಗಳು ಪರಮಾತ್ಮನೊಡನೆ ಪ್ರೀತಿಯಿಂದ ಸಂಬಂಧವನ್ನು ಸ್ಧಾಪಿಸಿ ಉಪಾಸನೆ ಮಾಡುವ ಅನುಭವಿ ಮುಸಲ್ಮಾನರ ಉದಾರ ವರ್ಗವನ್ನು ಸೂಫೀ ಎಂದು ಕರೆಯಬಹುದು. ಮುಸ್ಮಿಂ ಅನುಭವವನ್ನು "ತಸವ್ವುಫ್" ಇಲ್ಲವೆ ಸೂಫೀ ಧರ್ಮ ಎಂದು ಕರೆಬಹುದು. ಸೋಫಿಯ, ಸೂಫಿ ಹಾಗೂ ಸಂಸ್ಕ್ರತದ "ಸ್ವಭಾಸ" ಶಬ್ದಗಳ ನಡುವೆ ತುಂಬ ಹೋಲಿಕೆ ಇದೆ.
ಸೂಫೀ ಮತವನ್ನು ಅರಿಯಬೇಕಾದರೆ ಮೊದಲು ಇಸ್ಲಾಮ್ ದೇಶಗಳಾದ ಅರಬ್ ಮತ್ತು ಇರಾನಿನ ಹಿನ್ನೆಲೆಯನ್ನು ಅರಿಯಬೇಕಾಗುತ್ತದೆ. ಅರಬ್ ಮತ್ತು ಇರಾನಿನ ಸಂಸ್ಕಾರ ಮತ್ತು ನಂಬಿಕೆಗಳು ತುಂಬ ಭಿನ್ನ ಭೌಗೋಳಿಕ ಪರಿಸ್ಧಿತಿಯಿಂದಾಗಿ ಅರಬರಲ್ಲಿ ಪ್ರಜಾತಾಂತ್ರಿಕವಾದ ಭಾವನೆಗಳು ಪ್ರಾಬಲ್ಯ ಹೆಚ್ಚು. ಇರಾನಿನಲ್ಲಿ ಇದಕ್ಕೆ ತದ್ವಿರುದ್ದ ಭಾರತೀಯರಂತೆ ಇರಾನಿಗಳು ರಾಜ ಪರಮಾತ್ಮನ ಪ್ರತಿನಿಧಿ ಎಂದು ನಂಬಿದ್ದರು. ಅರಬ್ ಮತ್ತು ಇರಾನಿನ ನಡುವೆ ಹಿಂದಿನಿಂದಲೂ ಸಂಬಂಧವೇನೊ ಇತ್ತು. ಆದರೆ ಎರಡು ದೇಶಗಳ ಇತಿಹಾಸ ಭಿನ್ನವಾಗಿತ್ತು. ಆದರೆ ಅರೇಬಿಯಾದಲ್ಲಿ ಎರಡು ಭಿನ್ನ ಪ್ರಕೃತಿಯ ಸಂಸ್ಕಾರದ ಜನ ಇದ್ದಾರೆ ಈ ಭಿನ್ನತೆಯ ಮೂಲ ಅವರ ಭೌಗೋಳಿಕ ಸ್ಧಿತಿ. ಇಡೀ ಅರೇಬಿಯಾದ ನಿವಾಸಿಗಳೆಲ್ಲ ಒಂದೇ ಜನಾಂಗದವರಾಗಿದ್ದರೂ ಉತ್ತರ ಅರೇಬಿಯಾದವರ ಜೀವನ ಅವರ ದೃಷ್ಟಿಕೋನ ದಕ್ಷಿಣ ಅರೇಬಿಯಾದವರಗಿಂತ ತುಂಬ ಭಿನ್ನವಾಗಿತ್ತು .ಇಸ್ಲಾಮಿನ ಉದಯದ ತರುವಾಯ ಅರಬ್ಬರ ಸಾಮ್ರಾಜ್ಯ ವಿಸ್ತರಿಸುತ್ತ ಹೋಯಿತು. ಜೊತೆಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳು ಹೆಚ್ಚಿನ ವಿಸ್ತಾರಪಡೆಯಿತು. ಅರಬ್ ಭಾಷೆ ಇತರ ಭಾಷೆಗಳ ಮತ್ತು ಸಂಸ್ಕೃತಿಗಳ ಸಂರ್ಪಕಕ್ಕೆ ಬಂದು ಈ ಭಾಷೆಯನ್ನು ಸಮೃದ್ದಗೊಳಿಸುವಲ್ಲಿ ಫಾರಸಿ ಸಾಹಿತ್ಯ ಹಾಗೂ ಇರಾನಿಗಳ ಪಾತ್ರ ಬಹಳ, ಇರಾನಿಗಳ ಇತಿಹಾಸ ಅತ್ಯಂತ ಪ್ರಾಚೀನವಾದುದು. ಇಸ್ಲಾಮ ಧರ್ಮ ಇರಾನಿಗೆ ಬರುವ ಮುನ್ನ ಇರಾನಿನ ಸಾಮ್ರಾಜ್ಯ ಅರಬ್ ನ ದಕ್ಷಿಣ ಭಾಗವಾದ ಅಲ್ ಯಮನ್ ಇರಾನಿನ ಸಾಮ್ರಾಟರ ಅಧೀನದಲ್ಲಿತ್ತು. ಆದರೆ ಇರಾನಿಯರ ಜೀವನದ ಮೇಲೆ ಇಸ್ಲಾಮ್ ಧರ್ಮದ ಪ್ರಭಾವ ಎಷ್ಟು ತೀವ್ರವಾಗಿತ್ತೆಂದರೆ ಇರಾನಿಗಳು ತಮ್ಮ ಇತಿಹಾಸವನ್ನೇ ಮರೆಯಬೇಕಾಯಿತು. ಅವರು ತಮ್ಮ ಭಾಷೆ ಮತ್ತು ಲಿಪಿಯನ್ನು ಬಿಟ್ಟು ಅರಬ್ಬೀ ಭಾಷೆ ಮತ್ತು ಲಿಪಿಯನ್ನು ಬಳಸತೊಡಗಿದರು. ಆ ಸಮಯದಲ್ಲಿ ಇರಾನಿಗಳಲ್ಲಿ ಅರಬ್ಬೀ ಭಾಷೆಯ ದೊಡ್ಡ ದೊಡ್ಡ ಲೇಖಕರು ಹುಟ್ಟಿಕೊಂಡರು ಅರಬ್ಬೀ ಸಾಹಿತ್ಯದಲ್ಲಿ ಇರಾನಿಗರಿಗೆ ಸಿಕ್ಕ ಅಷ್ಟು ಪ್ರಾಶ್ಯಸ್ತ ಮೂಲ ಅರಬ್ಬರಿಗೂ ದೊರೆಯಲಿಲ್ಲ. ಇದರ ಫಲವಾಗಿ ಇರಾನೀ ಸಾಹಿತ್ಯ, ಕಲೆ, ದರ್ಶನ ಮೊದಲಾದವು ಇಸ್ಲಾಮಿ ಜಗತ್ತಿನ ಸ್ವಂತ ಆಸ್ತಿಗಳಾದವು. ಇಸ್ಲಾಮ್ ಇರಾನನ್ನೇನೊ ಜಯಿಸಿತು. ಸಾಂಸ್ಕೃತಿಕವಾಗಿ ಅದು ಇರಾನಿನ ಮುಂದೆ ಸೋತಿತು.
ಸೂಫೀ ಮತದ ಮೂಲ ಸೆಲೆಯನ್ನು ಕಂಡುಹಿಡಿಯಬೇಕಾದರೆ ಅದರ ಸಾಮಾನ್ಯ ಲಕ್ಷಣಗಳನ್ನು ಅರಿಯಬೇಕು. ಪ್ರೇಮ ಒಂದು ಮಾನಸ ಪ್ರಕ್ರಿಯೆ.ಆದರ ಗುರಿ ಆನಂದ. ಸೂಫೀಗಳ ಪ್ರಕಾರ ಚೆಲುವೆ ದೇವರು, ಒಲವೇ ಪೂಜೆ. ಪ್ರೇಮವೇ ಸೂಫೀ ಮತದ ತಳಹದಿ ಪ್ರೇಮ ಮತ್ತು ಸೂಫೀ ಮತ ಎರಡೂ ಅಭಿನ್ನ ಎನ್ನುವವರಿದ್ದಾರೆ.
ಸೂಫೀಗಳ ಪ್ರಧಾನ ಭಾವ ರತಿ. ರತಿ ಮುಖ್ಯ ಉದ್ದೀಪನ ಸುರೆ. ಸುರೆ ಹಾಗೂ ರತಿಯ ಆಧಾರದ ಮೇಲೆ ಸೂಫೀ ಸಾಹಿತ್ಯದ ಭವನವೆಲ್ಲ ನಿಂತಿರುವುದು. ಇದರಲ್ಲೂ ರತಿಯ ಅವಲಂಬನವೇ ಸುರೆಯ ದಾತನೂ ಹೌದು. ಪ್ರೇಮ ಪಾತ್ರ ಮಾಶೂಕನೇ ಸಾಕಿಯ ಕೆಲಸ ಮಾಡಿ ಪ್ರೇಮ ಮದಿರೆಯನ್ನು ಕುಡಿಸಿ, ಪ್ರೇಮಿಯನ್ನು ತೃಪ್ತಿಗೊಳಿಸುತ್ತಾನೆ. ಪ್ರೇಮಿಯ ಸೌಂದರ್ಯ ಅಲ್ಲಾನ ಐಶ್ವರ್ಯ. ಅದ್ದರಿಂದ ಸುಂದರಿಯನ್ನು ಅಲ್ಲಾನ ಪ್ರತೀಕವೆಂದು ಭಾವಿಸಲಾಯಿತು. ಅಲ್ಲಾ ಪುರುಷ ಹಜರತ್ ಮಹಮ್ಮದ್ ರಿಗೆ ಕಿಶೋರ ರೂಪದಲ್ಲಿ ದರ್ಶನವಿತ್ತನಂತೆ. ಕಿಶೋರಿ ಪುರುಷನ ಅಂಗವಿಶೇಷದಿಂದ ರತಿಗಾಗಿ ನಿರ್ಮಿಸಲ್ಪಟ್ಟಳು ಅವಳ ಬೆನ್ನು ಹತ್ತಿ ಮನುಷ್ಯ ಮರ್ತ್ಯಲೋಕಕ್ಕೆ ಬಂದ ಅವನ ಸ್ವರ್ಗದಿಂದದೊಡಲ್ಪಟ್ಟ, ಕಿಶೋರಿ ಪ್ರೇಮ ಪ್ರಲೋಭನೆ ಕಾರಣವೆಂದು ಭಾವಿಸಲಾಯಿತು. ರಮಣಿಯನ್ನು ಉಮರ‍್ ಖಯ್ಯಾಂನಂಥ ಶ್ರೇಷ್ಟ ಕವಿ ಕೂಡ ಪ್ರೇಮದ ಆನಲಂಬವನ್ನಾಗಿ ಮಾಡಿಕೊಂಡ. "ಅಮರದ್"ನನ್ನೇ ತನ್ನ ಕವಿತೆಯ ಪ್ರತೀಕವನ್ನಾಗಿ ಮಾಡಿಕೊಂಡ ನಿಜವಾಗಿ ನೋಡಿದರೆ ಸೂಫೀಗಳು ಅವನ ಶಿಷ್ಯತ್ವವನ್ನೇ (ಮುರೀದಿ) ಮಾಡುತ್ತಾರೆ. ಮತ್ತು ಅವನ ಪ್ರೇಮ ಪ್ರಸಾರದಲ್ಲೇ ಮಗ್ನರಾಗುತ್ತಾರೆ. ಸೂಫೀಗಳು ಸಂಸ್ಕಾರದಿಂದಾಗಿ ಮಗಬಚ್ಚಗಳ ಬಳಿಗೆ ಹೋಗಲು ಉತ್ಸಾಹಕರಾಗಿದ್ದರು. ಪಾರಸಿಗಳು ಅನಾದಿಕಾಲದಿಂದಲೂ ಸೋಮರಸ ಪಾನ ಮಾಡುತ್ತಿದ್ದರೂ. ಅರಬ್ಬರೂ ಶರಾಬಿನ ಭಕ್ತರು. ಹೀಗಾಗಿ ಇಸ್ಲಾಮಿನ ಪ್ರಭಾವಿದ್ದರೂ ಅವರು ಮದಿರಾ ಪಾನಕ್ಕಾಗಿ ಬಾಯಿ ಬಿಡುತ್ತಿದ್ದರು. ಸೂಫೀಗಳು ಈ ಮಧುಪಾನವನ್ನೇ ಪ್ರತೀಕವನ್ನಾಗಿ ಗ್ರಹಿಸಿದರು ಮತ್ತು ಮಗಬಚ್ಚಗಳನ್ನು ಮುರ್ಶಿದ್, ಪೀರ‍್, ಸಾಕಿ, ಮಾಶೂಕ್, ಮೊದಲಾದ ಹೆಸರುಗಳಿಂದು ಕರೆದರು. ಸೂಫೀಗಳು ಹೆಣ್ಣುನ್ನು ಪ್ರೇಮ ಪ್ರತೀಕವೆಂದು ಬಗೆದರು, ಅರಬಿಯಂಥ ವಿದ್ವಾಂಸರ ಪ್ರಕಾಋ ಅಲ್ಲಾ ಅಮೂರ್ತ ರೂಪದಲ್ಲಿ ದರ್ಶನ ಕೊಡಲಾರ. ಆದ್ದರಿಂದ ಹೆಣ್ಣಿನ ರೂಪದಲ್ಲೇ ಆತನ ಸಾಕ್ಷಾತ್ಕಾರ ಶ್ರೇಷ್ಠ. ಈ ರೀತಿ ಸೌಂದರ್ಯವೇ ರತಿಯ ಆವಲಂಬನ, ಸುಂದರ ವಸ್ತುಗಳನ್ನು, ಸುಂದರಿಯನ್ನು ಕಂಡಾಗ ನಾವು ಆಕರ್ಷಿತರಾಗುತ್ತೇವೆ. ಈ ಆಕರ್ಷಣೆ ಆ ಲೌಕಿಕವಾದಾಗ ನಾವು ಭವಸಾಗರವನ್ನು ದಾಟ ಬಲ್ಲೆವು. ಆದ್ದರಿಂದಲೇ ರೂಮಿ, ಜಾಮಿಯಂಥ ಸಿದ್ದ ಫಕೀರರೂ ಕೂಡ ಯಾರನ್ನಾದರೂ ಪ್ರೀತಿಸುವಂತೆ ಒತ್ತಾಯಮಾಡಿದ್ದಾರೆ. ಅವರ ದೃಷ್ಟಿಯಲ್ಲಿ ಯಾವುದೇ ಸುಂದರಿಯನ್ನು ಪ್ರೀತಿಸದೆ ನಮ್ಮ ಮನಸ್ಸು ಪರಮಾತ್ಮನಲ್ಲಿ ತೊಡುಗುವುದಿಲ್ಲ. ಆದರೆ ಈ ಸುಂದರಿ ನಮ್ಮ ಪ್ರೇಮದ ವಾಹಕಳೇ ಹೊರತು ಆಲಂಬನವಲ್ಲ ಎಂಬುದನ್ನು ಮರೆಯಬಾರದು.
ಸೂಫೀ ಸಾಹಿತ್ಯದ ಪ್ರೇಮದರ್ಶನದಲ್ಲಿ ಸುರತಿಯ ಜೊತೆಗೆ ಸುರೆಯ ವಿಧಾನವಿದೆ. ಸುರಾ ಸೇವೆನೆಯಲ್ಲಿ ಏನೇ ದೋಷವಿರಲಿ ಆದರ ಒಂದು ಗುಣವೆಂದರೆ ಕ್ಷಣಕಾಲವಾದರೂ ಸರಿ, ಆದರ ಉಲ್ಲಾಸ, ಚಾರ್ತುರ್ಯಕ್ಕಾಗಿ ಸುರೆಯನ್ನು ಸೂಫೀಗಳು ಪ್ರತೀಕವಾಗಿ ಭಾವಿಸುತ್ತಾರೆ. ಸೂಫೀಗಳು ಸಾಕಿ (ಹೆಂಡ ಮಾರುವವರು) ಕುಡಿಸುವ ಹೆಂಡ ಹೆಂಡವಲ್ಲ. ಅಮೃತ ಆದರಿಂದ ಶಾಶ್ವತಾನಂದ ಪ್ರಾಪ್ತಿ ಎಂದು ನಂಬಿದ್ದರು.ಯಾವುದೇ ಫಾರಸಿ ಕವಿಗೆ ಸುರೆ, ಸುರಾವಿಕ್ರೀತೆಯಿಲ್ಲದೆ ಕಾವ್ಯದ ರಚನೆ ಮಾಡುವುದೇ ಕಷ್ಟವಾಯಿತು.
ಅರಬಿಯದಲ್ಲಿ ದೊರೆಯುವ ಸೂಫೀ ಸಾಹಿತ್ಯದ ಬಹುಪಾಲು ಅರಬರದಲ್ಲ ಇರಾನಿಗಳದ್ದು. ಸೂಫೀ ಸಾಹಿತ್ಯದಲ್ಲಿ ಮೂರು ಅಂಗಗಳು ಇವೆ ಅವುಗಳೆಂದರೆ ಪ್ರಬಂಧಗಳು, ಜೀವನ ಚರಿತ್ರೆಗಳು, ಕಾವ್ಯಗಳು ಮತ್ತು ಸೂಫೀಗಳ ಪ್ರತಿಷ್ಠೆ ಅವರ ಕಾವ್ಯವನ್ನೇ ಅವಲಂಬಿಸಿದ್ದರೂ. ಭಾರತದಲ್ಲಿ ಈ ಸೂಫೀ ಕಾವ್ಯದಲ್ಲಿ ಅಮೀರ‍್ ಖಸ್ರೋನಂಥ ಪ್ರಸಿದ್ದ ಕವಿಗಳು ಫಾರಸಿಯಲ್ಲಿ ಕಾವ್ಯ ರಚನೆ ಮಾಡಿದರು. ಆತನ ಕಾವ್ಯದ ಪ್ರಭಾವ ಎಷ್ಟೊಂದು ಇತ್ತೆಂದರೆ ಅನೇಕ ಇರಾನಿಗಳು ಅವನ ಶಿಷ್ಯರಾದರು. ಅಮೀರ‍್ ಖಸ್ರೋವಿನ ತರುವಾಯ ಮೊಗಲರ ಕಾಲದಲ್ಲಿ ಕಾವ್ಯಕ್ಕೆ, ಕವಿಗಳಿಗೆ ವಿಶೇಷ ಪ್ರೋತ್ಸಾಹ ದೊರೆಯಿತು. ಆ ಫಾರಸಿ ಕವಿಗಳ ಪರಂಪರೆಯನ್ನು ಮುಂದುವರೆಸಿದವರಲ್ಲಿ ಉರ್ದುವಿನ ಅಮರ ಕವಿ ಮಹಮದ್ ಇಕ್ಬಾಲ್ ಆದ್ವೀತಿಯರು.
ಸೂಫೀ ಕವಿಗಳ ಚರ್ಚೆ ಬಂದಾಗ ಉಮಾರ‍್ ಖಯಾಮ್ ಗಣಿತ ಹಾಗೂ ಜ್ಯೋತಿಷ್ಯಕ್ಕಾಗಿ ಹೆಸರಾಗಿದ್ದಾನೆ. ಸೂಫೀ ಕಾವ್ಯಕ್ಕಾಗಿ ಅಲ್ಲ. ಆದರೆ ಅವನ ಸ್ವಚ್ಛಂದತೆ ಪಾಶ್ಚಾತ್ಯರಿಗೆ ಎಷ್ಟೊಂದು ಪ್ರಿಯವಾಯಿತೆಂದರೆ ಅವನ ಮುಂದೆ ಉಳಿದೆಲ್ಲಾ ಫಾರಸಿ ಕವಿಗಳು ನಿಸ್ತೇಜರಾದರು. ರೂಮಿ ಮತ್ತು ಹಾಫಿಜರನ್ನು ಜನ ಮರತಂತೆ ಭಾಸವಾಗ ತೊಡಗಿತು. ಆದರೆ ಖಯಾಮ್ ವಿಜೃಂಭಿಸುತ್ತಿದ್ದಾನೆ. ಆತನ ಕವಿತೆ ಸಮಯಾನುಕೂಲವಾಗಿದೆ. ಆತ ಅನೇಕರ ದೃಷ್ಟಿಯಲ್ಲಿ ಸುರತಿ ಹಾಗೂ ಸುರೆಯ ನಿಜವಾದ ಭಕ್ತನಾಗಿದ್ದ ಮತ್ತು ಯಾವುದೋ ಪಾರ್ಥಿವ ಸಾಕಿಯೊಂದಿಗೆ ತನ್ನ ಗೋಳನ್ನು ತೋಡಿಕೊಳ್ಳುತ್ತಿದ್ದ. ದ್ರಾಕ್ಷಿಯ ಕನ್ಯೆಯಲ್ಲೇ ಅವನಿಗೆ ಎಲ್ಲವೂ ಕಾಣುತ್ತಿತ್ತು. ಏನಾದರಾಗಲಿ ಖಯಾಮ್ ಆನಂದಕ್ಕಾಗಿ ಕವಿತೆ ಬರೆಯುತ್ತಿದ್ದ.
ಸೂಫೀ ಸಾಹಿತ್ಯದಲ್ಲಿ ರುಬಾಯಿಗಳಲ್ಲಿ ಪ್ರತೀಕಗಳಿಗೆ ಗಜಲ್ ನಂತೆಯೇ ಸ್ಧಾನ ದೊರೆಯಿತು. ಸೂಫೀಗಳು ಹೃದಯ ತೋರುವುದು ಗಜಲ್ ನಲ್ಲೇ , ಭಾವಸಾಗರ ಗಜಲ್ ನಲ್ಲಿ ಉಕ್ಕಿ ಹರಿದಂತೆ ಬೇರೆ ಛಂಧಸ್ಸಿನಲ್ಲಿ ಆಗಲಿಲ್ಲ, ಗಜಲ್ ನಲ್ಲಿ ಪ್ರೇಮದ ಪ್ರಚಂಡ ಬಿರುಗಾಳಿ ಬೀಸಿತು. ಅದರಲ್ಲಿ ಧರ್ಮ, ಕರ್ಮ, ಆಚಾರ, ವಿಚಾರಗಳೆಲ್ಲ ಹಾರಿಹೋದವು. ಗಜಲ್ ಗಳಲ್ಲಿ ಶರಾಬು, ಸಾಕಿ, ಬುಲ್ ಬುಲ್, ಚಮನ್ ಮೊದಲಾದ ಪ್ರತೀಕಗಳ ಗುಣಗಾನವೇ ಗುಣಗಾನ.
ಪ್ರಸಿದ್ದ ರುಬಾಯಿಕರ ಉಮರ‍್ ಖಯಾಮ್ ಲಹರಿಯ ಜೀವ. ಆತ ಅಮರದ್ ಷರಸ್ತ್ (ಪ್ರಣಯ ಉಪಾಸಕ) ಅಲ್ಲ. ರಮಣಿಯ ಉಪಾಸಕ. ಆತ ರಮಣಿಯನ್ನೇ ಆಲಂಬನವನ್ನಾಗಿ ಮಾಡಿಕೊಂಡ, ಅಮರದ್ ನನ್ನು ಅಲ್ಲ ಅವನ ರುಬಾಯಿಗಳು ಕರ್ಮಕಾಂಡವನ್ನು ಚಿಂದಿಯೆಬ್ಬಿಸಿದ್ದಾನೆ. ಸೂಫೀ ಸಾಹಿತ್ಯದಲ್ಲ ಭಾವ ಪ್ರದರ್ಶನಕ್ಕೆ ಗಜಲ್ ಗಳಾದರೆ, ವ್ಯಂಗ್ಯ ವಿಡಂಬನೆಗೆ ರುಬಾಯಿಗಳನ್ನು ಆರಿಸಿಕೊಂಡರು. ಮಸ್ನವಿಯಲ್ಲಿ ರೂಮಿ, ಗಜಲ್ ನಲ್ಲಿ ಹಾಫಿಜ್ ಹಾಗೂ ರುಬಾಯಿಯಲ್ಲಿ ಖಯಾಮ್ ಆಯಾ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಿ ಸಾಹಿತ್ಯವನ್ನು ರಚಿಸಿದರು. ಆದ್ದರಿಂದ ರೂಮಿ ಆಚಾರ್ಯನೆನಿಸಿಕೊಂಡರೆ, ಹಾಫಿಜ್ ಭಕ್ತನೆನಿಸಿಕೊಂಡ, ಖಯಾಮ್ ಮನಸ್ವಿಯೆನಿಸಿದ.
ಉಮಾರ‍್ ಖಯಾಮ್ ಪರ್ಷಿಯಾ ದೇಶದಲ್ಲಿ ಆತ ಜ್ಯೋತಿಷಿಯಾಗಿ ಗಣಿತ್ಞನಾಗಿದ್ದ. ೧೧ನೇ ಶತಮಾನದ ಮಧ್ಯೆದಲ್ಲಿ ಜನಿಸಿದ ಖಯಾಮ್ ೧೨ ಶತಮಾನದಲ್ಲಿ ಮರಣ ಹೊಂದಿದ ಎಂದು ಕೆಲವರು ಹೇಳುತ್ತಾರೆ. ಖಯಾಮ್ ನ ಪೂರ್ವಿಕರು ಗುಡಾರ ಕಟ್ಟುವ ಕೆಲಸ ಮಾಡುತ್ತಿದ್ದರಂತೆ. "ಖೇಮಾ"(ಗುಡಾರ) ಶಬ್ದದಿಂದ ಖಯಾಂ ಶಬ್ದ ಬಂದಿರಬಹುದೆಂದು ಕೆಲವರ ಊಹೆ. ಖಯಾಮ್ ನ ಕವಿತೆಗಳ ಪೂರ್ಣ ಸಂಗ್ರಹ ಇನ್ನೂ ದೊರೆತಿಲ್ಲ. ಅತ್ಯಂತ ಪ್ರಾಚೀನ ಹಸ್ತಲಿಪಿ ಅವನ ನಿಧನದ ೭೫ ವರ್ಷಗಳ ತರುವಾಯ ನಿರ್ಮಿತವಾಯಿತು. ಇದೊಂದು ಸಂಕಲನದಲ್ಲಿ ೩೫೦ ರುಬಾಯಿಗಳಿವೆ. ಸುಮಾರು ಒಂದು, ಒಂದೂವರೆ ಸಾವಿ ರುಬಾಯಿಗಳಿಂದ ಇದನ್ನು ಸಂಗ್ರಹಿಸಿರಬಹುದು. ಈ ಕವಿ ಶಬ್ದಗಳ ಗುಡಾರ ಶಬ್ದಗಳ ಗುಡಾರ ಕಟ್ಟಿ ನಿಲ್ಲಿಸಬಲ್ಲ. ರೂಬಾಯಿಯ ನಾಲ್ಕುಗಳುಗಳ ಮೇಲೆ ಭಾವ ಅಥವಾ ವಿಚಾರಗಳನ್ನು ಗುಡಾರ ಹಾಕಿ ಬಿಡುತ್ತಾನೆ ಎಂದು ಹಿಂದಿಯ ಪ್ರಸಿದ್ದ ಕವಿ ಹರಿವಂಶರಾಯ್ ಬಚ್ಚನ್ ಹೇಳಿದ್ದಾರೆ.
೧೮ನೇ ಶತಮಾನದ ಮಧ್ಯದಲ್ಲಿ ಆಕ್ಸ್ ಫರ್ಡಿನ ಬೋಡಲಿಯನ್ ಲೈಬ್ರರಿಯಲ್ಲಿ ಒಂದು ಫಾರಸೀ ಹಸ್ತಲಿಪಿಯತ್ತ ಪ್ರೊ.ಕೋವೆಲ್ಲರ ಗಮನ ಹರಿಯಿತು. ಆದರಲ್ಲಿ ಖಯಾಮ್ ೧೫೮ ರುಬಾಯಿಗಳಿದ್ದವು ಇದನ್ನು ಇಂಗ್ಲೀಷ್ ಗೆ ಅನುವಾದಿಸಿದರು. ರುಬಾಯಿಗಳ ಮೂಲ ಸೌಂದರ್ಯವನ್ನು ಗ್ರಹಿಸದ್ದೇ ಅಲ್ಲ ಇನ್ನೂ ಹೆಚ್ಚಿಸಿದರು ಇದರಿಂದಾಗಿ ಅವರು ಅನುವಾದ ಚಕ್ರವರ್ತಿ ಎನಿಸಿಕೊಂಡರು. ಇಷ್ಟದರೂ ಅನುವಾದದ ರುಬಾಯಿಗಳಿಗೆ ಅಷ್ಟಾಗಿ ಸ್ವಾಗತ ದೊರೆಯಲಿಲ್ಲ ಒಬ್ಬ ಸಂಪಾದಕರಂತು ಇದು ಪ್ರಕಾಶನಕ್ಕೆ ಅನರ್ಹ ಎಂದು ತಿರಸ್ಕರಿಸಿದ್ದರು. ೧೮೫೯ರಲ್ಲಿ ೭೬ ರುಬಾಯಿಗಳಿದ್ದ ಪ್ರಥಮ ಸಂಸ್ಕರಣ ೨೫೦ ಪ್ರತಿಗಳನ್ನು ಅಚ್ಚು ಮಾಡಿದರು ಬೆಲೆ ಇಳಿಸಿದರು ಸಹ ಯಾರು ಕೊಳ್ಳುವರಿಲ್ಲದೆ ಕೊನೆಗೆ ಪ್ರಕಾಶರು ಹಳೆಯ ಹರಕಲು ಪುಸ್ತಕದ ಗುಂಪಿಗೆ ದೂಡಿದರು. ಇಂಗ್ಲೀಷ್ ನ ಇಬ್ಬರು ಪ್ರಸಿದ್ದ ಕವಿಗಳು ಅದು ಹೇಗೋ ಅದನ್ನು ಕೊಂಡರು, ಸರಿ, ಅವರಿಗೆ ಕೆಸರಿನಲ್ಲಿ ಕಮಲ ಕಂಡಿತು ಅವರು ಅದನ್ನು ಮನಸಾರೆ ಕೊಂಡಾಡಿದರು ದಿನಬೆಳಗಾಗುವುದರೊಳಗೆ ಅದು ಪ್ರಸಿದ್ದವಾಯಿತು. ಇಂದು ಒಂದು ಹಳೆಯ ಪ್ರತಿಗೆ ಲಕ್ಷಾಂತರ ಹಣ ಸುರಿಯವವರಿದ್ದಾರೆ.
ರುಬಾಯಿ ಕಾವ್ಯ ಸೌಂದರ್ಯವಂತೂ ಅದ್ಭುತ. ಇನ್ನು ದರ್ಶನದ ದೃಷ್ಟಿಯಿಂದ ಕೆಲವರಿಗೆ ಅದರಲ್ಲಿ ಸುಖವಾದೀ ದರ್ಶನ ಕಂಡುಬಂದರೆ ಕೆಲವರಿಗೆ ದು:ಖವಾದೀ ದರ್ಶನ. ಈ ನೆಲದ ಚೆಲುವು ಪರಮಾತ್ಮನ ಚೆಲುವೇ ಎಂಬ ಸೂಫೀ ದರ್ಶನ ಇದರಲ್ಲಿ ಗುಪ್ತಗಾಮಿನಿಯಾಗಿ ಹರಿದಿದೆ. . ಸಾಕಿ, ಮಧು, ಮಧುಬಾಲೆ, ಮಧುಶಾಲೆಯಂತೂ ಸೂಫೀಗಳ ಪ್ರಿಯ ರೂಪಕಗಳು ಉಮರ‍್ನ ಕಾವ್ಯ ತನ್ನ ಜಗತ್ತಿನ ಸ್ಧೂಲ, ಅಸಾಧಾರಣ, ಆಕರ್ಷಕ, ವರ್ಣರಂಜಿತ ಹಾಗೂ ಅರ್ಥಗರ್ಭಿತ ದೃಶ್ಯ ಹಾಗೂ ರೂಪಕಗಳ ಮಾಯಾ ಲೋಕವನ್ನೇ ನಮ್ಮ ಕಣ್ಣು ಮುಂದೆ ತೆರೆಯುತ್ತದೆ. ಆತನ ಭಾವಗಳು ನಮ್ಮ ಎದೆಯ ತುಡಿತವನ್ನು ಪ್ರತಿಬಿಂಬಸುತ್ತವೆ. ಎಂಬ ಅನುಭವ ಪ್ರತಿಯೊಬ್ಬನಿಗೂ ಉಂಟಾಗುತ್ತದೆ. ಈ ರೀತಿ ಉಮರ‍್ ಖಯಾಮ್ ಅಮರ, ಅಜರ.
*****
ಒಂದು ಪ್ರಾತ:ಕಾಲ ನನ್ನ ಮದಿರಾಗೃಹದಿಂದ ಒಂದು ದನಿ ನನ್ನ ಕಿವಿಗೆ ಬಿತ್ತು " ಓ ಮತ್ತ, ಮದಿರಾಲೋಲ, ಎದ್ದು ಕುಳಿತುಕೋ, ಬಾ: ಬದುಕಿನ ಬಟ್ಟಲು ತುಂಬುವ ಮುನ್ನ ನಾವು ದೈವೀ ಪ್ರೇಮದ ಬಟ್ಟಲನ್ನು ಪಾನ ಮಾಡೋಣ, ಮೃತ್ಯವಿಗೆ ಮುನ್ನ ಅವನನ್ನು ಪ್ರೀತಿಸೋಣ.
*****
ಪ್ರಣಯಮದಿರೆ, ನಮಗೆ ತುಂಬ ಲಾಭವುಂಟು ಮಾಡುತ್ತದೆ. ಆದರಿಂದ ನಮ್ಮ ಶರೀರ, ಪ್ರಾಣಗಳಿಗೆ ಶಕ್ತಿ ದೊರೆಯುತ್ತದೆ. ಆದರ ಪಾನದಿಂದ ರಹಸ್ಯಗಳು ಮೈದೋರುವುವು. ನನಗೆ ಆ ಮದಿರೆಯ ಒಂದು ಗುಟುಕು ಸಾಕು. ಅದು ದೊರೆತ ಬಳಿಕ ನನಗೆ ಜಗತ್ತು ಅಥವಾ ಜೀವನದ ಚಿಂತೆಯಿಲ್ಲ, ಸಾವಿನ ಚಿಂತೆಯೂ ಇರಲಾರದು.
*****
ಪ್ರಣಯ, ದಿನವೆಲ್ಲ ಪ್ರಣಯದಲ್ಲೇ ಮತ್ತನಾಗಿರಬೇಕು, ಅವನು ಹುಚ್ಚನಾಗಿ ವ್ಯಾಕುಲನಾಗಿ ಅಲೆಯುತ್ತಿರಬೇಕು. ಎಚ್ಚರವಿದ್ದರೆ ಪ್ರತಿಯೊಂದು ವಸ್ತುವಿನ ಚಿಂತೆ ಸುತ್ತಿಕೊಂಡಿರುತ್ತದೆ. ಆದರೆ ಉನ್ಮತ್ತನಾದಾಗ ಎಲ್ಲ ವಸ್ತುಗಳ ಗಮನವೂ ತಲೆಯಿಂದ ದೂರವಾಗಿ ಬಿಡುತ್ತದೆ. ಯಾವುದಾದರೂ ಗಮನವಿದ್ದರೆ ಉನ್ಮತ್ತಗೊಳಿಸಿದ ವಸ್ತುವಿನ ಗಮನವಿರುತ್ತದೆ.
*****
ನಾನು ಎಷ್ಟೊಂದು ಮದಿರೆಯನ್ನು ಪಾನ ಮಾಡುವನೆಂದರೆ ಆದರ ವಾಸನೆ ನನ್ನ ನೆಲದಡಿಯಿಂದ ಹೊರಟು ಗೋರಿಯನ್ನು ಮುಟ್ಟಲಿ, ಮತ್ತು ಆದರಿಂದಲೂ ಹೊರಹೊಮ್ಮಲಿ. ಆದರಿಂದ ಯಾರಾದರೂ ಉನ್ಮತ್ತ ಪ್ರೇಮಿ ಅದರ ಬಳಿಗೆ ಬಂದರೆ ಅದರ ವಾಸನೆಯಿಂದ ಮತ್ತೂ ಮತ್ತು ಹಿಡಿದು ಮೈ ಮರೆಯಲಿ.
*****
ಈ ಪ್ರಣಯದ ಮದಿರಾಗೃಹದ ಸೂಚಿಯಲ್ಲಿ ಎಲ್ಲಕ್ಕಿಂತ ಮೊದಲು ನನ್ನ ಹೆಸರು. ಮಸ್ತಿ ಮತ್ತು ಮದಿರಾಪಾನ ನನ್ನ ಪಾಲಿಗೆ ಬಂದಿದೆ. ಮದಿರಾ ವಿಕ್ರೇತರ ಈ ಮನೆಯಲ್ಲಿ ಇರುವುದೆಲ್ಲ ನಾನೇ. ನಾನೇ ಶರೀರ, ನಾನೇ ಪ್ರಾಣ, ಇಡೀ ಜಗತ್ತಿನ ಆಕೃತಿಗಳಲ್ಲಿ ನಾನೇ ಇದ್ದೇನೆ.
*****
ಜಗತ್ತಿನಲ್ಲಿ ಯಾವನಿಗೆ ತಿನ್ನಲು ಅರ್ಧ ರೊಟ್ಟಿ, ಕೂರಲು ತುಣುಕು ನೆಲ, ದೊರೆತಿದೆಯೋ ಮತ್ತು ಯಾವನು ಯಾರ ಆಳ ಅಲ್ಲವೋ, ಅರಸನೂ ಅಲ್ಲವೋ ಅವನೇ ಸುಖಿ. ಅವನು ಅದರಲ್ಲೇ ಮಗ್ನನಾಗಿರಲಿ. ಅವನ ಜಗತ್ತು ಎಲ್ಲಕ್ಕಿಂತಲೂ ಮಿಗಿಲು.
Thursday, April 28, 2011
ಶಾಶ್ವತವಲ್ಲ
ಶಾಶ್ವತವಲ್ಲ
ನಾನು ನೀನು ಒಂದೊಂದೇ ಹೆಜ್ಜೆ
ಇಡುತ್ತ ನಡೆದವು ಆ ಸಮುದ್ರ ದಂಡೆಯಲ್ಲಿ?
ಪಶ್ಚಿಮದಲ್ಲಿ ಸೂರ್ಯ ವಿರಮಿಸುತ್ತಾ ಇದ್ದಾನೆ
ತನ್ನ ಪಾಡಿಗೆ ತಾನು.
ನೀನು ಅಂದು ಹೇಳಿದ ಮಾತು
ಅದೋ ಅಲ್ಲಿ ನೋಡು ಕಾಣುತ್ತಿವೆ
ನಮ್ಮಿಬ್ಬರ ಜೋಡಿ ಹೆಜ್ಜೆಗಳು
ಉಸುಕಿನಲ್ಲಿ ಎದ್ದು ಕಾಣುತ್ತವೆ ಎಂದು
ಅವನೆಂದ ಅವು ಶಾಶ್ವತವಲ್ಲ
ಇನ್ನೊಂದು ಕ್ಷಣದಲ್ಲಿ ಆ ಹೆಜ್ಜೆಗಳು ಅಲ್ಲಿರುವುದಿಲ್ಲ
ದೊಡ್ಡ ಅಲೆ ಬಂದು ಅವುಗಳನ್ನು ಅಳಿಸಿ ಹಾಕುತ್ತವಲ್ಲ
ಇಲ್ಲಿ ಯಾವುದು ಶಾಶ್ವತವಲ್ಲ?

Wednesday, April 6, 2011
ಕನಸಾ ಮಾರುವಾ ಚೆಲುವ.......
ಈ ಬ್ಲಾಗ್ ಗೆ ಪ್ರೀತಿಯಿಂದ ಜಿ.ಬಿ.ಅರುಣಪ್ರಸಾದ್ ಬರೆದು ಕೊಟ್ಟ ಕಥೆ.
ಕನಸಾ ಮಾರುವಾ ಚೆಲುವ.......
ಅಷ್ಟು ಹೊತ್ತಿಗಾಗಲೇ ಆಳುವುದನ್ನೂ ಮರೆತಿದ್ದ ನಾನು ತಾಯಿಯ ಜೊತೆ ಇರಲೇ ಬೇಕು ಎಂದು ಹಠಕ್ಕೆ ಬಿದ್ದೆ. ಸದ್ಯಕ್ಕೆ ಸಮ್ಮುನಿದ್ದು ಮುಂದೆ ಕಾರ್ಯ ಸಾಧಿಸಬೇಕು ಎಂದು ತೀರ್ಮಾನಿಸಿದೆ. ಎಲ್ಲ ಹೊರಟರು ತಾಯಿಯ ಕಾಯಿಲೆಯ ಚಿಕಿತ್ಸೆಗೆ ಎಂಬ ನೆಪ ಮಾತ್ರ. ಆದರೆ ಹೋಗುವ ಊರಿನಲ್ಲಿ ಖರೀದಿಸಬೇಕಾದ ವಸ್ತು , ಮೋಜು-ಮಜಾ ನೋಡಬೇಕಾದ ಸ್ಧಳಗಳ ಬಗ್ಗೆ ಒಳಗೊಳಗೆ ಚರ್ಚೆ ಬಹಳವಾಗಿ ಕೇಳಿ ಬರುತ್ತಿತ್ತು. ಹೊರಡುವಾಗ ತಾಯಿ ಕಡೆಯದಾಗಿ ಎಂಬಂತೆ ನನ್ನ ತಲೆಯನ್ನು ಕೊಡವಿ ತನ್ನ ಎದೆಗಾನಿಸಿಕೊಂಡಳು. ನನ್ನ ಮನಸ್ಸಿನಲ್ಲಿಯೂ ಇದೇ ಕಡೇ ಭಾರಿಯ ಪ್ರೀತಿಯ ಸ್ಪರ್ಶ ಎಂದು ಅನಿಸಿದ್ದು ಯಾಕೆ ತಿಳಿಯದು?
ಅಲ್ಲೇ ಜಗಲಿಯ ಮೇಲೆ ಕುಳಿತೆ ಮನೆಗೆ ಬೀಗ ಹಾಕಲಾಗಿತ್ತು. ಸಂಜೆ ಮನೆಯವರು ಬಂದು ಬೀಗ ತೆಗೆಯುವವರೆಗೆ ನಾನು ಅಲ್ಲೇ ನೀರು ಬೇಕೆಂದರೂ ಸಂಜೆಯವರೆಗೆ ಕಾಯಬೇಕು. ಅಕ್ಕಪಕ್ಕದ ಮನೆಯಲ್ಲಿ ಕೇಳಿ ನೀರು ಕುಡಿಯವಂತೆಯೂ ಇಲ್ಲ. ಹಾಗೆ ಕುಳಿತವನಿಗೆ ಜೊಂಪಿನಂತೆ ನಿದ್ರೆ ಬಂತು ಮಲಗಿದೆ. ಕಣ್ಣು ಬಿಡುವ ಹೊತ್ತಿಗೆ ಸಂಜೆಯಾಗುತ್ತಾ ಬಂದಿತ್ತು.
ಹವಾಲ್ದಾರ ಏ ಇಲ್ಲಿ ಹಾಗೆಲ್ಲ ಕೂಗಿಕೊಳ್ಳಬಾರದು ಈ ಠಾಣೆಯ ಮುಖ್ಯಸ್ಧರು ಅವರು ಇಲ್ಲಿ ಕೊಗಿಕೊಂಡವರ ಗಂಟಲು ಸೀಳಿ ಬಿಡುತ್ತಾರೆ. ಎಂದ ಆದರೆ ಆ ಅಧಿಕಾರಿ ಮಾತ್ರ ಭಾರಿ ವಿನಿಯದಿಂದ ನನ್ನ ಹತ್ತಿರ ಬಂದು ತಲೆ ಸವರಿ ನನಗೂ ತಾಯಿಯಿದ್ದಾಳೆ. ಬಿಡು ಮಗು ಎಂದು ಆ ವಿನಿಯದಿಂದ ನನಗೆ ಅವನು ನಮ್ಮವನಲ್ಲ ಎನಿಸಿತು.
ಜೋಪುಡಿ ಬಳಿ ಬಂದಾಗ ಸಂಜೆ ಎಂಬುದು ಸರಿದು ಪಶ್ಚಿಮ ದಿಕ್ಕಿನಲ್ಲಿ ಉಷೆಯು ತನ್ನ ನಿಷೆಯ ಲೋಕದಲ್ಲಿ ತೇಲುತ್ತಿತ್ತು. ನನಗಾಗಿ ಯಾರು ಅಲ್ಲಿ ಕಾಯುತ್ತಿರಲಿಲ್ಲ, ಒಳಗೆ ಕುಳಿತ ಫಕೀರ ಅಚ್ಚರಿಯಿಲ್ಲದ ಕಣ್ಣುಗಳಿಂದ ನನ್ನನ್ನು ಒಮ್ಮೆ ನೋಡಿ ತಟ್ಟನೆ ಎದ್ದು ಬಂದು ನನ್ನ ತಲೆಯ ಮೇಲಿನ ಬುಟ್ಟಿಯನ್ನು ಎತ್ತಿಕೊಂಡು ತನ್ನ ಎದೆಯ ಮಟ್ಟದಲ್ಲೇ ಇಟ್ಟುಕೊಂಡ ನನಗೆ ಕಾಣಿಸುತ್ತಿರಲಿಲ್ಲ " ಸರಿ ಮಾರಿದ್ದೀಯ" ಆದರೆ ಖುಣಭಾರ ಅಧಿಕವಾಯಿತಲ್ಲೊ ಬಾಯಿಬಿಟ್ಟು ಕೇಳಿ ಪಡೆದೆಯೋ ಏನು? ಎಂದ ಇಲ್ಲ ನಾನು ಅದರ ಬಗ್ಗೆ ಬಾಯಿಯೇ ತೆರದಿಲ್ಲ ಎಂದೆ.
ಅಂದು ರಾತ್ರಿ ಗಂಜಿ ಕುಡಿದು ಮಲಗಿದವನಿಗೆ ಚಳಿಯ ಅನುಭವ ಆದರೂ ಹಿಂದಿನ ದಿನ ಹೊದೆಯಲು ನೀಡಿದ್ದ ಕಂಬಳಿಯನ್ನು ಫಕೀರ ನೀಡಲಿಲ್ಲ, ಖುಣಭಾರ ಹೊತ್ತು ತಂದದಕ್ಕೆ ಶಿಕ್ಷೆ ಅನುಭವಿಸು ಎಂದು ಹೇಳಿ ತಾನು ಹೊದ್ದು ಮಲಗಿದ ನಾನು ಮುಂದುವರಿದು ಮಾತಾನಾಡಲೂ ಆಗದೇ ಚಳಿ ತಡೆಯಲು ಆಗದೆ ದೇಹ ಎಂಬುದೇ ಹೀಗೆ ಇಲ್ಲದಿದ್ದರೆ ಇದ್ದೇ ಬಿಡುತ್ತದೆ ಒಮ್ಮೆ ಏನಾದರೂ ನೀಡಿದರೆ ಮತ್ತೆ ಮತ್ತೆ ಬೇಕು ಬೇಕೆನ್ನುವ ಹಪಾಹಪಿಗೆ ಬೀಳುತ್ತದೆ. ಇಡೀ ದೇಹವನ್ನು ಮುದ್ದೆಯಂತೆ ಕೊಕ್ಕರಿಸಿಕೊಂಡು ಮಲಗಿದೆ.
ಬೆಳಕು ಹರಿಯಿತು ನಾನೇ ಎದ್ದು, ಅದೇ ಸ್ನಾನ ಮತ್ತೆ ಕಶಾಯವಸ್ತ್ರ ಅದೇ ತಂಗಳು ಗಂಜಿ ಕುಡಿದ ನಂತರ ಅದೇ ಬುಟ್ಟಿ ತಲೆಯ ಮೇಲೆ ನಿನ್ನೆಗಿಂತ ಅದು ಮತ್ತಷ್ಟು ಭಾರ, ಅದನ್ನು ಹೊತ್ತು ನಾಲ್ಕು ಹೆಜ್ಜೆ ಹಾಕಿದವನಿಗೆ ತಲೆ ಉರಿಯುತ್ತಿರುವಂತೆ ಭಾಸವಾಯಿತು. ಹಿಂತಿರುಗಿ ನೋಡಿದೆ ಅದನ್ನು ಗಮನಿಸಿದ ಫಕೀರ ಓಡಿ ಬಂದು ತನ್ನ ಹೆಗಲ ಮೇಲಿದ್ದ ವಸ್ತ್ರವನ್ನು ಸಿಂಬಿ ಮಾಡಿ ಬುಟ್ಟಿಗೂ ತಲೆಗೂ ಮಧ್ಯ ಇರಿಸಿ ಈಗ ಸರಿಯಾಯಿತೇ? ಎಂದ ಹೌದು ಎಂಬಂತೆ ತಲೆಯಾಡಿಸಿ ಹೊರಟೆ.
ಅದೇ ದೊಡ್ಡದೊಡ್ಡ ಕಟ್ಟಡಗಳು ಕಪ್ಪಿ ಹೆಬ್ಬಾವಿನಂತೆ ಮುಲಗಿದ ರಸ್ತೆ ಮೊಗ್ಗಲಲ್ಲಿ ಹುಣ್ಣಿಮೆ ಚಂದ್ರನ ಹಾಲಿನ ಬಣ್ಣ ಮೀರಿಸುವಂತಹ ಶ್ವೇತ ವರ್ಣದ ಅಶ್ವಗಳ ಸಾಲು, ಸಾಲಿಗೆ ಸರಿಸಾಟಿ ಎಂಬಂತೆ ನಿಂತ ಅದ್ದೂರಿಯಾದ ಸಾರೋಟು, ಅವುಗಳ ಮಧ್ಯೆ ರಾಜ ಮಹಾರಾಜರಂತೆ ಧಿರಿಸು ಧರಿಸಿನಿಂತ ಸಾರಥಿಗಳು ಅವನ್ನು ನೋಡುತ್ತಿದ್ದರೆ ಕಣ್ಣು ಬೇರಡೆಗೆ ತಿರುಗಲೇ ಇಲ್ಲ ಪ್ರಯತ್ನಿಸಿದೆ. ಅಷ್ಟರಲ್ಲಿ ಘಟಿಸಬಾರದಿದ್ದ ಘಟನೆ ಘಟಿಸಿಯೇ ಹೋಗಿತ್ತು. ಸಾರೋಟು ಕುದುರೆ ಅಂದ ನೋಡುತ್ತಾ ಹೋಗಿ ಮುಂದೆ ಬಂದವರಿಗ್ಯಾರಿಗೋ ತಾಕಿನಿಂತೆ ಯಾರೆಂದು ನೋಡುವಷ್ಟರಲ್ಲಿ ಅವರೊಬ್ಬ ಹೆಣ್ಣು ಎಂಬುದು ಅವರ ಸೀರೆಯಿಂದ ತಿಳಿಯತಾದರೂ ಮುಖ ಮಾತ್ರ ಕಾಣಲೇ ಇಲ್ಲ.
ಕಡಲೂರಿನ ಕನ್ಯೆ ಮುಖ ನೋಡಲು ಸ್ಪಲ್ಪ ಹಿಂದೆ ಹಿಂದೆ ಹೋದೆ ಅವರ ಮಂಡಿ ಎತ್ತರಕ್ಕಿದ್ದ ನಾನು ಅವರ ಮುಖ ನೋಡಲು ಸ್ಪಲ್ಪ ಶ್ರಮಪಡಬೇಕಾಯಿತು. ಭಯ ಮಾಡಿದ ತಪ್ಪಿನ ಅರಿವಾಗಿ ಆಗಲೇ ನನ್ನ ಕೈ ಕಾಲು ಕಂಪಿಸಲು ಪ್ರಾರಂಭಿಸಿದ್ದವು. ಅವರು ಮುಖ ನೋಡಿದರೆ ಹೂ ನಗೆ ಸೂಸುತ್ತಿತ್ತು ಆ ಅವರು ಯಾರು ನೀನು? ಏನು ಹೆಸರು? ಅದೇನು ತಲೆಯ ಮೇಲಿನ ಬುಟ್ಟಿಯಲ್ಲಿ ಎಂದು ನಯ ವಿನಯಭರಿತ ಪ್ರೀತಿಯಿಂದ ಕೇಳಿದರೂ ಅವರು ಬೇರೆಯವರು ಅನ್ನಿಸಲಿಲ್ಲ ನಮ್ಮವರೇ ಎನ್ನಿಸಿತು.
ಅವರ ಮುಖದಲ್ಲಿ ನನ್ನ ತಾಯಿಯ ನೆನಪಿಸುವ ನಗುವಿನಿಂದ ಹಾಗಾಯಿತೇನೋ ತಿಳಿಯದು, ನಾನು.... ನಾನು.... ಸೇವಕ ನನಗೂ ಹೆಸರಿದೆ.... ಅನಾಥನಲ್ಲ ತಾಯಿಯಿದ್ದಾಳೆ, ಕನಸುಗಳಿವೆ ಬುಟ್ಟಿಯಲ್ಲಿ ಎಂದೆ ಖುಷಿಯಿಂದ ಹಿಗ್ಗಿ ಹೋದರು ಅವರು " ಓ ನೀನೇ ಏನು ಆ ಕನಸು ಮಾರುವವನು " ನಾನು ಎಷ್ಟು ವರ್ಷಗಳಿಂದ ಕಾಯ್ದು ಹಂಬಲಿಸಿದ್ದೆನೋ ಮಾರಾಯ ನಿನ್ನಂತ ಒಬ್ಬ ಕನಸು ಮಾರುವ ಹುಡುಗನಿಗಾಗಿ ಎಂದವರೇ? ಬಾ ಇಲ್ಲಿ ಎಂದು ಹೇಳಿ ಮುಂದೆ ನಡೆದರು ನಾನು ಅವರನ್ನೇ ಅನುಸರಿಸಿದೆ.
ಅಲ್ಲೇ ನಿಂತಿದ್ದ ಸಾರೋಟುಗಳಲ್ಲಿ ಅತೀ ಸುಂದರ ದುಭಾರಿ ಎನಿಸುವಂತಹುವುದನ್ನು ಏರಿ ಕುಳಿತರು. ಸಾರಥಿ ಬಾಗಿಲು ಹಾಕಲು ಮುಂದಾದಾಗ ಅವನನ್ನು ಹತ್ತಿಸಿ ಕೊಳ್ಳಿ ಎಂದು ಆಜ್ಞಾಪಿಸಿದರು. ಸಾರಥಿ ಅವರ ಅಣತಿಗೆ ಮುಂದಾಗಿ ಬಾ ಹತ್ತು ಎಂದ ನಾನು ಅವರ ಮುಖನೋಡಿ ನಾನು ನಡೆದ ಸಾಗಬೇಕಿದೆ. ಕನಸ ಮಾರಲು ಬಂದವನು ಗಾಡಿ ಬಂಡಿ ಹತ್ತವಂತಿಲ್ಲ ಅದು ಗುರುವಿನಾಜ್ಞೆ ಎಂದೆ. ಅವರು ಮುಖ ಕಪ್ಪುಗಟ್ಟಿತು. ಸರಿ ನಿಧಾನವಾಗಿ ನಡೆ ಎಂದು ಸಾರಥಿಗೆ ಹೇಳಿದರು ಗಾಡಿಯ ಹಿಂದೆ ನಾನು ನಡೆಯಲಾರಂಭಿಸಿದೆ.
ಕೆಲವು ಮೈಲಿಗಳು ಸಾರೋಟು ಸಾಗುತ್ತಿದ್ದಾಗ ಹಿಂದಿನ ಕಿಟಕಿಯಿಂದ ಅವರು ನನ್ನ ನೋಡುತ್ತಿದ್ದರು, ಸಾರೋಟು ವೇಗ ಹೆಚ್ಚಾದರೆ ತಗ್ಗಿಸಲು ಸಾರಥಿಗೆ ಹೇಳುತ್ತಿದ್ದರು ಕಡೆಗೆ ಒಂದು ವಿಚಿತ್ರವಾದ ಬಂಗಲೆ ಬಾಗಿಲಿಗೆ ಬಂದು ನಿಂತಿತು ಸಾರೋಟು.ಆ ಬಂಗಲೆಯಲ್ಲಿ ಬಿಸಿಲು ಬೆಳದಿಂಗಳು , ಹಗಲು-ಇರುಳು, ಸುಂದರ ಹಕ್ಕಿ ರಣಹದ್ದು, ಒಂದೆಡೆ ಕಡಲು-ಕಾನನ ಎಲ್ಲಾ ಒಟ್ಟಿಗೆ ಮೇಳೈಸಿತ್ತು ನಿಂತ ಸಾರೋಟಿನ ಸಾರಥಿ ಅವರನ್ನು ಕೈಹಿಡಿದು ಕೆಳಗಿಸಿ ರಾಜ ಮರ್ಯಾದೆ ತೋರಿದ ಅವನು ಅವರ ಕೈಹಿಡಿದಾಗ ನನಗೆ ಕೊಂಚ ಬೇಸರವಾಯಿತು. ಅದನ್ನು ಕಣ್ಣಲ್ಲೇ ಗಮನಿಸಿ ಅಪರಾಧಿ ಮನೋಭಾವದಿಂದ ನೋಡಿ ಕ್ಷಮಿಸು ಎಂಬಂತೆ ಕಣ್ಣಲ್ಲೇ ಕೇಳಿದರು. ನಾನೇ ತಪ್ಪು ಮಾಡಿದೆ ಎಂಬಂತೆ ಭಾಸವಾಗಿ ನಾನು ಏನೂ ಮಾತನಾಡದೆ ಅವರನ್ನು ಹಿಂಬಾಲಿಸಿ ಹೋಗುವಾಗ ಕಾವಲುಗಾರ ಅವರಿಗೆ ಅತೀ ವಿನಿಯ ಮತ್ತು ಮರ್ಯಾದೆಯಿಂದ ಸಲಾಮು ಮಾಡಿದ ನನ್ನನ್ನು ಯಾರು ಎಂಬಂತೆ ನೋಡಿದಾಗ ಕಾವಲುಗಾರ ನನ್ನ ತಡೆಯಲಿಲ್ಲ ಆದರೆ ಬುಟ್ಟಿಯನ್ನೊಮ್ಮೆ ಪರಿಶೀಲಿಸುವಂತೆ ನೋಡಿದ. ಭಾರವೇ ಇಳಿಸಲೇ ಎಂದು ಮುಂದೆ ಬಂದವನಿಗೆ ಹೇಳಿದ ಕನಸು ಮಾರುವವರೆಗೆ ಬುಟ್ಟಿ ಇಳಿಸುವಂತಿಲ್ಲ ಎಂದಾಗ ಅವರು ಹಿಂತಿರುಗಿ ನೋಡಿ ಫಕ್ಕನೆ ನಕ್ಕರು ಅದು ನನ್ನ ತಾಯಿಯ ನಗುವಿನಂತೆ ಇತ್ತು ಬಿಡು ಅವನನ್ನು ಎಂದು ಕಾವಲುಗಾರನಿಗೆ ಹೇಳಿ ಒಳಗೆ ಹೋದರು ನಾನು ಅವರನ್ನು ಹಿಂಬಾಲಿಸಿದೆ.
ಸರಿ ಒಟ್ಟು ಏಳು ಕನಸುಗಳು ಬೇಕು, ನನಗೆ ಸರಿ ಒಂದು ಕನಸಿಗೆ ಎಷ್ಟು ಪ್ರತಿಫಲ ನೀಡಬೇಕು ಹೇಳು ನಿನಗೆ ಎಂದರು, ನಾನು ಉತ್ತರ ನೀಡುವ ವೇಳೆಗೆ ನನ್ನ ಬುಟ್ಟಿ ಪರಿಶೀಲಿಸಿ, ಇದೇನು ಬರೀ ಏಳು ಕನಸುಗಳಷ್ಟೇ ಇವೆ. ನನಗಾಗಿಯೇ ತಂದಿಯೇನು? ಎಂದು ಆನಂದ ಭರಿತ ಧ್ವನಿಯಿಂದ ಕೇಳಿದರು. ನಾನು ಹೇಳಿದೆ ನನಗೆ ಪ್ರತಿಫಲ ಬೇಕಿಲ್ಲ, ಕನಸುಗಳನ್ನು ಕೊಂಡು ತೃಪ್ತಿಯಿಂದ ನೀವು ಅಲ್ಪ ಕಾಣಿಕೆ ನೀಡಿದರೂ, ಅದು ಕನಸು ಮಾರಲು ಕಳಿಸಿದ ಫಕೀರನಿಗೆ ಅರ್ಪಿತ ಎಂದೆ. ಆಗ ತಿಳಿಯಿತು ಪ್ರತೀ ಮಾತು ಮಾತಿಗೂ ಆಕೆ ಸರಿ, ಸರಿ, ಎನ್ನುತ್ತಾರೆ ಎಂದು ತಿಳಿಯಿತು. ಸರಿ ಎಂದು ಹೇಳಿದಂತೆ ನಡೆಯುತ್ತಾರೆ. ತಪ್ಪು ಎನ್ನುವುದಿಲ್ಲ, ನಡೆಯುವುದಿಲ್ಲ ಎಂದು.
ಇದ್ದ ಏಳು ಕನಸುಗಳನ್ನು ಅವರ ಕೈ ಸೇರಿದವು, ಬುಟ್ಟಿ ಭಾರ ಪೂರ್ಣ ಕಡಿಮೆಯಾಗಿತ್ತು. ಸರಿ ಒಳಗೆ ಬಾ ಪ್ರತಿಫಲ ನೀಡುತ್ತೇನೆ ಎಂದರು ಯಾಉ ಮನೆಯೊಳಗೂ ಹೋಗಬಾರದು ಎಂದು ಗುರುವಿನ ಅಪ್ಪಣೆ ನೆನಪಾಗಿ ಹಿಂದುಮುಂದು ನೋಡುತ್ತಿದ್ದವನಿಗೆ, ಅವರೇ ಹೇಳಿದರು ನಿನಗೆ ನಾನು ನೀಡುತ್ತಿರುವ ಪ್ರತಿಫಲ ತೀರಾ ಕಡಿಮೆ ಅದಕ್ಕೆ ಒಳಗೆ ಬಾ ಎಂದೆ ಎಂದು ಖುಷಿಯಿಂದ ಅವರ ಹಿಂದೆ ಹೋದೆ ಬುಟ್ಟಿ ತಲೆಯ ಮೇಲಿತ್ತು ಅಲ್ಲೇ ಮಂಚದ ಮೇಲೆ ಕುಳಿತಿದ್ದ ಹೆಂಗಸೊಬ್ಬರು ನನ್ನತ್ತ ದೃಷ್ಟಿ ಇಟ್ಟು ನೋಡಿ ಕ್ಯಾಕರಿಸಿ ಥೂ ಎಂದು ಉಗಿದು ಮಾನ ಮರ್ಯಾದೆ ಇಲ್ಲದ ಮುಂಡೇ ಮಕ್ಕಳು ಕನಸು ಮಾರಿಕೊಂಡು ಬದುಕುತ್ತಾರೆ. ಎಂದು ಬೈಯ್ದಳು, ನಾನು ಕಕ್ಕಾಬಿಕ್ಕಿಯಾದೆ ಒಳಗಿನಿಂದ ನನ್ನತ್ತ ನೋಡಿದ ಇವರು ಆಕೆಗೆ ತಲೆಸರಿಯಿಲ್ಲ ಎಂದು ಸನ್ನೆ ಮಾಡಿದರು.
ಪ್ರತಿಫಲ ತಂದು ನನ್ನ ತಲೆಯ ಮೇಲಿನ ಬುಟ್ಟಿಗೆ ಹಾಕಿದ ಅವರನ್ನು ನಿಮ್ಮ ಹೆಸರೇನು? ಎಂದು ಕೇಳಿದೆ ಅವರು ಅಚ್ಚರಿ ಪಡೆದೇ ಏಕೆ? ಎಂದು ಪ್ರಶ್ನಿಸಿದರು. ನೀವು ನನ್ನ ತಾಯಿಯಂತೆ ಕಾಣುತ್ತೀರಿ ಅದಕ್ಕೆ ಎಂದೇ ಅವರು ಮಂಡಿಯೂರಿ ನನ್ನ ಮುಂದೆ ಕುಳಿತು, ನನ್ನ ಎತ್ತರದಷ್ಟಾದ ಅವರು ನನ್ನ ಎರಡು ಗಲ್ಲ ಮುದ್ದಿಸಿ ಮುತ್ತಿಟ್ಟುಕೊಂಡಾಗ ಸಾಗರದ ಒಡಲಿಲ್ಲ ಅಗ್ನಿ ಕೆನ್ನಾಲಿಗೆ ಚಾಚಿದ ಅನುಭವವಾಯಿತು. ಏಕೋ ಏನೋ ಆನಂದ ಭಾಷ್ಪ ಕಣ್ಣೀನಿಂದ ಸುರಿಯಲಾರಂಭಿಸಿದವು. ಬಿಕ್ಕಿ ಬಿಕ್ಕಿ ಆಳಬೇಕು ಎನ್ನಿಸಿತು. ಜೀವನದಲ್ಲಿ ಮೊದಲ ಬಾರಿಯಾದರೂ ಹೊಡಯದಿದ್ದರೂ ಆಳಬೇಕು ಅನ್ನಿಸಿತು ಅತ್ತು ಬಿಟ್ಟೆ. ನಾನು ಆಳುವಾಗ ತಡೆಯಲಿಲ್ಲ, ಸರಿ ನನಗೆ ನಾಳೆ ಬರುವಾಗ ಬೇರೆ ಬೇರೆ ಕನಸುಗಳನ್ನು ತೆಗೆದುಕೊಂಡು ಬಾ ಎಂದರು. ಮತ್ತೆ ಅವರೇ ನನಗೆ ಬೇಕಾದ ಕನಸುಗಳು ನಿನ್ನ ಬಳಿ ನಾಳೆ ಇರುತ್ತದೆಯೋ ಇಲ್ಲವೋ ನಿನಗೆ ತಿಳಿಯದು ಅಲ್ಲವೆ, ಆದರೂ ದಿನಕ್ಕೊಮ್ಮೆಯಾದರೂ ಇಲ್ಲಿ ಬಂದು ಹೋಗು ಎಂದರ, ಈಗಿದ್ದ ಕನಸುಗಳು ಈಗಿನವು ನಾಳೆ ಎನ್ನುವಾಗ ಅದು ಬೇರೆಯಾಗಿರುತ್ತದೆ. ಕನಸುಗಳು ಇದ್ದೆರೆ ಅವು ನನ್ನವು ನಿನಗೆ ಯಾವುದೇ ಪ್ರತಿಫಲವಿಲ್ಲ ಎಂದು ನಕ್ಕರು ಧನ್ಯನಾದೆ ಎಂದು ಹೇಳಿ ಹೊರಗೆ ನಡದೆ ಅವರೂ ಸಹ ನನ್ನನ್ನು ಹಿಂಬಾಲಿಸಿದರು, ಕನಸುಗಳು ಖಾಲಿ ಖಾಲಿಯಾದ ಬುಟ್ಟಿಯಲ್ಲಿ ಪ್ರತಿಫಲವೂ ಕಡಿಮೇ ಎಂಬುದರ ಬಗ್ಗೆ ಖುಷಿಯಿಂದ ಅವರ ಮನೆಯ ಮುಖ್ಯದ್ವಾರದಿಂದ ಹೊರಗೆ ಬಂದು ಕಾವಲುಗಾರನನ್ನು ದಾಟಿ ಹಿಂತಿರುಗಿ ನೋಡಿದೆ ಅವರು ಹಿಂದೆ ಬಂದು ನನ್ನ ಬೆನ್ನಿಗೆ ನಿಂತಿದ್ದರು.
ಹಿಂತಿರುಗಿ ನೋಡಿದವನಿಗೆ ನೀನು ನನ್ನ ಹೆಸರು ಕೇಳಿದೆಯಲ್ಲ "ಕಡಲೂರ ಕನ್ಯೆ" ನಾನು ನನ್ನ ಹೆಸರು ಕೇಳಿದರೆ ಜನ ಆದರಾಥಿತ್ಯ ತೋರುತ್ತಾರೆ ನಿನಗೂ ನನ್ನ ಹೆಸರು ಕೇಳುವ ಆಸೆಯಾಗಿದೆ ಹೇಳಿದ ಮೇಲೆ ವಿಷಾದಪಡಬೇಡ ನನ್ನ ಹೆಸರು "ಬೇಸರ" ಎಂದರು. ಬಹಳ ಹಿಂದೆ ಇವರ ಹೆಸರು ಚಿರಪರಿಚಿತ ಎನಿಸಿತು ನನಗೆ, ಕನಸು ಮಾರಲು ಪ್ರಾರಂಭಿಸಿದ ದಿನದಿಂದ ಕನಸುಕೊಳ್ಳಲು ಬಂದವರೆಲ್ಲಾ ಆ ಹೆಸರನ್ನು ಜೊತೆಯಲ್ಲಿ ತರುತ್ತಿದ್ದರು.
ಆದರೆ "ಬೇಸರ" ಎಂಬ ಅವರನ್ನು ನಾನು ಈ ರೀತಿ ಸ್ಪಂದಿಸುವೆ ಎಂದು ಕೊಂಡಿರಲಿಲ್ಲ ಬಹುದೊಡ್ಡ ಹೆಸರಿನ ಅವರಿಗೆ ನನ್ನಂತಹ ಜನ ಜೋಪುಡಿಯಿಂದ ತಂದ ಕನಸು ಬಲು ಪ್ರಿಯ ಎಂಬುದು ತಿಳಿದು ನಗು ಬಂತು, ಅಲ್ಲಿಂದ ಕಾಲುಕಿತ್ತೆ ಬಲು ಚೆನ್ನಾಗಿ ಕನಸು ಮಾರುವುದನ್ನು ಅಪ್ಪಣೆಯಂತೆ ಕಲಿತ ನನ್ನ ಫಕೀರ ಬಹುವಾಗಿ ಮೆಚ್ಚಿಕೊಂಡಿದ್ದನಾದರೂ ದ್ರೋಹ ಚಿಂತನೆ ಎಂಬುದು ವ್ಯಾಪಾರದಲ್ಲಿ, ಆದರೆ ಇದು ಜೀವನ ಧರ್ಮ ಚಿಂತನೆ ಇಲ್ಲಿ ಲಾಭವಾದಷ್ಟು ದು:ಖ, ಗೋಳು, ನಷ್ಟವಾದಷ್ಟು ಸಂತಸವೇ ತಿಳಿಯತೆ ಎಂದ. ಅಷ್ಟರಲ್ಲಿ ಜೋಪಡಿಯ ಬಾಗಿಲಿಗೆ ರಾಜನರ್ತಕಿ ಬಂದು ನಿಂತು ನಕ್ಕಳು ಹ್ಞಾಂ ಎಂದ ಫಕೀರ, ಜೋಪುಡಿಯ ಮೂಲೆಯಲ್ಲಿ ತೆರೆಯಮರೆ ಮಾಡಿದ್ದ ಕಡೆ ಆಕೆಯನ್ನು ಕರೆದುಕೊಂಡು ಹೋದ, ಆಕೆ ಹೋದ ಮೇಲೆ ತಿಳಿಯಿತು ಆಕೆ ರಾಜನಿಗೆ ಕನಸು ಕೊಂಡ್ಯೊಯಲು ಬಂದಿದ್ದಳು ಎಂದು ಅದಕ್ಕೆ ಬದಲಾಗಿ ಸುರೆಯ ಬುರುಡೆಯನ್ನು ನೀಡಿ ಹೋಗಿದ್ದಳು. ಫಕೀರನು ರಾಜಾಜ್ಞೆ ಬೇಡ ಎನ್ನುವಂತಿರಲಿಲ್ಲ ಬುರುಡೆ ಮುಂದಿಟ್ಟುಕೊಂಡು ನನ್ನತ್ತ ನೋಡಿದ.
ಎದ್ದು ಹೋದ ನಾನು ಮತ್ತೊಂದು ಸುರೆಯ ಖಾಲಿ ಬುರುಡೆಯನ್ನು ತಂದು ಅರ್ಧ ಸುರೆಯನ್ನು ಅದಕ್ಕೆ ಸುರಿದು ನನಗೆ ಕೊಟ್ಟು ರುಚಿ ನೋಡೆಂದ ಗುರುವಿನಾಜ್ಞೆಯಂತೆ ಸುರೆಯನ್ನು ಹೀರಿದೆ ಆ ಹುಣ್ಣಿಮೆಯ ದಿನ ಚಂದಿರನ ನೋಡಿದರೂ ಕಡಲೂರ ಕನ್ಯೆ ಮುಖ ಬಿಂಬಿತವಾಗುತ್ತಿತ್ತು. ಕನಸು ಮಾರುವ ಕಾರ್ಯದಲ್ಲಿ ತಾಯಿಯ ನೆನಪು ಮರೆತಂತೆ ಆಗಿತ್ತು. ಕಡಲೂರ ಕನ್ಯೆ ನೋಡಿದ ಮೇಲೆ ಮತ್ತೆ ಮತ್ತೆ ನೆನಪಾಗಿ ನೋಡಲೇ ಬೇಕು ಎನಿಸುತ್ತಿತ್ತು.
ಕಡಲೂರ ಕನ್ಯೆಯ ಮುಖ ನೆನಪದಾಗಲೆಲ್ಲಾ ಅವಳ ಚಿತ್ರಣ ಎದುರಿಗೆ ಬಂದಾಗಲೆಲ್ಲಾ ಅವಳಲ್ಲಿ ಏನೋ ಕೊರತೆ ಇದೆ ಎಂದು ನನಗೆ ಅನ್ನಿಸತೊಡಗಿತು. ಸುರೆಯ ಮತ್ತಿನಲ್ಲೂ ಯೋಚನೆಗೆ ಬಿದ್ದೆ ಬಿಳಿಯ ಸೀರೆ, ಕಡುಕಪ್ಪು ಕುಪ್ಪಸ, ನೀಳ ಕೊದಲಿನಲ್ಲಿ ಕೆಂಚು ಬಣ್ಣ ಸಿರಿತನವ ಸಾರುತ್ತಿತ್ತು. ಕೇಶವೆಂಬುದು ಯಾವುದೇ ಬಂಧನವಿಲ್ಲದೆ ಸ್ವಾತಂತ್ಯ್ರವಾಗಿ ತಲೆಯ ಮೇಲೆ ವಿಹರಿಸುತ್ತಿತ್ತು. ಮುಖದಲ್ಲಿ ಸಂತಸದ ಸ್ವಾತಂತ್ಯ್ರಕ್ಕಿಂತ ಹೆಚ್ಚು ಬಲವಂತವಾಗಿ ತಂದುಕೊಂಡ ಗಾಂಭೀರ್ಯ, ನೋವು ನುಂಗಿಕೊಂಡಿರುವ ಬೇಸರ ಎದ್ದು ಕಾಣುತ್ತಿತ್ತು. ಅಂದು ನನ್ನ ನೋಡಿದ್ದೆ ನಕ್ಕರಲ್ಲ ಅದೇ ಮೊದಲ ನಗೆಯಿರಬೇಕು ಅವರ ಜೀವನದಲ್ಲಿ ನಕ್ಕಿದ್ದು ಎಂದು ಹಾಗೇ ನಿದ್ದೆಗೆ ಜಾರಿದೆ.
ಬೆಳಿಗ್ಗೆ ಫಕೀರನಿಗೂ ಮುಂಚಿತವಾಗಿ ನಾನೇ ಎದ್ದು, ತಯಾರಿ ಮುಗಿಸಿ ಕುಳಿತೆ ಎದ್ದು ಅಚ್ಚರಿಯಿಂದ ನನ್ನತ್ತ ಒಮ್ಮೆ ನೋಡಿದ ಫಕೀರ ಶುಚಿಯಾಗಿ ಬಂದು ಕುಡಿಯಲು ಕೊಂಚವೇ ಕೊಂಚ ಎನ್ನುವಷ್ಟು ಗಂಜಿ ನೀಡಿದ ಅದೂ ನನಗೆ ಬೇಡವಾಗಿತ್ತು ರಾತ್ರಿ ಹೀರಿದ ಸುರೆ ಕರುಳನ್ನು ಸುಡದಿರಲು ಹೊಟ್ಟೆಗೆ ಒಂದಿಷ್ಟು ಹಾಕಿಕೊಂಡು, ಕಡಲೂರ ಕನ್ಯೆಯ ಕಾಣುವ ತವಕದಲ್ಲಿ ಹೊರಟೆ, ಜೋಪುಡಿಯಿಂದ ಹೊರಬಂದ ನನ್ನ ತಲೆಯ ಮೇಲೆ ಅದೇ ಬುಟ್ಟಿ ಇಟ್ಟ ಫಕೀರ ನುಡಿದ ಮಾತು ಬಲು ಹರಿತವಾಗಿತ್ತು " ಕನಸು ಮಾರುವ ನೀನು ಕನಸುಕೊಳ್ಳುವ ಧೈರ್ಯ ಮಾಡದಿರು" ಎಂದ ತಟ್ಟನೆ ನಿಂತು ಅವನ ಮುಖ ನೋಡುತ್ತಾ ಹೆಜ್ಜೆ ಮುಂದೆ ಹಾಕಿದೆ ಮನಸ್ಸು ಬಲು ಭಾರವಾಗಿತ್ತು.
ಅದೇ ಹೆಜ್ಜೆಗಳು ಮುಂದುವರಿದು ಸಾರೋಟು ಅಶ್ವ ಸಾಲುನಿಂತ ಬೀದಿಯಲ್ಲಿ ಮುಂದೆ ಸಾಗಿತು. ಬೇರೆಯಾರಿಗಾದರೂ ತಾಕಿ ಮತ್ತೆ ಪಂಚಾಯಿತಿಯಾದಿತು ಎಂದು ಎಚ್ಚರಿಕೆಯಿಂದ ನಡೆಯುತ್ತಾ ಸಾಗಿದೆ. ಆದರೆ ಕಣ್ಣುಗಳು ಮಾತ್ರ ಕಡಲೂರ ಕನ್ಯೆಯ ಹುಡುಕುತ್ತಾ ಹೋದವು ಕಡೆಗೆ ಬಿಸಿಲು ಬೆಳದಿಂಗಳು ಬಂಗಲೆಯ ಮುಂದೆ ಬಂದು ನಿಂತೆ ಅದೇ ದ್ವಾರಪಾಲಕ ಏ ಯಾರು ನೀನು? ಎಂದ ನಾನು ತಡವರಿಸುತ್ತಾ ನಾನು ಕ....ಕ...ಕನಸು ಮಾರುವ ಸೇವಕ ಎಂದೆ ಓಹೋ ನಿನ್ನೆ ಕನ್ಯೆಗೆ ಕನಸು ನೀಡಿದವನು ನೀನೆಯೋ ಎಂದ? ಅಹುದು ಎಂಬಂತೆ ತಲೆಯಾಡಿಸಿದೆ. ಅವನ ಮಾತಿನಲ್ಲಿ ಕುಹಕವಿರುವುದು ನನಗೆ ತಿಳಿಯಿತು. ಅವನು ಇಂದೇನು ಕನಸು ತಂದಿರುವೆ ಅವಳಿಗೆ, ನಿತ್ಯ ನೂತನ, ಚಿರಯೌವ್ವನ,ಆತ್ಮ ಬಂಧನ, ಪ್ರೇಮ ಚುಂಬನ ಎಂದು ಗೇಲಿ ಮಾಡಿದ. ಅವು ಕನಸುಗಳಲ್ಲ ಅತಿ ಆಸೆಗಳು ಅಷ್ಟೇ ಎಂದೆ. ಅಷ್ಟರಲ್ಲಿ ಮನೆಯ ಮಾಳಿಗೆಯ ಉಪ್ಪರಿಕೆಯಿಂದ ಬೇಸರ ಹೊರಡಿಸಿದ ಫಾರ್ಮಾನು ಬಂತು ಏಯ್ ಅವನನ್ನು ಒಳಗೆ ಬಿಡು ಭೀತಿಗೊಂಡ ಪಾಲಕ ನನ್ನ ಒಳಗೆ ಬಿಟ್ಟುಕೊಟ್ಟು ಅವನ ಮುಖ ನೋಡಿದ ನಾನು ನಗಲಿಲ್ಲ. ಒಳಹೊಕ್ಕೆ ಉಪ್ಪರಿಕೆಯಿಂದ ಇಳಿದು ಬಂದ ಕನ್ಯೆ ಒಳಗೆ ಹೋದಾಗ ಕಡುಕಪ್ಪಾದರೂ ಸುಂದರವಾದ ನೋಡಿದರೆ ಸಾಕು ಮುದ್ದಾಡಬೇಕು ಎನಿಸುವಷ್ಟು ಆಸೆ ಹುಟ್ಟಿಸುವ ಕೂಸೊಂದು ತನ್ನ ತುಂಬ ದೇಹವ ಕುಣಿಸುತ್ತಾ ಕುಣಿತಕ್ಕಿಂತ ಜೋರಾಗಿ "ಗಿಲ್ಲನೆ" ನಗುತ್ತಾ ಮನೆಯ ತುಂಬಾ ಒಡಾಡುತ್ತಾ ಸ್ವಾತಂತ್ಯ್ರ ಸಿಕ್ಕ ಜಿಂಕೆಮರಿಯಂತೆ ಮುಕ್ತವಾಗಿ ಓಡಿ, ಓಡಿ ಮನೆಯ ತುಂಬೆಲ್ಲಾ ಕುಪ್ಪಳಿಸಿ ಗಿಲ್ಲನೆ ನಕ್ಕು ಚೀರಿ ಕೇಕೇ ಹಾಕುತ್ತಿತ್ತು ಅದು ಹಾಗೆ ತಪ್ಪು ಹೆಜ್ಜೆ ಹಾಕಿಕೊಂಡು ಕುಣಿಯುತ್ತಿದ್ದರೆ. ಅದರ ಕಾಲಿನ ಗೊಲಸು ಅದರ ನಗು ಕೇಕೇಯೊಂದಿಗೆ ಸ್ಪರ್ಧೆಗಿಳಿದಂತೆ ಸದ್ದು ಮಾಡುತ್ತಿತ್ತು ಅದನ್ನೆ ನೋಡಿ ಮೈಮರೆತು ನಿಂತೆ ನಾನು, ಆಕ್ಷಣ ತಲೆಯ ಮೇಲಿನ ಬುಟ್ಟಿಯ ಭಾರವೂ ಮರೆತುಹೋಯಿತು. ಅಷ್ಟರಲ್ಲಿ "ಬೇಸರ" ಉಪ್ಪರಿಕೆಯಿಂದ ಇಳಿದು ಬಂದು ಕನಸು ಮಾರುವ ನೀನು ಕೆಲವರಿಗೆ ನೀಡುವ ಕನಸಗಳೇ ಜೀವ ನೀಡಿದಂತೆ ಅಂತಹುದರಲ್ಲಿ ಬರುವುದೇ ತಡಮಾಡಿದರೆ ಎಂತೋ ಮಾರಾಯ ಎನ್ನುತ್ತಾ ತಲೆಮೇಲಿನ ಬುಟ್ಟಿಗೆ ಕೈ ಹಾಕಿದರು. ನಾನು ಮಗುವನ್ನು ನೋಡುತ್ತಿದ್ದೆ ಅದರಲ್ಲಿ ನೆಟ್ಟ ಕಣ್ಣು ತೆಗೆಯದೇ ನೋಡುತ್ತಿದ್ದೆ.
ಬುಟ್ಟಿಗೆ ಕೈ ಹಾಕಿದ ಕಡಲೂರ ಕನ್ಯೆ ಛೇ! ಎಂತಹುದು ಮಾರಾಯ ಇದು? ಇಂದು ಬರೀ ಕೆಟ್ಟ ಕನಸುಗಳೇ ತಂದಿದ್ದೀಯಾ, ಇವನ್ನೇ ಬೇಕು ಎಂದು ಆರಿಸಿ ತಂದಿಯೇನು ಎಂದರು? ನಾನು ಮೌನವಾಗಿದ್ದು ಮೆಲ್ಲನೆ ನುಡಿದೆ ಕನಸುಗಳನೆಂದೂ ನೋಡಿದವನಲ್ಲ ನಾನು, ಅವರು ನೀಡಿದ್ದು ಹೊತ್ತು ತಂದಿದ್ದೇನೆ. ನಿಮಗವು ಒಪ್ಪಿಗೆಯಾಗದಿದ್ದರೆ ಬಿಡಿ ನಾಳೆ ನಿಮ್ಮ ಕನಸುಗಳು ಸಿಗಬಹುದು ಹೊಸ ಸುಂದರ ಕನಸುಗಳ ನಿರೀಕ್ಷೆಯಲ್ಲಿರಿ ಭರವಸೆಗಳಿರಲಿ ಎಂದೆ ಮತ್ತೆ ಕಣ್ಣು ಮಗುವಿನತ್ತು ಹರಿಯಿತು.
ಆ ಮಗು ತನ್ನ ಕೈಯಲ್ಲಿದ್ದ ತಗಡಿನ ತುತ್ತೂರಿಯನ್ನು ನನ್ನತ್ತ ಎಸದೇ ಬಿಟ್ಟಿತು. ಆ ಕಡುಗಪ್ಪು ಕಂದ ಎಸೆದ ತುತ್ತೂರಿ ನೇರ ಬಂದು ನನ್ನ ಹಣೆಗೆ ತಾಗಿ ನೆತ್ತರು ಮುಖವನ್ನೆಲ್ಲಾ ವ್ಯಾಪಿಸಿತು, ತಕ್ಷಣ ಬಂದು ಕಡಲೂರ ಕನ್ಯೆ, ಸರಿ ಇದೊಂದು ಯಾವಾಗಲೂ ಹೀಗೆ ಅತಿ ಸಂತೋಷವಾದರೂ, ಅತಿದು:ಖವಾದರು ಹೀಗೆ ವ್ಯಕ್ತಪಡಿಸುತ್ತದೆ. ನೀನು ಏನು ಅನ್ಯತಹ: ಭಾವಿಸಬೇಡ ಎಂದವರು ಒಳಗೆ ಹೋಗಿ ಅರಿಶಿನ ತಂದು ಬಿಳಿಯ ಬಟ್ಟೆಯಲ್ಲಿ ಗಾಯಕ್ಕೆ ಕಟ್ಟಿದರು.
ಆ ನೋವಿನಲ್ಲೂ " ಈ ಮಗು ಯಾರದು? ಎಂದೆ ಹೋಲಿಕೆ ಅವರಂತೆ ಇರಲಿಲ್ಲವಾದ್ದರಿಂದ ಹಾಗೇ ಕೇಳಿದೆ, ಅದಕ್ಕೆ ಅವರು ಹೌದು ನನ್ನದಲ್ಲದಿದ್ದರೂ ನನ್ನದೆ ಈ ಊರಿಗೆ ಬಂದು ಮದುವೆ ಇಲ್ಲದೆ ಮಗುವಿನ ತಾಯಿಯಾದೆ, ಒದದಿದ್ದರೂ ವೈದ್ಯೆಯಾದೆ, ದಾರಿತಪ್ಪಿದವರಿಗೆ ಅಶ್ರಯವಾಗಿ ನಾನೇ ದಾರಿ ತಪ್ಪಿದ್ದೇನೆ. ಮನೆಯ ಮೂಲೆಯಲ್ಲಿ ಕುಳಿತಿದ್ದ ಆ ಹೆಂಗಸನ್ನೂ ನೋಡಿ ಅವರ‍್ಯಾರು ಅವರ ಹೆಸರೇನು ಎಂದೆ? ಅವರನ್ನೇ ಕೇಳು ಎಂದಾಗ ತಲೆಯ ಮೇಲಿನ ಬುಟ್ಟಿ ಸಮೇತ ಅವರ ಮುಂದೆ ನಿಂತು ನಿಮ್ಮ ಹೆಸರು ಎಂದೆ ನನ್ನ ಷರತ್ತುಗಳಿಗೆ ಒಪ್ಪಿದರೆ ಮಾತ್ರ ಹೆಸರು ಹೇಳುವೆ ಎಂದರು, ಅವರು ಷರತ್ತುಗಳನ್ನು ಹೇಳುತ್ತಾ ಹೋದರು ನಾನು ಅದಕ್ಕೆ ಒಪ್ಪಿಕೊಂಡು ಸರಿ, ಸರಿ ಎಂದೆ, ಏಕೆಂದರೆ ನನಗೆ ಅವುಗಳು ಷರತ್ತು ಅನ್ನಿಸಲೇ ಇಲ್ಲ ಬೆಳ್ಳಿ ತಟ್ಟೆಯಲ್ಲಿ ಉಣ್ಣ ಬೇಡ, ರಾಜನರ್ತಕಿ ಕರೆದರೂ ಅವಳ ಕೂಡಬೇಡ ನನ್ನಂತಹ ಸೇವಕನಿಗೆ ಅವ್ಯಾವೋ ಷರತ್ತಲ್ಲ ಎನಿಸಿ ಆಯಿತು ಎಂದೆ ಆಗ ಹೆಸರು ಹೇಳಿದರು ನಾನು"ಸುಂದರೀ ಚಿಕ್ಕಮ್ಮ" ಮಗು ಕೇಕೆ ಹಾಕಿ ನಕ್ಕಿತು ಕಡಲೂರ ಕನ್ಯೆ ಗದರಿದರು "ಏ ಗೆಜ್ಜೆ" ಒಳಗೆ ಬಾ ಎಂದು.
ಸರಿ ಆ ಮಗುವಿನ ಹೆಸರು ಗೆಜ್ಜೆ ಎಂಬುದು ತಿಳಿಯಿತು. ಅಲ್ಲಿಂದ ಹೊರಡಲು ಮುಂದಾಗಿ ಹೆಜ್ಜೆಯನ್ನು ದ್ವಾರದ ಕಡೆಗೆ ಹಾಕುತ್ತಿದ್ದರೂ ಸಹ, ಆ ಮಗುವಿನ ಹೆಸರು ಗೆಜ್ಜೆ ಎಂದೇ ಏಕೆ ಇಡಬೇಕು? ಗಂಟೆ ಎಂದಿಟ್ಟದ್ದರೆ ಚೆನ್ನಾಗಿರುತ್ತಿತ್ತು. ಎಂದು ಮನದಲ್ಲೇ ಯೋಚಿಸಿಕೊಂಡು ಜೋಪುಡಿಯ ದಾರಿ ಹಿಡಿದೆ. ಅನತಿ ದೂರದಲ್ಲಿ ಎದುರಾದ ತಲೆಗೆ ರುಮಾಲು ಸುತ್ತಿದ್ದ ಮೀಸೆ ಇಲ್ಲದ ಎತ್ತರದ ಫಕೀರನೊಬ್ಬ ಸುರೆ ಕುಡಿದ ಬುರುಡೆಯೊಂದಿಗೆ, ಎದುರಿಗೆ ಬಂದು,ಏ ನನಗೂ ಕನಸುಬೇಕು ಕೊಡುತ್ತಿಯ ಎಂದ ಬುಟ್ಟಿಯೊಳಗೆ ಕೈ ಹಾಕಿದ ಅದ್ಬುತ ಎಲ್ಲವು ಕೆಟ್ಟ ಕನಸುಗಳೇ ಇಷ್ಟು ನನಗೆ ಬೇಕು ಕ್ಷಮಿಸು ನನ್ನಲ್ಲಿ ಪ್ರತಿಫಲ ನೀಡಲು ಏನೂ ಇಲ್ಲ ಇರುವುದು ಸುರೆ ಬೇಕೆಂದರೆ ತಗೋ ಎಂದ ಬೇಡ ಎಂದು ಮುಂದೆ ನಡೆದೆ.
ಖಾಲಿ ಬುಟ್ಟಿಯೊಂದಿಗೆ ಹೋಗುವಾಗ ಪ್ರತಿಫಲ ದೊರೆಯದೆ ಹೋದದ್ದಕ್ಕೆ ಬೇಸರವಾಯಿತಾದರೂ ಮತ್ತೆ ಸಂತೋಷ ಕೆಟ್ಟ ಕನಸಿಗೆ ಯಾವ ಬೆಲೆ ಇದೆ ದು:ಖ ಒಂದೇ ಅದಕ್ಕೆ ಪ್ರತಿಫಲ ಎಂದು ನಿರ್ಧರಿಸಿ ಮುಂದೆ ಹೆಜ್ಜೆ ಹಾಕಿದೆ. ಮತ್ತೆ ಮಾರನೆಯ ದಿನ ಅದೇ ಬಂಗಲೆ, ಅದೇ ಬೇಸರದ ಹೆಸರಿನ ಕಡಲೂರಿನ ಕನ್ಯೆ, ಅದೇ ಗೆಜ್ಜೆ ಎಂಬ ಕಡುಗಪ್ಪು ಕೂಸು, ಅದೇ ರೋಗಿ, ಅದೇ ಸುಂದರೀ ಚಿಕ್ಕಮ್ಮ, ಕಡಲೂರ ಕನ್ಯೆ ಏನೋ ದುಗುಡದಿಂದ ಬಂದು ಬುಟ್ಟಿ ನೋಡಿದ ಕೂಡಲೇ ಇದ್ದ ಅಷ್ಟು ಕನಸುಗಳನ್ನು ಎತ್ತುಕೊಂಡರೇನೋ ಎಂಬಂತೆ ಭಾಸವಾಯಿತು. ಬುಟ್ಟಿ ಭಾರವೇ ಇಲ್ಲ ಸರಿ ನೀನು ಹೊರಡು ಎಂದರು.
ನಾನು ಹೊರಡಲು ಹೆಜ್ಜೆ ಎತ್ತಿಟ್ಟು ಹಾಗೆ ಅದೇ ರೋಗಿ ಬೈಯ್ದರು ಮುಂಡೇ ಮಗ ಕನಸು ಮಾರಿ ಸಿರಿವಂತನಾಗುವ ಆಸೆ ಇರಬೇಕು ಏನೂ ಪ್ರತಿಫಲ ನೀಡಬೇಡ ಅವನಿಗೆ ಎಂದರು.
ಆದರೆ ಬಾಗಿಲವರೆವಿಗೂ ಬಂದ ಕಡಲೂರ ಕನ್ಯೆ ಬೇಸರ, ನಮ್ಮ ಕಡಲೂರಿನಲ್ಲಿ ಹೀಗಿಲಲ್ ಮಾರಾಯ ಅಲ್ಲಿ ಕನ್ಯೆಯರ ಕನಸು ಯಾರು ಕದಿಯವುದಿಲ್ಲ ಅಲ್ಲಿ ಕನಸು ಮಾರುವವರೂ ಇಲ್ಲ, ಕೊಳ್ಳುವವರೂ ಇಲ್ಲ, ಇಲ್ಲಿ ಹೊರಗೆ ಹೋದರೆ ಕೊಲ್ಲುತ್ತಾರೆ ಎಂಬ ಭಯ, ಒಳಗಿದ್ದರೆ ಕನಸುಗಳಿಲ್ಲದೆ ಸಾಯುತ್ತೇವೆನೋ ಎಂಬ ಭೀತಿ, ಅದರೆ ನಿನ್ನಂತಹ ಮಾಂತ್ರಿಕ ಚಲುವ ತರುವ ಕನಸುಗಳೇ ಅದ್ಭುತ ನಾನು ನಿನಗೆ ಮಾರು ಹೋದೆ ಎಂದಾಗ ಎದೆ ನಡುಗಿತು. ಮೊನ್ನೆ ಜೋಪುಡಿಯಲ್ಲಿ ಫಕೀರ ನೀಡಿದ ಸುರೆ ಕುಡಿದು ಇವರ ಬಗ್ಗೆ ಚಿಂತಿಸಿದ್ದೆ ತಪ್ಪಾಯಿತೆ? ಎಂದು ಮನದಲ್ಲೇ ಪ್ರಶ್ನೆ ಹಾಕಿಕೊಂಡೆ ಅದು ಅವರಿಗೆ ಕೇಳಿಸಿತೆನೋ ಎಂಬಂತೆ ಸುರೆ ಕುಡಿದು ನನ್ನ ಬಗ್ಗೆ ಚಿಂತಿಸಿದ್ದು ತಪ್ಪಿಲ್ಲ ಬಿಡು ಎಂದರು ಗರಬಡಿದಂತೆ ನಿಂತುಬಿಟ್ಟೆ, ಅವರೇ ಮುಂದೆ ಬಂದು ನುಡಿದರು ನೀನು ಇನ್ನೂ ಕೂಸು ನಿನ್ನ ಚಿಕ್ಕ ಚಿಕ್ಕ ಆಸೆಗಳು ತಪ್ಪಲ್ಲ ಬಿಡು ಎಲ್ಲ ಆಗು-ಹೋಗುಗಳು ಅವರ ಮನೋಧರ್ಮ, ಚಿಂತನೆಯನ್ನು ಎತ್ತಿ ತೋರುತ್ತದೆ. ನೀನು ನನ್ನಲ್ಲಿ ನಿನ್ನ ತಾಯಿಯನ್ನು ಕಂಡಿದ್ದೀಯಾ, ಅದರಲ್ಲಿ ಅಪರಾಧವಿಲ್ಲ ನಾನು ನಿನಗಿಂತ ದೊಡ್ಡವಳು ನಿನ್ನ ಆಸೆಗಳನ್ನು ಅರಿಯಬಲ್ಲೆ ಎಲ್ಲಾ ವಿದ್ಯಾಮಾನಗಳನ್ನು ತಿಳಿಯಬಲ್ಲೆ ಆದರೆ ಕನಸುಗಳಿಲ್ಲದೆ ಬದುಕಲಾರೆ ಎಂದಾಗ ಅವರ ಕಾಲಿಗೆರಗಿದೆ ಕೆಲಹೊತ್ತು ಮೌನ ಅವರಿಸಿತು.
ಸರಿ ಬುಟ್ಟಿಯ ಕನಸುಗಳೆಲ್ಲಾ ನಾನೇ ಕೊಂಡಿರುವೆ ಅದು ಖಾಲಿ ಖಾಲಿ ಅದನ್ನು ಈಗ ಕೆಳಗಿಳಿಸು, ನಾನು ನಿನ್ನ ಮನಸ್ಸಿನ ಭಾಷೆಯನ್ನು ಅರಿತಿರುವೆ ನಿನ್ನ ಭಾವನೆಗೆ ತಕ್ಕಂತೆ ನೀನೇ ಕನಸುಗಳ ಹೊಸೆದು ಮಾರಬಾರದೇಕೆ? ಅದು ನಿನಗೆ ಬೇಕಾದ ಬೆಲೆಗೆ ಕೊಳ್ಳಲು ನಾನು ಸಿದ್ದ ಎಷ್ಟು ದಿನ ಈ ಫಕೀರನ ಜೋಪುಡಿಯಲ್ಲಿ ಪ್ರತಿಫಲ ದೊರೆಯದ ಕನಸುಗಳ ಮಾರುವೆ ಎಂದರು.
ನಾನು ತಕ್ಷಣ ಹಿಂತಿರುಗಿ ನುಡಿದೆ ನನಗೆ ಬೇಕಿರುವುದು ನನ್ನ ತಾಯಿಯನ್ನು ನೋಡಲು ಅವಕಾಶ ಅವರನ್ನು ಹುಡುಕುವುದೇ ನನ್ನ ಕಾಯಕ ಅಲ್ಲಿಯವರೆವಿಗೆ ಏನಾದರೂ ಸರಿ ಮಾಡುವೆ ಆದರೆ ಅದಕ್ಕೆ ಸೇತುವೆಯಂತಿರುವ ಫಕೀರ ತೋರಿದ ದಾರಿ ಬಿಟ್ಟು ಬೇರೆಡೆಗೆ ನಡೆದು ನಶ್ವರ ಜಗತ್ತಿಗೆ ಮಾರುಹೋಗುವ ಅದರಿಂದ ನೋವು ನೋಡುವ ಕಾಯಕ ನನಗೆ ಬೇಡವೇ ಬೇಡ ಅಂದೆ ಒಹೋ ಮಾತೆಗೆ ನಿನೇನಾಗಬೇಕು? ಎಂದರು ನಾನು ಆಕೆಯ ಮಗ ಎಂದೆ. ಕೂಡಲೇ ನನ್ನ ಅಪ್ಪಿ ಮುದ್ದಾಡಿದರು ನನ್ನ ಅಯ್ಯೋ ನಾನು ಮಾತೆಯ ಮಗನೇ ಇಷ್ಟು ದಿನ ನನಗೆ ಎಂಥೆಂಥ ಕನಸು ನೀಡಿದವನು. ನಾನು ಮಾತೆಯನ್ನು ಬಲು ಬಲ್ಲೆ ಆಕೆಯೂ ಕಡಲೂರಿನ ಪುತ್ರಿ ಈ ಊರಿನ ಸೊಸೆ, ಕಡಲೂರಿನಲ್ಲೂ ಆಕೆಗೆ ಬಲುಗೌರವ ಅದಕ್ಕಿಂತ ಹೆಚ್ಚು ಇಲ್ಲಿ ಇಲ್ಲ ಎಂದು ಬೇಸರದಿ ನುಡಿದರು.
ನಾನು ಅವರಿಗೆ ತೀರ ಹತ್ತಿರದವನಾದೆ, ಆದರೆ ನನ್ನಲ್ಲಿ ಅದು ಕೊಂಚ ಇರಿಸು ಮುರಿಸಿಗೆ ಕಾರಣವಾಯಿತು. ಅವರು ನನ್ನನ್ನು ಸೇವಕನಂತೆಯೇ ಕಂಡಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂಬ ಆಲೋಚನೆ, ಅವರಿಗಾಗಿ ಕನಸ ಹೊತ್ತು ಹೋಗುವುದು ಪ್ರತಿನಿತ್ಯ ಮುಂದುವರಿಯಿತಾದರೂ ನಾನು ಕನಸನ್ನು ಕಣ್ಣಿನಿಂದ ಕೂಡ ನೋಡಲೇ ಇಲ್ಲ , ಸುಂದರೀ ಚಿಕ್ಕಮ್ಮ, ಗೆಜ್ಜೆ, ರೋಗಿ ಇವರು ಯಾರು ಕನಸುಗಳ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ, ಅದೇ ರೋಗಿಯ ಬೈಗುಳ, ಚಿಕ್ಕಮ್ಮನ ನಗೆ, ಗೆಜ್ಜೆಯ ಗಿಲ್ಲನೆ ನಗು ಕೈಯಲ್ಲಿರುವ ತುತ್ತೂರಿ ಎಸೆಯವುದು ಕಂಡು ಅಲ್ಲಿಮದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದೆ.
ಕಾಲ ಕಳೆದಂತೆ ಕನಸು ಮಾರುವ ಕಾಯುಕ ಬೇಸರವಾಯಿತು. ಬೇರೆ ವೃತ್ತಿ ಅರಿಯದ ನಾನು ಸುಮ್ಮನೆ ಅದನ್ನೇ ಮಾಡುತ್ತಿದ್ದೆ. ನಾನು ಪ್ರೌಢಾವಸ್ಧೆಗೆ ಬರುತ್ತಿದ್ದ ಕಾರಣ ಚಿಗುರು ಮೀಸೆ ಮೂಡತೊಡಗಿದವು ಅಪರೂಪಕ್ಕೆ ಸಮಯ ಮಾಡಿಕೊಂಡು ಕಡಲೂರ ಕನ್ಯೆ ಭೇಟಿಯಾಗ ತೊಡಗಿದೆ. ಅವರ ಮುಖದಲ್ಲೀಗ ಗಾಂಭೀರ್ಯ ಮಾಯವಾಗಿ ಸಲೀಸಾಗಿ ನಕ್ಕು ಮನಬಿಚ್ಚಿ ಮಾತನಾಡಲು ಪ್ರಾರಂಭಿಸಿದರು. ನನ್ನ ಕನಸಿನ ಪ್ರಭಾವ ಅದು ಎಂದು ಆಗಾಗ ಹೇಳುತ್ತಿದ್ದರು.
ಆದೇಕೆ ಮಾತೆಯ ನೆನಪು ಅತಿಯಾಗಿ ಕಾಡಲಾರಂಭಿಸಿತು. ಒಂದು ದಿನ ಸಂಜೆ ಜೋಪಡಿಗೆ ಹಿಂತಿರುಗಿದವನು ರಾತ್ರಿ ಜೋಪುಡಿಯಲ್ಲಿದ್ದ ದೀಪದಲ್ಲಿ ಕಣ್ಣನ್ನೀರಿಸಿ ನೋಡುತ್ತಾ ಕುಳಿತೆ ಮಾತೆ ದೀಪದಿಂದ ಇಳಿದು ಬಂದಂತೆ ಭಾಸವಾಯಿತು. ಸಲ್ಪ ಹೊತ್ತು ನಿಂತ ಆಕೆಯನ್ನು ಕಂಡು ಹರ್ಷದಿಂದ ಆನಂದ ಭಾಷ್ಪ ಸುರಿಸಲಾರಂಭಿಸಿದೆ. ನನ್ನ ಮರೆತು ಹೋಗಿದ್ದೀಯಾ ನೀನು ಎಂಬಂತೆ ನನ್ನಡೆಗೆ ನೋಡಿದಳು ಮಾತೆ ಇಲ್ಲ ನಿನ್ನ ಬಂದು ಸೇರುವ ಗುರಿಯ ಹೊತ್ತ ನಾನು ಅಲ್ಲಿಯವರೆವಿಗೂ ಕಾಲ್ಪನಿಕ ಕಾಯಕದಲ್ಲಿ ತೊಡಗಿದ್ದೆ ಜೋಪುಡಿ ಸೇರಿ ನಿನ್ನಡೆ ನಡೆಯುವ ತ್ರಾಣ ಪಡೆದು ಬಂದೆ.
ಸರಿ ಇನ್ನಾದರೂ ನನ್ನೊಂದಿಗೆ ಬರಲು ಸಿದ್ದವಿದ್ದೀಯಾ ನೀನು ಎಂದು ಕೇಳಿದಳು ಮಾತೆ, ಇಲ್ಲ ಎನ್ನುವ ಮಾತೆ ಇಲ್ಲ ಸಿದ್ದ ನಡಿಯೆಂದೆ . ಅವಳು ಹೊರಟಳು ನಾನು ಅವಳನ್ನೇ ಹಿಂಬಾಲಿಸಿದೆ. ಅದೊಂದು ಬಂಗಲೆ ಸೇರಿದೆವು, ಆದರೆ ಬೆಳಿಗ್ಗೆ ಎದ್ದು ನೋಡಿದರೆ ಬಿಸಿಲು ಬೆಳದಿಂಗಳ ಮುಂದಿನ ಬಂಗಲೆಯಲ್ಲಿ ನಾನಿದ್ದೆ ಮಾತೆಯನ್ನು ಕೇಳಿದೆ ಆ ಮನೆಗೆ ಬಂದು ಹೋಗುತ್ತಿದ್ದ ನನ್ನ ಗುರುತಿಸಲಿಲ್ಲವೇ ನೀನು ಎಂದಾಗ, ಈ ಮನೆಗೆ ಬರುವವರು ದುಷ್ಟ ಜನವಾದ್ದರಿಂದ ನೀನು ತರುವ ಕನಸುಗಳ ಕೊಂದು ಸಂತಸಿಸುವವರೆಂದೂ ತಿಳಿದು ನಾನು ನಿನ್ನ ಕರೆಯಲಿಲ್ಲ ಹಿಂಬಾಲಿಸಿ ಬಂದು ಜೋಪುಡಿಯಿಂದಿ ಬರಿಗೈಲಿ ಕರೆತಂದೆ ನೋಡು ಎಂದಳು.
ಆಕೆ ನಕ್ಕರು ನನಗೆ ನಗು ಬರಲಿಲ್ಲ, ಅಷ್ಟು ಆಡಂಬರದಿಂದ ಆಕೆ ನಕ್ಕಳು ಯಾವುದೋ ನೋವು ನುಂಗಿದಂತೆ ಯಾವುದೋ ಪ್ರಳಯವನ್ನು ಎದುರು ನೋಡುತ್ತಿರುವಂತೆ ಭೀತಿ ಕಣ್ಣಿನಲ್ಲಿತ್ತು ಅಷ್ಟರಲ್ಲಿ ಅದ್ಯರೋ ಮನೆಯೊಳಗೆ ಬಂದಂತಾಯಿತು. ನನ್ನ ಬಾಗಿಲ ಹಿಂದೆ ಬಚ್ಚಿಟ್ಟು ಕೊಳ್ಳುವಂತೆ ಹೇಳಿ ಆಕೆ ಹೊರ ಹೋದಳು ಬಾಗಿಲು ಸಂದಿನಿಂದ ಇಣುಕಿ ನೋಡಿದೆ ನಾನು ಅವನೇ ಕೆಟ್ಟ ಕನಸುಗಳನ್ನು ಕೊಂಡ ಫಕೀರ ಬಂದು ಗೋಡೆಯೊರಗಿ ಕುಳಿತು ಧೂಮಲೀಲೆಯಲ್ಲಿ ತೊಡಗಿದ್ದ ಎದುರಿಗೆ ನಿಂತ ಮಾತೆಯನ್ನು ಬಾಯಿಗೆ ಬಂದಂತೆ ನಿಂದಿಸಿ ತೊಡಗಿದ ನಾನು ಅವನ ಅವಾಚ್ಯ ಶಬ್ದಗಳ ಸಹಿಸಲಾಗೆ ನುಗ್ಗಿ ಕೊಲ್ಲುವ ಆಕ್ರೋಶ ತಡೆದು ತಾಯಿಯ ಅಣತಿ ಪಾಲಿಸುತ್ತಿದ್ದೆ. ಅವನೇ ಎದ್ದು ಬಂದು ಬಾಗಿಲು ಹಿಂದೆ ಬಗ್ಗಿ ನೀಡಿ ಯಾರದು ಎಂದವನೇ ನನ್ನ ಮುಖದ ಮೇಲೆ ಅವನ ಹೊಗೆ ಬತ್ತಿ ಚಿಲುಮೆ ಎಸೆದ ತಕ್ಷಣವೇ ಎಚ್ಚರವಾಯಿತು ಫಕೀರಪ್ಪ ಗಂಜಿ ಕುಡಿಯಲು ಏಳಿಸಿದ. ಇದೇನು ಮುಸ್ಸಂಜೆಗೆ ಮಲಗಿ ಆಗಲೇ ಸ್ಪಪ್ನವೇ ಬೆಚ್ಚುತ್ತಿದ್ದೀಯ ಏನು ಪ್ರೇಮ ಸ್ಪಪ್ನವೋ ಎಷ್ಟು ಬಾರಿ ನಾನು ಹೇಳಿಲ್ಲ ನಿನಗೆ, ಕನಸು ಮಾರುವವರು ಕನಸು ಕಾಣಬಾರದು ಎಂದು ಗದರಿದ ಧ್ವನಿಯಲ್ಲಿ ಹೇಳಿದ. ನಾನು ಸತ್ಯದ ಮರೆಮಾಚುವ ರೀತಿಯಲ್ಲಿ ಇಲ್ಲ ಇಲ್ಲ ಎಂದು ಎದ್ದು ಕುಳಿತೆ ನೀಡಿದ ಗಂಜಿ ಹೀರಿದ ಮೇಲೆ ಸ್ಪಲ್ಪ ಹೊತ್ತು ಜೋಪುಡಿ ಮುಂದೆ ಸುತ್ತಾಡಿ ಬಂದರೂ ಹಗಲುಗಸಿನಲ್ಲಿ ಬಂದ ಮಾತೆಯ ನೆನೆದು ಅತ್ತೆ ಅವಳೇನೋ ತೊಂದರೆಯಲ್ಲಿದ್ದಾಳೆ ಎಂದು ತಿಳಿದು ಮನಸ್ಸಿನಲ್ಲೆ ನೊಂದೆ ಫಕೀರ ಕೂಡ ಇದನ್ನು ಅರಿತಂತೆ ಮೌನವಾಗಿ ಏನೋ ಆಲೋಚಿಸುತ್ತಿದ್ದ.
ಮುಗಿಯಿತು.
ಕನಸಾ ಮಾರುವಾ ಚೆಲುವ.......
ಮೂರು ತುಂಬುವ ಹೊತ್ತಿಗೆ ಮನೆಯವರಿಗೆ ಬೇಡವಾಗಿದ್ದ ನಾನು ತಾಯಿಗೆ ಮಾತ್ರ ಜೀವವಾಗಿದ್ದೆ, ಅವಳು ದೃಢಕಾಯದವಳೇ ಅದರೂ ಮಾಟ ಮಂತ್ರ ಕುರಿತ ಮೂಢನಂಬಿಕೆ ಬಗ್ಗೆ ತಲೆಕೆಡಿಸಿ ಕೊಂಡು ಆಗಾಗ ಅನಾರೋಗ್ಯದಿಂದ ಹಾಸಿಗೆ ಹಿಡಿದರೆ ವಾರ ತಿಂಗಳುಗಟ್ಟಲೆ ಮೇಲೆ ಏಳುತ್ತಿರಲಿಲ್ಲ. ಮನೆಯವರಿಗೂ ಆಕೆಯ ಬಗ್ಗೆ ಕಾಳಜಿ ಇರಲಿಲ್ಲ ಅವಳೇ ಚೇತರಿಸಿಕೊಂಡು ಮೇಲೆ ಏಳುವವರೆವಿಗೂ ಅವಳ ಪಕ್ಕದಲ್ಲಿದ್ದು ನಾನೇ ಆರೈಕೆ ಮಾಡುತ್ತಿದ್ದೆ.
ಹೀಗಿದ್ದಾಗ ಒಂದು ದಿನ ತಾಯಿ ಮತ್ತೆ ತೊಂದರೆಗೆ ಬಿದ್ದಳು ನನ್ನ ಕುಟುಂಬದವರು ಕೊಂಚ ಕದಲಿದರು. ನನ್ನ ತಾಯಿಯನ್ನು ಯಾವುದೋ ಚಿಕಿತ್ಸೆಗೆ ದೂರದ ಊರಿಗೆ ಕರೆದುಕೊಂಡ್ಯುಯ್ದಾಗ ನಾನೂ ಹೊರಟೆ ಹರಕು ಬಟ್ಟೆಯ ಕೊಳಕು ಮುಖದ ನಾನು ನನ್ನ ಮನೆಗೆ ಕಳಂಕ, ಅಲ್ಲಿ ಯಾರಾದರೂ ನನ್ನ ಈ ಮನೆಯ ಮಗ ಎಂದು ಗುರುತಿಸಿದರೆ, ಅವಮಾನ ಎಂಬಂತೆ ಎಲ್ಲಾ ಸೇರಿ ನನ್ನನ್ನು ಬರೆದಂತೆ ಹೇಳಿ ಮನೆಯಲ್ಲಿ ಉಳಿಯುವಂತೆ ಹೇಳಿದರು.
ಅಷ್ಟು ಹೊತ್ತಿಗಾಗಲೇ ಆಳುವುದನ್ನೂ ಮರೆತಿದ್ದ ನಾನು ತಾಯಿಯ ಜೊತೆ ಇರಲೇ ಬೇಕು ಎಂದು ಹಠಕ್ಕೆ ಬಿದ್ದೆ. ಸದ್ಯಕ್ಕೆ ಸಮ್ಮುನಿದ್ದು ಮುಂದೆ ಕಾರ್ಯ ಸಾಧಿಸಬೇಕು ಎಂದು ತೀರ್ಮಾನಿಸಿದೆ. ಎಲ್ಲ ಹೊರಟರು ತಾಯಿಯ ಕಾಯಿಲೆಯ ಚಿಕಿತ್ಸೆಗೆ ಎಂಬ ನೆಪ ಮಾತ್ರ. ಆದರೆ ಹೋಗುವ ಊರಿನಲ್ಲಿ ಖರೀದಿಸಬೇಕಾದ ವಸ್ತು , ಮೋಜು-ಮಜಾ ನೋಡಬೇಕಾದ ಸ್ಧಳಗಳ ಬಗ್ಗೆ ಒಳಗೊಳಗೆ ಚರ್ಚೆ ಬಹಳವಾಗಿ ಕೇಳಿ ಬರುತ್ತಿತ್ತು. ಹೊರಡುವಾಗ ತಾಯಿ ಕಡೆಯದಾಗಿ ಎಂಬಂತೆ ನನ್ನ ತಲೆಯನ್ನು ಕೊಡವಿ ತನ್ನ ಎದೆಗಾನಿಸಿಕೊಂಡಳು. ನನ್ನ ಮನಸ್ಸಿನಲ್ಲಿಯೂ ಇದೇ ಕಡೇ ಭಾರಿಯ ಪ್ರೀತಿಯ ಸ್ಪರ್ಶ ಎಂದು ಅನಿಸಿದ್ದು ಯಾಕೆ ತಿಳಿಯದು?
ತಾಯಿ ಮುಂದೆ ಸಾಗಿದಾಗ ಬಂದವನ್ಯಾರೋ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ಪರೀಕ್ಷಿಸಿದ " ಅನಿಷ್ಟ ಮುಂಡೇದೆ ಆಳ್ತಾ ನಿಂತಿದ್ದೀಯಾ" ಎಂದು ಕೇಳಿದ ಇಲ್ಲ ಎಂಬಂತೆ ತಲೆಯಾಡಿಸಿ ಮುಗಿಸುವಷ್ಟರಲ್ಲಿ ನನ್ನ ಕನ್ನೆಗೆ ಅದುರಿ ಹೋಗುವಂಥೆ ಭಾರಿಸಿದ " ಬಾಯಿಬಿಟ್ಟು ಬೊಗಳು" ಎಂದು ಅಬ್ಬರಿಸಿದ ಇಷ್ಟೆಲ್ಲಾ ಗದ್ದಲಗಳ ನಡುವೆ ನನ್ನ ತಾಯಿ ಹೋದ ದಿಕ್ಕಿನ ಸುಳಿವು ತಿಳಿಯದಂತೆ ಮಾಯವಾಗಿಬಿಟ್ಟಿದ್ದಳು. ಹದ್ದು ಕಾಗೆಯಂತಹ ನನ್ನ ಕುಟುಂಬದವರೊಂದಿಗೆ.
ಅಲ್ಲೇ ಜಗಲಿಯ ಮೇಲೆ ಕುಳಿತೆ ಮನೆಗೆ ಬೀಗ ಹಾಕಲಾಗಿತ್ತು. ಸಂಜೆ ಮನೆಯವರು ಬಂದು ಬೀಗ ತೆಗೆಯುವವರೆಗೆ ನಾನು ಅಲ್ಲೇ ನೀರು ಬೇಕೆಂದರೂ ಸಂಜೆಯವರೆಗೆ ಕಾಯಬೇಕು. ಅಕ್ಕಪಕ್ಕದ ಮನೆಯಲ್ಲಿ ಕೇಳಿ ನೀರು ಕುಡಿಯವಂತೆಯೂ ಇಲ್ಲ. ಹಾಗೆ ಕುಳಿತವನಿಗೆ ಜೊಂಪಿನಂತೆ ನಿದ್ರೆ ಬಂತು ಮಲಗಿದೆ. ಕಣ್ಣು ಬಿಡುವ ಹೊತ್ತಿಗೆ ಸಂಜೆಯಾಗುತ್ತಾ ಬಂದಿತ್ತು.
ಸಂಜೆಯಾಗುತ್ತಿರುವುದಕ್ಕೆ ಸೂಚನೆ ಎಂಬಂತೆ ಎಲ್ಲಾ ಮನೆಗಳಲ್ಲಿ ದೀಪ ಹೊತ್ತಿಕೊಳ್ಳುತ್ತಿದ್ದವು.,ಒಬ್ಬನೇ ಕುಳಿತು ಮನೆಯ ಪಡಸಾಲೆಯಿಂದ ನೋಡುತ್ತಿದ್ದರೆ ಪ್ರತಿ ದೀಪದಲ್ಲೂ ನನ್ನ ತಾಯಿಯೇ ಗೋಚರಿಸುತ್ತಿದ್ದಳು. ಆಕೆ ನನ್ನ ಕೈಬೀಸಿ ಕರೆಯುತ್ತಿರುವಂತೆ ಭಾಸವಾಗುತ್ತಿತ್ತು. ಉಸಿರು ಕಟ್ಟುವಂತಹ ವಾತಾವರಣ, ಒಂದು ನಿಮಿಷ ಅಲ್ಲೇ ಇದ್ದರೂ ಸಾಯುವೆ ಎನ್ನಿಸಿತು ನನಗೆ ಸರಿ ಸಿದ್ದನಾದೆ ಹೊರಡಲು, ಎಲ್ಲಿಗೆ ಎಂದು ತಿಳಿಯದು? ನನ್ನ ತಾಯಿಯನ್ನು ಕರೆದುಕೊಂಡು ಹೋದ ದಿಕ್ಕನ್ನು ಯಾರೋ ತೋರಿದರು ಅದೇ ದಿಕ್ಕಿಗೆ ನಾನು ನಡೆದು ಹೊರಟೆ.
ಮುಂದಾಲೋಚನೆಯಿಲ್ಲದೆ ಪಯಣ ಮನೆಯಿಂದ ಹೊರಟ ನಾನು ಕಡೆಯವರೆವಿಗೂ ಅದೇ ಹುರುಪಿನಿಂದ ಸುಮಾರು ನಾಲ್ಕು ರಿಂದ ಐದು ಗಂಟೆಯ ನಡಿಗೆ ನಡೆದೆ ಆಗ ಸಿಕ್ಕಿದ್ದು ಒಂದು ದೊಡ್ಡ ಊರು ನಮ್ಮೂರಿಗಿಂತ ಬಹು ದೊಡ್ಡ ಊರು ಅದರ ಹೆಸರು ನನಗೆ ತಿಳಿಯಲಿಲ್ಲ. ನಾನೂ ಸಹ ಯಾರನ್ನು ಕೇಳಲಿಲ್ಲ ಯಾರನ್ನೇ ಮಾತನಾಡಿಸಿದರು ಅರ್ಥವಾಗದ ಭಾಷೆಯಲ್ಲಿ ಉತ್ತರಿಸುತ್ತಿದ್ದರು. ದಾಡಿ ಬಿಟ್ಟವರು, ಮೀಸೆ ಇಲ್ಲದ ಉರಿ ಮುಖದ ಜನ ಕುಂಕುಮವಿಕ್ಕಿದ ನನ್ನ ಮುಖವ ದಿಟ್ಟಿಸಿ ನೋಡಿ ಮನಸ್ಸಿನಲ್ಲಿ ಹಲ್ಲು ಮಸೆಯುತ್ತಿದ್ದರು. ಉರಿಯುವ ಅವರ ಕಣ್ಣುಗಳಿಂದ ಏರಿ ಬರುತ್ತಿದ್ದ ಆಕ್ರೋಶ, ನನ್ನಲ್ಲಿ ಭಯವನ್ನುಂಟು ಮಾಡಿತ್ತು. ನನ್ನ ತಾಯಿಗೆ ಇವರು ಏನು ಮಾಡಿಯಾರೋ ಎಂಬ ಭೀತಿ ಒಳಗೊಳಗೆ, ನನ್ನ ಜೀವ, ನನ್ನ ಮನಸ್ಸಿನ ಬಗ್ಗೆ ನನಗೇನು ಆತಂಕವಿಲ್ಲ. ಅದು ಇಹಪರದಲ್ಲಿ ಈ ತನಕ ಬೆಲೆ ಇರದ ವಸ್ತು ಆದರೆ ಈ ಕಿಡಿಕೇಡಿಗಳ ನಡುವೆ ಇರುವ ತಾಯಿಸ್ಧಿತಿ.
ಅವಳನ್ನು ಹುಡುಕುತ್ತಾ ಹೊರಟವನಿಗೆ ಸಿಕ್ಕಿದ್ದು ದೊಡ್ಡ ದೊಡ್ಡ ಕಟ್ಟಡಗಳೇ, ಅರ್ಥವಾಗದ ಭಾಷೆಯ ಫಲಕಗಳು ಆಳತ್ತೆರದ ಕಾಪೌಂಡ್ ನೊಳಗೆ ನಾಯಿಗಳಿಗೆ ಕಟ್ಟಿದ ಸಣ್ಣ ಮನೆಯ ಅವುಗಳನ್ನು ನೋಡಿಕೊಳ್ಳಲು ಒಬ್ಬ ಕೆಲಸಗಾರ ಅದಕ್ಕೆ ಸಮಯಕ್ಕೆ ಸರಿಯಾಗಿ ಹಾಲು, ಮಾಂಸದ ಊಟೋಪಚಾರ ಕಣ್ಣಿಗೆ ಬಿದ್ದಾಗ ಅದಕ್ಕಿಂತ ಕಡೆಯಾಯಿತೆ? ನನ್ನ ಬುದುಕು ಎಂದೆನಿಸಿದ ಬೆನ್ನಲ್ಲೇ ಮನಸ್ಸು ಇಲ್ಲ ಇಲ್ಲ ಇಂದಲ್ಲ ನಾಳೆ ಮಹತ್ತರವಾದದ್ದುನನ್ನು ಸಾಧಿಸುತ್ತೇನೆ? ಎಂದುಕೊಂಡು ಮುಂದೆ ನಡೆಯುತ್ತಿದೆ.
ಆಗ ಎದುರಾದವನೇ ಆ ಊರಿನ ಹವಾಲ್ದರ ನನ್ನತ್ತ ಲಾಠಿ ಬೀಸುತ್ತ ನಡೆದು ಬಂದ ಅವನನ್ನು ನೋಡುತ್ತಿದ್ದಂತೆಯೇ ನಾನು ನಿಂತೆ ನನ್ನನ್ನು ನೋಡಿದ ಹವಾಲ್ದರ ಗದರಿದ ಧನಿಯಲ್ಲಿ ಕೇಳಿದ ಏಯ್ ನೀನ್ಯಾರು? ನನ್ನ ಮನೆಯಲ್ಲೂ ಇದೇ ಗದರಿದ ಧ್ವನಿಯಲ್ಲಿ ಮಾತನಾಡುವವರು ಇದ್ದುದ್ದರಿಂದ ನನಗೆ ಹೆದರಿಕೆಯಾಗಲಿಲ್ಲ ಇವನು ನಮ್ಮವನೇ ಎಂದೆನಿಸಿ ಮನಸ್ಸಿನಲ್ಲಿ ಸಂತೋಷಪಟ್ಟೆ ಅನಂತರ ಆ ಊರಿನಲ್ಲಿ ಜನ ಸ್ವಾತ್ರಂತ್ಯ್ರವಾಗಿ ರಸ್ತೆಯಲ್ಲಿ ಓಡಾಡುವುದು ನಿಷಿದ್ಧ. ಕೆಲವರಿಗೆ ಆ ಸ್ವಾಯತ್ತತೆ ಇದೆ ಎಂಬುದು ನನ್ನ ಅರಿವಿಗೆ ಸ್ಪಲ್ಪ ಸಮಯದಲ್ಲೇ ಬಂತು.
ಎಚ್ಚರಿಸುವಂತೆ ಮತ್ತೆ ಕೇಳಿದ ಆ ಹವಾಲ್ದಾರ ಏನು ಹೆಸರು ನಿಂದು ಯಾವ ಊರು, ಆವರೆಗೂ ನನಗೆ ತಿಳಿಯದ ನನ್ನ ಹೆಸರನ್ನು ಅವನಿಗೆ ಏನೆಂದು ಹೇಳಲಿ ಗೊ.....ಗೊತ್ತಿಲ್ಲ ಎಂದೆ ಅಷ್ಟರಲ್ಲಿ ಮೊನ್ನೆ ಮನೆಯಿಂದ ಹೊರಟಾಗ ಆಳುತ್ತಿದ್ದೀಯಾ ಎಂದು ಸುಳ್ಳೇ ಅಪಾದನೆ ಮಾಡಿ ಭಾರಿಸಿದಂತಹ ಹೊಡೆತ ಒಂದು ನನ್ನ ಕಪಾಳಕ್ಕ ಬಿತ್ತು ಅದೇ ರೀತಿ ಕಪಾಳ ಅದುರಿ ಹೋಗುವಂತೆ ಹೊಡೆಯುವುದು ನನಗೆ ಖಚಿತವೆನಿಸಿತು. ಇವನೂ ನಮ್ಮವನೆ ಖಂಡಿತಾ ನಮ್ಮೂರಿನವನೇ ಎನಿಸಿತು. ಕಡೆಗೂ ಕೆಟ್ಟವರೋ, ಒಳ್ಳೆಯವರೋ ನಮ್ಮವರೇ ಸಿಕ್ಕಿದರೂ ಎಂದು ಮನಸ್ಸಿನಲ್ಲಿ ಸಂತೋಷ ಕಪಾಳಕ್ಕೆ ಬಿದ್ದ ಹೊಡತದಿಂದ ಕಣ್ಣೀಂಚಿನಲ್ಲಿ ನೀರು. ಸರಿ ಬಾ ಎಂದು ನನ್ನ ರಟ್ಟೆ ಹಿಡಿದು ಎಳೆದುಕೊಂಡು ಹೋಗುತ್ತಿದ್ದರೆ ನಾನು ನನ್ನ ಉದುರಿ ಹೋಗುತ್ತಿದ್ದ ಚಡ್ಡಿಯನ್ನು ಎಡಗೈಯಿಂದ ಮೇಲೆತ್ತಿಕೊಳ್ಳುತ್ತಾ ಅದನ್ನು ಉಡಿದಾರಕ್ಕೆ ಸಿಕ್ಕಿಸಿಕೊಳ್ಳುವ ಪ್ರಯತ್ನ ಮಾಡುತ್ತ ಒಡುವ ರೀತಿ ನಡಿಗೆಯಲ್ಲಿ ಅವನೊಟ್ಟಿಗೆ ಸಾಗುತ್ತಿದ್ದೆ ಅದ್ಯಾವುದೋ ದೊಡ್ಡದೊಂದು ಕಟ್ಟಡಕ್ಕೆ ಕರೆದ್ಯೊಯ್ದು ಅದ್ಯಾರೋ ಕುಳಿತಿದ್ದವರ ಮುಂದೆ ನನ್ನನ್ನು ನಿಲ್ಲಿಸಿ ಅದೇ ಫರಂಗಿ ಧಿರಿಸಿನವನಿಗೆ ಕೈಕಾಲು ಬಡಿದು ವಂದಿಸಿದ ಹವಾಲ್ದಾರ ನನ್ನನ್ನು ಅನಾಥನೆಂದು ಪರಿಚಯಿಸಿದಾಗ ಕೋಪ ದು:ಖ ಒಮ್ಮೇಲೇ ಉಮ್ಮುಳಿಸಿ ಬಂತು ನಾನು ಕೂಗಿ ಹೇಳಿದೆ ನಾನು ಅನಾಥನಲ್ಲ ತಾಯಿ ಇದ್ದಾಳೆ ನನಗೆ ಎಂದು.
ಹವಾಲ್ದಾರ ಏ ಇಲ್ಲಿ ಹಾಗೆಲ್ಲ ಕೂಗಿಕೊಳ್ಳಬಾರದು ಈ ಠಾಣೆಯ ಮುಖ್ಯಸ್ಧರು ಅವರು ಇಲ್ಲಿ ಕೊಗಿಕೊಂಡವರ ಗಂಟಲು ಸೀಳಿ ಬಿಡುತ್ತಾರೆ. ಎಂದ ಆದರೆ ಆ ಅಧಿಕಾರಿ ಮಾತ್ರ ಭಾರಿ ವಿನಿಯದಿಂದ ನನ್ನ ಹತ್ತಿರ ಬಂದು ತಲೆ ಸವರಿ ನನಗೂ ತಾಯಿಯಿದ್ದಾಳೆ. ಬಿಡು ಮಗು ಎಂದು ಆ ವಿನಿಯದಿಂದ ನನಗೆ ಅವನು ನಮ್ಮವನಲ್ಲ ಎನಿಸಿತು.
ಠಾಣೆಯ ಕಸ ಗುಡಿಸುವಂತೆ ಹೇಳಿ ಕೈಗೊಂದು ಕಸ ಪೊರಕೆ ನೀಡಿದರು, ಇಡೀ ಠಾಣೆ ಕಸಗುಡಿಸುವಾಗ ಅಲ್ಲಿದ್ದ ಇನ್ನೂ ಹಲವಾರು ಮಂದಿ ನನ್ನವಂತರು ಕಂಡರು. ಆದರೆ ಅವರು ಹೇಳಿದ ಕೆಲಸ ಮಾಡಿ ಅವರಿಂದ ನಾನು ಸೈ ಎನಿಸಿಕೊಂಡೆ ಅಲ್ಲೇ ನಿದ್ರೆ, ಊಟ, ತಿಂಡಿಗೆ ತೊಂದರೆ ಇಲ್ಲ ಎಂಬುದು ತಿಳಿದರು ತಾಯಿಯ ನನೆಪಾಗಿ ದು:ಖ ಬರುತ್ತಿತ್ತು. ಒಂದು ದಿನ ಕಿರಿಯ ಹವಾಲ್ದಾರ ಬಂದು ನಿನ್ನ ತಾಯಿ ಎಲ್ಲಿದ್ಧಾಳೆ? ಏನು ಹೆಸರು? ಹೇಳು ನಾನು ಹುಡುಕಿ ಕೊಡುವೆ ಎಂದು.
ಜೀವನದಲ್ಲಿ ನಾ ಬಯಸಿದ್ದು ನೀಡುವ ಎಂದ ದೈವಸಂಭೂತ ಮುಖ ನೋಡಿ ಬಿಕ್ಕಿ ಬಿಕ್ಕಿ ಅತ್ತೆ ನನ್ನ ತಾಯಿಯ ಹೆಸರು "ಜಗದೇಕ ಮಾತ" ಎಂದೆ ಅಷ್ಟರಲ್ಲಿ ನನ್ನ ಬಾಯಿ ಮುಚ್ಚಿ ಮೆಲ್ಲಗೆ ಹೊರಕೆರದು ಕೊಂಡು ಹೋದ ಆತ ಆ ಅಧಿಕಾರಿಗಳ ಮುಂದೆ ಮಾತೆಯ ಮಗನೆಂದು ಹೇಳಬೇಡ ಅವನಿಗೆ ಆಕೆಯನ್ನು ಕಂಡರಾಗದು ಅವನ ಮಾತು ಮೃದು ಮನಸ್ಸು ಕಠಿಣ ಕೊರಳು ಕೊಯ್ಯುವುದು ಅವನ ಕಾಯಕ. ಯಾರ ಬಳಿಯು ಈ ವಿಷಯ ಹೇಳಬೇಡ ಎಂದು ತಿಳಿಸಿದ. ಆ ಹವಾಲ್ದಾರ ತನ್ನ ರಾತ್ರಿ ಪಾಳಿಯನ್ನು ಮುಗಿಸಿ ಮನೆಗೆ ಹೋಗುವಾಗ ನನ್ನನ್ನು ಜೊತೆಯಲ್ಲಿ ಕರೆದ್ಯೊಯ್ದ ಅವನ ಹೆಜ್ಜೆಯನ್ನು ಅನುಸರಿಸಿ ಅವನನ್ನು ಹಿಂಬಾಲಿಸಿದೆ.
ಅವನ ಹಿಂದೆ ನಡೆಯುತ್ತಾ ಹೋದಂತೆ ಹೆಜ್ಜೆ ಭಾರವಾದಂತೆ ಭಾಸವಾಗುತ್ತಿತ್ತು. ಅದನ್ನು ನಾನು ಅರಿಯುತ್ತಾ ಹೋಗುತ್ತಿದ್ದಂತೆಯೇ ಒಂದೆಡೆ ಭಯ, ಇನ್ನೊಂದಡೆಯಲ್ಲಿ ನನ್ನ ಮನಸ್ಸಿನ ಸ್ಧಿತಿ ಸರಿಯಿಲ್ಲದಿದ್ದರು ಸಹ ಅವನ ಜೊತೆ ಹೋಗಬೇಕಾದ ಪರಿಸ್ಧಿತಿ. ಆದರೆ ನನ್ನ ನಡಿಗೆ ಇದ್ದಕ್ಕಿದ್ದಂತೆ ನಿಂತಿತು ಯಾವುದೋ ಲೋಕದಲ್ಲಿದ್ದ ನಾನು ಎಚ್ಚೆತ್ತವನಂತೆ ನೋಡಿದೆ ಅದೊಂದು ದೊಡ್ಡ ಕಟ್ಟಡ, ಬಂಗಲೆಯಲ್ಲದ ಜೋಪುಡಿಯಂತಹ ಗುಡಿಸಲ ಮುಂದೆ ನಾನು ಹವಾಲ್ದಾರ ನಿಂತಿದ್ದೆವು ನನ್ನನ್ನು ಇಲ್ಲೇ ನಿಂತಿರಲು ಹೇಳಿ ಆತ ಒಳಗೆ ಹೋದವನು ಗೋಡೆಗೆ ಬಡಿದ ಚಂಡಿನಂತೆ ಹಿಂತಿರುಗಿ ಬಂದ ಅವನೊಂದಿಗೆ ಉದ್ದನೆಯ ದಾಡಿ ಬಿಟ್ಟು ತುಂಡು ಪಂಚೆಯುಟ್ಟು ಮೇಲೊಂದು ನಿಲುವಂಗಿ ಹಾಕಿಕೊಂಡು ಮತ್ತೊಬ್ಬ ವಯಸ್ಸಾದ ವ್ಯಕ್ತಿಯನ್ನು ಕರೆದು ತಂದಿದ್ದ.
ಆತನನ್ನು ನೋಡಿ ನನ್ನಡೆಗೆ ನೋಡಿದ ಹವಾಲ್ದಾರ "ಇವನೇ ಜಗದೇಕ ಮಾತೆಯ ಪುತ್ರ" ಎಂದ ಅಷ್ಟೇ ಜೀವನದಲ್ಲಿ ಪ್ರಥಮಬಾರಿಗೆ ನನಗೆ ಮನ್ನಣೆ ದೊರೆಯಿತು. ಆ ಜಂಗಮ ನನ್ನ ತಲೆಯ ಮೇಲೆ ತನ್ನ ಕೈಯಾಡಿಸುತ್ತಾ ಸುಡಿದ ನನು ಫಕೀರ " ತಾಯಿ" ಯ ಪುತ್ರ ಅವಳ ಆಜ್ಞೆಯಂತೆ ಕಾಯಕ ಮಾಡುತ್ತಿರುವೆ ನೀನು ಆಕೆಯ ಪುತ್ರನೆಂಬುದು ತಿಳಿದು ನನಗೂ ಭಾರಿ ಸಂತಸವಾಯಿತು ಎಂದ.
ಸರಿ ಫಕೀರನ ಆಸರೆಯಲ್ಲಿ ನೀನು ಇನ್ನು ಮುಂದೆ ಆತಂಕವಿಲ್ಲದೆಯೇ ಇರಬಹುದು, ಎಂದಷ್ಟೇ ಹೇಳಿದ ಹವಾಲ್ದಾರ ಮತ್ತುಷ್ಟು ಭಾರವಾದ ಹೆಜ್ಜೆ ಹಾಕುತ್ತಾ ತುಸುಬೇಸರದಿಂದಲೇ ಹೊರಟು ಹೋದ ಅವನು ಕತ್ತಲಲ್ಲಿ ಮರೆಯಾಗುವವರೆಗೂ ನೋಡುತ್ತಾ ನಿಂತೆ ಸರಿ ಎಂಬಂತೆ ನನ್ನಡೆಗೆ ನೋಡಿದ ಫಕೀರ ನನ್ನ ಒಳಗೆ ಕರೆದುಕೊಂಡು ಹೋದ. ತನ್ನ ಬಳಿ ಇದ್ದ ಸ್ವಲ್ಪ ಗಂಜಿಯನ್ನೇ ನನಗೂ ನೀಡಿದ ಕುಡಿದು ಮಲಗಿದೆ. ಅದೇನೊ ತೃಪ್ತ ಭಾವನೆ ತಾಯಿಯ ಬಗ್ಗೆ ಆಡಿದ ಮಾತಿಗೋ ಏನೋ ತಿಳಿಯದು.
ಬೆಳಿಗ್ಗೆ ಅದ್ಯಾವ ಹೊತ್ತಿಗೆ ಎದಿದ್ದನೋ ಆ ಫಕೀರ ನಾನು ಕಣ್ಣು ಬಿಡುವ ಮುಂಚೆಯೇ ಎದ್ದು ತನ್ನ ಎಲ್ಲಾ ಕಾರ್ಯಗಳನ್ನು ಮಗಿಸಿ, ಆಗ ತಾನೇ ಪೂಜೈಗೈಯ್ದು ಗುಡಿ ಶಿಲೆಯಂತೆ ಕುಳಿತುಬಿಟ್ಟಿದ. ನಾನು ಹೊರಳಿ ಅವನತ್ತ ನೋಡಿದಾಗ ಹೂಂ ಏಳು ಎಂದ.
ಎದ್ದು ಕುಳಿತ ನನ್ನ ನಿನ್ನ ಹೆಸರೇನೊ ನಾನು ಕೇಳುವುದೇ ಮರೆತೆ ಎಂದ ನನ್ನ ಬಾಯಿಗೆ ಬಂದದ್ದು ಅದೇ ಮಾತು " ಮಾತೆಯ ಮಗ" ನಾನು ತಿಳಿದದ್ದು ಅಷ್ಟೇ, ನನ್ನ ಹೆಸರು ಈವರೆಗೆ ಯಾರು ಕರೆದಿಲ್ಲ ಎಂದೆ. ಸರಿ ಸೂರ್ಯೋದಯದ ಈ ಸಮಯದಲ್ಲಿ ನಿನಗೊಂದು ಹೆಸರು ನಾನು ಇಡುತ್ತಿದ್ದೇನೆ. ಇನ್ನು ಮುಂದೆ ನಿನ್ನ ಹೆಸರು "ಸೇವಕ" ಎಂದು ತಿಳಿಯತೆ ಎಂದ ಮಾತಿನಲ್ಲಿ ಅಜ್ಞೆಯಿತ್ತ ಬೇರೆ ಮಾತಿಲ್ಲ ಅಪರೂಪಕ್ಕೊಂದು ಹೆಸರು ಸಿಕ್ಕಿದ್ದಕ್ಕೆ ಹಿಗ್ಗಿ ಹೋಗಿ ಫಕೀರನ ಆಜ್ಞೆಗೆ ತಲೆಯಾಡಿಸಿದೆ. ಅಲ್ಲೇ ಜೋಪುಡಿ ಮೂಲೆಯಲ್ಲಿದ ಹಂಡೆಗೆ ಉರಿಹಾಕಿದ್ದ ಪಕ್ಕದಲ್ಲಿದ್ದ ಕಲ್ಲು ಬಚ್ಚಲಿನಲ್ಲಿ ನನ್ನ ಸಂಪೂರ್ಣ ನಗ್ನಗೊಳಿಸಿ ನಿಲ್ಲಿಸಿದ ಫಕೀರ, ತಾನೇ ಸುಡುಸುಡು ನೀರೆರೆದು ಕನ್ನಡಿ ಮುಂದೆ ನಿಲ್ಲಿಸಿ, ಕಾಶಾಯ ವಸ್ತ್ರ ಉಡಿಸಿ ನೋಡಿಕೋ ಎಂದಾಗ ಮೊದಲ ಭಾರಿಗೆ ಕನ್ನಡಿಯಲ್ಲಿ ನಾನು ನನ್ನನ್ನು ನೋಡಿಕೊಂಡೆ ನನಗೂ ಆಕಾರವಿದೆ ಮತ್ತು ಸೌಂದರ್ಯವಿದೆ ಎಂದು ತಿಳಿಯಿತು.
ತಿರುಗಿ ಹಿಂತಿರುಗಿ ನೋಡುವ ಹೊತ್ತಿಗೆ ಫಕೀರ ಅಲ್ಲಿರಲಿಲ್ಲ, ಮತ್ತೆ ಹಿಂತಿರುಗಿ ಬಂದು ಒಂದಿಷ್ಟು ಕುಡಿಯಲು ಗಂಜಿ ನೀಡಿದ, ಕುಡಿಯಲು ಬಟ್ಟಲು ಎತ್ತಿದವನಿಗೆ, ಗದರು ಧ್ವನಿಯಲ್ಲಿ ನುಡಿದ ಇದೇ ಕೊನೆ ಇನ್ನು ಮುಂದೆ ಯಾರಿಂದಲೂ ಬೇಡಿ ತಿನ್ನುವುದನ್ನು, ದುಡಿಯದೇ ಪಡೆದು ತಿನ್ನುವುದನ್ನು ಬಿಟ್ಟು ಬಿಡು ಎಂದ ಅಪ್ಪಣೆ ಎಂದೆ. ಮುಂದುವರಿದು ದುಡಿಯುತ್ತಾ ಬದುಕುವುದನ್ನು ಕಲಿ, ದುಡಿಮೇಯೊಂದೇ ನಿನ್ನ ಧೇಯ್ಯ ಪ್ರತಿಫಲ ದೊರೆಯಲಿ ಬಿಡಲಿ ಎನ್ನುತ್ತಾ ಹೊರಗೆ ಹೊರಟವವನ್ನು ನಾನು ಹಿಂಬಾಲಿಸಿದೆ.
ಒಂದು ಬಾಗಿಲಲ್ಲಿ ನಿಂತ ನನ್ನ ತಲೆಯ ಮೇಲೆ, ನಾನು ಗಂಜಿ ಕುಡಿಯುತ್ತಿದ್ದಾಗ ಅಣಿಗೊಳಿಸುತ್ತಿದ್ದ ಬುಟ್ಟಿಯೊಂದನ್ನು ಹೊರಿಸಿದ, ಜೋಪುಡಿಯ ಮುಂದೆ ಬುಟ್ಟಿ ಹೊತ್ತು ನಿಂತವನಿಗೆ ಮತ್ತೆ ಅಪ್ಪಣೆ ಎಂಬಂತೆ ನುಡಿದ ಫಕೀರ " ನೋಡು ಈ ಬುಟ್ಟಿಯಲ್ಲಿ ಕನಸುಗಳಿವೆ ಸಂಜೆ ಹೊತ್ತಿಗೆ ಮಾರಾಟ ಮಾಡಿಕೊಂಡು ಬಾ" ಊರಿನ ಎಲ್ಲಾ ಕೇರಿ, ಬೀದಿಗಳಲ್ಲಿ ಆ ಜನ, ಈ ಜನ ಎಂಬ ಭೇಧ ಭಾವವಿಲ್ಲದೆ ಕೇಳಿದವರಿಗೆಲ್ಲಾ ನೀಡಿಕೊಂಡು ಬಾ ಆದರೆ?! ಎಂದಾಗ ಅಚ್ಚರಿಯಿಂದ ಅವನ ಮುಖ ನೋಡಿದೆ.
ನಕ್ಕು! ನುಡಿದ ಫಕೀರ " ಕನಸು ಬೇಕೆಂದು ನಿನ್ನ ಕೂಗಿದವರ ಮುಂದೆ ಹೋಗಿ ನಿಲ್ಲುವುದು ನಿನ್ನ ಕರ್ಮವಷ್ಟೇ ಅವರು ತಮಗೆ ಬೇಕಾದ ಕನಸುಗಳನ್ನು ಎತ್ತಿಕೊಂಡು ಅವರಿಗಿಷ್ಟ ಬಂದಷ್ಟು ಪ್ರತಿಫಲ ನೀಡುತ್ತಾರೆ. ಯಾವ ಕನಸಿಗೆ ಎಷ್ಟು ಎಂಬುದನ್ನು ಅವರು ನಿನ್ನ ಕೇಳುವಂತಿಲ್ಲ ಕೇಳಿದರೂ ನೀನು ಹೇಳುವಂತಿಲ್ಲ? ಎಂದು ಆಜ್ಞೆಯನ್ನು ಹೊರಡಿಸಿದ ಅಪ್ಪಣೆಯನ್ನು ತಲೆಬಾಗಿ ಒಪ್ಪಿದೆ.
ಚುಮು ಚುಮು ಮುಂಜಾನೆಯ ಚಳಿಯಲ್ಲಿ ಆಗಾ ತಾನೇ ಸೂರ್ಯ ಪೂರ್ವ ದಿಕ್ಕಿನಲ್ಲಿ ಕೆಂಪೇರುತ್ತಾ ಇಡೀ ಜಗತ್ತು ಬೆಳಕಿನಲ್ಲಿ ತೋಯಿಸುತ್ತಿದ್ದ. ಆ ಗುರುತಿಲ್ಲದ ಊರಿನಲ್ಲಿ ರಸ್ತೆಯಲ್ಲಿ ಮತ್ತೆ ಹಿಂತಿರುಗಿ ಬರಲು ದಾರಿ ಗುರುತು ಹಿಡಿದುಕೊಂಡು ಹೆಣಭಾರದ ಬುಟ್ಟಿಯನ್ನು ಹೊರಲಾಗದೆ ಹೊತ್ತುಕೊಂಡು ನಡೆಯುತ್ತಾ ಹೋದಷ್ಟು ಕನಸಿನ ಬುಟ್ಟಿಯು ಭಾರವಾಗುತ್ತಾ ಹೋದವು. ಅಪರೂಪಕ್ಕೆ ಒಬ್ಬ ನನ್ನ ಬುಟ್ಟಿಯನ್ನು ದೃಷ್ಟಿಸಿ ನೋಡಿ " ಏ ಏನದು" ಎಂದ ನಾನು ತಕ್ಷಣ ಅವನ ಮುಂದೆ ನಿಂತು ಕನಸುಗಳ ಭಾರವಾಗಿದೆ ಎಂದೆ.
ತಕ್ಷಣ ಎದ್ದು ನಿಂತ ಆತ ಓ ಕನಸು ಮಾರುವವನೇ ನೀನು? ಕೊಗಲು ಸಂಕೋಚವೇ ಎಂದ. ಮಾರಿಕೊಂಡು ಬಾ ಎಂದಷ್ಟೇ ಧಣಿಯ ಅಪ್ಪಣೆಯಾಗಿದೆ, ಸಾರುವುದು, ಕೂಗುವುದು ಬೇಡ ಎಂದಿದ್ದಾರೆ ಎಂದೆ. ಸ್ವಾಮಿ ನಿಷ್ಟೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬುಟ್ಟಿಯಿಂದ ಕನಸಗಳನ್ನು ತೆಗೆದುಕೊಂಡು ಏನೋ ಹಾಕಿ ಹೂಂ ಹೊರಡು ಎಂದ ಆದರೆ ಬುಟ್ಟಿ ಮಾತ್ರ ಮೊದಲಿಗಿಂತ ಮತ್ತಷ್ಟ ಭಾರವಾಯಿತು.
ಮುಂದೆ ಸಾಗಿ ಹೋದೆ ಕೂಗಿ ಕರೆದರು ಕೆಲವರು ಮತ್ತೆ ಕೆಲವರು ತಾವೇ ಮುಂದೆ ಬಂದರೂ ನಾನು ಅವರ ಮುಂದೆ ನಿಂತೆ ಅಷ್ಟೇ, ಅವರೇ ಅಳೆದು ಸುರಿದು ಅವರಿಗೆ ಬೇಕಾದ ಇಷ್ಟವಾದ ಹಿಡಿಸುವ ಕನಸುಗಳನ್ನು ಎತ್ತಿಕೊಂಡು ಒಂದಿಷ್ಟು ಪ್ರತಿಫಲ ಹಾಕಿದರು. ನನಗೆ ಯಾವುದೂ ಕಾಣಿಸಲ್ಲಿಲ್ಲ ಆ ಕನಸುಗಳು ಹೇಗಿವೆ ಎಂದೂ ನಾನು ನೋಡಲೇ ಇಲ್ಲ, ಆ ಪ್ರಯತ್ನ ಸಹ ನಾನು ಮಾಡಲಿಲ್ಲ ಆ ಅಧಿಕಾರ ನನಗೆ ನೀಡಿರಲಿಲ್ಲ ಸರಿ ಸಂಜೆ ಹೊತ್ತಿಗೆ ಸರಕು ಮುಗಿದಂತಾಯಿತು ಇಳಿ ಸಂಜೆ ಹೊತ್ತಿಗೆ ಕನಸು ಪ್ರತಿಫಲ ತುಂಬಿಕೊಂಡೆ ಬುಟ್ಟಿ ಮತ್ತಷ್ಟು ಭಾರವಾಯಿತು.ಜೋಪುಡಿ ಬಳಿ ಬಂದಾಗ ಸಂಜೆ ಎಂಬುದು ಸರಿದು ಪಶ್ಚಿಮ ದಿಕ್ಕಿನಲ್ಲಿ ಉಷೆಯು ತನ್ನ ನಿಷೆಯ ಲೋಕದಲ್ಲಿ ತೇಲುತ್ತಿತ್ತು. ನನಗಾಗಿ ಯಾರು ಅಲ್ಲಿ ಕಾಯುತ್ತಿರಲಿಲ್ಲ, ಒಳಗೆ ಕುಳಿತ ಫಕೀರ ಅಚ್ಚರಿಯಿಲ್ಲದ ಕಣ್ಣುಗಳಿಂದ ನನ್ನನ್ನು ಒಮ್ಮೆ ನೋಡಿ ತಟ್ಟನೆ ಎದ್ದು ಬಂದು ನನ್ನ ತಲೆಯ ಮೇಲಿನ ಬುಟ್ಟಿಯನ್ನು ಎತ್ತಿಕೊಂಡು ತನ್ನ ಎದೆಯ ಮಟ್ಟದಲ್ಲೇ ಇಟ್ಟುಕೊಂಡ ನನಗೆ ಕಾಣಿಸುತ್ತಿರಲಿಲ್ಲ " ಸರಿ ಮಾರಿದ್ದೀಯ" ಆದರೆ ಖುಣಭಾರ ಅಧಿಕವಾಯಿತಲ್ಲೊ ಬಾಯಿಬಿಟ್ಟು ಕೇಳಿ ಪಡೆದೆಯೋ ಏನು? ಎಂದ ಇಲ್ಲ ನಾನು ಅದರ ಬಗ್ಗೆ ಬಾಯಿಯೇ ತೆರದಿಲ್ಲ ಎಂದೆ.
ಅಂದು ರಾತ್ರಿ ಗಂಜಿ ಕುಡಿದು ಮಲಗಿದವನಿಗೆ ಚಳಿಯ ಅನುಭವ ಆದರೂ ಹಿಂದಿನ ದಿನ ಹೊದೆಯಲು ನೀಡಿದ್ದ ಕಂಬಳಿಯನ್ನು ಫಕೀರ ನೀಡಲಿಲ್ಲ, ಖುಣಭಾರ ಹೊತ್ತು ತಂದದಕ್ಕೆ ಶಿಕ್ಷೆ ಅನುಭವಿಸು ಎಂದು ಹೇಳಿ ತಾನು ಹೊದ್ದು ಮಲಗಿದ ನಾನು ಮುಂದುವರಿದು ಮಾತಾನಾಡಲೂ ಆಗದೇ ಚಳಿ ತಡೆಯಲು ಆಗದೆ ದೇಹ ಎಂಬುದೇ ಹೀಗೆ ಇಲ್ಲದಿದ್ದರೆ ಇದ್ದೇ ಬಿಡುತ್ತದೆ ಒಮ್ಮೆ ಏನಾದರೂ ನೀಡಿದರೆ ಮತ್ತೆ ಮತ್ತೆ ಬೇಕು ಬೇಕೆನ್ನುವ ಹಪಾಹಪಿಗೆ ಬೀಳುತ್ತದೆ. ಇಡೀ ದೇಹವನ್ನು ಮುದ್ದೆಯಂತೆ ಕೊಕ್ಕರಿಸಿಕೊಂಡು ಮಲಗಿದೆ.
ಬೆಳಕು ಹರಿಯಿತು ನಾನೇ ಎದ್ದು, ಅದೇ ಸ್ನಾನ ಮತ್ತೆ ಕಶಾಯವಸ್ತ್ರ ಅದೇ ತಂಗಳು ಗಂಜಿ ಕುಡಿದ ನಂತರ ಅದೇ ಬುಟ್ಟಿ ತಲೆಯ ಮೇಲೆ ನಿನ್ನೆಗಿಂತ ಅದು ಮತ್ತಷ್ಟು ಭಾರ, ಅದನ್ನು ಹೊತ್ತು ನಾಲ್ಕು ಹೆಜ್ಜೆ ಹಾಕಿದವನಿಗೆ ತಲೆ ಉರಿಯುತ್ತಿರುವಂತೆ ಭಾಸವಾಯಿತು. ಹಿಂತಿರುಗಿ ನೋಡಿದೆ ಅದನ್ನು ಗಮನಿಸಿದ ಫಕೀರ ಓಡಿ ಬಂದು ತನ್ನ ಹೆಗಲ ಮೇಲಿದ್ದ ವಸ್ತ್ರವನ್ನು ಸಿಂಬಿ ಮಾಡಿ ಬುಟ್ಟಿಗೂ ತಲೆಗೂ ಮಧ್ಯ ಇರಿಸಿ ಈಗ ಸರಿಯಾಯಿತೇ? ಎಂದ ಹೌದು ಎಂಬಂತೆ ತಲೆಯಾಡಿಸಿ ಹೊರಟೆ.
ಅದೇ ದೊಡ್ಡದೊಡ್ಡ ಕಟ್ಟಡಗಳು ಕಪ್ಪಿ ಹೆಬ್ಬಾವಿನಂತೆ ಮುಲಗಿದ ರಸ್ತೆ ಮೊಗ್ಗಲಲ್ಲಿ ಹುಣ್ಣಿಮೆ ಚಂದ್ರನ ಹಾಲಿನ ಬಣ್ಣ ಮೀರಿಸುವಂತಹ ಶ್ವೇತ ವರ್ಣದ ಅಶ್ವಗಳ ಸಾಲು, ಸಾಲಿಗೆ ಸರಿಸಾಟಿ ಎಂಬಂತೆ ನಿಂತ ಅದ್ದೂರಿಯಾದ ಸಾರೋಟು, ಅವುಗಳ ಮಧ್ಯೆ ರಾಜ ಮಹಾರಾಜರಂತೆ ಧಿರಿಸು ಧರಿಸಿನಿಂತ ಸಾರಥಿಗಳು ಅವನ್ನು ನೋಡುತ್ತಿದ್ದರೆ ಕಣ್ಣು ಬೇರಡೆಗೆ ತಿರುಗಲೇ ಇಲ್ಲ ಪ್ರಯತ್ನಿಸಿದೆ. ಅಷ್ಟರಲ್ಲಿ ಘಟಿಸಬಾರದಿದ್ದ ಘಟನೆ ಘಟಿಸಿಯೇ ಹೋಗಿತ್ತು. ಸಾರೋಟು ಕುದುರೆ ಅಂದ ನೋಡುತ್ತಾ ಹೋಗಿ ಮುಂದೆ ಬಂದವರಿಗ್ಯಾರಿಗೋ ತಾಕಿನಿಂತೆ ಯಾರೆಂದು ನೋಡುವಷ್ಟರಲ್ಲಿ ಅವರೊಬ್ಬ ಹೆಣ್ಣು ಎಂಬುದು ಅವರ ಸೀರೆಯಿಂದ ತಿಳಿಯತಾದರೂ ಮುಖ ಮಾತ್ರ ಕಾಣಲೇ ಇಲ್ಲ.
ಕಡಲೂರಿನ ಕನ್ಯೆ ಮುಖ ನೋಡಲು ಸ್ಪಲ್ಪ ಹಿಂದೆ ಹಿಂದೆ ಹೋದೆ ಅವರ ಮಂಡಿ ಎತ್ತರಕ್ಕಿದ್ದ ನಾನು ಅವರ ಮುಖ ನೋಡಲು ಸ್ಪಲ್ಪ ಶ್ರಮಪಡಬೇಕಾಯಿತು. ಭಯ ಮಾಡಿದ ತಪ್ಪಿನ ಅರಿವಾಗಿ ಆಗಲೇ ನನ್ನ ಕೈ ಕಾಲು ಕಂಪಿಸಲು ಪ್ರಾರಂಭಿಸಿದ್ದವು. ಅವರು ಮುಖ ನೋಡಿದರೆ ಹೂ ನಗೆ ಸೂಸುತ್ತಿತ್ತು ಆ ಅವರು ಯಾರು ನೀನು? ಏನು ಹೆಸರು? ಅದೇನು ತಲೆಯ ಮೇಲಿನ ಬುಟ್ಟಿಯಲ್ಲಿ ಎಂದು ನಯ ವಿನಯಭರಿತ ಪ್ರೀತಿಯಿಂದ ಕೇಳಿದರೂ ಅವರು ಬೇರೆಯವರು ಅನ್ನಿಸಲಿಲ್ಲ ನಮ್ಮವರೇ ಎನ್ನಿಸಿತು.
ಅವರ ಮುಖದಲ್ಲಿ ನನ್ನ ತಾಯಿಯ ನೆನಪಿಸುವ ನಗುವಿನಿಂದ ಹಾಗಾಯಿತೇನೋ ತಿಳಿಯದು, ನಾನು.... ನಾನು.... ಸೇವಕ ನನಗೂ ಹೆಸರಿದೆ.... ಅನಾಥನಲ್ಲ ತಾಯಿಯಿದ್ದಾಳೆ, ಕನಸುಗಳಿವೆ ಬುಟ್ಟಿಯಲ್ಲಿ ಎಂದೆ ಖುಷಿಯಿಂದ ಹಿಗ್ಗಿ ಹೋದರು ಅವರು " ಓ ನೀನೇ ಏನು ಆ ಕನಸು ಮಾರುವವನು " ನಾನು ಎಷ್ಟು ವರ್ಷಗಳಿಂದ ಕಾಯ್ದು ಹಂಬಲಿಸಿದ್ದೆನೋ ಮಾರಾಯ ನಿನ್ನಂತ ಒಬ್ಬ ಕನಸು ಮಾರುವ ಹುಡುಗನಿಗಾಗಿ ಎಂದವರೇ? ಬಾ ಇಲ್ಲಿ ಎಂದು ಹೇಳಿ ಮುಂದೆ ನಡೆದರು ನಾನು ಅವರನ್ನೇ ಅನುಸರಿಸಿದೆ.
ಅಲ್ಲೇ ನಿಂತಿದ್ದ ಸಾರೋಟುಗಳಲ್ಲಿ ಅತೀ ಸುಂದರ ದುಭಾರಿ ಎನಿಸುವಂತಹುವುದನ್ನು ಏರಿ ಕುಳಿತರು. ಸಾರಥಿ ಬಾಗಿಲು ಹಾಕಲು ಮುಂದಾದಾಗ ಅವನನ್ನು ಹತ್ತಿಸಿ ಕೊಳ್ಳಿ ಎಂದು ಆಜ್ಞಾಪಿಸಿದರು. ಸಾರಥಿ ಅವರ ಅಣತಿಗೆ ಮುಂದಾಗಿ ಬಾ ಹತ್ತು ಎಂದ ನಾನು ಅವರ ಮುಖನೋಡಿ ನಾನು ನಡೆದ ಸಾಗಬೇಕಿದೆ. ಕನಸ ಮಾರಲು ಬಂದವನು ಗಾಡಿ ಬಂಡಿ ಹತ್ತವಂತಿಲ್ಲ ಅದು ಗುರುವಿನಾಜ್ಞೆ ಎಂದೆ. ಅವರು ಮುಖ ಕಪ್ಪುಗಟ್ಟಿತು. ಸರಿ ನಿಧಾನವಾಗಿ ನಡೆ ಎಂದು ಸಾರಥಿಗೆ ಹೇಳಿದರು ಗಾಡಿಯ ಹಿಂದೆ ನಾನು ನಡೆಯಲಾರಂಭಿಸಿದೆ.
ಕೆಲವು ಮೈಲಿಗಳು ಸಾರೋಟು ಸಾಗುತ್ತಿದ್ದಾಗ ಹಿಂದಿನ ಕಿಟಕಿಯಿಂದ ಅವರು ನನ್ನ ನೋಡುತ್ತಿದ್ದರು, ಸಾರೋಟು ವೇಗ ಹೆಚ್ಚಾದರೆ ತಗ್ಗಿಸಲು ಸಾರಥಿಗೆ ಹೇಳುತ್ತಿದ್ದರು ಕಡೆಗೆ ಒಂದು ವಿಚಿತ್ರವಾದ ಬಂಗಲೆ ಬಾಗಿಲಿಗೆ ಬಂದು ನಿಂತಿತು ಸಾರೋಟು.ಆ ಬಂಗಲೆಯಲ್ಲಿ ಬಿಸಿಲು ಬೆಳದಿಂಗಳು , ಹಗಲು-ಇರುಳು, ಸುಂದರ ಹಕ್ಕಿ ರಣಹದ್ದು, ಒಂದೆಡೆ ಕಡಲು-ಕಾನನ ಎಲ್ಲಾ ಒಟ್ಟಿಗೆ ಮೇಳೈಸಿತ್ತು ನಿಂತ ಸಾರೋಟಿನ ಸಾರಥಿ ಅವರನ್ನು ಕೈಹಿಡಿದು ಕೆಳಗಿಸಿ ರಾಜ ಮರ್ಯಾದೆ ತೋರಿದ ಅವನು ಅವರ ಕೈಹಿಡಿದಾಗ ನನಗೆ ಕೊಂಚ ಬೇಸರವಾಯಿತು. ಅದನ್ನು ಕಣ್ಣಲ್ಲೇ ಗಮನಿಸಿ ಅಪರಾಧಿ ಮನೋಭಾವದಿಂದ ನೋಡಿ ಕ್ಷಮಿಸು ಎಂಬಂತೆ ಕಣ್ಣಲ್ಲೇ ಕೇಳಿದರು. ನಾನೇ ತಪ್ಪು ಮಾಡಿದೆ ಎಂಬಂತೆ ಭಾಸವಾಗಿ ನಾನು ಏನೂ ಮಾತನಾಡದೆ ಅವರನ್ನು ಹಿಂಬಾಲಿಸಿ ಹೋಗುವಾಗ ಕಾವಲುಗಾರ ಅವರಿಗೆ ಅತೀ ವಿನಿಯ ಮತ್ತು ಮರ್ಯಾದೆಯಿಂದ ಸಲಾಮು ಮಾಡಿದ ನನ್ನನ್ನು ಯಾರು ಎಂಬಂತೆ ನೋಡಿದಾಗ ಕಾವಲುಗಾರ ನನ್ನ ತಡೆಯಲಿಲ್ಲ ಆದರೆ ಬುಟ್ಟಿಯನ್ನೊಮ್ಮೆ ಪರಿಶೀಲಿಸುವಂತೆ ನೋಡಿದ. ಭಾರವೇ ಇಳಿಸಲೇ ಎಂದು ಮುಂದೆ ಬಂದವನಿಗೆ ಹೇಳಿದ ಕನಸು ಮಾರುವವರೆಗೆ ಬುಟ್ಟಿ ಇಳಿಸುವಂತಿಲ್ಲ ಎಂದಾಗ ಅವರು ಹಿಂತಿರುಗಿ ನೋಡಿ ಫಕ್ಕನೆ ನಕ್ಕರು ಅದು ನನ್ನ ತಾಯಿಯ ನಗುವಿನಂತೆ ಇತ್ತು ಬಿಡು ಅವನನ್ನು ಎಂದು ಕಾವಲುಗಾರನಿಗೆ ಹೇಳಿ ಒಳಗೆ ಹೋದರು ನಾನು ಅವರನ್ನು ಹಿಂಬಾಲಿಸಿದೆ.
ಸರಿ ಒಟ್ಟು ಏಳು ಕನಸುಗಳು ಬೇಕು, ನನಗೆ ಸರಿ ಒಂದು ಕನಸಿಗೆ ಎಷ್ಟು ಪ್ರತಿಫಲ ನೀಡಬೇಕು ಹೇಳು ನಿನಗೆ ಎಂದರು, ನಾನು ಉತ್ತರ ನೀಡುವ ವೇಳೆಗೆ ನನ್ನ ಬುಟ್ಟಿ ಪರಿಶೀಲಿಸಿ, ಇದೇನು ಬರೀ ಏಳು ಕನಸುಗಳಷ್ಟೇ ಇವೆ. ನನಗಾಗಿಯೇ ತಂದಿಯೇನು? ಎಂದು ಆನಂದ ಭರಿತ ಧ್ವನಿಯಿಂದ ಕೇಳಿದರು. ನಾನು ಹೇಳಿದೆ ನನಗೆ ಪ್ರತಿಫಲ ಬೇಕಿಲ್ಲ, ಕನಸುಗಳನ್ನು ಕೊಂಡು ತೃಪ್ತಿಯಿಂದ ನೀವು ಅಲ್ಪ ಕಾಣಿಕೆ ನೀಡಿದರೂ, ಅದು ಕನಸು ಮಾರಲು ಕಳಿಸಿದ ಫಕೀರನಿಗೆ ಅರ್ಪಿತ ಎಂದೆ. ಆಗ ತಿಳಿಯಿತು ಪ್ರತೀ ಮಾತು ಮಾತಿಗೂ ಆಕೆ ಸರಿ, ಸರಿ, ಎನ್ನುತ್ತಾರೆ ಎಂದು ತಿಳಿಯಿತು. ಸರಿ ಎಂದು ಹೇಳಿದಂತೆ ನಡೆಯುತ್ತಾರೆ. ತಪ್ಪು ಎನ್ನುವುದಿಲ್ಲ, ನಡೆಯುವುದಿಲ್ಲ ಎಂದು.
ಇದ್ದ ಏಳು ಕನಸುಗಳನ್ನು ಅವರ ಕೈ ಸೇರಿದವು, ಬುಟ್ಟಿ ಭಾರ ಪೂರ್ಣ ಕಡಿಮೆಯಾಗಿತ್ತು. ಸರಿ ಒಳಗೆ ಬಾ ಪ್ರತಿಫಲ ನೀಡುತ್ತೇನೆ ಎಂದರು ಯಾಉ ಮನೆಯೊಳಗೂ ಹೋಗಬಾರದು ಎಂದು ಗುರುವಿನ ಅಪ್ಪಣೆ ನೆನಪಾಗಿ ಹಿಂದುಮುಂದು ನೋಡುತ್ತಿದ್ದವನಿಗೆ, ಅವರೇ ಹೇಳಿದರು ನಿನಗೆ ನಾನು ನೀಡುತ್ತಿರುವ ಪ್ರತಿಫಲ ತೀರಾ ಕಡಿಮೆ ಅದಕ್ಕೆ ಒಳಗೆ ಬಾ ಎಂದೆ ಎಂದು ಖುಷಿಯಿಂದ ಅವರ ಹಿಂದೆ ಹೋದೆ ಬುಟ್ಟಿ ತಲೆಯ ಮೇಲಿತ್ತು ಅಲ್ಲೇ ಮಂಚದ ಮೇಲೆ ಕುಳಿತಿದ್ದ ಹೆಂಗಸೊಬ್ಬರು ನನ್ನತ್ತ ದೃಷ್ಟಿ ಇಟ್ಟು ನೋಡಿ ಕ್ಯಾಕರಿಸಿ ಥೂ ಎಂದು ಉಗಿದು ಮಾನ ಮರ್ಯಾದೆ ಇಲ್ಲದ ಮುಂಡೇ ಮಕ್ಕಳು ಕನಸು ಮಾರಿಕೊಂಡು ಬದುಕುತ್ತಾರೆ. ಎಂದು ಬೈಯ್ದಳು, ನಾನು ಕಕ್ಕಾಬಿಕ್ಕಿಯಾದೆ ಒಳಗಿನಿಂದ ನನ್ನತ್ತ ನೋಡಿದ ಇವರು ಆಕೆಗೆ ತಲೆಸರಿಯಿಲ್ಲ ಎಂದು ಸನ್ನೆ ಮಾಡಿದರು.
ಪ್ರತಿಫಲ ತಂದು ನನ್ನ ತಲೆಯ ಮೇಲಿನ ಬುಟ್ಟಿಗೆ ಹಾಕಿದ ಅವರನ್ನು ನಿಮ್ಮ ಹೆಸರೇನು? ಎಂದು ಕೇಳಿದೆ ಅವರು ಅಚ್ಚರಿ ಪಡೆದೇ ಏಕೆ? ಎಂದು ಪ್ರಶ್ನಿಸಿದರು. ನೀವು ನನ್ನ ತಾಯಿಯಂತೆ ಕಾಣುತ್ತೀರಿ ಅದಕ್ಕೆ ಎಂದೇ ಅವರು ಮಂಡಿಯೂರಿ ನನ್ನ ಮುಂದೆ ಕುಳಿತು, ನನ್ನ ಎತ್ತರದಷ್ಟಾದ ಅವರು ನನ್ನ ಎರಡು ಗಲ್ಲ ಮುದ್ದಿಸಿ ಮುತ್ತಿಟ್ಟುಕೊಂಡಾಗ ಸಾಗರದ ಒಡಲಿಲ್ಲ ಅಗ್ನಿ ಕೆನ್ನಾಲಿಗೆ ಚಾಚಿದ ಅನುಭವವಾಯಿತು. ಏಕೋ ಏನೋ ಆನಂದ ಭಾಷ್ಪ ಕಣ್ಣೀನಿಂದ ಸುರಿಯಲಾರಂಭಿಸಿದವು. ಬಿಕ್ಕಿ ಬಿಕ್ಕಿ ಆಳಬೇಕು ಎನ್ನಿಸಿತು. ಜೀವನದಲ್ಲಿ ಮೊದಲ ಬಾರಿಯಾದರೂ ಹೊಡಯದಿದ್ದರೂ ಆಳಬೇಕು ಅನ್ನಿಸಿತು ಅತ್ತು ಬಿಟ್ಟೆ. ನಾನು ಆಳುವಾಗ ತಡೆಯಲಿಲ್ಲ, ಸರಿ ನನಗೆ ನಾಳೆ ಬರುವಾಗ ಬೇರೆ ಬೇರೆ ಕನಸುಗಳನ್ನು ತೆಗೆದುಕೊಂಡು ಬಾ ಎಂದರು. ಮತ್ತೆ ಅವರೇ ನನಗೆ ಬೇಕಾದ ಕನಸುಗಳು ನಿನ್ನ ಬಳಿ ನಾಳೆ ಇರುತ್ತದೆಯೋ ಇಲ್ಲವೋ ನಿನಗೆ ತಿಳಿಯದು ಅಲ್ಲವೆ, ಆದರೂ ದಿನಕ್ಕೊಮ್ಮೆಯಾದರೂ ಇಲ್ಲಿ ಬಂದು ಹೋಗು ಎಂದರ, ಈಗಿದ್ದ ಕನಸುಗಳು ಈಗಿನವು ನಾಳೆ ಎನ್ನುವಾಗ ಅದು ಬೇರೆಯಾಗಿರುತ್ತದೆ. ಕನಸುಗಳು ಇದ್ದೆರೆ ಅವು ನನ್ನವು ನಿನಗೆ ಯಾವುದೇ ಪ್ರತಿಫಲವಿಲ್ಲ ಎಂದು ನಕ್ಕರು ಧನ್ಯನಾದೆ ಎಂದು ಹೇಳಿ ಹೊರಗೆ ನಡದೆ ಅವರೂ ಸಹ ನನ್ನನ್ನು ಹಿಂಬಾಲಿಸಿದರು, ಕನಸುಗಳು ಖಾಲಿ ಖಾಲಿಯಾದ ಬುಟ್ಟಿಯಲ್ಲಿ ಪ್ರತಿಫಲವೂ ಕಡಿಮೇ ಎಂಬುದರ ಬಗ್ಗೆ ಖುಷಿಯಿಂದ ಅವರ ಮನೆಯ ಮುಖ್ಯದ್ವಾರದಿಂದ ಹೊರಗೆ ಬಂದು ಕಾವಲುಗಾರನನ್ನು ದಾಟಿ ಹಿಂತಿರುಗಿ ನೋಡಿದೆ ಅವರು ಹಿಂದೆ ಬಂದು ನನ್ನ ಬೆನ್ನಿಗೆ ನಿಂತಿದ್ದರು.
ಹಿಂತಿರುಗಿ ನೋಡಿದವನಿಗೆ ನೀನು ನನ್ನ ಹೆಸರು ಕೇಳಿದೆಯಲ್ಲ "ಕಡಲೂರ ಕನ್ಯೆ" ನಾನು ನನ್ನ ಹೆಸರು ಕೇಳಿದರೆ ಜನ ಆದರಾಥಿತ್ಯ ತೋರುತ್ತಾರೆ ನಿನಗೂ ನನ್ನ ಹೆಸರು ಕೇಳುವ ಆಸೆಯಾಗಿದೆ ಹೇಳಿದ ಮೇಲೆ ವಿಷಾದಪಡಬೇಡ ನನ್ನ ಹೆಸರು "ಬೇಸರ" ಎಂದರು. ಬಹಳ ಹಿಂದೆ ಇವರ ಹೆಸರು ಚಿರಪರಿಚಿತ ಎನಿಸಿತು ನನಗೆ, ಕನಸು ಮಾರಲು ಪ್ರಾರಂಭಿಸಿದ ದಿನದಿಂದ ಕನಸುಕೊಳ್ಳಲು ಬಂದವರೆಲ್ಲಾ ಆ ಹೆಸರನ್ನು ಜೊತೆಯಲ್ಲಿ ತರುತ್ತಿದ್ದರು.
ಆದರೆ "ಬೇಸರ" ಎಂಬ ಅವರನ್ನು ನಾನು ಈ ರೀತಿ ಸ್ಪಂದಿಸುವೆ ಎಂದು ಕೊಂಡಿರಲಿಲ್ಲ ಬಹುದೊಡ್ಡ ಹೆಸರಿನ ಅವರಿಗೆ ನನ್ನಂತಹ ಜನ ಜೋಪುಡಿಯಿಂದ ತಂದ ಕನಸು ಬಲು ಪ್ರಿಯ ಎಂಬುದು ತಿಳಿದು ನಗು ಬಂತು, ಅಲ್ಲಿಂದ ಕಾಲುಕಿತ್ತೆ ಬಲು ಚೆನ್ನಾಗಿ ಕನಸು ಮಾರುವುದನ್ನು ಅಪ್ಪಣೆಯಂತೆ ಕಲಿತ ನನ್ನ ಫಕೀರ ಬಹುವಾಗಿ ಮೆಚ್ಚಿಕೊಂಡಿದ್ದನಾದರೂ ದ್ರೋಹ ಚಿಂತನೆ ಎಂಬುದು ವ್ಯಾಪಾರದಲ್ಲಿ, ಆದರೆ ಇದು ಜೀವನ ಧರ್ಮ ಚಿಂತನೆ ಇಲ್ಲಿ ಲಾಭವಾದಷ್ಟು ದು:ಖ, ಗೋಳು, ನಷ್ಟವಾದಷ್ಟು ಸಂತಸವೇ ತಿಳಿಯತೆ ಎಂದ. ಅಷ್ಟರಲ್ಲಿ ಜೋಪಡಿಯ ಬಾಗಿಲಿಗೆ ರಾಜನರ್ತಕಿ ಬಂದು ನಿಂತು ನಕ್ಕಳು ಹ್ಞಾಂ ಎಂದ ಫಕೀರ, ಜೋಪುಡಿಯ ಮೂಲೆಯಲ್ಲಿ ತೆರೆಯಮರೆ ಮಾಡಿದ್ದ ಕಡೆ ಆಕೆಯನ್ನು ಕರೆದುಕೊಂಡು ಹೋದ, ಆಕೆ ಹೋದ ಮೇಲೆ ತಿಳಿಯಿತು ಆಕೆ ರಾಜನಿಗೆ ಕನಸು ಕೊಂಡ್ಯೊಯಲು ಬಂದಿದ್ದಳು ಎಂದು ಅದಕ್ಕೆ ಬದಲಾಗಿ ಸುರೆಯ ಬುರುಡೆಯನ್ನು ನೀಡಿ ಹೋಗಿದ್ದಳು. ಫಕೀರನು ರಾಜಾಜ್ಞೆ ಬೇಡ ಎನ್ನುವಂತಿರಲಿಲ್ಲ ಬುರುಡೆ ಮುಂದಿಟ್ಟುಕೊಂಡು ನನ್ನತ್ತ ನೋಡಿದ.
ಎದ್ದು ಹೋದ ನಾನು ಮತ್ತೊಂದು ಸುರೆಯ ಖಾಲಿ ಬುರುಡೆಯನ್ನು ತಂದು ಅರ್ಧ ಸುರೆಯನ್ನು ಅದಕ್ಕೆ ಸುರಿದು ನನಗೆ ಕೊಟ್ಟು ರುಚಿ ನೋಡೆಂದ ಗುರುವಿನಾಜ್ಞೆಯಂತೆ ಸುರೆಯನ್ನು ಹೀರಿದೆ ಆ ಹುಣ್ಣಿಮೆಯ ದಿನ ಚಂದಿರನ ನೋಡಿದರೂ ಕಡಲೂರ ಕನ್ಯೆ ಮುಖ ಬಿಂಬಿತವಾಗುತ್ತಿತ್ತು. ಕನಸು ಮಾರುವ ಕಾರ್ಯದಲ್ಲಿ ತಾಯಿಯ ನೆನಪು ಮರೆತಂತೆ ಆಗಿತ್ತು. ಕಡಲೂರ ಕನ್ಯೆ ನೋಡಿದ ಮೇಲೆ ಮತ್ತೆ ಮತ್ತೆ ನೆನಪಾಗಿ ನೋಡಲೇ ಬೇಕು ಎನಿಸುತ್ತಿತ್ತು.
ಕಡಲೂರ ಕನ್ಯೆಯ ಮುಖ ನೆನಪದಾಗಲೆಲ್ಲಾ ಅವಳ ಚಿತ್ರಣ ಎದುರಿಗೆ ಬಂದಾಗಲೆಲ್ಲಾ ಅವಳಲ್ಲಿ ಏನೋ ಕೊರತೆ ಇದೆ ಎಂದು ನನಗೆ ಅನ್ನಿಸತೊಡಗಿತು. ಸುರೆಯ ಮತ್ತಿನಲ್ಲೂ ಯೋಚನೆಗೆ ಬಿದ್ದೆ ಬಿಳಿಯ ಸೀರೆ, ಕಡುಕಪ್ಪು ಕುಪ್ಪಸ, ನೀಳ ಕೊದಲಿನಲ್ಲಿ ಕೆಂಚು ಬಣ್ಣ ಸಿರಿತನವ ಸಾರುತ್ತಿತ್ತು. ಕೇಶವೆಂಬುದು ಯಾವುದೇ ಬಂಧನವಿಲ್ಲದೆ ಸ್ವಾತಂತ್ಯ್ರವಾಗಿ ತಲೆಯ ಮೇಲೆ ವಿಹರಿಸುತ್ತಿತ್ತು. ಮುಖದಲ್ಲಿ ಸಂತಸದ ಸ್ವಾತಂತ್ಯ್ರಕ್ಕಿಂತ ಹೆಚ್ಚು ಬಲವಂತವಾಗಿ ತಂದುಕೊಂಡ ಗಾಂಭೀರ್ಯ, ನೋವು ನುಂಗಿಕೊಂಡಿರುವ ಬೇಸರ ಎದ್ದು ಕಾಣುತ್ತಿತ್ತು. ಅಂದು ನನ್ನ ನೋಡಿದ್ದೆ ನಕ್ಕರಲ್ಲ ಅದೇ ಮೊದಲ ನಗೆಯಿರಬೇಕು ಅವರ ಜೀವನದಲ್ಲಿ ನಕ್ಕಿದ್ದು ಎಂದು ಹಾಗೇ ನಿದ್ದೆಗೆ ಜಾರಿದೆ.
ಬೆಳಿಗ್ಗೆ ಫಕೀರನಿಗೂ ಮುಂಚಿತವಾಗಿ ನಾನೇ ಎದ್ದು, ತಯಾರಿ ಮುಗಿಸಿ ಕುಳಿತೆ ಎದ್ದು ಅಚ್ಚರಿಯಿಂದ ನನ್ನತ್ತ ಒಮ್ಮೆ ನೋಡಿದ ಫಕೀರ ಶುಚಿಯಾಗಿ ಬಂದು ಕುಡಿಯಲು ಕೊಂಚವೇ ಕೊಂಚ ಎನ್ನುವಷ್ಟು ಗಂಜಿ ನೀಡಿದ ಅದೂ ನನಗೆ ಬೇಡವಾಗಿತ್ತು ರಾತ್ರಿ ಹೀರಿದ ಸುರೆ ಕರುಳನ್ನು ಸುಡದಿರಲು ಹೊಟ್ಟೆಗೆ ಒಂದಿಷ್ಟು ಹಾಕಿಕೊಂಡು, ಕಡಲೂರ ಕನ್ಯೆಯ ಕಾಣುವ ತವಕದಲ್ಲಿ ಹೊರಟೆ, ಜೋಪುಡಿಯಿಂದ ಹೊರಬಂದ ನನ್ನ ತಲೆಯ ಮೇಲೆ ಅದೇ ಬುಟ್ಟಿ ಇಟ್ಟ ಫಕೀರ ನುಡಿದ ಮಾತು ಬಲು ಹರಿತವಾಗಿತ್ತು " ಕನಸು ಮಾರುವ ನೀನು ಕನಸುಕೊಳ್ಳುವ ಧೈರ್ಯ ಮಾಡದಿರು" ಎಂದ ತಟ್ಟನೆ ನಿಂತು ಅವನ ಮುಖ ನೋಡುತ್ತಾ ಹೆಜ್ಜೆ ಮುಂದೆ ಹಾಕಿದೆ ಮನಸ್ಸು ಬಲು ಭಾರವಾಗಿತ್ತು.
ಅದೇ ಹೆಜ್ಜೆಗಳು ಮುಂದುವರಿದು ಸಾರೋಟು ಅಶ್ವ ಸಾಲುನಿಂತ ಬೀದಿಯಲ್ಲಿ ಮುಂದೆ ಸಾಗಿತು. ಬೇರೆಯಾರಿಗಾದರೂ ತಾಕಿ ಮತ್ತೆ ಪಂಚಾಯಿತಿಯಾದಿತು ಎಂದು ಎಚ್ಚರಿಕೆಯಿಂದ ನಡೆಯುತ್ತಾ ಸಾಗಿದೆ. ಆದರೆ ಕಣ್ಣುಗಳು ಮಾತ್ರ ಕಡಲೂರ ಕನ್ಯೆಯ ಹುಡುಕುತ್ತಾ ಹೋದವು ಕಡೆಗೆ ಬಿಸಿಲು ಬೆಳದಿಂಗಳು ಬಂಗಲೆಯ ಮುಂದೆ ಬಂದು ನಿಂತೆ ಅದೇ ದ್ವಾರಪಾಲಕ ಏ ಯಾರು ನೀನು? ಎಂದ ನಾನು ತಡವರಿಸುತ್ತಾ ನಾನು ಕ....ಕ...ಕನಸು ಮಾರುವ ಸೇವಕ ಎಂದೆ ಓಹೋ ನಿನ್ನೆ ಕನ್ಯೆಗೆ ಕನಸು ನೀಡಿದವನು ನೀನೆಯೋ ಎಂದ? ಅಹುದು ಎಂಬಂತೆ ತಲೆಯಾಡಿಸಿದೆ. ಅವನ ಮಾತಿನಲ್ಲಿ ಕುಹಕವಿರುವುದು ನನಗೆ ತಿಳಿಯಿತು. ಅವನು ಇಂದೇನು ಕನಸು ತಂದಿರುವೆ ಅವಳಿಗೆ, ನಿತ್ಯ ನೂತನ, ಚಿರಯೌವ್ವನ,ಆತ್ಮ ಬಂಧನ, ಪ್ರೇಮ ಚುಂಬನ ಎಂದು ಗೇಲಿ ಮಾಡಿದ. ಅವು ಕನಸುಗಳಲ್ಲ ಅತಿ ಆಸೆಗಳು ಅಷ್ಟೇ ಎಂದೆ. ಅಷ್ಟರಲ್ಲಿ ಮನೆಯ ಮಾಳಿಗೆಯ ಉಪ್ಪರಿಕೆಯಿಂದ ಬೇಸರ ಹೊರಡಿಸಿದ ಫಾರ್ಮಾನು ಬಂತು ಏಯ್ ಅವನನ್ನು ಒಳಗೆ ಬಿಡು ಭೀತಿಗೊಂಡ ಪಾಲಕ ನನ್ನ ಒಳಗೆ ಬಿಟ್ಟುಕೊಟ್ಟು ಅವನ ಮುಖ ನೋಡಿದ ನಾನು ನಗಲಿಲ್ಲ. ಒಳಹೊಕ್ಕೆ ಉಪ್ಪರಿಕೆಯಿಂದ ಇಳಿದು ಬಂದ ಕನ್ಯೆ ಒಳಗೆ ಹೋದಾಗ ಕಡುಕಪ್ಪಾದರೂ ಸುಂದರವಾದ ನೋಡಿದರೆ ಸಾಕು ಮುದ್ದಾಡಬೇಕು ಎನಿಸುವಷ್ಟು ಆಸೆ ಹುಟ್ಟಿಸುವ ಕೂಸೊಂದು ತನ್ನ ತುಂಬ ದೇಹವ ಕುಣಿಸುತ್ತಾ ಕುಣಿತಕ್ಕಿಂತ ಜೋರಾಗಿ "ಗಿಲ್ಲನೆ" ನಗುತ್ತಾ ಮನೆಯ ತುಂಬಾ ಒಡಾಡುತ್ತಾ ಸ್ವಾತಂತ್ಯ್ರ ಸಿಕ್ಕ ಜಿಂಕೆಮರಿಯಂತೆ ಮುಕ್ತವಾಗಿ ಓಡಿ, ಓಡಿ ಮನೆಯ ತುಂಬೆಲ್ಲಾ ಕುಪ್ಪಳಿಸಿ ಗಿಲ್ಲನೆ ನಕ್ಕು ಚೀರಿ ಕೇಕೇ ಹಾಕುತ್ತಿತ್ತು ಅದು ಹಾಗೆ ತಪ್ಪು ಹೆಜ್ಜೆ ಹಾಕಿಕೊಂಡು ಕುಣಿಯುತ್ತಿದ್ದರೆ. ಅದರ ಕಾಲಿನ ಗೊಲಸು ಅದರ ನಗು ಕೇಕೇಯೊಂದಿಗೆ ಸ್ಪರ್ಧೆಗಿಳಿದಂತೆ ಸದ್ದು ಮಾಡುತ್ತಿತ್ತು ಅದನ್ನೆ ನೋಡಿ ಮೈಮರೆತು ನಿಂತೆ ನಾನು, ಆಕ್ಷಣ ತಲೆಯ ಮೇಲಿನ ಬುಟ್ಟಿಯ ಭಾರವೂ ಮರೆತುಹೋಯಿತು. ಅಷ್ಟರಲ್ಲಿ "ಬೇಸರ" ಉಪ್ಪರಿಕೆಯಿಂದ ಇಳಿದು ಬಂದು ಕನಸು ಮಾರುವ ನೀನು ಕೆಲವರಿಗೆ ನೀಡುವ ಕನಸಗಳೇ ಜೀವ ನೀಡಿದಂತೆ ಅಂತಹುದರಲ್ಲಿ ಬರುವುದೇ ತಡಮಾಡಿದರೆ ಎಂತೋ ಮಾರಾಯ ಎನ್ನುತ್ತಾ ತಲೆಮೇಲಿನ ಬುಟ್ಟಿಗೆ ಕೈ ಹಾಕಿದರು. ನಾನು ಮಗುವನ್ನು ನೋಡುತ್ತಿದ್ದೆ ಅದರಲ್ಲಿ ನೆಟ್ಟ ಕಣ್ಣು ತೆಗೆಯದೇ ನೋಡುತ್ತಿದ್ದೆ.
ಬುಟ್ಟಿಗೆ ಕೈ ಹಾಕಿದ ಕಡಲೂರ ಕನ್ಯೆ ಛೇ! ಎಂತಹುದು ಮಾರಾಯ ಇದು? ಇಂದು ಬರೀ ಕೆಟ್ಟ ಕನಸುಗಳೇ ತಂದಿದ್ದೀಯಾ, ಇವನ್ನೇ ಬೇಕು ಎಂದು ಆರಿಸಿ ತಂದಿಯೇನು ಎಂದರು? ನಾನು ಮೌನವಾಗಿದ್ದು ಮೆಲ್ಲನೆ ನುಡಿದೆ ಕನಸುಗಳನೆಂದೂ ನೋಡಿದವನಲ್ಲ ನಾನು, ಅವರು ನೀಡಿದ್ದು ಹೊತ್ತು ತಂದಿದ್ದೇನೆ. ನಿಮಗವು ಒಪ್ಪಿಗೆಯಾಗದಿದ್ದರೆ ಬಿಡಿ ನಾಳೆ ನಿಮ್ಮ ಕನಸುಗಳು ಸಿಗಬಹುದು ಹೊಸ ಸುಂದರ ಕನಸುಗಳ ನಿರೀಕ್ಷೆಯಲ್ಲಿರಿ ಭರವಸೆಗಳಿರಲಿ ಎಂದೆ ಮತ್ತೆ ಕಣ್ಣು ಮಗುವಿನತ್ತು ಹರಿಯಿತು.
ಆ ಮಗು ತನ್ನ ಕೈಯಲ್ಲಿದ್ದ ತಗಡಿನ ತುತ್ತೂರಿಯನ್ನು ನನ್ನತ್ತ ಎಸದೇ ಬಿಟ್ಟಿತು. ಆ ಕಡುಗಪ್ಪು ಕಂದ ಎಸೆದ ತುತ್ತೂರಿ ನೇರ ಬಂದು ನನ್ನ ಹಣೆಗೆ ತಾಗಿ ನೆತ್ತರು ಮುಖವನ್ನೆಲ್ಲಾ ವ್ಯಾಪಿಸಿತು, ತಕ್ಷಣ ಬಂದು ಕಡಲೂರ ಕನ್ಯೆ, ಸರಿ ಇದೊಂದು ಯಾವಾಗಲೂ ಹೀಗೆ ಅತಿ ಸಂತೋಷವಾದರೂ, ಅತಿದು:ಖವಾದರು ಹೀಗೆ ವ್ಯಕ್ತಪಡಿಸುತ್ತದೆ. ನೀನು ಏನು ಅನ್ಯತಹ: ಭಾವಿಸಬೇಡ ಎಂದವರು ಒಳಗೆ ಹೋಗಿ ಅರಿಶಿನ ತಂದು ಬಿಳಿಯ ಬಟ್ಟೆಯಲ್ಲಿ ಗಾಯಕ್ಕೆ ಕಟ್ಟಿದರು.
ಆ ನೋವಿನಲ್ಲೂ " ಈ ಮಗು ಯಾರದು? ಎಂದೆ ಹೋಲಿಕೆ ಅವರಂತೆ ಇರಲಿಲ್ಲವಾದ್ದರಿಂದ ಹಾಗೇ ಕೇಳಿದೆ, ಅದಕ್ಕೆ ಅವರು ಹೌದು ನನ್ನದಲ್ಲದಿದ್ದರೂ ನನ್ನದೆ ಈ ಊರಿಗೆ ಬಂದು ಮದುವೆ ಇಲ್ಲದೆ ಮಗುವಿನ ತಾಯಿಯಾದೆ, ಒದದಿದ್ದರೂ ವೈದ್ಯೆಯಾದೆ, ದಾರಿತಪ್ಪಿದವರಿಗೆ ಅಶ್ರಯವಾಗಿ ನಾನೇ ದಾರಿ ತಪ್ಪಿದ್ದೇನೆ. ಮನೆಯ ಮೂಲೆಯಲ್ಲಿ ಕುಳಿತಿದ್ದ ಆ ಹೆಂಗಸನ್ನೂ ನೋಡಿ ಅವರ‍್ಯಾರು ಅವರ ಹೆಸರೇನು ಎಂದೆ? ಅವರನ್ನೇ ಕೇಳು ಎಂದಾಗ ತಲೆಯ ಮೇಲಿನ ಬುಟ್ಟಿ ಸಮೇತ ಅವರ ಮುಂದೆ ನಿಂತು ನಿಮ್ಮ ಹೆಸರು ಎಂದೆ ನನ್ನ ಷರತ್ತುಗಳಿಗೆ ಒಪ್ಪಿದರೆ ಮಾತ್ರ ಹೆಸರು ಹೇಳುವೆ ಎಂದರು, ಅವರು ಷರತ್ತುಗಳನ್ನು ಹೇಳುತ್ತಾ ಹೋದರು ನಾನು ಅದಕ್ಕೆ ಒಪ್ಪಿಕೊಂಡು ಸರಿ, ಸರಿ ಎಂದೆ, ಏಕೆಂದರೆ ನನಗೆ ಅವುಗಳು ಷರತ್ತು ಅನ್ನಿಸಲೇ ಇಲ್ಲ ಬೆಳ್ಳಿ ತಟ್ಟೆಯಲ್ಲಿ ಉಣ್ಣ ಬೇಡ, ರಾಜನರ್ತಕಿ ಕರೆದರೂ ಅವಳ ಕೂಡಬೇಡ ನನ್ನಂತಹ ಸೇವಕನಿಗೆ ಅವ್ಯಾವೋ ಷರತ್ತಲ್ಲ ಎನಿಸಿ ಆಯಿತು ಎಂದೆ ಆಗ ಹೆಸರು ಹೇಳಿದರು ನಾನು"ಸುಂದರೀ ಚಿಕ್ಕಮ್ಮ" ಮಗು ಕೇಕೆ ಹಾಕಿ ನಕ್ಕಿತು ಕಡಲೂರ ಕನ್ಯೆ ಗದರಿದರು "ಏ ಗೆಜ್ಜೆ" ಒಳಗೆ ಬಾ ಎಂದು.
ಸರಿ ಆ ಮಗುವಿನ ಹೆಸರು ಗೆಜ್ಜೆ ಎಂಬುದು ತಿಳಿಯಿತು. ಅಲ್ಲಿಂದ ಹೊರಡಲು ಮುಂದಾಗಿ ಹೆಜ್ಜೆಯನ್ನು ದ್ವಾರದ ಕಡೆಗೆ ಹಾಕುತ್ತಿದ್ದರೂ ಸಹ, ಆ ಮಗುವಿನ ಹೆಸರು ಗೆಜ್ಜೆ ಎಂದೇ ಏಕೆ ಇಡಬೇಕು? ಗಂಟೆ ಎಂದಿಟ್ಟದ್ದರೆ ಚೆನ್ನಾಗಿರುತ್ತಿತ್ತು. ಎಂದು ಮನದಲ್ಲೇ ಯೋಚಿಸಿಕೊಂಡು ಜೋಪುಡಿಯ ದಾರಿ ಹಿಡಿದೆ. ಅನತಿ ದೂರದಲ್ಲಿ ಎದುರಾದ ತಲೆಗೆ ರುಮಾಲು ಸುತ್ತಿದ್ದ ಮೀಸೆ ಇಲ್ಲದ ಎತ್ತರದ ಫಕೀರನೊಬ್ಬ ಸುರೆ ಕುಡಿದ ಬುರುಡೆಯೊಂದಿಗೆ, ಎದುರಿಗೆ ಬಂದು,ಏ ನನಗೂ ಕನಸುಬೇಕು ಕೊಡುತ್ತಿಯ ಎಂದ ಬುಟ್ಟಿಯೊಳಗೆ ಕೈ ಹಾಕಿದ ಅದ್ಬುತ ಎಲ್ಲವು ಕೆಟ್ಟ ಕನಸುಗಳೇ ಇಷ್ಟು ನನಗೆ ಬೇಕು ಕ್ಷಮಿಸು ನನ್ನಲ್ಲಿ ಪ್ರತಿಫಲ ನೀಡಲು ಏನೂ ಇಲ್ಲ ಇರುವುದು ಸುರೆ ಬೇಕೆಂದರೆ ತಗೋ ಎಂದ ಬೇಡ ಎಂದು ಮುಂದೆ ನಡೆದೆ.
ಖಾಲಿ ಬುಟ್ಟಿಯೊಂದಿಗೆ ಹೋಗುವಾಗ ಪ್ರತಿಫಲ ದೊರೆಯದೆ ಹೋದದ್ದಕ್ಕೆ ಬೇಸರವಾಯಿತಾದರೂ ಮತ್ತೆ ಸಂತೋಷ ಕೆಟ್ಟ ಕನಸಿಗೆ ಯಾವ ಬೆಲೆ ಇದೆ ದು:ಖ ಒಂದೇ ಅದಕ್ಕೆ ಪ್ರತಿಫಲ ಎಂದು ನಿರ್ಧರಿಸಿ ಮುಂದೆ ಹೆಜ್ಜೆ ಹಾಕಿದೆ. ಮತ್ತೆ ಮಾರನೆಯ ದಿನ ಅದೇ ಬಂಗಲೆ, ಅದೇ ಬೇಸರದ ಹೆಸರಿನ ಕಡಲೂರಿನ ಕನ್ಯೆ, ಅದೇ ಗೆಜ್ಜೆ ಎಂಬ ಕಡುಗಪ್ಪು ಕೂಸು, ಅದೇ ರೋಗಿ, ಅದೇ ಸುಂದರೀ ಚಿಕ್ಕಮ್ಮ, ಕಡಲೂರ ಕನ್ಯೆ ಏನೋ ದುಗುಡದಿಂದ ಬಂದು ಬುಟ್ಟಿ ನೋಡಿದ ಕೂಡಲೇ ಇದ್ದ ಅಷ್ಟು ಕನಸುಗಳನ್ನು ಎತ್ತುಕೊಂಡರೇನೋ ಎಂಬಂತೆ ಭಾಸವಾಯಿತು. ಬುಟ್ಟಿ ಭಾರವೇ ಇಲ್ಲ ಸರಿ ನೀನು ಹೊರಡು ಎಂದರು.
ನಾನು ಹೊರಡಲು ಹೆಜ್ಜೆ ಎತ್ತಿಟ್ಟು ಹಾಗೆ ಅದೇ ರೋಗಿ ಬೈಯ್ದರು ಮುಂಡೇ ಮಗ ಕನಸು ಮಾರಿ ಸಿರಿವಂತನಾಗುವ ಆಸೆ ಇರಬೇಕು ಏನೂ ಪ್ರತಿಫಲ ನೀಡಬೇಡ ಅವನಿಗೆ ಎಂದರು.
ಆದರೆ ಬಾಗಿಲವರೆವಿಗೂ ಬಂದ ಕಡಲೂರ ಕನ್ಯೆ ಬೇಸರ, ನಮ್ಮ ಕಡಲೂರಿನಲ್ಲಿ ಹೀಗಿಲಲ್ ಮಾರಾಯ ಅಲ್ಲಿ ಕನ್ಯೆಯರ ಕನಸು ಯಾರು ಕದಿಯವುದಿಲ್ಲ ಅಲ್ಲಿ ಕನಸು ಮಾರುವವರೂ ಇಲ್ಲ, ಕೊಳ್ಳುವವರೂ ಇಲ್ಲ, ಇಲ್ಲಿ ಹೊರಗೆ ಹೋದರೆ ಕೊಲ್ಲುತ್ತಾರೆ ಎಂಬ ಭಯ, ಒಳಗಿದ್ದರೆ ಕನಸುಗಳಿಲ್ಲದೆ ಸಾಯುತ್ತೇವೆನೋ ಎಂಬ ಭೀತಿ, ಅದರೆ ನಿನ್ನಂತಹ ಮಾಂತ್ರಿಕ ಚಲುವ ತರುವ ಕನಸುಗಳೇ ಅದ್ಭುತ ನಾನು ನಿನಗೆ ಮಾರು ಹೋದೆ ಎಂದಾಗ ಎದೆ ನಡುಗಿತು. ಮೊನ್ನೆ ಜೋಪುಡಿಯಲ್ಲಿ ಫಕೀರ ನೀಡಿದ ಸುರೆ ಕುಡಿದು ಇವರ ಬಗ್ಗೆ ಚಿಂತಿಸಿದ್ದೆ ತಪ್ಪಾಯಿತೆ? ಎಂದು ಮನದಲ್ಲೇ ಪ್ರಶ್ನೆ ಹಾಕಿಕೊಂಡೆ ಅದು ಅವರಿಗೆ ಕೇಳಿಸಿತೆನೋ ಎಂಬಂತೆ ಸುರೆ ಕುಡಿದು ನನ್ನ ಬಗ್ಗೆ ಚಿಂತಿಸಿದ್ದು ತಪ್ಪಿಲ್ಲ ಬಿಡು ಎಂದರು ಗರಬಡಿದಂತೆ ನಿಂತುಬಿಟ್ಟೆ, ಅವರೇ ಮುಂದೆ ಬಂದು ನುಡಿದರು ನೀನು ಇನ್ನೂ ಕೂಸು ನಿನ್ನ ಚಿಕ್ಕ ಚಿಕ್ಕ ಆಸೆಗಳು ತಪ್ಪಲ್ಲ ಬಿಡು ಎಲ್ಲ ಆಗು-ಹೋಗುಗಳು ಅವರ ಮನೋಧರ್ಮ, ಚಿಂತನೆಯನ್ನು ಎತ್ತಿ ತೋರುತ್ತದೆ. ನೀನು ನನ್ನಲ್ಲಿ ನಿನ್ನ ತಾಯಿಯನ್ನು ಕಂಡಿದ್ದೀಯಾ, ಅದರಲ್ಲಿ ಅಪರಾಧವಿಲ್ಲ ನಾನು ನಿನಗಿಂತ ದೊಡ್ಡವಳು ನಿನ್ನ ಆಸೆಗಳನ್ನು ಅರಿಯಬಲ್ಲೆ ಎಲ್ಲಾ ವಿದ್ಯಾಮಾನಗಳನ್ನು ತಿಳಿಯಬಲ್ಲೆ ಆದರೆ ಕನಸುಗಳಿಲ್ಲದೆ ಬದುಕಲಾರೆ ಎಂದಾಗ ಅವರ ಕಾಲಿಗೆರಗಿದೆ ಕೆಲಹೊತ್ತು ಮೌನ ಅವರಿಸಿತು.
ಸರಿ ಬುಟ್ಟಿಯ ಕನಸುಗಳೆಲ್ಲಾ ನಾನೇ ಕೊಂಡಿರುವೆ ಅದು ಖಾಲಿ ಖಾಲಿ ಅದನ್ನು ಈಗ ಕೆಳಗಿಳಿಸು, ನಾನು ನಿನ್ನ ಮನಸ್ಸಿನ ಭಾಷೆಯನ್ನು ಅರಿತಿರುವೆ ನಿನ್ನ ಭಾವನೆಗೆ ತಕ್ಕಂತೆ ನೀನೇ ಕನಸುಗಳ ಹೊಸೆದು ಮಾರಬಾರದೇಕೆ? ಅದು ನಿನಗೆ ಬೇಕಾದ ಬೆಲೆಗೆ ಕೊಳ್ಳಲು ನಾನು ಸಿದ್ದ ಎಷ್ಟು ದಿನ ಈ ಫಕೀರನ ಜೋಪುಡಿಯಲ್ಲಿ ಪ್ರತಿಫಲ ದೊರೆಯದ ಕನಸುಗಳ ಮಾರುವೆ ಎಂದರು.
ನಾನು ತಕ್ಷಣ ಹಿಂತಿರುಗಿ ನುಡಿದೆ ನನಗೆ ಬೇಕಿರುವುದು ನನ್ನ ತಾಯಿಯನ್ನು ನೋಡಲು ಅವಕಾಶ ಅವರನ್ನು ಹುಡುಕುವುದೇ ನನ್ನ ಕಾಯಕ ಅಲ್ಲಿಯವರೆವಿಗೆ ಏನಾದರೂ ಸರಿ ಮಾಡುವೆ ಆದರೆ ಅದಕ್ಕೆ ಸೇತುವೆಯಂತಿರುವ ಫಕೀರ ತೋರಿದ ದಾರಿ ಬಿಟ್ಟು ಬೇರೆಡೆಗೆ ನಡೆದು ನಶ್ವರ ಜಗತ್ತಿಗೆ ಮಾರುಹೋಗುವ ಅದರಿಂದ ನೋವು ನೋಡುವ ಕಾಯಕ ನನಗೆ ಬೇಡವೇ ಬೇಡ ಅಂದೆ ಒಹೋ ಮಾತೆಗೆ ನಿನೇನಾಗಬೇಕು? ಎಂದರು ನಾನು ಆಕೆಯ ಮಗ ಎಂದೆ. ಕೂಡಲೇ ನನ್ನ ಅಪ್ಪಿ ಮುದ್ದಾಡಿದರು ನನ್ನ ಅಯ್ಯೋ ನಾನು ಮಾತೆಯ ಮಗನೇ ಇಷ್ಟು ದಿನ ನನಗೆ ಎಂಥೆಂಥ ಕನಸು ನೀಡಿದವನು. ನಾನು ಮಾತೆಯನ್ನು ಬಲು ಬಲ್ಲೆ ಆಕೆಯೂ ಕಡಲೂರಿನ ಪುತ್ರಿ ಈ ಊರಿನ ಸೊಸೆ, ಕಡಲೂರಿನಲ್ಲೂ ಆಕೆಗೆ ಬಲುಗೌರವ ಅದಕ್ಕಿಂತ ಹೆಚ್ಚು ಇಲ್ಲಿ ಇಲ್ಲ ಎಂದು ಬೇಸರದಿ ನುಡಿದರು.
ನಾನು ಅವರಿಗೆ ತೀರ ಹತ್ತಿರದವನಾದೆ, ಆದರೆ ನನ್ನಲ್ಲಿ ಅದು ಕೊಂಚ ಇರಿಸು ಮುರಿಸಿಗೆ ಕಾರಣವಾಯಿತು. ಅವರು ನನ್ನನ್ನು ಸೇವಕನಂತೆಯೇ ಕಂಡಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂಬ ಆಲೋಚನೆ, ಅವರಿಗಾಗಿ ಕನಸ ಹೊತ್ತು ಹೋಗುವುದು ಪ್ರತಿನಿತ್ಯ ಮುಂದುವರಿಯಿತಾದರೂ ನಾನು ಕನಸನ್ನು ಕಣ್ಣಿನಿಂದ ಕೂಡ ನೋಡಲೇ ಇಲ್ಲ , ಸುಂದರೀ ಚಿಕ್ಕಮ್ಮ, ಗೆಜ್ಜೆ, ರೋಗಿ ಇವರು ಯಾರು ಕನಸುಗಳ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ, ಅದೇ ರೋಗಿಯ ಬೈಗುಳ, ಚಿಕ್ಕಮ್ಮನ ನಗೆ, ಗೆಜ್ಜೆಯ ಗಿಲ್ಲನೆ ನಗು ಕೈಯಲ್ಲಿರುವ ತುತ್ತೂರಿ ಎಸೆಯವುದು ಕಂಡು ಅಲ್ಲಿಮದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದೆ.
ಕಾಲ ಕಳೆದಂತೆ ಕನಸು ಮಾರುವ ಕಾಯುಕ ಬೇಸರವಾಯಿತು. ಬೇರೆ ವೃತ್ತಿ ಅರಿಯದ ನಾನು ಸುಮ್ಮನೆ ಅದನ್ನೇ ಮಾಡುತ್ತಿದ್ದೆ. ನಾನು ಪ್ರೌಢಾವಸ್ಧೆಗೆ ಬರುತ್ತಿದ್ದ ಕಾರಣ ಚಿಗುರು ಮೀಸೆ ಮೂಡತೊಡಗಿದವು ಅಪರೂಪಕ್ಕೆ ಸಮಯ ಮಾಡಿಕೊಂಡು ಕಡಲೂರ ಕನ್ಯೆ ಭೇಟಿಯಾಗ ತೊಡಗಿದೆ. ಅವರ ಮುಖದಲ್ಲೀಗ ಗಾಂಭೀರ್ಯ ಮಾಯವಾಗಿ ಸಲೀಸಾಗಿ ನಕ್ಕು ಮನಬಿಚ್ಚಿ ಮಾತನಾಡಲು ಪ್ರಾರಂಭಿಸಿದರು. ನನ್ನ ಕನಸಿನ ಪ್ರಭಾವ ಅದು ಎಂದು ಆಗಾಗ ಹೇಳುತ್ತಿದ್ದರು.
ಆದೇಕೆ ಮಾತೆಯ ನೆನಪು ಅತಿಯಾಗಿ ಕಾಡಲಾರಂಭಿಸಿತು. ಒಂದು ದಿನ ಸಂಜೆ ಜೋಪಡಿಗೆ ಹಿಂತಿರುಗಿದವನು ರಾತ್ರಿ ಜೋಪುಡಿಯಲ್ಲಿದ್ದ ದೀಪದಲ್ಲಿ ಕಣ್ಣನ್ನೀರಿಸಿ ನೋಡುತ್ತಾ ಕುಳಿತೆ ಮಾತೆ ದೀಪದಿಂದ ಇಳಿದು ಬಂದಂತೆ ಭಾಸವಾಯಿತು. ಸಲ್ಪ ಹೊತ್ತು ನಿಂತ ಆಕೆಯನ್ನು ಕಂಡು ಹರ್ಷದಿಂದ ಆನಂದ ಭಾಷ್ಪ ಸುರಿಸಲಾರಂಭಿಸಿದೆ. ನನ್ನ ಮರೆತು ಹೋಗಿದ್ದೀಯಾ ನೀನು ಎಂಬಂತೆ ನನ್ನಡೆಗೆ ನೋಡಿದಳು ಮಾತೆ ಇಲ್ಲ ನಿನ್ನ ಬಂದು ಸೇರುವ ಗುರಿಯ ಹೊತ್ತ ನಾನು ಅಲ್ಲಿಯವರೆವಿಗೂ ಕಾಲ್ಪನಿಕ ಕಾಯಕದಲ್ಲಿ ತೊಡಗಿದ್ದೆ ಜೋಪುಡಿ ಸೇರಿ ನಿನ್ನಡೆ ನಡೆಯುವ ತ್ರಾಣ ಪಡೆದು ಬಂದೆ.
ಸರಿ ಇನ್ನಾದರೂ ನನ್ನೊಂದಿಗೆ ಬರಲು ಸಿದ್ದವಿದ್ದೀಯಾ ನೀನು ಎಂದು ಕೇಳಿದಳು ಮಾತೆ, ಇಲ್ಲ ಎನ್ನುವ ಮಾತೆ ಇಲ್ಲ ಸಿದ್ದ ನಡಿಯೆಂದೆ . ಅವಳು ಹೊರಟಳು ನಾನು ಅವಳನ್ನೇ ಹಿಂಬಾಲಿಸಿದೆ. ಅದೊಂದು ಬಂಗಲೆ ಸೇರಿದೆವು, ಆದರೆ ಬೆಳಿಗ್ಗೆ ಎದ್ದು ನೋಡಿದರೆ ಬಿಸಿಲು ಬೆಳದಿಂಗಳ ಮುಂದಿನ ಬಂಗಲೆಯಲ್ಲಿ ನಾನಿದ್ದೆ ಮಾತೆಯನ್ನು ಕೇಳಿದೆ ಆ ಮನೆಗೆ ಬಂದು ಹೋಗುತ್ತಿದ್ದ ನನ್ನ ಗುರುತಿಸಲಿಲ್ಲವೇ ನೀನು ಎಂದಾಗ, ಈ ಮನೆಗೆ ಬರುವವರು ದುಷ್ಟ ಜನವಾದ್ದರಿಂದ ನೀನು ತರುವ ಕನಸುಗಳ ಕೊಂದು ಸಂತಸಿಸುವವರೆಂದೂ ತಿಳಿದು ನಾನು ನಿನ್ನ ಕರೆಯಲಿಲ್ಲ ಹಿಂಬಾಲಿಸಿ ಬಂದು ಜೋಪುಡಿಯಿಂದಿ ಬರಿಗೈಲಿ ಕರೆತಂದೆ ನೋಡು ಎಂದಳು.
ಆಕೆ ನಕ್ಕರು ನನಗೆ ನಗು ಬರಲಿಲ್ಲ, ಅಷ್ಟು ಆಡಂಬರದಿಂದ ಆಕೆ ನಕ್ಕಳು ಯಾವುದೋ ನೋವು ನುಂಗಿದಂತೆ ಯಾವುದೋ ಪ್ರಳಯವನ್ನು ಎದುರು ನೋಡುತ್ತಿರುವಂತೆ ಭೀತಿ ಕಣ್ಣಿನಲ್ಲಿತ್ತು ಅಷ್ಟರಲ್ಲಿ ಅದ್ಯರೋ ಮನೆಯೊಳಗೆ ಬಂದಂತಾಯಿತು. ನನ್ನ ಬಾಗಿಲ ಹಿಂದೆ ಬಚ್ಚಿಟ್ಟು ಕೊಳ್ಳುವಂತೆ ಹೇಳಿ ಆಕೆ ಹೊರ ಹೋದಳು ಬಾಗಿಲು ಸಂದಿನಿಂದ ಇಣುಕಿ ನೋಡಿದೆ ನಾನು ಅವನೇ ಕೆಟ್ಟ ಕನಸುಗಳನ್ನು ಕೊಂಡ ಫಕೀರ ಬಂದು ಗೋಡೆಯೊರಗಿ ಕುಳಿತು ಧೂಮಲೀಲೆಯಲ್ಲಿ ತೊಡಗಿದ್ದ ಎದುರಿಗೆ ನಿಂತ ಮಾತೆಯನ್ನು ಬಾಯಿಗೆ ಬಂದಂತೆ ನಿಂದಿಸಿ ತೊಡಗಿದ ನಾನು ಅವನ ಅವಾಚ್ಯ ಶಬ್ದಗಳ ಸಹಿಸಲಾಗೆ ನುಗ್ಗಿ ಕೊಲ್ಲುವ ಆಕ್ರೋಶ ತಡೆದು ತಾಯಿಯ ಅಣತಿ ಪಾಲಿಸುತ್ತಿದ್ದೆ. ಅವನೇ ಎದ್ದು ಬಂದು ಬಾಗಿಲು ಹಿಂದೆ ಬಗ್ಗಿ ನೀಡಿ ಯಾರದು ಎಂದವನೇ ನನ್ನ ಮುಖದ ಮೇಲೆ ಅವನ ಹೊಗೆ ಬತ್ತಿ ಚಿಲುಮೆ ಎಸೆದ ತಕ್ಷಣವೇ ಎಚ್ಚರವಾಯಿತು ಫಕೀರಪ್ಪ ಗಂಜಿ ಕುಡಿಯಲು ಏಳಿಸಿದ. ಇದೇನು ಮುಸ್ಸಂಜೆಗೆ ಮಲಗಿ ಆಗಲೇ ಸ್ಪಪ್ನವೇ ಬೆಚ್ಚುತ್ತಿದ್ದೀಯ ಏನು ಪ್ರೇಮ ಸ್ಪಪ್ನವೋ ಎಷ್ಟು ಬಾರಿ ನಾನು ಹೇಳಿಲ್ಲ ನಿನಗೆ, ಕನಸು ಮಾರುವವರು ಕನಸು ಕಾಣಬಾರದು ಎಂದು ಗದರಿದ ಧ್ವನಿಯಲ್ಲಿ ಹೇಳಿದ. ನಾನು ಸತ್ಯದ ಮರೆಮಾಚುವ ರೀತಿಯಲ್ಲಿ ಇಲ್ಲ ಇಲ್ಲ ಎಂದು ಎದ್ದು ಕುಳಿತೆ ನೀಡಿದ ಗಂಜಿ ಹೀರಿದ ಮೇಲೆ ಸ್ಪಲ್ಪ ಹೊತ್ತು ಜೋಪುಡಿ ಮುಂದೆ ಸುತ್ತಾಡಿ ಬಂದರೂ ಹಗಲುಗಸಿನಲ್ಲಿ ಬಂದ ಮಾತೆಯ ನೆನೆದು ಅತ್ತೆ ಅವಳೇನೋ ತೊಂದರೆಯಲ್ಲಿದ್ದಾಳೆ ಎಂದು ತಿಳಿದು ಮನಸ್ಸಿನಲ್ಲೆ ನೊಂದೆ ಫಕೀರ ಕೂಡ ಇದನ್ನು ಅರಿತಂತೆ ಮೌನವಾಗಿ ಏನೋ ಆಲೋಚಿಸುತ್ತಿದ್ದ.
ಮುಗಿಯಿತು.
Thursday, March 31, 2011
ನವವಸಂತದ ಗಾಳಿಬೀಸಲು
ಬೇವು,ಬೆಲ್ಲ ತಿಂದು ಮನುಜನ ಜೀವನದಲ್ಲಿ ಕಷ್ಟ-ಸುಖಗಳು ಸಮನಾಗಿರಲಿ ಎಂದು ಹಾರೈಸುತ್ತಾ. ಈ ಯುಗಾದಿಯ ಕನ್ನಡನಾಡಿನ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುವ.
ಮೊನ್ನೆಯಷ್ಟೆ ಮಳೆ ಬಿದ್ದಿದೆ. ಈ ಮಳೆಗೆ ಬಾಯಾರಿ ಕಾದಿದ್ದ ಭೂಮಿ ತನ್ನೊಡಲಿಗಿನ ಧಗೆಯನ್ನು ಹೊರಹಾಕಿದೆ. ಆದರೆ ಈ ಯುಗಾದಿಯ ಮೊದಲ ಮಳೆಗೆ ಮಣ್ಣು ಪಸರಿಸುವ ಸುವಾಸನೆಗೆ ಪ್ರಕೃತಿಯ ಎಲ್ಲಾ ಜೀವಜಂತುಗಳಿಗೆ ನವಚೈತ್ಯನ ತುಂಬಿ ಬಂದಿದೆ. ಮತ್ತೊಮ್ಮೆ ಕಾಲಚಕ್ರ ಉರುಳಿ ಮತ್ತೊಂದು ಚೈತ್ರದ ಆಗಮನವಾಗಿದೆ. ಫಾಲ್ಗುಣದಲ್ಲಿ ಕುಳಿರಗಾಳಿಗೆ ಮರಗಳ ಎಲೆಗಳಲ್ಲೇ ಉದುರಿ ಮರಗಳಲ್ಲೇ ಚಿಗುರಿ ನವವಸಂತವನ್ನು ಆಹ್ವಾನಿಸಿವೆ. ಮರಗಳು ತಮ್ಮ ಚೆಲುವನ್ನು ಮೇಳೈಸಿಕೊಳ್ಳುತ್ತಿವೆ. ಹಸಿರು ಚಿಗುರೊಡೆದು ಮರದಲ್ಲಿರುವ ಹಕ್ಕಿಗೊಡುಗಳಲ್ಲಿ ತನ್ನ ಮರಿಗಳು ನವಚೇತನದಿಂದ ಹೊಸಕಂಪನ್ನು ಆಹ್ವಾದಿಸುತ್ತಾ ಹೊಸಚಿಗುರು ಚಿಗುರುವುದನ್ನು ಕಣ್ಣಲ್ಲಿ ತುಂಬಿ ಆನಂದಿಸುತ್ತಿವೆ.
ಯುಗಾದಿ ಎಂದರೆ ಪ್ರಕೃತಿಯ ಹೊಸತನ,ನವವಸಂತದ ಗಾಳಿಬೀಸಲು ಚಿಗುರು ಮಾವಿನ ಮತ್ತು ಹೊಂಗೆಯ ಘಮ್ಮನೆಯ ಸುವಾಸನೆ ತಂಗಾಳಿ ಎಂಥ ಗಿಡಮರವಾದರೂ ಸರಿ ಚೆಲುವಿನಿಂದ ಕಂಗೊಳಿಸುತ್ತ ನಿಲ್ಲುತ್ತದೆ. ಪ್ರಕೃತಿಯಲ್ಲಿ ಕೋಗಿಲೆಯ ವಸಂತಗಾನಕ್ಕೆ ಇಡೀ ಭೂರಮೆ ರಾಗದ ಭಾವೋತ್ಕರ್ಷವನ್ನು ಹರಡುತ್ತಾಳೆ ಈ ಪ್ರಕೃತಿಯ ರಾಗದ ಚಿಲುಮೆಗೆ ಎಲ್ಲರೂ ತಲೆಬಾಗಲೆ ಬೇಕು.ಯುಗಾದಿಯ ಮೊದಲ ಮಳೆಗೆ ಈ ಪ್ರಕೃತಿಯನ್ನೇ ಬದಲಾವಣೆ ಮಾಡುವ ಪ್ರಕ್ರಿಯೆ ಮಾತ್ರ ಈ ಭೂಮಿಗೆ ಉಂಟು ಆದರೆ ಮನುಷ್ಯ ಎಷ್ಟೇ ಪ್ರಯತ್ನಿಸಿದರೂ ಪ್ರಕೃತಿಯ ಮುಂದೆ ತಾನು ಕುಬ್ಜನಾಗುತ್ತಾನೆ. ಪ್ರಕೃತಿಯು ತನ್ನ ಪಾಲಿನ ಕೊಡುಗೆಯನ್ನು ತಾನು ನೀಡುತ್ತಲೆ ಬಂದಿದೆ. ಪ್ರಕೃತಿಯು ಪ್ರತಿಯೊಂದು ಹಂತದಲ್ಲಿ ಮನುಷ್ಯನ ಭಾವನೆಗಳಿಗೆ ರೋಮಾಂಚನವನ್ನು ನೀಡುತ್ತಾ ಬಂದಿದೆ. ಪ್ರಕೃತಿಯನ್ನು ಆರಾಧಿಸುವ ಕವಿಗಳಿಗೆ, ಬರಹಗಾರರಿಗೆ ಈ ಪ್ರಕೃತಿಯೇ ಸ್ಪೂರ್ತಿಯಾಗಿದೆ ನಿಂತಿದೆ. ಹಾಗೆಯೇ ವರ್ಷ,ವರ್ಷವೂ ಬಂದಂತೆ ಯುಗಾದಿ ಮತ್ತೊಮ್ಮೆ ಬಂದಿದೆ.
ವರ್ಷ,ವರ್ಷವೂ ಪ್ರಕೃತಿಯ ಹೊಸತಾಗುವ ಗುಣವನ್ನು ಹೊಂದಿದೆ. ಈ ನಿಸರ್ಗದ ಮುಂದೆ ಮನುಷ್ಯನ ತನ್ನ ಆಯಸ್ಸು ದಿನದಿಂದ ದಿನಕ್ಕೆ ಸವೆದು ಹೋಗುತ್ತಿದೆ. ಬಾಲ್ಯದಿಂದ, ಯೌವ್ವನ, ಯೌವ್ವನದಿಂದ, ಮಧ್ಯವಯಸ್ಸು ಅಲ್ಲಿಂದ ವೃದ್ದಾಪ್ಯಕ್ಕೆ ಪ್ರಯಾಣ ಮಾಡುತ್ತಿದ್ದೇವೆ. ಆದರೆ ಪ್ರಕೃತಿ ಪ್ರತಿ ವರ್ಷ ತನ್ನ ಹಳೆಯದನ್ನು ಕಳಚಿಕೊಂಡು ಹೊಸತನವನ್ನು ತೊಟ್ಟಕೊಂಡು ನವನವೀನವಾಗಿ ಇಡೀ ಭೂಮಿಯನ್ನು ಸಿಂಗರಿಸುತ್ತದೆ. ಇದೇ ಮನುಷ್ಯನ ಕೊರಗನ್ನು ಬೇಂದ್ರೆಯವರ ಯುಗಾದಿ ಕವನ ಭಿನ್ನವಾದ ನಿಲುವುಗಳನ್ನು ಹೇಳುತ್ತಾ ಮನುಷ್ಯನ ದು:ಖವನ್ನು ಪ್ರಕಟಿಸುತ್ತದೆ.
ಯುಗ ಯುಗಾದಿ ಕಳೆದರರೂ
ಯುಗಾದಿ ಮರಳಿ ಬರುತಿದೆ
ಹೊಸವರುಷಕೆ ಹೊಸ ಹರುಷವ
ಹೊಸತು,ಹೊಸತು ತರುತಿದೆ
ಹೊಂಗೆ ಹೊವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.
ಮತ್ತೊಂದು ಜಿ.ಎಸ್.ಶಿವರುದ್ರಪ್ಪನವರ ಯುಗಾದಿ ಪ್ರಶ್ನೆಗಳು ಕವಿತೆ ಇಲ್ಲಿ ಪ್ರಸ್ತುತವೆನಿಸುತ್ತದೆ.ಯುಗಾದಿ ಮರಳಿ ಬರುತಿದೆ
ಹೊಸವರುಷಕೆ ಹೊಸ ಹರುಷವ
ಹೊಸತು,ಹೊಸತು ತರುತಿದೆ
ಹೊಂಗೆ ಹೊವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.
ಆರವತ್ತು ಸಂವತ್ಸರದ ಈ ಚಕ್ರ
ತಿರುಗುತ್ತಲೇ ಇರುವಾಗ
ಇದರಲ್ಲಿ ಯಾವುದು ಮೊದಲು
ಯಾವುದು ತುದಿ? ಹೆಸರಿಗೆ ಮಾತ್ರ
ಯುಗಾದಿ ಯುಗಾದಿ ಅನ್ನುತ್ತೀವೆಲ್ಲ
ಇವತ್ತು ಯಾವ ಯುಗದ ಆದಿ
ಅಥವಾ ಯಾವ ಯುಗದ ಅಂತ್ಯ?
ತಿರುಗುತ್ತಲೇ ಇರುವಾಗ
ಇದರಲ್ಲಿ ಯಾವುದು ಮೊದಲು
ಯಾವುದು ತುದಿ? ಹೆಸರಿಗೆ ಮಾತ್ರ
ಯುಗಾದಿ ಯುಗಾದಿ ಅನ್ನುತ್ತೀವೆಲ್ಲ
ಇವತ್ತು ಯಾವ ಯುಗದ ಆದಿ
ಅಥವಾ ಯಾವ ಯುಗದ ಅಂತ್ಯ?
ಬೇವು,ಬೆಲ್ಲ ತಿಂದು ಮನುಜನ ಜೀವನದಲ್ಲಿ ಕಷ್ಟ-ಸುಖಗಳು ಸಮನಾಗಿರಲಿ ಎಂದು ಹಾರೈಸುತ್ತಾ. ಈ ಯುಗಾದಿಯ ಕನ್ನಡನಾಡಿನ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುವ.
Wednesday, March 23, 2011
"ಹಲೋ ಹಲೋ ಚಂದಮಾಮ"
ಮಕ್ಕಳು ನೋಡಿ ಕಲಿಯಬೇಕು, ಹಾಡಿ ಕಲಿಯಬೇಕು, ಆಡಿ ಕಲಿಯಬೇಕು: ನಲಿನಲಿಯುತ್ತ ಓದಬೇಕು. "ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಸಹಜಪ್ರಾಸಾ " ಇಂತಹ ಪದ್ಯ ರಚನೆಗಳಲ್ಲಿ ಮಕ್ಕಳ ಮನಸ್ಸುನ್ನು ಮುಟ್ಟಬಹುದಾದ ಯಾವುದಾದರೂ ಒಂದು ವಿಷಯ ಇರುತ್ತದೆ.ಮಕ್ಕಳ ಕವಿತೆ ಮಕ್ಕಳ ಮನಸ್ಸಿನಲ್ಲಿ ಉಳಿಯಬೇಕಾದರೆ ನಾಲ್ಕು ಅಥವಾ ಐದು ಪಂಕ್ತಿಗಳಲ್ಲಿ ಬಣ್ಣನೆಯಿರಬೇಕು. ಪ್ರತಿ ಪದ್ಯದಂತ್ಯದಲ್ಲಿ ಪ್ರಾಸವಿರಬೇಕು ಅಂತಹ ಕವಿತೆಗಳ ಪದಬಂಧಗಳೂ, ಪ್ರಾಸಾನುಪ್ರಾಸಗಳು ಎಳೆ ಮಕ್ಕಳ ಕಿವಿ ತುಂಬತ್ತವೆ. ಮಕ್ಕಳ ಸಾಹಿತ್ಯದ ಪಿತಾಮಹ ಪಂಜೇ ಮಂಗೇಶರಾಯರು ಹೇಳಿದಂತೆ ಚುಟುಕಗಳ ಪದಗಳೂ ಪ್ರಾಸಗಳೂ ಕಿವಿ ತುಂಬುವುದಷ್ಟೇ ಅಲ್ಲ, ಕಣ್ಣಿಗೂ ಕಟ್ಟುತ್ತದೆ. ಆ ಕಾರಣವಾಗಿ ಅವು ಮಕ್ಕಳಿಗೆ ಪ್ರಿಯವಾಗುತ್ತದೆ, ಅನಾಯಾಸವಾಗಿ ಅವರಿಗೆ ಕಂಠಪಾಠವಾಗುತ್ತವೆ. ಆಗಲೇ ಮಕ್ಕಳ ಮನಸ್ಸಿನಲ್ಲಿ ಯಾವುದೇ ಕಥೆಯಾಗಲಿ, ಕವಿತೆಯಾಗಲಿ ಉಳಿಯುವುದು. ಪಂಜೆಮಂಗೇಶರಾಯರ ನಾಗರಹಾವು ಎಂಬ ಕವಿತೆಯ ಸಾಲು
ನಾಗರ ಹಾವೇ ಹಾವಳು ಹೂವೇ,
ಬಾಗಿಲ ಬಿಲದಲಿ ನಿನ್ನೆಯ ಠಾವೇ
ಇಂತಹ ಪದ್ಯಗಳು ಇವತ್ತು ನಮ್ಮ ಬಾಯಿನಲ್ಲಿ ನಲಿಯುತ್ತದೆ. ಕುವೆಂಪು ರವರ ಬೊಮ್ಮನಹಳ್ಳಿ ಕಿಂದರಜೋಗಿಯ ಬಾಗಿಲ ಬಿಲದಲಿ ನಿನ್ನೆಯ ಠಾವೇ
ತುಂಗಾ ತೀರದ ಬಲಗಡೆಯಲ್ಲಿ
ಹಿಂದಲ್ಲಿದ್ದುದು ಬೊಮ್ಮನಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ
ಅಲ್ಲಿಯ ಜನಗಳಿಗತಿಗೋಳಾಟ
ಇಲಿಗಳು!
ಬಡಿದವು ನಾಯಿಗಳ!
**** ಹಿಂದಲ್ಲಿದ್ದುದು ಬೊಮ್ಮನಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ
ಅಲ್ಲಿಯ ಜನಗಳಿಗತಿಗೋಳಾಟ
ಇಲಿಗಳು!
ಬಡಿದವು ನಾಯಿಗಳ!
ರೊಟ್ಟಿ ಅಂಗಡಿ ಕಿಟ್ಟಪ್ಪ!
ನನಗೊಂದುರೊಟ್ಟಿ ತಟ್ಟಪ್ಪ!
ಪುಟಾಣಿ ರೊಟ್ಟಿ!
ಕೆಂಪಗೆ ಸುಟ್ಟು!
ಒಂಭತ್ತು ಕಾಸಿಗೆ ಕಟ್ಟಪ್ಪ!
ನನಗೊಂದುರೊಟ್ಟಿ ತಟ್ಟಪ್ಪ!
ಪುಟಾಣಿ ರೊಟ್ಟಿ!
ಕೆಂಪಗೆ ಸುಟ್ಟು!
ಒಂಭತ್ತು ಕಾಸಿಗೆ ಕಟ್ಟಪ್ಪ!
*****
ರಾಜರತ್ನಂ ರವರ ಕಸ್ತೂರಿ ಹೀಗೆ ಊದಿದ್ದೇ ತಡ, ,ಮಕ್ಕಳ ಮುಂದೆ ಜೋಗಿಯ ಕಿಂದರಿ ಬಾರಿಸಿದಂತಾಯಿತು. ತುತ್ತೂರಿ ಮತ್ತು ತುತ್ತೂರಿಯಂತಹ ಇತರೆ ಪದ್ಯಗಳು ಮಕ್ಕಳ ಬಾಯಿಯಲ್ಲಿ ದಿನ ಬೆಳಗಾಗುವುದರಲ್ಲಿ ನಾಡಿನ ಉದ್ದಗಲಕ್ಕೂ ಹರಡಿದವು ಮಕ್ಕಳ ಸಾಹಿತ್ಯದಲ್ಲಿ ರಾಜರತ್ನಂ ಶ್ರೇಷ್ಟ ಸಾಹಿತ್ಯಕಾರರಲ್ಲಿ ಒಬ್ಬರೆನಿಸಿದರು. ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಬೆನ್ನಲ್ಲೇ ಬಂತು ಕಡಲೆಪುರ
ಪುರಿ!ಪುರಿ! ಕಡಲೆಪುರಿ
ಗರಂ ಗರಂ ಕಡಲೆಪುರಿ!
ಎಲ್ಲ ಬನ್ನಿ
ತೆಗೆದು ತಿನ್ನಿ
ಗರಂ ಗರಂ ಕಡಲೆಪುರಿ
ಕಾಸಿಗೊಂದು ಸೇರು ಪುರಿ!
ಕಾಸಿಗೆ ಕೊಂಡನು ಕಸ್ತೂರಿ
ಬೆನ್ನಲ್ಲೇ ಬಂತು ಕಡಲೆಪುರ
ಪುರಿ!ಪುರಿ! ಕಡಲೆಪುರಿ
ಗರಂ ಗರಂ ಕಡಲೆಪುರಿ!
ಎಲ್ಲ ಬನ್ನಿ
ತೆಗೆದು ತಿನ್ನಿ
ಗರಂ ಗರಂ ಕಡಲೆಪುರಿ
ಕಾಸಿಗೊಂದು ಸೇರು ಪುರಿ!
ಹೀಗೆ ಹಲವಾರು ಪದ್ಯಗಳ ಮಕ್ಕಳ ಬಾಯಲ್ಲಿ ಇಂದು ಸಹ ಕೇಳಿ ಬರುತ್ತಿವೆ. ಹಾಗಾಗಿ ಇಂತಹ ಪದ್ಯಗಳಾಗಿ ಇವತ್ತಿಗೂ ನನೆಪಿನಲ್ಲಿ ಉಳಿದೆ. ನಂತರದ ದಿನಗಳಲ್ಲಿ ಲಕ್ಷ್ಮೀನಾರಾಯಣಭಟ್ಟರು, ಸಿದ್ದಯ್ಯಪುರಾಣಿಕರು, ಎಚ್.ಎಸ್.ವೆಂಕಟೇಶಮೂರ್ತಿ, ಶ್ರೀನಿವಾಸ ಉಡುಪ. ಕೆ.ವಿ.ತಿರುಮಲೇಶ್ ಇಂಥ ಕೆಲವು ಹಿರಿಯರು ಮಕ್ಕಳ ಕವನ ಬರೆದರು. ಮಕ್ಕಳ ಕವನವನ್ನು ಬರೆದವರು ಹೆಚ್ಚು ಮಂದಿ ಇಲ್ಲ. ಆದರೆ ಪ್ರಸ್ತುತ ರಾಧೇಶ್ ತೋಳ್ಪಾಡಿಯವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಕ್ಕಳ ಕವಿತೆಗಳ ಬಗ್ಗೆ ಆಸಕ್ತಿ ಕೊಟ್ಟು "ಹಲೋ ಹಲೋ ಚಂದಮಾಮ"ಎಂಬ ಮಕ್ಕಳ ಕವನ ಸಂಗ್ರಹಗಳನ್ನು ಛಂಧ ಪುಸ್ತಕ ಪ್ರಕಾಶನ ಪ್ರಕಟಿಸಿದೆ.
ರಾಧೇಶ್ ತೋಳ್ಪಾಡಿಯವರು ಪ್ರಸ್ತುತ ಬಂಟ್ವಾಳ ತಾಲ್ಲೂಕಿನ ಮಣಿನಾಲ್ಕೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರು ಬರೆದ "ಬಿಸಿಲಿನ ದೊರೆಗೆ ನೆರಳಿನ ಮನೆ" ಇವರು ಬರೆದ ಪ್ರಥಮ ಮಕ್ಕಳ ಕವನ ಸಂಗ್ರಹ. ಪ್ರಜಾವಾಣಿಯ ದೀಪಾವಳಿ ವಿಶೇಷಾಂಕದ ಶಿಶುಕಾವ್ಯ ಸ್ಪರ್ಧೆಯಲ್ಲಿ ಇವರ "ರಂಗತಿಟ್ಟಿನ ಗುಬ್ಬಿ ಮತ್ತು ಆರ್ಕಟಿಕ್ ಟರ್ನ" (ಪ್ರಥಮ) ಮತ್ತು " ಶಾಲೆಯ ಹುಡುಗರ ಶತಾವತಾರ ಮೇಳ" (ತೃತ್ತೀಯ) ಕವಿತೆಗಳ ಬಹುಮಾನ ಪಡೆದಿದೆ.
ಇವರ ಕವನ ಸಂಕಲನ "ಹಲೋ ಹಲೋ ಚಂದಮಾಮ" ದಲ್ಲಿ ೨೫ ಕವನಗಳಿವೆ ಕೆಲವು ಚುಟುಕ ಶಿಶುಗೀತೆಗಳೂ ಇವೆ. ಕವನಗಳಲ್ಲಿ ತಾಳ, ಲಯ, ಪ್ರಾಸಬದ್ದವಾಗಿದೆ ಬಳಸಿದ ಭಾಷೆಯು ಸರಳವಾಗಿದ್ದು ಮತ್ತೊಮ್ಮೇ ರಾಜರತ್ನಂನ ಕೆಲವು ಕವಿತೆಗಳನ್ನು ನೆನಪಿಸುತ್ತವೆ. ಇವರ ಕವನಗಳಲ್ಲಿ ನಾವು ನೋಡುವ ಕಾಗೆ, ಕೋಳಿ, ಪುಟಾಣಿ ಪಾಪೂ, ಮಳೆ, ಬಾನೂ ಬೆಟ್ಟಗಳ ಕವನಗಳ ವಸ್ತುಗಳಾಗಿ ಬಂದಿರುವುದರಿಂದ ಮಕ್ಕಳ ಮನಸ್ಸುನ್ನು ಗೆಲ್ಲುವಲ್ಲಿ ಯಶಸ್ಸಿಯಾಗಿದೆಯೆಂದು ಹೇಳಬೇಕು ಅವರ ಮಿಂಚಿನ ಹುಳವೇ, ಬಾ!
ಬಾ ಬಾ ಬಾ ಬಾ ಮಿಂಚಿ ಮಿಂಚಿ ಬಾ
ಬಾ ಬಾ ಬಾ ಬಾ ಬೆಳಕೆ ಹಂಚಿ ಬಾ
ಇಣುಕಿ ಹಣಕಿ ಬಾ
ಇರುಳ ಕೆಣಕಿ ಬಾ
ಬೆಂಕಿ ಕಿಡಿಯೇ ರೆಕ್ಕೆ ಪಡೆದು ಬಂದ ಹಾಗೆ ಬಾ
ಮಿಣುಕ ಮಾತೇ, ಬಾ!
ಈ ಕವನವನ್ನು ಓದಿದಾಗ ಎಂತಹ ಬಾಲ್ಯದ ದಿನಗಳ ಮಧುರ ನೆನಪುಗಳ ಕಟ್ಟಿಕೊಡುತ್ತವೆ. ಹಾಗೇಯೇ "ಕೋಳಿ ಕುಮಾರಿಯ ಫ್ಯಾಷನ್ ಶೋ" ಬಾ ಬಾ ಬಾ ಬಾ ಮಿಂಚಿ ಮಿಂಚಿ ಬಾ
ಬಾ ಬಾ ಬಾ ಬಾ ಬೆಳಕೆ ಹಂಚಿ ಬಾ
ಇಣುಕಿ ಹಣಕಿ ಬಾ
ಇರುಳ ಕೆಣಕಿ ಬಾ
ಬೆಂಕಿ ಕಿಡಿಯೇ ರೆಕ್ಕೆ ಪಡೆದು ಬಂದ ಹಾಗೆ ಬಾ
ಮಿಣುಕ ಮಾತೇ, ಬಾ!
ಕೊಕ್ಕಿಗೆ ಕೆಂಪನೆ ಲಿಪ್ ಸ್ಟಿಕ್ ಹಚ್ಚಿ
ರೆಕ್ಕೆಗೆ ಬಣ್ಣದ ಗರಿಗಳ ಚುಚ್ಚಿ
ಲಗುಬಗೆಯಿಂದ ಪುಟು ಪುಟು ಓಡಿ
ಕನ್ನಡಿ ನೀರಲಿ ತನ್ನನೇ ನೋಡಿ
ಪುರ್ರನೆ ಕುಮಾರಿ ಕೊ ಕ್ಕೊ ಕ್ಕೋ
ಮರವನ್ನೇರಿದಳ್ಯಾತಕ್ಕೋ!
ರೆಕ್ಕೆಗೆ ಬಣ್ಣದ ಗರಿಗಳ ಚುಚ್ಚಿ
ಲಗುಬಗೆಯಿಂದ ಪುಟು ಪುಟು ಓಡಿ
ಕನ್ನಡಿ ನೀರಲಿ ತನ್ನನೇ ನೋಡಿ
ಪುರ್ರನೆ ಕುಮಾರಿ ಕೊ ಕ್ಕೊ ಕ್ಕೋ
ಮರವನ್ನೇರಿದಳ್ಯಾತಕ್ಕೋ!
ಇಂದಿನ ದಿನಗಳಲ್ಲಿ ಟಿ.ವಿ.ಗಳಲ್ಲಿ ಕ್ಯಾಟ್ ವಾಕ್ ಅನ್ನು ನಮ್ಮ ಮಕ್ಕಳ ನೋಡಿ ಬೆಳೆಯುತ್ತಿರುವ ಮಕ್ಕಳಿಗೆ ಇಂತಹ ಕವನಗಳು ವಿನೋದ ಸನ್ನಿವೇಶಗಳು ಮಕ್ಕಳ ಕಲ್ಪನೆಯನ್ನು ಗರಿಗೆದರಿಸುತ್ತವೆ. ಇವರ ಕವನಗಳಲ್ಲಿ ನವೀನ ಪ್ರಾಸ ಸಂಯೋಜನೆ, ಸಹಜತೆ, ಸರಳತೆ ಪ್ರಯೋಗಗಳಿಂದ ಮಕ್ಕಳ ಮನಸ್ಸಿಗೆ ತುಂಬಾ ಹತ್ತಿರವಾಗುತ್ತದೆ.ಝೆಡ್ ನ ಗೋಳು ಎನ್ನುವ ಕವನದಲ್ಲಿ ಇಂಗ್ಲೀಷ್ ಕೊನೆಯ ಅಕ್ಷರದ ಗೋಳನ್ನು ನವೀನ ರೀತಿಯಲ್ಲಿ ವರ್ಣಿಸಿದ್ದಾರೆ. ವಿಭಕ್ತಿ ಪದ್ಯಗಳಲ್ಲಿ "ಉಸ್ಸಪ್ಪಾಂತ ಹೇಳ್ತೀವಿ" "ಇರಲಿ" "ಹಲೋ ಹಲೋ" ಈ ಪದ್ಯಗಳನ್ನು ಓದುತ್ತಿದ್ದಾರೆ ಮಕ್ಕಳ ಭಾವಭಿನಯನ್ನು ನೋಡಿ ನಲಿಯುವುದಕ್ಕೆ ಅದ್ಭುತ ಕವನಗಳಾಗಿವೆ.
ಒಟ್ಟಾರೆ "ಹಲೋ ಹಲೋ ಚಂದಮಾಮ" ಇಂದಿನ ಪೀಳಿಗೆ ಒಂದು ಉತ್ತಮ ಮಕ್ಕಳ ಕವನ ಸಂಕಲನವಾಗಿ ಮೂಡಿಬಂದಿದೆ. ಈ ಕವನ ಸಂಕಲನ ಬರೆದಿರುವ ರಾಧೇಶ್ ತೋಳ್ಪಾಡಿಯವರು ಸಹ ಮಕ್ಕಳು ಹಾಡಿ ಕುಣಿಯಬಹುದಾದ ಕೆಲ ಸಾಲುಗಳನ್ನು ಸೃಷ್ಟಿಸಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿ ಕೊಂಡಂತಿದೆ ಹಾಗೂ ಅವರ ಬಾಲ್ಯದ ದಿನಗಳಿಗೆ ಸಲ್ಲಿಸುವ ಕಾಣಿಕೆಯೂ ಸಹ ಇದಾಗಿದೆ. ಮುಂದೆ ಮಕ್ಕಳಿಗಾಗಿ ಕತೆ, ಕಾದಂಬರಿ, ನಾಟಕ, ಮುಂತಾದ ಹೊಸ ಕೃತಿಗಳನ್ನು ಬರೆಯುವರು ಎಂಬ ಆಶಯದಲ್ಲಿರುತ್ತವೆ. ಈ ಕವನ ಸಂಕಲನವನ್ನು ಈ ಕೆಳಕಂಡ ಪ್ರಕಾಶನದಲ್ಲಿ ದೊರೆಯುತ್ತದೆ ಸಂಪರ್ಕಿಸಿ.
ಛಂದ ಪುಸ್ತಕ ಪ್ರಕಾಶನ
ಐ-004, ಮಂತ್ರಿ ಪ್ಯಾರಡೈಸ್,
ಬನ್ನೇರುಘಟ್ಟ ರಸ್ತೆ,
ಬೆಂಗಳೂರು-76
ದೂರವಾಣಿ ಸಂಖ್ಯೆ:98444 22782
ಇ-ಮೇಲ್ :vas123u@rocketmail.com
Tuesday, March 15, 2011
ಪುರ್ನಮಿಲನ
ಪುರ್ನಮಿಲನ
ನಮ್ಮ ಮನೆಯ ಪಕ್ಕದಲ್ಲಿರುವ ಬೇಲಿಯಲ್ಲಿ ಸಣ್ಣ ಸಣ್ಣ ಗುಬ್ಬಚ್ಚಿಗಳು ಗೂಡು ಕಟ್ಟಿಕೊಂಡು ಸಂತಾನ ನಡೆಸುತ್ತಾ ಆಟವಾಡಿಕೊಂಡು ಇರುತ್ತವೆ. ನನ್ನ ಮನೆಯಿರುವುದು ಹಳ್ಳಿಯಲ್ಲಿ ಆದ್ದರಿಂದ ನನ್ನ ಪಕ್ಕದ ಹೊಲದಲ್ಲಿ ಕಬ್ಬು ಮತ್ತು ತರಕಾರಿಗಳು ವ್ಯವಸಾಯ ಮಾಡುತ್ತಾರೆ. ಆದ್ದರಿಂದ ಈ ಪರಿಸರದಲ್ಲಿ ಇರುವ ಹುಳ, ಹಪ್ಪಟೆಗಳನ್ನು ತಿಂದು ಬದುಕುತ್ತವೆ ಈ ಗುಬ್ಬಚ್ಚಿಗಳ . ಈ ಗುಬ್ಬಚ್ಚಿಗಳು ಬೆಳಗಿನ ಸಮಯದಲ್ಲಿನ ಅವುಗಳ ಚಿಲಿಪಿಲಿ ಕಲರವದಿಂದ ಮನಸ್ಸು ಸಂತೋಷವಾಗುತ್ತದೆ. ಇದರಿಂದ ಅವುಗಳ ಮತ್ತು ನಮ್ಮ ನಡುವೆ ಒಂದು ಆತ್ಮೀಯತೆ ಬೆಳೆದು ಬಂದಿದೆ. ನಮ್ಮ ಮನೆಯ ಮುಂದಿನ ಕಿಟಕಿ ಎತ್ತರವಾಗಿದ್ದು ಈ ಕಿಟಕಿಯ ಮುಂದೆ ಬಟ್ಟೆ ಹರವಲು ಒಂದು ಹಗ್ಗವನ್ನು ಕಟ್ಟಿದ್ದು ಈ ಹಗ್ಗದ ಮೇಲೆ ಗುಬ್ಬಚ್ಚಿಗಳು ತಮ್ಮ ಜೋಕಾಲಿಯನ್ನು ಜೀಕುತ್ತಾ ಆಟವಾಡುತ್ತಾ ಎದರುಗಡೆ ಇರುವ ಕಿಟಕಿಯ ಗ್ಲಾಸಿನ ಹತ್ತಿರ ಹಾರಿ ಕೊಕ್ಕಿನಿಂದ ಗ್ಲಾಸನ್ನು ಕುಕ್ಕಿ ತಮ್ಮ ಸೌಂದರ್ಯವನ್ನು ಕೊಕ್ಕಿನಲ್ಲಿ ಕೊಂಕಿಸಿ ನೋಡಿಕೊಂಡು ತಮ್ಮನ್ನು ತಾವೇ ಎಷ್ಟು ತೆಳ್ಳಗೆ, ಬೆಳ್ಳಗೆ ಇದ್ದೇವೆ ಎಂದು ಕೊಳ್ಳುತ್ತಾ ನಮ್ಮನ್ನು ಅಣಕಿಸಿದಂತೆ ತೋರುತ್ತವೆ. ಇವುಗಳ ಆಟವನ್ನು ದಿನವು ಸವಿಯುವ ನನ್ನ ಮಗಳು ಬೆಳಿಗ್ಗೆ ಎದ್ದು ಹಾಲುನ್ನು ಕುಡಿಯಬೇಕಾದರೆ ನಮ್ಮ ಮನೆಯ ಹಾಲಿನಲ್ಲಿರುವ ಕಿಟಕಿಯಲ್ಲಿ ನಿಂತು ಆ ಗುಬ್ಬಚ್ಚಿಗಳನ್ನು ನೋಡುತ್ತಾ ಹಾಲನ್ನು ಕುಡಿಯುವುದು ಅವಳ ಅಭ್ಯಾಸ. ಅವಳು ಹಾಲು ಕುಡಿಯುವಾಗ ಅವಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವುದೆ ಒಂದು ಸಮಸ್ಯೆಯಾಗಿದೆ. ಆ ಗುಬ್ಬಚ್ಚಿಗಳು ಎಲ್ಲಿಂದ ಬಂದವು?, ಅದರ ಅಮ್ಮ ಎಲ್ಲಿ?, ಅವುಗಳ ಮನೆಯಲ್ಲಿ?, ಆ ಗುಬ್ಬಚ್ಚಿಗಳು ಹಾಲು ಕುಡಿಯತಪ್ಪಾ? ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡುವುದೆ ಒಂದು ಆನಂದದ ಅನುಭವ ನೀಡುತ್ತದೆ.
ಮೊನ್ನೆ ಸಂಜೆ ಸೂರ್ಯ ಪಶ್ಚಿಮದಲ್ಲಿ ವಿರಮಿಸಿ ಆಗಿತ್ತು ಏಳು ಗಂಟೆಯ ಹೊತ್ತಿನಲ್ಲಿ ನಾನು ಮನೆಯ ಬಾಗಿಲನ್ನು ತೆರೆದಾಗ ಅಲ್ಲೇ ಬಾಗಿಲ ಮುಂದೆ ಹಾರಾಡುತ್ತಾ ಇದ್ದ ಆ ಗುಬ್ಬಚ್ಚಿಗಳು ಭಯಗೊಂಡು ನಮ್ಮ ಮನೆಯನ್ನು ಪ್ರವೇಶಿಸಿದವು. ಅನೀರಿಕ್ಷಿತವಾಗಿ ಮನೆಯೊಳಕ್ಕೆ ಪ್ರವೇಶಿಸಿದ್ದ ಗುಬ್ಬಚ್ಚಿಗಳು ಆತಂಕಗೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರಾಡಲು ಪ್ರಾರಂಭಿಸಿದವು ಇದನ್ನು ನೋಡಿದ ನನ್ನ ಮಗಳು ಅಪ್ಪ ಅವು ಯಾಕೆ ನಮ್ಮ ಮನೆಗೆ ಬಂದಿವೆ. ಅವುಗಳ ಮನೆಗೆ ಯಾಕೆ ಹೋಗಿಲ್ಲ ಎಂದು ಕೇಳಿದಳು. ಅವು ತಪ್ಪಿಸಿಕೊಂಡು ಬಂದಿವೆ ಎಂದೆ. ಆ ಗುಬ್ಬಚ್ಚಿಗಳನ್ನು ಹೇಗಾದರೂ ಹೊರಗೆ ಕಳುಹಿಸುವ ಪ್ರಯತ್ನಕ್ಕೆ ಕೈಹಾಕಿ ಮನೆಯಲ್ಲಿ ಇರುವ ಕಿಟಕಿ ಬಾಗಿಲುಗಳನ್ನು ತೆರೆದೆ ಆದರೆ ಆ ಗುಬ್ಬಚ್ಚಿಗಳು ಅಲ್ಲಿಂದ ಇಲ್ಲಿಗೆ ಹಾರಾಡಿ ಸುಮ್ಮನಾದವೆ ಹೊರತು ಹೊರಗಡೆ ಹೋಗಲಿಲ್ಲ. ಆಗ ನನ್ನ ಮಗಳು ಆ ಗುಬ್ಬಚ್ಚಿಗಳು ನಮ್ಮ ಹಾಗೆ ಅಲ್ಲವಪ್ಪ ಅದಕ್ಕೂ ರಾತ್ರಿ ಹೆದರಿಕೆಯಾಗುತ್ತೆ ಆದ್ದರಿಂದ ಅವುಗಳು ಇಲ್ಲೇ ಇರಲಿ ಎಂದಾಗ.ನಮ್ಮ ಮನೆಯ ಪಕ್ಕದಲ್ಲಿ ಇದ್ದ ಬೇಲಿಯಲ್ಲಿ ಆ ಗುಬ್ಬಚ್ಚಿಗಳ ಪುಟ್ಟ ಕಂದಮ್ಮಗಳ ತಮ್ಮ ಅಮ್ಮನ ಬರುವಿಕೆಗೆ ಕಾಯುತ್ತಾ ಚಿರಾಟದ ಆಕ್ರಂದನವನ್ನು ಕೇಳಿ ನನ್ನ ಮನಸ್ಸು ಆತಂಕಗೊಂಡಿತ್ತು. ಹಾಗೆಯೇ ಕೆಲವು ಕ್ಷಣ ಸುಮ್ಮನಿದ್ದು ಗುಬ್ಬಚ್ಚಿಗಳು ನನ್ನ ರೂಮಿ ಒಂದು ಡಬ್ಬದ ಮೇಲೆ ಕುಳಿತುಕೊಂಡಾಗ ಇವುಗಳ ಬೀಡು ಇಂದು ಈ ಕಾಂಕ್ರೀಟ್ ನ ನಾಲ್ಕು ಗೊಡೆಗಳ ಮಧ್ಯೆ ಎಂದು ಅವುಗಳು ನಿರ್ಧರಿಸಿ ಆಗಿದೆ ಆದ್ದರಿಂದ ಈ ಗುಬ್ಬಚ್ಚಿಗಳ ವಾಸ್ತವ್ಯ ಇವತ್ತು ಇಲ್ಲೆ ಎಂದು ತೀರ್ಮಾನಿಸಿದೆ. ಬೆಳಿಗ್ಗೆ ಬೆಳಕು ಹರಿಯುತ್ತಿದ್ದಂತೆ ಆ ಗುಬ್ಬಚ್ಚಿಗಳು ಚಿವ್ ಚಿವ್ ಎಂದು ಕೂಗುವುದಕ್ಕೆ ಶುರುಮಾಡಿದ್ದವು ಅವುಗಳ ಕೂಗನ್ನು ಕೇಳಿದ ತಕ್ಷಣ ಎದ್ದ ನನ್ನ ಮಗಳು ಅಪ್ಪ ಇವತ್ತು ನಮ್ಮ ಜೊತೆಯಲ್ಲಿ ಇರುತ್ತಾ ಎಂದು ಕೇಳಿದಳು ಇಲ್ಲ ಮಗಳೆ ಅದಕ್ಕೆ ಪುಟಾಣಿ ಮರಿಗಳು ಇದೆ ಅವು ನಿನ್ನೆಯಿಂದ ಕಾಯುತ್ತಾ ಇರುತ್ತವೆ ಆ ಮರಿಗಳಿಗೆ ಊಟ ಮಾಡಿಸಬೇಕು ಅದಕ್ಕೆ ಅವುಗಳನ್ನು ಮನೆಯಿಂದ ಹೊರಗಡೆ ಕಳುಹಿಸೋಣ ಎಂದು ಕಿಟಕಿಗಳನ್ನು ತೆರೆದೆ ಕಿಟಕಿಯಿಂದ ಬೆಳಕಿನ ಪ್ರಕಾಶ ಬರುತ್ತಿದ್ದಂತೆ ಹೊರಗಡೆ ಪ್ರಪಂಚಕ್ಕೆ ತನ್ನ ತೆರೆದ ರೆಕ್ಕಗಳಿಂದ ಹಾರುತ್ತಾ ಈ ಬಂಧನದಿಂದ ಮುಕ್ತವಾಗಿ ತಮ್ಮ ಪುಟ್ಟ ಮರಿಗಳೊಂದಿಗೆ ಪುರ್ನಮಿಲನಗೊಂಡಿದ್ದನ್ನು ನೋಡಿ ಆ ಕಂದಮ್ಮಗಳು ಚಿವ್ ಚಿವ್ ಎಂದು ತಮ್ಮ ಸಂತೋಷದಿಂದ ಚೀರುತ್ತಿದ್ದವು.
Wednesday, February 9, 2011
ಜಾಗತೀಕರಣದ ಜಗತ್ತಿನ ಒಳನೋಟಗಳನ್ನು ಬಿಚ್ಚಿಡುವ ಕಾದಂಬರಿ "ದ್ವೀಪವ ಬಯಸಿ"
ಜಾಗತೀಕರಣದ ಜಗತ್ತಿನ ಒಳನೋಟಗಳನ್ನು ಬಿಚ್ಚಿಡುವ ಕಾದಂಬರಿ "ದ್ವೀಪವ ಬಯಸಿ"
ಈ ಕಾದಂಬರಿಯಲ್ಲಿ ಲೇಖಕರು ಬೇರೆ ದೇಶದಿಂದ ಕೆಲಸಕ್ಕೆ ಬಂದಂತಹ ಜನರನ್ನು ಆ ದೇಶದ ಜನ ಹೇಗೆ ನೋಡುತ್ತಾರೆ ಎಂಬುದಕ್ಕೆ " ಸ್ವಂತ ಸುಖಕ್ಕಾಗಿ ತನ್ನೂರಿನಿಂದ ಓಡಿ ಬಂದು ಜೀತದ ಕೆಲಸ ಮಾಡುವ ಒಬ್ಬ ಇಮಿಗ್ರೇಷನ್ ಲಾಯರ‍್ ನಿಂದ ನಾನು ಲೈಫ್ ನ ಇಂಟಿಗ್ರಿಟಿಯ ಬಗ್ಗೆ ಪಾಠವನ್ನು ಕೇಳಬೇಕಾಗಿಲ್ಲ"ಎಂದು ಹೇಳುವ ವಾಸ್ತವಿಕ ದರ್ಶನವನ್ನು ಲೇಖಕರು ಮಾಡಿಸುತ್ತಾರೆ.
ಎಂ.ಆರ‍್.ದತ್ತಾತ್ರಿಯವರ "ದ್ವೀಪವ ಬಯಸಿ" ಕಾದಂಬರಿ ಅವರ ಮೊದಲನೇ ಕಾದಂಬರಿ ಈ ಕಾದಂಬರಿಯಲ್ಲಿ ಲೇಖಕರು ಕಷ್ಟಕರವಾದ ವಸ್ತು ವಿಷಯಗಳನ್ನು ಹೇಳ ಹೊರಟಿರುವುದು. ಜಾಗತೀಕರಣದ ಎಲ್ಲಾ ಬಗೆಯ ತಲ್ಲಣಗಳನ್ನು ಹೇಳುವುದು ಅತ್ಯಂತ ಸವಾಲದ ಕೆಲಸ ಆದರೆ ಕನ್ನಡ ಕಾದಂಬರಿ ಲೋಕಕ್ಕೆ ಒಂದು ಹೊಸ ವಸ್ತು ವಿಷಯವನ್ನು ಕೊಟ್ಟಿರುವುದು ಈ ಕಾದಂಬರಿಯ ವಿಶೇಷ. ಈಗಾಗಲೇ ಜಾಗತೀಕರಣದಿಂದ ಅಧುನಿಕ ಸಮಾಜದಲ್ಲಿ ಆಗುವ ತಲ್ಲಣಗಳ ಬಗ್ಗೆ ಸಣ್ಣ ಕಥೆಗಳನ್ನು ವಿವೇಕ ಶಾನಭಾಗ ಮತ್ತು ವಸುಧೇಂದ್ರರವರ ಕತೆಗಳಲ್ಲಿ ನಾವು ಕಾಣಬಹುದಾಗಿದೆ. ಆದರೆ ಈ ಕಾದಂಬರಿಯಲ್ಲಿ ಬರುವ ವಸ್ತು ವಿಷಯ ಬಂಡವಾಳಶಾಯಿ ಜಗತ್ತಿನ ಇಂದಿನ ದಿನಗಳಲ್ಲಿ ಮನುಷ್ಯ ಮತ್ತು ಮನುಷ್ಯ ನಡುವಿನ ಸಂಬಂಧವನ್ನು ಸಹ ವ್ಯಾಪಾರದ ದೃಷ್ಟಿಯಿಂದ ನೋಡುತ್ತಿರುವುದು. ಈ ವ್ಯವಸ್ದೆಯ ವಿರುದ್ದ ಹೋರಾಟ ಮಾಡುವ ಮಾನವೀಯ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ತಾತ್ವಿಕವಾಗಿ ಯೋಚನೆ ಮಾಡಬೇಕಾದ ಸ್ಧಿತಿ. ಇವೆಲ್ಲದರಿಂದ ಹೊರಬಂದು ಬದುಕುವುದು ಅಸಾಧ್ಯವಾಗಿದೆ. ಜಾಗತೀಕರಣದ ಸಮಸ್ಯೆ ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಗ್ರಹಣ ಹಿಡಿದಿಲ್ಲ ಈ ಗ್ರಹಣ ಎಲ್ಲಾ ಕಡೆಯು ಗೋಚರಿಸಿ ಸರಿಪಡಿಸಲು ಸಾಧ್ಯವಿಲ್ಲದಂತಾಗಿದೆ.
ಈ ಕಾದಂಬರಿಯಲ್ಲಿ ಜಾಗತೀಕರಣ, ಅಧುನೀಕರಣ ಮತ್ತು ಹೊಸ ಶಿಕ್ಷಣ ನೀತಿಯಿಂದ ಉದ್ಯೋಗವಕಾಶಗಳನ್ನು ಹುಡುಕಿಕೊಂಡು ಅಥವಾ ಬಂದಂತಹ ಅವಕಾಶಗಳನ್ನು ಉಪಯೋಗಿಸಿ ವಿದೇಶಕ್ಕೆ ಕೆಲಸಕ್ಕೆ ಹೋಗುವ ಆಕರ್ಷಿಕ ಯುವ ಜನಾಂಗದ ಶ್ರೀಕಾಂತ್ ಮತ್ತು ವಾಣಿಯವರ ಜೀವನದಲ್ಲಿ ನಡೆಯುವ ಅಧುನಿಕ ಸಮಾಜದ ಪಲ್ಲಟಗಳು, ಜಾಗತೀಕರಣ ಅರ್ಥವ್ಯವಸ್ಧೆ ಮತ್ತು ಸಮಕಾಲೀನ ಸಮಸ್ಯೆಗಳನ್ನು ಶ್ರೀಕಾಂತನ ಪಾತ್ರದಲ್ಲಿ ಲೇಖಕರು ಹೊರಚೆಲ್ಲಿದ್ದಾರೆ.
ಈ ಕಾದಂಬರಿಯಲ್ಲಿ ಶ್ರೀಕಾಂತ್ ಸಾಮಾನ್ಯ ಹಳ್ಳಿಯಿಂದ ಬಂದಂತಹ ಯುವಕ ತನ್ನ ಮನೆ ಯಗಚಿ ನದಿಗೆ ಅಣೆಕಟ್ಟು ಕಟ್ಟಲು ತನ್ನ ಊರು ಮುಳುಗಿ ಹೋಗುವ ಸಂದರ್ಭದಲ್ಲಿ ಇಡೀ ಊರಿಗೆ ಊರೇ ಪರಿಹಾರದ ಹಣವನ್ನು ಪಡೆದು ಊರನ್ನು ಖಾಲಿ ಮಾಡಿರುತ್ತಾರೆ. ಆದರೆ ತನ್ನ ತಂದೆ ಅದೇ ಊರಿನಲ್ಲಿ ವೀರಭದ್ರ ಸ್ವಾಮಿ ದೇವಸ್ಧಾನದ ಪೂಜೆ ಮಾಡಿಕೊಂಡು ಅಲ್ಲೆ ಇರುತ್ತಾರೆ. ಶ್ರೀಕಾಂತನು ಬೆಂಗಳೂರಿನಿಂದ ಊರಿಗೆ ಬಂದಾಗ ತಮ್ಮ ಕೃಷ್ಣನು ಶ್ರೀಕಾಂತನಿಗೆ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗು ಓದಿನಲ್ಲಿ ಸ್ಪಲ್ಪ ಹಿಂದುಳಿದ್ದೇನೆ ಈ ಊರಿನಲ್ಲಿ ನನ್ನ ಸ್ನೇಹಿತರು ಯಾರು ಇಲ್ಲ ನನಗೆ ತುಂಬಾ ಬೇಜಾರಾಗುತ್ತದೆ ಎಂದು ನಿರ್ಭಾವುಕತೆಯಿಂದ ನರಳುವ ತಮ್ಮ ಇದ್ದಕ್ಕಿದ್ದಂತೆ ಯಾರಿಗೂ ಹೇಳದೆ ಮನೆ ಬಿಟ್ಟು ಹೋದಾಗ ಶ್ರೀಕಾಂತನಿಗೆ ಕಾಡುವ ವಿಹಲ್ವತೆ . ನಿರಂತರವಾಗಿ ತಮ್ಮನನ್ನು ಹುಡುಕುತ್ತಿದ್ದ ಶ್ರೀಕಾಂತ ತನ್ನ ಲಾಸ್ ಏಂಜಲೀಸ್ ಕಂಪನಿಯ ತನ್ನ ಮುಖ್ಯಸ್ಧ ಫ್ರಾಂಕೋನ ಕಣ್ಣಲ್ಲಿ ತನ್ನ ತಮ್ಮ ಕೃಷ್ಣನನ್ನು ಕಂಡಾಗ ಉಂಟಾಗುವ ಭಾವೋತ್ಕರ್ಷ ಎಲ್ಲಾ ಸಮಸ್ಯೆಗಳಿಗಿಂತಳು ಪರಸ್ವರ ಸಂಬಂಧಗಳ ಸೂಕ್ಷತೆಗಳನ್ನು ಲೇಖಕರು ತಿಳಿಸಿರುತ್ತಾರೆ.
ಈ ಕಾದಂಬರಿಯಲ್ಲಿ ಲೇಖಕರು ಬೇರೆ ದೇಶದಿಂದ ಕೆಲಸಕ್ಕೆ ಬಂದಂತಹ ಜನರನ್ನು ಆ ದೇಶದ ಜನ ಹೇಗೆ ನೋಡುತ್ತಾರೆ ಎಂಬುದಕ್ಕೆ " ಸ್ವಂತ ಸುಖಕ್ಕಾಗಿ ತನ್ನೂರಿನಿಂದ ಓಡಿ ಬಂದು ಜೀತದ ಕೆಲಸ ಮಾಡುವ ಒಬ್ಬ ಇಮಿಗ್ರೇಷನ್ ಲಾಯರ‍್ ನಿಂದ ನಾನು ಲೈಫ್ ನ ಇಂಟಿಗ್ರಿಟಿಯ ಬಗ್ಗೆ ಪಾಠವನ್ನು ಕೇಳಬೇಕಾಗಿಲ್ಲ"ಎಂದು ಹೇಳುವ ವಾಸ್ತವಿಕ ದರ್ಶನವನ್ನು ಲೇಖಕರು ಮಾಡಿಸುತ್ತಾರೆ.
ಎಷ್ಟೋ ವರ್ಷಗಳ ಹಿಂದೆ ಊರು ಬಿಟ್ಟು ಹೋದ ತಾನೇ ನೋಡಿರದ ಚಿಕ್ಕಪ್ಪನನ್ನು ಭೂಷಣ್ ರಾವ್ ನಲ್ಲಿ ಕಾಣುವುದು ಈ ಭೂಷಣ್ ರಾವ್ ನನ್ನ ನಾಗಣ್ಣ ಚಿಕ್ಕಪ್ಪನೆಂದು ಸಂಬಂಧಗಳನ್ನು ಕಲ್ಪಿಸಿಕೊಂಡಾಗ ಮನಸ್ಸಿಗೆ ಆಗುವ ದುಗಡಗಳು. ಮಹಿಂದಾ ಮತ್ತು ಶ್ರೀಕಾಂತ ನಡುವೆ ನಡೆಯುವ ಮಾತುಕತೆಯಲ್ಲಿ ಲೇಖಕರು ಸಂವೇದನಶೀಲರಾಗಿ ಭಾವನೆಗಳನ್ನು ಸೂಕ್ಷ್ಮವಾಗಿ ತೆರೆದಿಡುತ್ತಾರೆ.
ಜೆನ್ ಸನ್ ಎನರ್ಜಿ ಲೇ ಆಫ್ (ಮುಚ್ಚುವ) ಸಂದರ್ಭದಲ್ಲಿ ಆ ಕಂಪನಿಯ ಕೆಲಸಗಾರರ ಮನಸ್ಸಿನ ಸ್ಥಿತ್ಯಂತರವನ್ನು ಎಳೆ ಎಳೆಯಾಗಿ ಬಿಚ್ಚಿಡುವ ಸುಖವನ್ನಷ್ಟೇ ಅನುಭವಿಸಿ ಅಭ್ಯಾಸವಿರುವ ಅಮೇರಿಕಾದವರು ದು:ಖಗಳನ್ನು ಎದುರಿಸುವಾಗಲಿನ ಮನಸ್ಧಿತಿ ಅವರಗಿಲ್ಲದಿರುವ ಬಗ್ಗೆ . ಈ ಸನ್ನಿವೇಶಗಳಿಂದ ಶ್ರೀಕಾಂತ್ ಮತ್ತು ಮಿಲಿಂದ ಹೊರಬರುವ ಪ್ರಯತ್ನದಲ್ಲಿ ತೋರುವ ಆತ್ಮಸ್ಧೈರ್ಯ, ಜೀವನಾಸಕ್ತಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವ ಮಾರ್ಗ. ಫ್ರಾಂಕೋನನ್ನು ಕೆಲಸದಿಂದ ತೆಗೆದುಹಾಕಿದಾಗ ತನ್ನ ತಮ್ಮ ಕೃಷ್ಣನನ್ನು ಕಳೆದುಕೊಂಡ ಅಸಹಾಯಕತೆ. ಯೊಸೆಮಿಟಿಯಲ್ಲಿ ಕಾಲ ಕಳೆಯುವಾಗ ವಾಣಿ ಹೇಳುವ "ಲೈಫ್ ಆಫ್ ಪೈ" ಕಥೆ ಕಥೆಯಾಗದೆ ಮನಸ್ಸಿನಲ್ಲಿ ಉಳಿಯುತ್ತದೆ.
ಪೆಟ್ರೋಲ್ ದರ ಜಾಗತಿಕ ಮಟ್ಟದಲ್ಲಿ ಏರಿಕೆ ಇಳಿಕೆ ಹಿಂದೆ ಇರುವ ಮುಂದುವರೆದ ರಾಷ್ಟ್ರಗಳ ಹಿಡಿತದ ಅಲ್ಲಿನ ರಾಜಕೀಯ ಒಳನೋಟಗಳು ಬಗ್ಗೆ ಸವಿರವಾಗಿ ವಿವರಿಸಿರುವುದು.ಮಹಿಂದಾ ಅಪಘಾನಿಸ್ತಾನಕ್ಕೆ ಹೋಗುವುದನ್ನು ತಡೆಯಲು ಶ್ರೀಕಾಂತ್ ಅಸಹಾಯಕನಾಗುವುದು. ಮಹಿಂದಾ ಅಪಘಾನಿಸ್ತಾನದಲ್ಲಿ ಮರಣಹೊಂದಿದಾಗ ಕಾಡುವ ತಪ್ಪಿಸ್ಧ ಭಾವನೆ. ಸಮಿಂದ ಮಧುರ ಸಿಂಘೆಯವರು ಮಹಿಂದಾ ದಿನಚರಿಯನ್ನು ಕೊಟ್ಟು ಓದಲು ಹೇಳಿದಾಗ ಯುದ್ಧ ಸೃಷ್ಟಿಸಿರುವ ಪರಿಸ್ಧಿತಿ ಕ್ರೌರ್ಯ ಇವುಗಳನ್ನು ಅಲ್ಲಲ್ಲಿ ಲೇಖಕರು ವಿವರಿಸಿರುವ ರೀತಿ, ಪುಲಿಟ್ಜರ‍್ ಪ್ರಶಸ್ತಿ ಪಡೆದ ಪೌಲ್ ವ್ಯಾಟನ್ಸ್ ಬಗ್ಗೆ ಸೂಕ್ಷ್ಮ ವಿವರಣೆ. ( ನ್ಯೂಸ್ ಚಾನೆಲಗಳು ಸುದ್ದಿಗಾಗಿ ಕಚ್ಚಾಡುವ ರೀತಿ) ಅಮೇರಿಕಾ ಯೂನಿಯನ್ ಟ್ರೇಡ್ ಗಳ ಮಾಲೀಕರ ಮತ್ತು ಕಾರ್ಮಿಕರ ನಡುವಿನ ಸಂಘರ್ಷ. ಕೊನೆಯ ಬಾರಿ ಫ್ರಾಂಕೋ ಭೇಟಿ ಮಾಡಲು ಹೋದಾಗ ಲೇಖಕರು ಅಲ್ಲಿನ ಪ್ರಕೃತಿಯನ್ನು ಮರ್ಲಿನ್ ಮನ್ರೋ ಜೊತೆ ಹೋಲಿಸಿ ನೋಡುವ ಅದ್ಭುತ ವರ್ಣನೆ. ಫ್ರಾಂಕೋ ಮತ್ತು ಲೀಸಾ ಸಂಬಂಧದಲ್ಲಿ ಲೀಸಾಗೆ ಕೊಂಡುಕೊಳ್ಳುವ ಪ್ರವೃತ್ತಿಗೆ ಒಳಗಾಗಿ ಫ್ರಾಂಕೋ ಹೇಳುವ ಮಾತು "ಬರಬರುತ್ತ ನಾನು ಮನೆಯ ಹತ್ತು ಸಾವಿರ ವಸ್ತುಗಳ ನಡುವೆ ಅನಾಥನಾಗಿ ಬಿಟ್ಟೆ" ಎಂದು ಲೇಖಕರು ವಿದೇಶಿಯರ ಮನೋಧರ್ಮವನ್ನು ವಿವರಿಸುತ್ತಾರೆ. " ಸಾಂಟಾ ಅನಾ ಬಿರುಗಾಳಿ" ಯ ಬಗ್ಗೆ ಕೃಷ್ಣ ಮತ್ತು ತನ್ನ ಚಿಕ್ಕಪ್ಪನನ್ನು ಬೇರೆಯವ ಕಣ್ಣಲ್ಲಿ ಹುಡುಕಲು ಹೋದ ಲೇಖಕರು ಹೀಗೆ ಹೇಳುತ್ತಾರೆ. " ಯಾರನ್ನಾದರೂ ಹುಡಕಲು ಹೊರಟರೆ ನಮಗೆ ನಾವೇ ವೃತ್ತದ ಕೇಂದ್ರವನ್ನೆಉವ ಭ್ರಮೆಯಲ್ಲಿ ಬೀಳುತ್ತವೆ.
ಒಟ್ಟಾರೆ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಪಾತ್ರವು ವಿಭಿನ್ನತೆ ಹೊಂದಿದ್ದು ಜಾಗತೀಕರಣದ ನಡುವೆ ಮನುಷ್ಯ ಮತ್ತು ಮನುಷ್ಯನ ನಡುವೆ ಪ್ರೀತಿ, ವಿಶ್ವಾಸ, ಸಂಬಂಧಗಳ ಸಂಕೀರ್ಣತೆಯನ್ನು, ಸೂಕ್ಷ್ಮ ಸಂವೇದನೆಗಳನ್ನು ಆಪ್ತವಾಗುವಂತೆ ಅರ್ಥವತ್ತಾಗಿ ಹೇಳಿಕೊಂಡು ಹೋಗಿರುವುದು ಲೇಖಕರ ಬರವಣಿಗೆಯ ಮೇಲಿರುವ ಹಿಡಿತವನ್ನು ತೋರಿಸುತ್ತದೆ. ಅಲ್ಲಲ್ಲಿ ಲೇಖಕರು ಕಾದಂಬರಿ ಕನ್ನಡ ಸಾಹಿತ್ಯಲೋಕದಲ್ಲಿ ಹೊಸತನವನ್ನು ತುಂಬಿದ್ದು ಈ ಕಾದಂಬರಿ ವಸ್ತುವಿನ ವಿಶೇಷತೆಯಾಗಿರುತ್ತದೆ.
Tuesday, February 1, 2011
ಬಾರಿಸು ಕನ್ನಡ ಡಿಂಡಿಮವ ಕರ್ನಾಟಕದ ರಾಜಧಾನಿಯಲ್ಲಿ ಶಿವ.
ಬಾರಿಸು ಕನ್ನಡ ಡಿಂಡಿಮವ ಕರ್ನಾಟಕದ ರಾಜಧಾನಿಯಲ್ಲಿ ಶಿವ.
೪೦ ವರ್ಷಗಳ ನಂತರ ಕರ್ನಾಟಕದ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ೭೭ನೇ ಕನ್ನಡ ಸಾಹಿತ್ಯ ಸಮೇಳ್ಮನ ಪ್ರಸ್ತುತ ಬೆಂಗಳೂರು ಜನಸಂಖ್ಯೆಯಲ್ಲಿ ಶೇಕಡ ೬೮ರಷ್ಟು ಜನ ಹೊರಗಿನ ರಾಜ್ಯಗಳಿಂದ ಬಂದವರು ಇನ್ನು ೩೨ ಶೇಕಡ ಮಾತ್ರ ಕನ್ನಡಿಗರಿದ್ದು ಹೊರಗಿನಿಂದ ಬಂದ ಜನಗಳಿಗೆ ಕನ್ನಡದ ಬಗ್ಗೆ ಅಕ್ಕರೆ ಇದಯೇ? ಎಂಬ ಪ್ರಶ್ನೆ ಉದ್ಭವಿಸುವುದು ಆದರೆ ಪ್ರಸ್ತುತ ಕನ್ನಡ ನಾಡು ಮತ್ತು ಸಾಹಿತ್ಯದ ಬಗ್ಗೆ ಜಾಗ್ರತೆವಹಿಸ ಬೇಕಾಗಿರುವ ನಾವು ಅಂತಹ ಕೆಲಸವನ್ನೇನು ಮಾಡುತ್ತ ಕುಳಿತು ಕೊಂಡಿಲ್ಲ ಹಿಂದಿನವರು ಈ ನಾಡು ನುಡಿಗೆ ಮಾಡಿದ ತ್ಯಾಗ ಸೇವಾ ಮನೋಭಾವನೆ ಇಂದಿನ ದಿನಗಳಲ್ಲಿ ಇಲ್ಲ ಎನ್ನುವುದು ಒಂದು ದೊಡ್ಡ ಕೊರತೆಯಾಗಿದೆ. ಹಚ್ಚೆವು ಕನ್ನಡದ ದೀಪ ಕರುನಾಡು ದೀಪ ಎಂದು ನಿರಂತರವಾಗಿ ಕನ್ನಡ ಸಾಹಿತ್ಯ ದ ರಥವನ್ನು ಎಳೆದ ತಮ್ಮ ಜೀವನವನ್ನೇ ಕನ್ನಡ ನಾಡು ನುಡಿ ಸಾಹಿತ್ಯಕ್ಕೆ ಮುಡಿಪಾಗಿಟ್ಟ ಹಲವಾರು ಮಹನೀಯರನ್ನು ಇಂದು ನಾವು ನೆನಪನ್ನು ಮಾಡಿಕೊಳ್ಳಬೇಕಾದ ಪ್ರಾತ:ಸ್ಮರಣೀಯರಲ್ಲಿ ಆಲೂರುವೆಂಕಟರಾಯರು, ಎ.ಆರ‍್ ಕೃಷ್ಣಶಾಸ್ತ್ರಿ, ಗಳಗನಾಥರು, ಅ.ನ.ಕೃ, ಜಿ.ಪಿ.ರಾಜರತ್ನಂ, ರಾ.ಹ.ದೇಶಪಾಂಡೆ, ಶಂಭಾಜೋಶಿ, ವಿ.ಸೀತರಾಮಯ್ಯ, ಕುವೆಂಪು ಇನ್ನು ಮುಂತಾದವರು ನನೆಪಿನ ಮರೆವಣಿಗೆಯೇ ಇದೆ.
ಇಂತಹ ಮಹಾನೀಯರನ್ನು ನೆನಪಿಸಿ ಕೊಳ್ಳುವ ಒಂದು ಪ್ರಯತ್ನ ಇಲ್ಲಿ ಮಾಡಲಾಗಿದೆ. ಎ.ಆರ‍್.ಕೃಷ್ಣ ಶಾಸ್ತ್ರಿಗಳು ಸೆಂಟ್ರಲ್ ಕಾಲೇಜಿನಲ್ಲಿದ್ದಾಗ ಕನ್ನಡ ಸಂಘವನ್ನು ಸ್ದಾಪನೆ ಮಾಡಿ "ಪ್ರಬುದ್ಧ ಕರ್ಣಾಟಕ" ಎಂಬ ತ್ರೈಮಾಸಿಕ ಪತ್ರಿಕೆ ಆರಂಭಿಸಿದ್ದು ಕನ್ನಡ ಸಾಹಿತ್ಯಕ್ಕೆ ಹೊಸ ಲೇಖಕರನ್ನು ಪರಿಚಯಿಸಿದ್ದು ಈ ಬಗ್ಗೆ ಡಿ.ವಿ.ಗುಂಡಪ್ಪನವರು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರದಲ್ಲಿ ದಿನಾಂಕ:೬-೦೫-೧೯೩೫ರಲ್ಲಿ ನಡೆದ ವಿಶೇಷ ಸಾಹಿತ್ಯೋತ್ಸವದ ಸಮಾರಂಭದ ಉಪಾಧ್ಯಕ್ಷ ಸ್ಧಾನದಿಂದ ಮಾಡಿದ ಭಾಷಣದ ಪ್ರತಿರೂಪವನ್ನು ಇಲ್ಲಿ ನೀಡಲಾಗಿದೆ. " ಕನ್ನಡದಲ್ಲಿ ಓದುಗರ ಸಂಖ್ಯೆ ಬೆಳೆಯುತ್ತಿಲ್ಲ. ಪುಸ್ತಕಗಳಗಳನ್ನು ಕೊಳ್ಳುವರ ಸಂಖ್ಯೆ ಬೆಳೆದ ಹೊರತು, ಪುಸ್ತಕಗಳನ್ನು ಬರೆಯುವರ ಸಂಖ್ಯೆಯಾಗಲಿ ಅಥವಾ ಬರೆದ ಪುಸ್ತಕದ ಯೋಗ್ಯತೆಯಾಗಲಿ ಹೆಚ್ಚಲಾರದು ಬಹು ಮಂದಿ ಓದುವವರು ಸಿಕ್ಕಿಯಾರು, ಶ್ರಮಕ್ಕೆ ತಕ್ಕಫಲ ದೊರೆತೀತು ಎಂಬ ಭರವಸೆ ಕಂಡ ಹೊರತು ಸಮರ್ಥರಾದವರು ಗ್ರಂಧ ಲೇಖನಕ್ಕೆ ಕೈ ಹಾಕಲಾರರು, ಗಿರಾಕಿಗೆ ತಕ್ಕಂತೆ ಸರಬರಾಯಿ ಎಂಬುದು ಸ್ವತಸ್ಸಿದ್ದ ನ್ಯಾಯ ಅದಕಾರಣ, ಕನ್ನಡ ಮಹಾಜನರು ತಮ್ಮ ಭಾಷೆಯ ಮೇಲ್ಮೆಯನ್ನು ಬಯಸುವುದು ದಿಟವಾದರೆ ಅವರಲ್ಲಿ ಅಕ್ಷರಸ್ಧರಾದವರೆಲ್ಲರೂ ತಮ್ಮ ಆದಾಯದಲ್ಲಿ ಒಂದು ಖಚಿತವಾದ ಭಾಗವನ್ನು ಪುಸ್ತಕ ಸಂಗ್ರಹಕ್ಕೆ ಮೀಸಲಿಡಬೇಕು. ಸಾಮಾನ್ಯವಾಗಿ ತಿಂಗಳಿಗೆ ೨೦ ರೂಪಾಯಿಗಳ ವರಮಾನ ಇರತಕ್ಕವರು ಅದರಲ್ಲಿ ಎಂಟು ಅಣೆಯನ್ನಾದರೂ ಒಂದು ಗ್ರಂಧಕ್ಕೆ ವಿನಿಯೋಗಿಸಲು ಮನಸ್ಸು ಮಾಡಬೇಕು ಹಾಗಾಗಾದ ಹೊರತು ಕನ್ನಡ ಸಾಹಿತ್ಯ ಉಚ್ಛ್ರಾಯ ಸ್ಧಿತಿಗೆ ಬರುವುದೆಂಬ ಆಸೆಗೆ ಕಾರಣವಿರಲಾರದು."
ಈ ಪ್ರಸಂಗವನ್ನು ಬಿ.ಎಸ್. ಕೇಶವರಾವ್ ರವರು ಬೀಚಿ, ಬುಲೆಟ್ಸು ಬಾಂಬು ಭಗವದ್ಗೀತೆ ಎಂಬ ಪುಸ್ತಕದ "ಸಾಹಿತ್ಯ ಸೈಂಧವನ ಸಾನಿಧ್ಯದಲ್ಲಿ ಆರಿಸಿಕೊಳ್ಳಲಾಗಿದೆ. ಬೀಚಿ ಮತ್ತು ಕಾಳಿಂಗರಾಯರು ಬಳ್ಳಾರಿ ಸುಡು ಬೇಸಿಗೆಯ ದಿನಗಳು ಅಲ್ಲೊಂದು ಪುಸ್ತಕ ಅಂಗಡಿ ಆ ಅಂಗಡಿಯ ಮುಂದಿದ್ದ ಬೆಂಚೊಂದರ ಮೇಲೆ ಏನನ್ನೋ ಹರಟುತ್ತರಾ ಕುಳಿತಿದ್ದಾರೆ. ಆಗ ಒಬ್ಬ ವೃದ್ದ ಆ ಅಂಗಡಿಯ ಮುಂದೆ ಬಂದು ನಿಂತ. ವಯಸ್ಸಿನಿಂದ ಸುಕ್ಕುಗಟ್ಟಿದ ಆತನ ಮುಖ ಆ ರಣಬಿಸಿಲಿನ ತಾಪದಲ್ಲಿ ಬೆಂದು ಮತ್ತಷ್ಟು ಮುದುಡಿಕೊಂಡಿತ್ತು. ಅವನು ಉಟ್ಟಿದ್ದ ಉಡುಗೆಯೆಂದರೆ ಒಂದು ತುಂಡು ಪಂಚೆ ಹಾಗೂ ತಲೆಗೆ ಸುತ್ತಿಕೊಂಡಿದ್ದ ಒಂದು ಕೆಂಪು ವಸ್ತ್ರ, ಅದೂ ಮಾಸಲಾಗಿ ಅಲ್ಲಲ್ಲಿ ಹರಿದು ಜೂಲಗಿತ್ತು. ಬೆಂದ ಭೂಮಿಯ ಮೇಲೆ ಬರಿಗಾಲಿನಲ್ಲಿ ನಡೆಯುತ್ತಿದ್ದ ಆತನ ಪಾದಗಳ ಹಿಮ್ಮಡಿ ಒಡೆದು ಸೀಳು ಸೀಳಾಗಿತ್ತು ರಕ್ತ ಒಸರುವಂತೆ, ಹೆಗಲ ಮೇಲೆ ಸುಮಾರು ಗಾತ್ರದ ಅರೆತುಂಬಿದ ಒಂದು ಗೋಣಿಚೀಲದ ಮೂಟೆ.
ಹೀಗೆ ಆ ಮೂಟೆಯನ್ನು ಹೊತ್ತು ತಮ್ಮೆದುರು ಬಂದು ನಿಂತು ಆ ವ್ಯಕ್ತಿಯನ್ನು ಬೀಚಿಗೆ ಹಾಗೂ ಕಾಳಿಂಗರಾಯರು ಯರೋ ಭಿಕ್ಷುಕನಿರಬೇಕೆಂದು ಭಾವಿಸಿದರು. ಇವರು ಆತನಿಗೆ ಭಿಕ್ಷೆ ಎಂಬಂತೆ ಮೂರು ಕಾಸನ್ನೋ, ಆರು ಕಾಸನ್ನೋ ಚಿಮ್ಮಬೇಕೆನ್ನುವಷ್ಟರಲ್ಲಿ ಆ ಮುದುಕ ಮುಂಬಂದು ಬಹು ನಮ್ರತೆಯಿಂದ " ಒಂದಿಷ್ಟು ಕನ್ನಡ ಪುಸ್ತಕಗಳಿವೆ, ಹೊಸಾವು ಕೋಳ್ತಿರೇನು? ಉಪಯೋಗಕ್ಕೆ ಬಂದಾವು" ಎಂದ. ಅವು ಯಾವುವೋ, ತೂಕಕ್ಕೆ ಹಾಕಬಹುದಾದ ಪುಸ್ತಕಗಳಿರಬಹುದೆಂದು ಭಾವಿಸಿದ ಬೀಚಿ ತಮಗವು ಬೇಡವೆಂದು ತಲೆಯಾಡಿಸಿ ಮುಂದೆ ಹೋಗುವಂತೆ ಕೈಬೀಸಲು ಹತಾಶನಾದ ಆ ಮುದುಕ ಆಯ್ತೂ ದೇವ್ರೂ ಬರತೀನಿ ಎಂದು ಹೊರಟು ಹೋದ. ಇದೆಲ್ಲಾ ಆದದ್ದು ಆ ದಿನ ಮಧ್ಯಾಹ್ನ ಎರಡು ಘಂಟೆಯ ಹೊತ್ತಿನಲ್ಲಿ.
ಆ ಮುದುಕ ಅತ್ತ ಹೋದ ನಂತರ ಇತ್ತ ಬೀಚಿ ಹಾಗೂ ಕಾಳಿಂಗರಾಯರು ಆ ಅಂಗಡಿ ಮಾಲೀಕನ ಮನೆಯಲ್ಲಿ ಊಟಮಾಡಿ, ವಿಶ್ರಾಂತಿ ಪಡೆದು, ಸಾಯಂಕಾಲವಾಗುತ್ತ ಬಳ್ಳಾರಿಯ ಅಂಚಿನಲ್ಲಿರುವ ಕೆರೆಯ ದಂಡೆಯ ಮೇಲೆ ಅಡ್ಡಾಡಿ ಬರಲು ಹೋದಾಗ ಕಂಡದ್ದಾದರೂ ಏನನ್ನು? ಮಧ್ಯಾಹ್ನ ಕಂಡಿದ್ದ ಅದೇ ಮುದುಕ ಈಗ ಕೆರೆಯಲ್ಲಿ ಕೌಪೀನಧಾರಿಯಾಗಿ, ಆಗಷ್ಟೇ ಸಾನ್ನಮಾಡಿ, ತಲೆಗೆ ಸುತ್ತಿದ್ದ ಕೆಂಪು ವಸ್ತ್ರವನ್ನೂ, ಪಂಚೆಯಂತೆ ಉಟ್ಟಿದ್ದ ಮಾಸಲು ಧೋತ್ರವನ್ನೂ ನೆನಸಿ ಕೆರೆಯ ಸೋಪಾನದ ಮೆಟ್ಟಿಲ ಮೇಲೆ ಕಸಕುತ್ತಿರುವುದು ಕಂಡು ಬಂತು. ಅವನು ಹೆಗಲ ಮೇಲೆ ಹೊತ್ತುಕೊಂಡಿದ್ದ ಮೂಟೆ ಇನ್ನೊಂದು ಮೆಟ್ಟಿಲ ಮೇಲೆ!
ಬೀಚಿ ಹಾಗೂ ರಾಯರು ಕುತೂಲಹದಿಂದ ಅವನತ್ತ ನೋಡುತ್ತಿರಲು, ಆ ಮುದುಕ ಒಗೆದಿದ್ದ ವಸ್ತ್ರಗಳನ್ನು ಅಲ್ಲೇ ಮೆಟ್ಟಿಲಗಳ ಮೇಲೆ ಹರವಿ ಅನಂತರ ಕೆರೆ ಅಂಚಿನ ಬಳಿ ಕುಳಿತು ಸಂಧ್ಯಾವಂದನೆಯನ್ನು ಮಾಡಲಾರಂಭಿಸಿದ. ಅವನನ್ನೇ ನೋಡುತ್ತಿದ್ದ ಇವರಿಬ್ಬರಿಗೆ ಕುತೂಹಲ ಮತ್ತಷ್ಟು ಕೆರಳಿತು " ಪಾಪ ಕರ್ಮಠ ಬ್ರಾಹ್ಮಣಾನ್ಸುತ್ತೇ ಬೀಚಿ! ಯರೋ ಏನೋ, ಈತನ ಪೂರ್ವಾಪರಗಳನ್ನು ವಿಚಾರಿಸಿಯೇ ಬಿಡೋಣ. ಎಂದು ಕಾಳಿಂಗರಾಯರೆನ್ನಲು ಬೀಚಿ ಹೂಂಗುಟ್ಟಿದರು.
ಆ ಮುದುಕ ಸಂಧ್ಯಾವಂದನೆಯನ್ನು ಮುಗಿಸವುದನ್ನೇ ಕಾಯುತ್ತಿದ್ದರು. ಮುಗಿಯಿತು. ಮುದುಕ ಐದಾರು ಮೆಟ್ಟಿಲಗಳನ್ನೇರಿ ತಾನು ಅಲ್ಲಿರಿಸಿದ್ದ ಮೂಟೆಯ ಬಾಯಿಗೆ ಕಟ್ಟಿದ್ದ ಸುತ್ತಲಿಯನ್ನು ಬಿಚ್ಚಿ ಒಳಗಿದ್ದ ಪುಸ್ತಕಗಳನ್ನು ಜೋಪಾನವಾಗಿ ಹೊರತೆಗೆದು ಅಲ್ಲೇ ಪಕ್ಕಕ್ಕಿರಿಸಿ, ಅವುಗಳಲ್ಲಿ ಎಷ್ಟು ಖರ್ಚಾಗಿವೆ ಎಂದು ಎಣಿಸುತ್ತಿರುವಾಗ ಇದನ್ನೆಲ್ಲಾ ಮೇಲೆ ನಿಂತು ಗಮನಿಸುತ್ತಿದ್ದ ಬೀಚಿ ಹಾಗೂ ಕಾಳಿಂಗರಾಯರಿಗೆ ಆ ಪುಸ್ತಕಗಳೆಲ್ಲಾ ಹೊಚ್ಚಹೊಸ ಪುಸ್ತಕಗಳೆಂದು ತೋರಿ, ಅಚ್ಚರಿಗೊಂಡ ಇವರು ಆ ಮುದುಕನ ಬಳಿ ಸಾರಿ ಎದುರು ನಿಲ್ಲಲು ಆ ವೃದ್ದ ಇವರನ್ನು ದಿಟ್ಟಿಸಿ ಬನ್ನಿ ಬನ್ನಿ, ಕನ್ನಡದ ಪುಸ್ತಕಗಳು, ಸೊಗಸಾದ ಸಾಹಿತ್ಯ ಉಪಯೋಗಕ್ಕೆ ಬಂದಾವು, ಕೊಳ್ಳಿ ಎಂದು ಕೈಮುಗಿದ. ಈ ಇಬ್ಬರೂ ಆ ಪುಸ್ತಕಗಳತ್ತ ಇಣುಕಿದರು. ಹೊಸದಾಗಿ ಮುದ್ರಿತವಾಗಿದ್ದ ಪುಸ್ತಕಗಳವು! ಶಿವರಾಮ ಕಾರಂತ, ಆಲೂರು ವೆಂಕಟರಾಯರು, ಕುವೆಂಪು, ಇಂಥವರ ಪುಸ್ತಕಗಳು! ಇವುಗಳನ್ನು ನೋಡುತ್ತಲೇ ಅಚ್ಚರಿಗೊಂಡ ಬೀಚಿಯವರು "ಅದ್ಸರೀ ಯಜಮಾನ್ರೇ, ಈ ಇಳಿ ವಯಸ್ಸಿನಲ್ಲಿ ನೀವ್ಯಾಕೆ ಹೀಗೆ ಈ ಪುಸ್ತಕಗಳನ್ನು ಹೊತ್ತು ಬೀದಿಬೀದಿ ಸುತ್ತಿ ಮಾರುತ್ತಿದ್ದೀರಿ?" ಎನ್ನಲು ವಿಚಿತ್ರವಾಗಿ ನಕ್ಕ ಆ ಮುದುಕ " ಹಾಗೇ ಮಾಡ್ಬೇಕೂ ದೇವ್ರು, ಕನ್ನಡ ಪುಸ್ತಕಗಳನ್ನು ಮನೆಮನೇಗೆ ತಲುಪಿಸಿ ಓದುವ ಅಭಿರುಚಿಯನ್ನು ನಮ್ಮವರಲ್ಲಿ ಬೆಳಸಬೇಕೂ ಅಂಬೋದಾದ್ರೆ ಹೀಗೆ ಮಾಡಿದರೆ ಮಾತ್ರ ಆದೀತು ಅಂತ ನನಗೆ ಅನ್ನಿಸಿತು, ಮಾಡ್ತಿದ್ದೀನಿ, ಈಗ ಹಲವು ವರ್ಷಗಳಿಂದ ಹೀಗೆ ಮಾಡ್ತಿದ್ದೀನಿ" ಎಂದ. ಆಗ ಬೀಚಿ ಮುಂದುವರೆದು " ಆದ್ರೂ ಈ ಮುಪ್ಪಿನಲ್ಲಿ ನೀವು ಹೀಗೆ ಈ ಕನ್ನಡದ ಕೆಲಸವನ್ನ ಮಾಡ್ತಿರೋದ್ನ ನೋಡಿದ್ರೆ ನಮ್ಮಂಥ ಯುವಕರು ನಾಚ್ಕೆಪಟ್ಕೋಬೇಕು. ಅಂದ್ಹಾಗೆ ತಾವ್ಯಾರು? ಎಲ್ಲಿದ್ದೀರಿ?" ಎಂದು ಬೀಚಿಯವರು ಕೇಳಲು ಆ ಮುದುಕ ಪುಸ್ತಕಗಳನ್ನು ಮತ್ತೆ ಮೂಟೆಗೆ ಸೇರಿಸುತ್ತಾ " ಹೀಗೇನ್ರಿ, ಛತ್ರ ದೇವಸ್ಥಾನಗಳಲ್ಲಿ ಇಳ್ಕೋತೀನಿ, ನದಿ,ಕೆರೆ, ಕೊಳಗಳಲ್ಲಿ ಸ್ನಾನ ಸಂಧ್ಯಾವಂದನೆಗಳನ್ನು ಮುಗಸ್ಕೋತೀನಿ. ಊರಿಂದೂರ‍್ಗೆ ಅಲೀತ ಕನ್ನಡ ಪುಸ್ತಕಗಳನ್ನು ಅದಷ್ಟು ಜನಪ್ರಿಯ ಮಾಡೋದೇ ನನ್ನ ಕೆಲಸ ಹಾಗೂ ಉದ್ದಿಶ್ಯ" ಎಂದಾಗ ಕಾಳಿಂಗರಾಯರು " ಆದಾಯ್ತು ಸ್ವಾಮೀ, ತಮ್ಮ ನಾಮಧೇಯ?" ಎಂದು ಕೇಳಲು ಕ್ಷಣ ಕಾಲ ಈ ಇಬ್ಬರನ್ನೂ ದುರುಗುಟ್ಟಿ ದಿಟ್ಟಿಸಿದ ಆ ಮುದುಕ " ನಮ್ಮ ಕಡೆ ತಿಳಿದೋರು ನನ್ನನ್ನು ಪಂಡಿತ ಗಳಗನಾಥಾ ಅಂತ ಕರೀತಾರೇ" ಎಂದು ಮುಕ್ಕಿರಿಯುತ್ತಾ ತನ್ನ ಮೂಟೆಯನ್ನು ಹೊತ್ತು ನಿಂತಾಗ ದೇಹಾದ್ಯಂತ ಕಂಪನಗೊಂಡ ಬೀಚಿ ಹಾಗೂ ಕಾಳಿಂಗರಾಯರು ಆ ಕ್ಷಣವೇ ಕುಸಿದು ಗಳಗನಾಥರ ಶ್ರೀಚರಣ ಕಮಲಗಳಿಗೆ ಸಾಷ್ಟಾಂಗವೆರಗಿದರು.
ಇಂತಹ ರೋಮಾಂಚನ ಪ್ರಸಂಗಗಳು "ಕನ್ನಡದ ಕೂಲಿ" ಎಂದೆ ಕರೆಯುತ್ತಿದ್ದ ರಾಜರತ್ನಂ.ಜಿ.ಪಿ ರವರು ಇನ್ನು ಮುಂತಾದ ಮಹಾನೀಯರ ಯಶೋಗಾಥೆ ಕನ್ನಡ ಸಾಹಿತ್ಯ ಹಿಂದೆ ಇದೆ . ಮಯೂರು ಮಾಸ ಪತ್ರಿಕೆಯಲ್ಲಿ ನವೆಂಬರ ೨೦೧೦ರಲ್ಲಿ ಪ್ರಕಟವಾದ ಯು.ಆರ‍್.ಅನಂತಮೂರ್ತಿ ಯವರ "ಬೌದ್ದಿಕ ಸಂಕಟ ಮತ್ತು ಸೃಜಶೀಲತೆ" ಲೇಖನದಲ್ಲಿ ತಿಳಸಿರುವಂತೆ ಇವತ್ತು ಕನ್ನಡ ಯಾಕೆ ಉಳಿದಿದೆ ಅಂದರೆ ಇನ್ನೂ ಹಿಂದುಳಿದವರು ಇದ್ದಾರೆ ಎಂದೇ. ಹಾಗಾದರೆ ಕನ್ನಡವನ್ನು ಉಳಿಸುವುದಕ್ಕಾಗಿ ಹಿಂದುಳಿದವರು ಹಿಂದೆಯೇ ಉಳಿದಿರಬೇಕೇ? ಖಂಡಿತವಾಗಿಯೂ ಅದು ಹಾಗಾಗಬೇಕಿಲ್ಲ. ಹಾಗಿಲ್ಲದೆಯೇ ಅನೇಕ ಬಾಷೆಗಳು ಉಳಿದಿವೆ. ಕೊಂಕಣಿ ಮತ್ತು ತುಳು ಭಾಷೆಗಳು ಇದಕ್ಕೆ ಉತ್ತಮ ಉದಾರಹಣೆ. ಕೊಂಕಣಿ ಏಕೆ ಉಳಿದಿದೆ ಎಂದರೆ ಒಬ್ಬ ಕೊಂಕಣಿ ಮತ್ತೊಬ್ಬ ಕೊಂಕಣಿಯನ್ನು ಕಂಡಾಗ ತನ್ನ ಭಾಷೆಯನ್ನು ಬಳಸದೇ ಹೋದರೆ ಇವನು ಗರ್ವಿಷ್ಟ ಎಂದು ಅವನು ತಿಳಿಯುತ್ತಾನೆ. ಈ ಬಗೆಯ ಸಾಮಾಜಿಕ ಅನಿವಾರ್ಯತೆಗಳಿಂದ ಮನೆ ಮಾತುಗಳು ಉಳಿದುಬಿಡುತ್ತವೆ. ತುಳು ಭಾಷೆ ಉಳಿದಿರುವುದೂ ಹೀಗೆಯೇ. ಇಂಥದ್ದೊಂದು ವಾತಾವರಣದಲ್ಲಿ ನಮ್ಮ ಭಾಷೆಗಳು ಉಳಿಯಬೇಕಾದರೆ ಏನು ಮಾಡಬೇಕು. ನಾನು ಬಹಳಷ್ಟು ಸಾರಿ ಹೇಳಿರುವ ವಿಚಾರವೇ ಆಗಿದ್ದರೂ ಅದನ್ನು ಮತ್ತೊಮ್ಮೆ ಹೇಳಬೇಕು ಅನ್ನಿಸುತ್ತದೆ. ನಮ್ಮ ಭಾಷೆಗಳು ಉಳಿಯಲು ಸಾಮಾನ್ಯ ಶಾಲೆಗಳು ಬೇಕು. ನನ್ನ ಅಜ್ಜ ಅಉರೋಹಿತರು ಈ ಪುರೋಹಿತರು ಹೊಸ ಕಾಲದ ಜಾತಿ ವಾದಿಗಳಿಗಿಂತ ಒಳ್ಳೆಯವರು. ಏಕೆಂದರೆ ಅವರು ಸರಳವಾದ ಜನರು ಬಡವರೂ ಹೌದು ಭವತಿ ಭಿಕ್ಷಾಂದೇಹಿ ಎಂದು ಎಲ್ಲಾ ಕಡೆ ಭಿಕ್ಷೆ ಎತ್ತಿಕೊಂಡು ಬರುತ್ತಿದ್ದರು. ಅವರಿಗೆ ಕನ್ನಡ ಗೊತ್ತಿತ್ತು ಸಂಸ್ಕೃತ ಬಾಯಿಪಾಠವಾಗಿತ್ತು. ಪುರೋಹಿತರ ಮನೆಯಲ್ಲಿ ಹುಟ್ಟಿದ ಎಲ್ಲ ಮಕ್ಕಳಂತೆ ನಾನು ಮನೆಯಲ್ಲಿ ಅಂಗವಸ್ತ್ರ ಧರಿಸುತ್ತಿದ್ದೆ. ಶಾಲೆಗೆ ಹೋಗುವಾಗಲಷ್ಟೇ ಅಂಗಿ ಹಾಕಿಕೊಳ್ಳುತ್ತಿದೆ. ನಾನು ಪುರೋಹಿತರ ಕುಟುಂಬದಲ್ಲಿ ಹುಟ್ಟಿದರೂ ಸಾಮಾನ್ಯ ಶಾಲೆಯಲ್ಲಿ ಕಲಿತೆ. ನನ್ನ ಸುತ್ತಲಿನ ಎಲ್ಲವುಗಳ ಅನುಭವ ಪಡೆದೆ. ಆದರೆ ಈ ಅವಕಾಶ ನನ್ನ ಮೊಮ್ಮಕ್ಕಳಿಗೆ ಇಲ್ಲ. ಅವರು ಅವರ ವರ್ಗದ ಮಕ್ಕಳ ಜೊತೆಗಷ್ಟೇ ಓದುತ್ತಾರೆ. ನಾವೆಲ್ಲಾ ಇವತ್ತು ನಮ್ಮ ಮಕ್ಕಳನ್ನು ನಮ್ಮ ವರ್ಗದವರ ಮಕ್ಕಳೇ ಇರುವಂಥ ಶಾಲೆಗಳಿಗೆ ಕಳುಹಿಸುತ್ತಿದ್ದೇವೆ. ಅವರಿಗೆ ಕನ್ನಡ ಒಂದು ಮನೆ ಮಾತಾಗಿ ಉಳಿದಿರುತ್ತದೆ. ಆದರೆ ನನ್ನ ಹಾಗೆ ಅವರಿಗೆ ಕನ್ನಡ ಬಳಸಲು ಅಂದರೆ ಇಲ್ಲಿ ಬೌದ್ದಿಕ ವಿಚಾರಗಳಿಗೆ ಕನ್ನಡ ಬಳಸುತ್ತಿದ್ದೇನಲ್ಲ ಹಾಗೆ ಅವರಿಗೆ ಕನ್ನಡವನ್ನು ಬಳಸಲು ಆಗುವುದಿಲ್ಲ. ನನ್ನ ವಿಚಾರಗಳನ್ನು ಓದುತ್ತಿರುವ ನೀವೂ ಬೌದ್ದಿಕ ವಿಚಾರಗಳಿಗೆ ಕನ್ನಡವನ್ನು ಬಳಸಲು ಗೊತ್ತಿರುವವರು. ಆದರೆ ಈಗಿನ ಪ್ರತಿಷ್ಠಿತ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಮನೆಯಲ್ಲಿ ಕನ್ನಡ ಮಾತನಾಡಿದರೂ ನಮ್ಮಂತೆ ಕನ್ನಡ ಬಳಸಲು ಸಾಧ್ಯವಿಲ್ಲ. ನಮಗೇಕೆ ಸಾಧ್ಯವಾಗಿದೆ ಎಂದರೆ ನಾವು ಚಿಂತಿಸುವ ಭಾಷೆಯೇ ಕನ್ನಡ.
Subscribe to:
Comments (Atom)